ಬೆಂಗಳೂರಿನಲ್ಲಿ ಮೊಬೈಲ್​ಗಾಗಿ ನಡುರಸ್ತೆಯಲ್ಲೇ ನಡೆಯಿತು ಯುವಕನ ಮರ್ಡರ್!

ಮೊದಲು ಮಾತಿಗೆ ಮಾತು ಬೆಳೆದಿತ್ತು. ನಂತರ ಇಬ್ಬರೂ ಕೈಕೈ ಮಿಲಾಯಿಸಿಕೊಂಡಿದ್ದರು. ಕೊನೆಗೆ ಮೆಹಬೂಬ್ ಎದೆಗೆ ಚಾಕುವಿನಿಂದ ಇರಿದು ಸದ್ದಾಂ ಪರಾರಿಯಾಗಿದ್ದ.

Rajesh Duggumane | news18-kannada
Updated:September 13, 2019, 2:52 PM IST
ಬೆಂಗಳೂರಿನಲ್ಲಿ ಮೊಬೈಲ್​ಗಾಗಿ ನಡುರಸ್ತೆಯಲ್ಲೇ ನಡೆಯಿತು ಯುವಕನ ಮರ್ಡರ್!
ಸಾಂದರ್ಭಿಕ ಚಿತ್ರ
Rajesh Duggumane | news18-kannada
Updated: September 13, 2019, 2:52 PM IST
ಬೆಂಗಳೂರು (ಸೆ.13): ನಗರದಲ್ಲಿ ಹಣ ಹಾಗೂ ಮೊಬೈಲ್​ಗಾಗಿ ನಡೆಯುತ್ತಿರುವ ಕೊಲೆಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಅದೇ ರೀತಿ ಈಗ ಬೆಂಗಳೂರಿನಲ್ಲಿ ಮೊಬೈಲ್​ಗಾಗಿ ಯುವಕನ ಮರ್ಡರ್​ ನಡೆದಿದೆ. ಸದ್ಯ, ಕೊಲೆ ಮಾಡಿದ ವ್ಯಕ್ತಿ ಪೊಲೀಸರ ಅತಿಥಿಯಾಗಿದ್ದಾನೆ.

ಬೆಂಗಳೂರಿನ ಕೆ.ಆರ್. ಮಾರ್ಕೆಟ್ ಜಮೀಯಾ ಮಸೀದಿ ‌ಬಳಿ ಘಟನೆ ನಡೆದಿದೆ. ಮೆಹಬೂಬ್ ಕೊಲೆಯಾದ ಯುವಕ. ಈತ ಸ್ನೇಹಿತ ಅಕ್ರಂ ಜೊತೆ ಮಾತನಾಡುತ್ತಾ ನಿಂತಿದ್ದ. ಈ ವೇಳೆ ದೂರವಾಣಿ ಕರೆ ಮಾಡಬೇಕು ಮೊಬೈಲ್ ಕೊಡಿ ಎಂದು ಸದ್ದಾಂ ಮೊಬೈಲ್​ ತೆಗೆದುಕೊಂಡಿದ್ದ.

ಮೊಬೈಲ್​ ಪಡೆದ ನಂತರ ಸದ್ದಾಂ ಯಾವುದೋ ಮೊಬೈಲ್​ ಸಂಖ್ಯೆ ಡಯಲ್​ ಮಾಡಿ ಕರೆ ಮಾಡಿದ್ದ. ಬಳಿಕ ಮೊಬೈಲ್ ವಾಪಾಸು ಕೊಡಲು ಆತ ನಿರಾಕರಿಸಿದ್ದ. ಸ್ವಲ್ಪ ಸಮಯದ ನಂತರ ಪ್ಲೇಟ್​ ಬದಲಾಯಿಸಿದ್ದ ಸದ್ದಾಂ, ಮೆಹಬೂಬ್​ ಬಳಿ ಮೊಬೈಲ್​ ನೀಡಯೇ ಇಲ್ಲ ಎಂದು ವಾದಕ್ಕೆ ಇಳಿದಿದ್ದ. ಇದೇ ವಿಚಾರಕ್ಕೆ ಮೆಹಬೂಬ್ ಮತ್ತು ಸದ್ದಾಂ ನಡುವೆ ಜಗಳವಾಗಿತ್ತು.

ಮೊದಲು ಮಾತಿಗೆ ಮಾತು ಬೆಳೆದಿತ್ತು. ನಂತರ ಇಬ್ಬರೂ ಕೈಕೈ ಮಿಲಾಯಿಸಿಕೊಂಡಿದ್ದರು. ಕೊನೆಗೆ ಮೆಹಬೂಬ್ ಎದೆಗೆ ಚಾಕುವಿನಿಂದ ಇರಿದು ಸದ್ದಾಂ ಪರಾರಿಯಾಗಿದ್ದ. ಸ್ಥಳೀಯರು ಗಾಯಾಳುವನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೆಹಬೂಬ್ ಸಾವನಪ್ಪಿದ್ದಾನೆ.

ಇದನ್ನೂ ಓದಿ: ಕೊಪ್ಪಳದಲ್ಲೊಂದು ದಾರುಣ ಘಟನೆ; ವಿದ್ಯುತ್​ ತಂತಿ ತುಂಡಾಗಿ ತಂದೆ, ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವು!

ಕೆಆರ್​ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅರೋಪಿ ಸದ್ದಾಂ ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

(ವರದಿ: ಮುನಿರಾಜು)
Loading...

First published:September 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...