• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bengaluru ವಿಮಾನ ನಿಲ್ದಾಣದ ಮಾರ್ಗದಲ್ಲಿ ಮೆಟ್ರೋ ಕಾಮಗಾರಿ; 411 ಮರಗಳ ತೆರವಿಗೆ ಹೈಕೋರ್ಟ್​ ಸೂಚನೆ

Bengaluru ವಿಮಾನ ನಿಲ್ದಾಣದ ಮಾರ್ಗದಲ್ಲಿ ಮೆಟ್ರೋ ಕಾಮಗಾರಿ; 411 ಮರಗಳ ತೆರವಿಗೆ ಹೈಕೋರ್ಟ್​ ಸೂಚನೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕೆಂಪಾಪುರ ಮೆಟ್ರೋ ನಿಲ್ದಾಣ ಮತ್ತು ಬಾಗಲೂರು ಕ್ರಾಸ್​ ಇರುವ ಒಟ್ಟು 382 ಮರಗಳನ್ನು ಕಡಿಯಲು ಮತ್ತು ಅವುಗಳಲ್ಲಿ 29 ಮರಗಳನ್ನು ಸ್ಥಳಾಂತರಿಸಲು ನಮಗೆ ಹೈಕೋರ್ಟ್ ಅನುಮತಿ ನೀಡಿದೆ.

  • Share this:

ಬೆಂಗಳೂರು (ಸೆ.17):  ಕೆಆರ್ ಪುರಂ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KR Puram- Kempegowda International Airport) ಮಾರ್ಗದ ಕಾಮಗಾರಿಗೆ ಅಡ್ಡವಾಗಿದ್ದ ಮರಗಳ ತೆರವುಗೊಳಿಸಲು BMRCL ಅನುಮತಿ ಕೋರಿದೆ. ಮೂಲಸೌಕರ್ಯ ಕಾಮಗಾರಿಗೆ ಅಡ್ಡಿಯಾಗಿದ್ದ 411 ಮರಗಳನ್ನು ತೆರವುಗೊಳಿಸಲು (Clear The Trees) ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್‌ಗೆ ಹೈಕೋರ್ಟ್ ಒಪ್ಪಿಗೆ ನೀಡಿದೆ. ಇದೇ ವೇಳೆ ತೆರವುಗೊಳಿಸಿದ ಮರಗಳಿಗೆ ಪ್ರತಿಯಾಗಿ 4,110 ಸಸಿಗಳನ್ನು ಮಾರೇನಹಳ್ಳಿಯಲ್ಲಿರುವ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಏರೋ ಸ್ಪೇಸ್ ಪಾರ್ಕ್‌ನಲ್ಲಿ (Aero Space Park) ನೆಡಲು ತೀರ್ಮಾನಿಸಲಾಗಿದೆ.


ಹತ್ತು ಪಟ್ಟು ಸಸಿಗಳನ್ನು ನೆಡಲಾಗುವುದು


ಕೆಂಪಾಪುರ ಮೆಟ್ರೋ ನಿಲ್ದಾಣ ಮತ್ತು ಬಾಗಲೂರು ಕ್ರಾಸ್​ ಇರುವ ಒಟ್ಟು 382 ಮರಗಳನ್ನು ಕಡಿಯಲು ಮತ್ತು ಅವುಗಳಲ್ಲಿ 29 ಮರಗಳನ್ನು ಸ್ಥಳಾಂತರಿಸಲು ನಮಗೆ ಹೈಕೋರ್ಟ್ ಅನುಮತಿ ನೀಡಿದೆ. ನಾವು ತೆರವುಗೊಳಿಸುವ ಮರಗಳ ಸಂಖ್ಯೆಗೆ ಹತ್ತು ಪಟ್ಟು ಸಸಿಗಳನ್ನು ನೆಡಲಾಗುವುದು ಎಂದು BMRCL ನ ಸಾಮಾಜಿಕ ಮತ್ತು ಪರಿಸರ ಸಮಸ್ಯೆಗಳು ಮತ್ತು IT ಜನರಲ್ ಮ್ಯಾನೇಜರ್ ದಿವ್ಯಾ ಹೊಸೂರ್ TNIEಗೆ ತಿಳಿಸಿದರು.


ವಿಮಾನ ನಿಲ್ದಾಣ ಯೋಜನೆಗೆ ಮರಗಳು ಅಡ್ಡಿ


ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ಹೈಕೋರ್ಟ್ ಆದೇಶವು ಬಿಎಂಆರ್‌ಸಿಎಲ್ ಗೆ ತೆಗೆದು ಹಾಕುವ ಮರಗಳ ಬದಲಿಗೆ ಸಾಕಷ್ಟು ಸಂಖ್ಯೆಯ ಮರಗಳನ್ನು ನೆಡವಂತೆ ಕರೆ ನೀಡಿದೆ. ಬಿಎಂಆರ್‌ಸಿಎಲ್‌ನ ವಿಮಾನ ನಿಲ್ದಾಣ ಯೋಜನೆಗೆ ಅಡ್ಡಿಯಾಗಿರುವ ಈ ಮರಗಳ ಕುರಿತು ಜುಲೈ 26ರಂದು ಬಿಬಿಎಂಪಿ ಅರಣ್ಯ ಉಪ ಸಂರಕ್ಷಣಾಧಿಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ ಅಧಿಕೃತ ಜ್ಞಾಪಕ ಪತ್ರಕ್ಕೆ ಪ್ರತಿಕ್ರಿಯೆಯಾಗಿ ಈ ಆದೇಶ ನೀಡಲಾಗಿದೆ ಎಂದು ದಿವ್ಯಾ ಹೇಳಿದರು.


ಇದನ್ನೂ ಓದಿ: Electric Buses In Bengaluru: ಬೆಂಗಳೂರು ಜನರಿಗೆ ಖುಷಿ ಸುದ್ದಿ! ಈ ಮಾರ್ಗಗಳಲ್ಲಿ 300 ಎಲೆಕ್ಟ್ರಿಕ್ ಬಸ್ ಸಂಚಾರ​


ಮರಗಳಿರುವ ಕಾರಣ ಕೆಂಪಾಪುರ, ಹೆಬ್ಬಾಳ ಮತ್ತು ಬಾಗಲೂರು ಕ್ರಾಸ್ ನಿಲ್ದಾಣಗಳ ನಿರ್ಮಾಣದ ಮೇಲೆ ಪರಿಣಾಮ ಬೀರಿದೆ ಎಂದು ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೆಂಪಾಪುರ ಇಂಟರ್ಚೇಂಜ್ ನಿಲ್ದಾಣವಾಗಿದ್ದು ಇಲ್ಲಿ ಕಾಮಗಾರಿಗೆ ತೊಂದರೆಯಾಗಿತ್ತು. ಅದು 3ನೇ ಹಂತ ಮತ್ತು ವಿಮಾನ ನಿಲ್ದಾಣವನ್ನು ಸಂಪರ್ಕಿಸುತ್ತದೆ  ಎಂದು ಅವರು ಹೇಳಿದರು.


ನಮ್ಮ ಮೆಟ್ರೋದಲ್ಲಿ 5ಜಿ ನೆಟ್‌ವರ್ಕ್


ದೇಶದಲ್ಲೇ ಚೊಚ್ಚಲ ಬಾರಿಗೆ ನಮ್ಮ ಮೆಟ್ರೋದಲ್ಲಿ 5ಜಿ ನೆಟ್‌ವರ್ಕ್ ಪರೀಕ್ಷೆ ಮಾಡಲಾಗಿದೆ. ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾದ (TRAI) ಪೈಲಟ್ ಪ್ರಾಜೆಕ್ಟ್‌ ಆಗಿ ಬೆಂಗಳೂರಿನಲ್ಲಿ 5G ನೆಟ್ವರ್ಕ್ ಪರೀಕ್ಷೆ ಮಾಡಿದೆ. ನಗರದ ಎಂಜಿ ರೋಡ್ ಮೆಟ್ರೋ ಸ್ಟೇಷನ್ ನಲ್ಲಿ 5G ನೆಟ್ವರ್ಕ್ ಪರೀಕ್ಷೆಗೆ ಮಾಪನ ಅಳವಡಿಕೆ ಮಾಡಿದ್ದು, 5G ನೆಟ್ವರ್ಕ್ ಪರೀಕ್ಷೆಗೆ ಜಿಯೋ ನೆಟ್ವರ್ ಮಾಪನ ಅಳವಡಿಸಲಾಗಿದೆ. 4G ಗಿಂತ 50 ಪಟ್ಟು ವೇಗದಲ್ಲಿ ತರಂಗಗಳು ಒಳಗೊಂಡ 5G ನೆಟ್ವರ್ಕ್ ಮಾಪನ ಸ್ಥಿತಿ ಮಾಡಲಾಗಿದೆ. ರಿಲಯನ್ಸ್ ಜಿಯೋ ನೆಟ್ವರ್ಕ್ ನಿಂದ MG ರಸ್ತೆ ಮೆಟ್ರೋ ನಿಲ್ದಾಣದ 200 m ವ್ಯಾಪ್ತಿಗೆ 5G ಅಳವಡಿಸಿದ್ದು, ಈ ಮೂಲಕ ನಮ್ಮ ಮೆಟ್ರೋ  5G ಅಳವಡಿಸಿದ ದೇಶದ ಮೊದಲ ಮೆಟ್ರೋ ಎಂಬ ಹೆಗ್ಗಳಿಕೆಗೆ ಭಾಜನವಾಗಿದೆ.


ಇದನ್ನೂ ಓದಿ: Air Pollution: ಬೆಂಗಳೂರಲ್ಲಿ ಹೆಚ್ಚಾಯ್ತು ವಾಯುಮಾಲಿನ್ಯ; BBMPಗೆ ಹೊಸ ಟಾಸ್ಕ್​ ನೀಡಿದ ಕೇಂದ್ರ


ಎಂ.ಜಿ.ರಸ್ತೆಯ ಮೆಟ್ರೋ ರೈಲ್ವೆ ನಿಲ್ದಾಣದಲ್ಲಿ ರಿಲಾಯನ್ಸ್ ಜಿಯೋ 5ಜಿ ನೆಟ್ವರ್ಕ್ 200 ಮೀಟರ್ ವ್ಯಾಪ್ತಿಯಲ್ಲಿ ಲಭ್ಯವಾಗಿರುವಂತೆ ಪ್ರಾಯೋಗಿಕವಾಗಿ ಅಳವಡಿಕೆ ಮಾಡಲಾಗಿದೆ. ಈ ನೆಟ್ವರ್ಕ್ ನಲ್ಲಿ 1.45 Gbps ಡೌನ್ ಲೋಡ್ ವೇಗ ಹಾಗೂ 65 Mbps ಅಪ್ಲೋಡ್ ವೇಗ ದಾಖಲಾಗಿದೆ. 4ಜಿ ನೆಟ್ವರ್ಕ್ ಗಿಂತ 50 ಪಟ್ಟ ವೇಗವನ್ನು ಹೊಂದಿರುವುದು ಕಂಡು ಬಂದಿದೆ ಎಂದು ಹೇಳಿದ್ದಾರೆ.

Published by:ಪಾವನ ಎಚ್ ಎಸ್
First published: