Bengaluru Metro: ಬೆಂಗಳೂರಿನಲ್ಲಿ ಇಂದಿನಿಂದ ಹಸಿರು ಮಾರ್ಗದಲ್ಲಿ ಮೆಟ್ರೋ ಸಂಚಾರ ಪುನರಾಂಭ: ಪ್ರಯಾಣಿಕರ ನೀರಸ ಪ್ರತಿಕ್ರಿಯೆ

ಸೆಪ್ಟೆಂಬರ್ 11 ರಿಂದ ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ರೈಲುಗಳು ಓಡಲಾರಂಭಿಸುತ್ತವೆ. ಈ ಸೇವೆಗಳು ಕ್ರಮೇಣ ನಿಯಮಿತವಾಗಿ ಮುಂದುವರೆಯುತ್ತವೆ.

ನಮ್ಮ ಮೆಟ್ರೋ

ನಮ್ಮ ಮೆಟ್ರೋ

 • Share this:
  ಬೆಂಗಳೂರು(ಸೆಪ್ಟೆಂಬರ್​. 09): ಕೊರೋನಾ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಮೆಟ್ರೋ ರೈಲು ಕಾರ್ಯಾಚರಣೆ ನಿಧಾನವಾಗಿ ಮರು ಆರಂಭಗೊಂಡಿದೆ. ಬೆಂಗಳೂರು ಮೆಟ್ರೋ ರೈಲು ಮತ್ತೊಂದು ಗ್ರೀನ್ ಲೈನ್ ವಲಯದ ಸೇವೆಗಳನ್ನು ಪ್ರಾರಂಭಿಸಿದೆ. ಆದರೆ, ಕೆಲವೇ ಪ್ರಯಾಣಿಕರು ಮಾತ್ರ ಪ್ರಯಾಣಿಸಿದ್ದಾರೆ ಎಂದು ಬಿಎಂಆರ್​ಸಿಎಲ್​​​ ಅಧಿಕಾರಿಗಳು ತಿಳಿಸಿದ್ದಾರೆ. ಬೆಳಿಗ್ಗೆ 8 ರಿಂದ 11 ರವರೆಗೆ ಮತ್ತು ಸಂಜೆ 4.30 ರಿಂದ 7.30 ರವರೆಗೆ ಜನದಟ್ಟಣೆ ಸಮಯದಲ್ಲಿ ಮಾತ್ರ ರೈಲುಗಳು ಕಾರ್ಯನಿರ್ವಹಿಸುತ್ತವೆ ಎಂದು ಮೆಟ್ರೋ ರೈಲು ಅಧಿಕಾರಿಗಳು ತಿಳಿಸಿದ್ದಾರೆ. ಸೆಪ್ಟೆಂಬರ್ 11 ರಿಂದ ಬೆಳಿಗ್ಗೆ 7 ರಿಂದ ರಾತ್ರಿ 9 ರವರೆಗೆ ರೈಲುಗಳು ಓಡಲಾರಂಭಿಸುತ್ತವೆ. ಈ ಸೇವೆಗಳು ಕ್ರಮೇಣ ನಿಯಮಿತವಾಗಿ ಮುಂದುವರೆಯುತ್ತವೆ. ಮೆಟ್ರೋ ರೈಲು ನಿಲ್ದಾಣ ಮತ್ತು ರೈಲಿನ ಒಳಗೆ ಪ್ರಯಾಣಿಕರು ನಿಲ್ಲಲು ಮಾರ್ಕ್ ಮಾಡಲಾಗಿದೆ. ಸಾಮಾಜಿಕ ಅಂತರ ಪಾಲನೆಗೆ ಮೆಟ್ರೋ ರೈಲಿನಲ್ಲಿ ಮಹತ್ವ ನೀಡಲಾಗಿದೆ. ರೈಲು ನಿಲ್ದಾಣ ಪ್ರವೇಶಿಸುವ ಮೊದಲು ಪ್ರತಿ ಪ್ರಯಾಣಿಕರನ್ನೂ ಥರ್ಮಲ್‌ ಸ್ಕ್ರೀನಿಂಗ್‌ಗೆ ಒಳಪಡಿಸಲಾಗಿದೆ.

  ಮೆಟ್ರೋ ರೈಲು ಪ್ರಯಾಣ ಆರಂಭವಾದ ಬೆನ್ನಲ್ಲೇ, ಇತ್ತ ಬಿಎಂಟಿಸಿ ಕೂಡಾ ವೋಲ್ವೊ ಬಸ್‌ ಸೇವೆಯನ್ನು ಪುನಾರಂಭಗೊಳಿಸಿದೆ. ಸಾಮಾನ್ಯ ಬಿಎಂಟಿಸಿ ಬಸ್‌ಗಳ ಸಂಚಾರ ಈಗಾಗಲೇ ಆರಂಭವಾಗಿದ್ದರೂ ಕೂಡಾ ಹವಾನಿಯಂತ್ರಿತ ವೋಲ್ವೊ ಬಸ್‌ಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು.

  ಇದನ್ನೂ ಓದಿ : KPSC Recruitment 2020 : ಆಯುಷ್ ಇಲಾಖೆಯಲ್ಲಿ ಗ್ರೂಪ್ ಎ, ಬಿ, ಮತ್ತು ಸಿ ವೃಂದದ ತಾಂತ್ರಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ

  ಬೆಳಗ್ಗೆ 8ಕ್ಕೆ ಮೊದಲ ರೈಲು- 11 ಗಂಟೆಗೆ ಕೊನೆಯ ರೈಲು, ಸಂಜೆ 4.30ಕ್ಕೆ ಮೊದಲ ರೈಲು- 7.30ಕ್ಕೆ ಕೊನೆಯ ರೈಲು ಸಂಚಾರ ಮಾಡಲಿದೆ.  ಕೊರೋನಾ ಲಾಕ್ ಡೌನ್ ಕಾರಣದಿಂದಾಗಿ ಐದೂವರೆ ತಿಂಗಳ ಕಾಲ ಸ್ಥಗಿತಗೊಂಡಿದ್ದ ಸೇವೆಗಳು ಪುನರಾರಂಭಗೊಂಡಿವೆ. ಮೆಟ್ರೋ ಸೇವೆಗಳು ಪುನರಾರಂಭಗೊಂಡಾಗ ನೇರಳೆ ಮಾರ್ಗದಲ್ಲಿ ಸೋಮವಾರ 91 ಟ್ರಿಪ್​​​ಗಳಿಂದ 3,770 ಪ್ರಯಾಣಿಕರ ಸಂಚಾರ ಮಾಡಿದ್ದಾರೆ.
  Published by:G Hareeshkumar
  First published: