• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bengaluru Mysuru Expressway: ಸಣ್ಣ ಮಳೆಗೆ ಜಲಾವೃತವಾದ ದಶಪಥ ಹೆದ್ದಾರಿ; ಕಾರ್​ಗೆ ಡಿಕ್ಕಿ ಹೊಡೆದ ಲಾರಿ

Bengaluru Mysuru Expressway: ಸಣ್ಣ ಮಳೆಗೆ ಜಲಾವೃತವಾದ ದಶಪಥ ಹೆದ್ದಾರಿ; ಕಾರ್​ಗೆ ಡಿಕ್ಕಿ ಹೊಡೆದ ಲಾರಿ

ರಸ್ತೆ ಜಲಾವೃತ

ರಸ್ತೆ ಜಲಾವೃತ

ಹೆದ್ದಾರಿ ಸಹಾಯವಾಣಿಗೆ ಕರೆ ಮಾಡಿದ್ರೂ ಯಾರು ಸ್ಪಂದಿಸುತ್ತಿಲ್ಲ ಎಂದು ಹೆದ್ದಾರಿ ಪ್ರಾಧಿಕಾರದ ವಿರುದ್ಧ ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ.

  • News18 Kannada
  • 4-MIN READ
  • Last Updated :
  • Ramanagara, India
  • Share this:

ಬೆಂಗಳೂರು: ಬಿಜೆಪಿ ಸರ್ಕಾರದ (BJP Government) ಮಹತ್ವಕಾಂಕ್ಷೆಯ ಯೋಜನೆ ಎಂದು ಬಿಂಬಿತವಾಗಿರವ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ (Bengaluru-Mysuru Express) ಶುಕ್ರವಾರ ಸುರಿದ ಸಣ್ಣ ಮಳೆಗೆ ಜಲಾವೃತಗೊಂಡಿದೆ. ದುಬಾರಿ ಟೋಲ್ ಶುಲ್ಕ ನೀಡಿದ್ರೂ ರಸ್ತೆ ಸರಿ ಇಲ್ಲವಲ್ಲ ಎಂದು ವಾಹನ ಸವಾರರು (Motorist) ಆಕ್ರೋಶ ಹೊರಹಾಕುತ್ತಿದ್ದಾರೆ. ದಶಪಥ ಹೆದ್ದಾರಿಯಲ್ಲಿ ಮಳೆ ನೀರು ನಿಂತ ಹಿನ್ನೆಲೆ ಕಾರ್​ಗೆ ಹಿಂಬದಿಯಿಂದ ಲಾರಿಯೊಂದು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ (Accident) ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ರಾಮನಗರ (Ramanagara) ಸಮೀಪದ ಸಂಘಬಸವನದೊಡ್ಡಿ ಬಳಿ ಹೆದ್ದಾರಿ ಜಲಾವೃತಗೊಂಡಿದೆ.


ನೀರು ಹರಿಯದ ಕಾರಣ ರಸ್ತೆಯಲ್ಲಿ  ನಿಂತಿದೆ. ಮಳೆ ನೀರಿಗೆ ಕೆಲ ವಾಹನಗಳು ರಸ್ತೆಯಲ್ಲಿಯೇ ಕೆಟ್ಟು ನಿಂತ ಪರಿಣಾಮ ನಿಧಾನಗತಿಯಲ್ಲಿ ಸಂಚಾರ ಸಾಗುತ್ತಿದೆ. ಲಾರಿ ಡಿಕ್ಕಿ ಹೊಡೆದ ಪರಿಣಾಮ ಕಾರ್ ಜಖಂಗೊಂಡಿದೆ.




ದುಬಾರಿ ಟೋಲ್ ಕಟ್ಟಿದ್ರೂ ಸರಿಯಾದ ವ್ಯವಸ್ಥೆ ಇಲ್ಲ. ಇಷ್ಟು ಸಣ್ಣ ಮಳೆಗೆ ಹೆದ್ದಾರಿಯ ಸ್ಥಿತಿ ಹೀಗಾದ್ರೆ ಮಳೆಗಾಲದಲ್ಲಿ ಇನ್ನೇನು ಆಗಬಹುದು. ಅಧಿಕಾರಿಗಳು ಮಳೆ ನೀರು ಹರಿದು ಹೋಗುವಂತೆ ಕ್ರಮಕೈಗೊಳ್ಳಬೇಕು. ಹೆದ್ದಾರಿ ಸಹಾಯವಾಣಿಗೆ ಕರೆ ಮಾಡಿದ್ರೂ ಯಾರು ಸ್ಪಂದಿಸುತ್ತಿಲ್ಲ ಎಂದು ಹೆದ್ದಾರಿ ಪ್ರಾಧಿಕಾರದ ವಿರುದ್ಧ ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ.


ಬೆಂಗಳೂರಿನಲ್ಲಿ ಗುಡುಗು-ಮಿಂಚು ಸಹಿತ ಮಳೆ


ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಇಂದು ಆನೇಕಲ್, ರಾಯಚೂರು, ಕೋಲಾರ ಜಿಲ್ಲೆಗಳಲ್ಲಿ ಗುಡುಗು-ಮಿಂಚು ಸಹಿತ ಮಳೆಯಾಗಿದೆ. ಸತತ ಎರಡನೇ ದಿನವೂ ಸಂಜೆ ವೇಳೆಗೆ ಬೆಂಗಳೂರಿನ ಕೋರಮಂಗಲ, ಕೆಂಗೇರಿ, ಆಡುಗೋಡಿ, ವಿಲ್ಸನ್ ಗಾರ್ಡನ್, ಬನಶಂಕರಿ, ಲಾಲ್​​​ಬಾಗ್​​, ಕುಮಾರಸ್ವಾಮಿ ಲೇಔಟ್​​, ಜಯನಗರ, ಬಸವನಗುಡಿ, ಚಾಮರಾಜಪೇಟೆ, ಕೆಆರ್ ಮಾರ್ಕೆಟ್, ಶ್ರೀನಗರ ಸೇರಿದಂತೆ ಬಹುತೇಕ ಕಡೆ ಮಳೆಯಾಗಿದೆ. ಕೆಲಸ ಮುಗಿಸಿ ಮನೆಗೆ ಹೊರಟ್ಟಿದ್ದ ಸಾರ್ವಜನಿಕರು ಮಳೆಯಿಂದ ಸಮಸ್ಯೆ ಎದುರಿಸಿದ್ದಾರೆ.


ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಜಿಗಣಿ, ಅತ್ತಿಬೆಲೆ ಚಂದಾಪುರ ಸೇರಿದಂತೆ ಬನ್ನೇರುಘಟ್ಟ ಸುತ್ತಮುತ್ತ ಸಾಧಾರಣ ಮಳೆಯಾಗಿದೆ. ಏಕಾಏಕಿ ಸುರಿದ ಮಳೆಗೆ ವಾಹನ ಸವಾರರು, ಪಾದಚಾರಿಗಳ ಕೆಲ ಸಮಯ ಪರದಾಟ ನಡೆಸಿದರು.


ಟೋಲ್ ಶುಲ್ಕ ತಪ್ಪಿಸಿಕೊಳ್ಳಲು ರಂಗೋಲಿ ಕೆಳಗೆ ನುಸುಳಿದ ವಾಹನ ಸವಾರರು


ಮಾರ್ಚ್ 12ರಂದು ಬೆಂಗಳೂರು-ಮೈಸೂರು ದಶಪಥ (Bengaluru-Mysuru Expressway) ಹೆದ್ದಾರಿಯನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಲೋಕಾರ್ಪಣೆಗೊಳಿಸಿದ್ದರು. ಉದ್ಘಾಟನೆಯಾದ ಮರುದಿನದಿಂದಲೇ ಟೋಲ್ ಸಂಗ್ರಹಕ್ಕೆ (Toll Collection) ಹೆದ್ದಾರಿ ಪ್ರಾಧಿಕಾರ ಮುಂದಾಗಿದ್ದಕ್ಕೆ ಸ್ಥಳೀಯರು ಸೇರಿದಂತೆ ವಾಹನ ಸವಾರರು ಆಕ್ರೋಶ ಹೊರಹಾಕಿದ್ದರು.




ಕನ್ನಡ ಪರ ಸಂಘಟನೆಗಳು ಟೋಲ್ (Toll Plaza) ಬಳಿ ಬಂದು ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆಯನ್ನು ಸಹ ನಡೆಸಿದ್ದವು. ಅತಿಯಾದ ಟೋಲ್ ದರ (Toll Fee) ಹಾಕುತ್ತಿರೋದಕ್ಕೆ ವಾಹನ ಸವಾರರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.


NHAIಗೆ ಹೊಸ ತಲೆನೋವು


ಇದೀಗ ಟೋಲ್ ದರ ತಪ್ಪಿಸಿಕೊಳ್ಳಲು ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಇದರಿಂದ ಎನ್​ಹೆಚ್​​ಎಐಗೆ (NHAI) ಹೊಸ ತಲೆನೋವು ಶುರುವಾಗಿದೆ.


ಹೌದು, ಬಹುತೇಕ ವಾಹನ ಸವಾರರು ಟೋಲ್ ತಪ್ಪಿಸಲು ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಟೋಲ್ ಸಮೀಪ ಸರ್ವಿಸ್ ರಸ್ತೆಗೆ ತೆರಳಿ ಮುಂದೆ ಸ್ವಲ್ಪ ಕ್ರಮಿಸಿ ನಂತರ ಪ್ರಮುಖ ರಸ್ತೆಗೆ ಸೇರಿಕೊಳ್ಳುತ್ತಿದ್ದಾರೆ.


ಇದನ್ನೂ ಓದಿ: Bengaluru Mysuru Expresswayನಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಳ; ಇದುವರೆಗೂ 84 ಪ್ರಯಾಣಿಕರು ಸಾವು!


ಇದರಿಂದ ಕೆಣಿಮಿಣಿಕಿ ಬಳಿಯ ಟೋಲ್ ಪ್ಲಾಜಾದಿಂದ ಸುಂಕ ಕಟ್ಟುವುದನ್ನು ವಾಹನ ಸವಾರರು ತಪ್ಪಿಸಿಕೊಂಡಿದ್ದಾರೆ. ಪ್ರತಿಭಟನೆಯ ಬಿಸಿ ನಡುವೆ ಆದಾಯ ನಷ್ಟದ ಅತಂಕ ಹೆದ್ದಾರಿ ಪ್ರಾಧಿಕಾರಕ್ಕೆ ಉಂಟಾಗಿದೆ.

Published by:Mahmadrafik K
First published: