Bengaluru Metro: ಬೆಂಗಳೂರು ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ಬಿಎಂಆರ್​ಸಿಎಲ್​

BMRCL: ನೇರಳೆ ಬಣ್ಣದ ಲೈನ್​ನಲ್ಲಿ ಎಲ್ಲ ಟ್ರೈನ್​ಗಳು ಆರು ಕೋಚುಗಳನ್ನು ಹೊಂದಿವೆ. ಹೀಗಾಗಿ ಈ ಭಾಗದಲ್ಲಿ ಸಂಚಾರ ಸ್ವಲ್ಪ ಸುಲಭ. ಆದರೆ, ಹಸಿರು ಮಾರ್ಗದಲ್ಲಿ ಮೂರು ಕೋಚುಗಳ ರೈಲುಗಳು ಹೆಚ್ಚಾಗಿ ಓಡಾಟ ನಡೆಸುತ್ತಿದ್ದವು.

Rajesh Duggumane | news18-kannada
Updated:December 3, 2019, 1:13 PM IST
Bengaluru Metro: ಬೆಂಗಳೂರು ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ಬಿಎಂಆರ್​ಸಿಎಲ್​
ಮೆಟ್ರೋ ರೈಲು
  • Share this:
ಬೆಂಗಳೂರು (ಡಿ.3): ನೀವು ಬೆಂಗಳೂರಿನಲ್ಲಿ ನಿತ್ಯ ಗ್ರೀನ್​ಲೈನ್​ ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿದ್ದೀರಾ? ಈ ಮೆಟ್ರೋದಲ್ಲಿ ತೀವ್ರ ಜನಜಂಗುಳಿ ಎಂದು ಬೈದುಕೊಂಡಿದ್ದೀರಾ? ಹಾಗಿದ್ದರೆ ಇನ್ನುಮುಂದೆ ಈ ಸಮಸ್ಯೆ ಕೊಂಚಮಟ್ಟಿಗೆ ಪರಿಹಾರವಾಗಲಿದೆ.

ಹೌದು, ಗ್ರೀನ್​ಲೈನ್​ ಮೆಟ್ರೋ ಬಳಕೆದಾರರಿಗೆ ಬಿಎಂಆರ್​ಸಿಎಲ್​ ಸಿಹಿ ಸುದ್ದಿ ನೀಡಿದೆ. ಈ ಭಾಗದಲ್ಲಿ ಮೂರು ಕೋಚುಗಳ ರೈಲು ಹೆಚ್ಚಾಗಿ ಓಡಾಟ ನಡೆಸುತ್ತಿದ್ದವು. ಆದರೆ, ಈಗ ಮೂರು ಕೋಚುಗಳ ಎರಡು ರೈಲನ್ನು ಆರು ಕೋಚುಗಳನ್ನಾಗಿ ಬದಲಾಯಿಸಲಾಗಿದೆ. ಹೀಗಾಗಿ ಈ ಮಾರ್ಗದಲ್ಲಿ ಓಡಾಟ ನಡೆಸುವ ಆರು ಕೋಚು ರೈಲುಗಳ ಸಂಖ್ಯೆ ಎಂಟಕ್ಕೆ ಏರಿಕೆ ಆಗಿದೆ.

ನೇರಳೆ ಬಣ್ಣದ ಲೈನ್​ನಲ್ಲಿ ಎಲ್ಲ ಟ್ರೈನ್​ಗಳು ಆರು ಕೋಚುಗಳನ್ನು ಹೊಂದಿವೆ. ಹೀಗಾಗಿ ಈ ಭಾಗದಲ್ಲಿ ಸಂಚಾರ ಸ್ವಲ್ಪ ಸುಲಭ. ಆದರೆ, ಹಸಿರು ಮಾರ್ಗದಲ್ಲಿ ಮೂರು ಕೋಚುಗಳ ರೈಲುಗಳು ಹೆಚ್ಚಾಗಿ ಓಡಾಟ ನಡೆಸುತ್ತಿದ್ದವು. ಇದರಿಂದ, ಬೆಳಗ್ಗೆ ಕಚೇರಿಗೆ ತೆರಳುವವರು ಹಾಗೂ ಸಂಜೆ ಕಚೇರಿಯಿಂದ ಬರುವವರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಈ ಬಗ್ಗೆ ಅನೇಕರು ದೂರು ಕೂಡ ನೀಡಿದ್ದರು.

ಇದನ್ನೂ ಓದಿ:  ಬೆಂಗಳೂರು ಮೆಟ್ರೋದಲ್ಲಿ ಕೊಂಡೊಯ್ಯಬಹುದು ಪೆಪ್ಪರ್​ ಸ್ಪ್ರೇ; ಮಹಿಳೆಯರ ಸುರಕ್ಷತೆಗೆ ಹೊಸ ಕ್ರಮ

ಜೂನ್​ 2018ರವರೆಗೆ ನಮ್ಮ ಮೆಟ್ರೋದಲ್ಲಿ ಮೂರು ಕೋಚುಗಳ ರೈಲುಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದವು. ಈ ರೈಲು 975 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ನಂತರ ಆರು ಕೋಚುಗಳ ರೈಲನ್ನು ಪರಿಚಯಿಸಲಾಗಿದ್ದು, ಈ ರೈಲಿನಲ್ಲಿ ಸುಮಾರು 2,000 ಪ್ರಯಾಣಿಕರು ಸಂಚಾರ ನಡೆಸಬಹುದಾಗಿದೆ. 2020ರ ವೇಳೆಗೆ ಆರು ಕೋಚುಗಳ 50 ರೈಲುಗಳನ್ನು ಬಿಎಂಆರ್​ಸಿ ಹೊಂದುವ ನಿರೀಕ್ಷೆ ಇದೆ.
First published: December 3, 2019, 11:01 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading