Namma Metro: ಹೊಸ ಮಾರ್ಗಕ್ಕೆ ನಮ್ಮ ಮೆಟ್ರೋ; ಈ ಭಾಗದ ಜನರಿಗೆ ತಪ್ಪಲಿದೆ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ

ನಮ್ಮ ಮೆಟ್ರೋ ಎರಡನೇ ಹಂತದ‌‌ ಕಾಮಗಾರಿಯ ಜೊತೆಗೆ ಮೂರನೇ ಹಂತ ಆರಂಭಿಸಲು ಸಿದ್ದತೆ ನಡೆಸುತ್ತಿದೆ.‌ ಜೊತೆಗೆ ಈ  ವರ್ಷದೊಳಗೆ ಎರಡು ಮೆಟ್ರೋ ಮಾರ್ಗವನ್ನ ಉದ್ಘಾಟಿಸಲು ಮುಂದಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಜೂ 17): ಸಿಲಿಕಾನ್​ ಸಿಟಿಯಲ್ಲಿ ಜನರಿಗೆ ಟ್ರಾಫಿಕ್ (Traffic)​ ಸಮಸ್ಯೆ ತಪ್ಪಿಸಿರೋ ನಮ್ಮ ಮೆಟ್ರೋ  ಈಗಾಗಲೇ ಜನ -ಮನ ಗೆದ್ದಿದೆ. ನಮ್ಮ‌ ಮೆಟ್ರೋ (Namma Metro) ಪ್ರಯಾಣ ಸುಖಕರ ಪ್ರಯಾಣ ಹಂತನೇ ಹೆಸರುವಾಸಿಯಾಗಿದೆ. ಇದೀಗ ಪ್ರಯಾಣಿಕರಿಗೆ (Passenger) ಮತ್ತಷ್ಟು ಅನುಕೂಲವಾಗಲಿ ಎಂದು,  ನಮ್ಮ ಮೆಟ್ರೋ ಎರಡನೇ ಹಂತದ‌‌ ಕಾಮಗಾರಿಯ (Construction) ಜೊತೆಗೆ ಮೂರನೇ ಹಂತ ಆರಂಭಿಸಲು ಸಿದ್ದತೆ ನಡೆಸುತ್ತಿದೆ.‌ ಜೊತೆಗೆ ಈ  ವರ್ಷದೊಳಗೆ ಎರಡು ಮೆಟ್ರೋ ಮಾರ್ಗವನ್ನ ಉದ್ಘಾಟಿಸಲು ಮುಂದಾಗಿದೆ. ನಮ್ಮ ಮೆಟ್ರೋದ ಮುಂದಿನ ಪ್ರಾಜೆಕ್ಟ್  (Project) ಏನು..? ಆರಂಭವಾಗುತ್ತಿರುವ ಮಾರ್ಗಗಳ್ಯಾವು..? ಎಂಬುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಮೆಟ್ರೋ ಮೂರನೆ ಹಂತದ  34 ಕಿಲೋಮೀಟರ್ ಗೆ ಡಿಪಿಆರ್ ಸಿದ್ದ

ನಮ್ಮ‌ ಮೆಟ್ರೋ ಒಂದನೇ‌ ಹಂತ ಸಂಪೂರ್ಣ ‌ಕಂಪ್ಲೀಟ್ ಆಗಿ, ಎರಡನೇ ಹಂತದ ಕಾಮಗಾರಿ ಮುಂದುವರೆಯುತ್ತಿದೆ.‌ 72 ಕಿಲೋಮೀಟರ್ ಉದ್ದದ ಎರಡನೇ‌ ಹಂತದಲ್ಲಿ ಸುರಂಗ ಮಾರ್ಗ ಕೊರೆಯುವ ಕೆಲಸ ಬಹುತೇಕ ಮುಗಿದಿದ್ದು, ಎಲಿವೇಡೆಟ್ ಕಾಮಗಾರಿಯೂ ಭರದಿಂದ ಸಾಗ್ತಾಯಿದೆ.

ಇದರ ಜೊತೆಗೆ 34  ಕಿಲೋ ಮೀಟರ್ ಉದ್ದದ ಮೂರನೇ ಹಂತವನ್ನೂ ಆರಂಭ ಮಾಡಲು ಮೆಟ್ರೊ ನಿಗಮ‌ ಸಿದ್ದತೆ ಮಾಡಿಕೊಳುತ್ತಿದೆ. ಜೆಪಿ ನಗರ ದಿಂದ - ಔಟರ್ ರಿಂಗ್ ರೋಡ್ - ಯಶವಂತಪುರ - ಹೆಬ್ಬಾಳ - ಏರ್ ಪೋರ್ಟ್ ಮಾರ್ಗ ಹಾಗೂ  ಹೊಸಹಳ್ಳಿ - ಮಾಗಡಿ ಮಾರ್ಗದಲ್ಲಿ ಮೂರನೇ ಹಂತದ ಮೆಟ್ರೊ ಸಂಚಾರ ಮಾಡಲಿದೆ.‌ ಈ ಸಂಬಂಧ  ರೈಟ್ಸ್ ಸಂಸ್ಥೆ ಡಿಪಿಆರ್ ಸಿದ್ದಮಾಡಿದ್ದು, ಮೆಟ್ರೋ ನಿಗಮ  ಕೆಂದ್ರ ಸರ್ಕಾರಕ್ಕೆ ರಿಪೋರ್ಟ್ ಸಲ್ಲಿಕೆ ಮಾಡಿ ಅನುಮೋದನೆ ಪಡೆಯಲಿದೆ.‌

ಇದನ್ನೂ ಓದಿ: BMRCL: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​, ಸೈಕಲ್​ ಕೊಂಡೊಯ್ಯಲು ಸಿಕ್ಕಿದೆ ಪರ್ಮಿಷನ್​

ಡಿಸೆಂಬರ್ ನಲ್ಲಿ ಕೆಂಗೇರಿ - ಚಲಘಟ್ಟ, ಬಯ್ಯಪ್ಪನಹಳ್ಳಿ - ವೈಟ್ ಫೀಲ್ಡ್ ಮಾರ್ಗ ಉದ್ಘಾಟನೆ

ಸದ್ಯ  ನಗರದಾದ್ಯಂತ ಎರಡನೇ ಹಂತದ ಕಾಮಗಾರಿಗಳು ಭರದಿಂದ ಸಾಗ್ತಾಯಿದ್ದು, 14 ನಿಲ್ದಾಣಗಳುಳ್ಳ 15 ಕಿಲೋಮೀಟರ್ ಉದ್ದದ ಬಯ್ಯಪ್ಪನಹಳ್ಳಿ - ವೈಟ್ ಫೀಲ್ಡ್ ಮಾರ್ಗ ಹಾಗೂ 1.8 ಕಿಲೋಮೀಟರ್ ಉದ್ದದ  ಕೆಂಗೇರಿ - ಚಲಘಟ್ಟ ಮಾರ್ಗದಲ್ಲಿ  ಡಿಸೆಂಬರ್ ನಲ್ಲಿ ವಾಣಿಜ್ಯ ಸಂಚಾರ ಆರಂಭ ಮಾಡಲು ನಿಗಮ‌ ನಿರ್ಧರಿಸಿದ್ದು ಈಗಾಗಲೇ ಸ್ಟೇಷನ್ ಅಂಡ್ ಟ್ರ್ಯಾಕ್ ವರ್ಕ್ ನಡೆಯುತ್ತಿದೆ.‌

ಮತ್ತಷ್ಟು ವಿಸ್ತರಣೆ ಕಾಣಲಿರುವ ನಮ್ಮ ಮೆಟ್ರೋ.. ಈ ಮಾರ್ಗದ ಜನರಿಗೆ ಟ್ರಾಫಿಕ್ ನಿಂದ‌ ಮುಕ್ತಿ

ಮುಂದುವರೆದು, ನಾಗಸಂದ್ರದಿಂದ  ಅಂತರರಾಷ್ಟ್ರೀಯ ಎಕ್ಸಿಬಿಷನ್ ಸೆಂಟರ್ ಮಾರ್ಗದ ಕಾಮಗಾರಿಯನ್ನ  ಸಿಂಪ್ಲೆಕ್ಸ್ ಕಂಪನಿಯಿಂದ ತೆರವು ಮಾಡಿ ಗೋದ್ರೇಜ್ ಕಂಪನಿಗೆ ನೀಡಲಾಗಿದೆ.‌ ನೈಸ್  ರಸ್ತೆಯನ್ನೂ ದಾಟಿ  ಮೆಟ್ರೋ ಮಾರ್ಗ ಮುಂದುವರೆಯಬೇಕಿದ್ದು ಮಾಸ್ಟರ್ ಪ್ಲಾನ್ ಪ್ರಕಾರ ಕಾಮಗಾರಿ ಆರಂಭಿಸಲಾಗುತ್ತದೆ. ನೆಲಮಂಗಲ ಸೇರಿದಂತೆ  ನಗರದ ಹೊರವಲಯಗಳಲ್ಲಿ ಉಪ ನಗರ ರೈಲು ಯೋಜನೆ ಆರಂಭವಾಗಲಿದೆ.‌ ಈ ಹೊಸ ಮಾರ್ಗದಿಂದ ಈ ಭಾಗದ ಜನರಿಗೆ ಟ್ರಾಫಿಕ್ ನಿಂದ ಮುಕ್ತಿ ಸಿಗಲಿದೆ. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ  ಮೆಟ್ರೋ ಹಾಗೂ ಉಪ ನಗರ ರೈಲಿನ ಸಂಚಾರ  ಆರಂಭವಾಗುವುದರಿಂದ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಸಂಚಾರ ವ್ಯವಸ್ಥೆ ಸುಗಮವಾಗಲಿದೆ.

ಇದನ್ನೂ ಓದಿ: Namma Metro: ಮೊದಲ ಬಾರಿಗೆ ಇನ್ಫೋಸಿಸ್ ಮೆಟ್ರೋ ನಿಲ್ದಾಣಕ್ಕೆ ಸಿಗಲಿದೆ ಗ್ರೀನ್ ಟ್ಯಾಗ್

ಮೆಟ್ರೋ ನಿಲ್ದಾಣದಲ್ಲೇ ಸಿಗುತ್ತೆ ಪ್ರವಾಸಿ ತಾಣಗಳ ಮಾಹಿತಿ

ಬೆಂಗಳೂರು (ಜೂ 13): ನಮ್ಮ ಮೆಟ್ರೋದಲ್ಲಿ (Metro) ಪ್ರಯಾಣಿಸುವವರಿಗೆ ಅದರಲ್ಲೂ ವಿಶೇಷವಾಗಿ ಪ್ರವಾಸಿಗರಿಗೆ ಅನುಕೂಲವಾಗುವ ಹಾಗೇ, ಮೆಟ್ರೋ ನಿಲ್ದಾಣಗಳ (Metro Stations) ಸಮೀಪವಿರುವ ಪ್ರಮುಖ ತಾಣಗಳು  ಸೇರಿದಂತೆ ಆಸ್ಪತ್ರೆ, (Hospital) ದೇವಾಲಯ, ಸರಕಾರಿ ಕಟ್ಟಡ, ಪೊಲೀಸ್ ಠಾಣೆ (Police Station) ಹಾಗೂ ಹೋಟೆಲ್, ಬ್ಯಾಂಕ್ ಮುಂತಾದವುಗಳ ಮಾಹಿತಿ ಸಿಗಲಿದೆ. ಕ್ಯೂಆರ್​ಕೋಡ್ (QR Code)​ ಸಹಿತ ಮಾಹಿತಿ ನೀಡುವ  ನಕ್ಷೆಗಳನ್ನು ಮೆಟ್ರೋ ನಿಲ್ದಾಣಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಅಳವಡಿಸಲು ಬೆಂಗಳೂರು ಮೆಟ್ರೋ ನಗರ ಮುಂದಾಗಿದೆ.
Published by:Pavana HS
First published: