ಭಾರತ- ಆಸ್ಟ್ರೇಲಿಯಾ ಪಂದ್ಯಕ್ಕಾಗಿ ಮಧ್ಯರಾತ್ರಿ 12ಗಂಟೆವರೆಗೂ ಓಡಾಲಿದೆ ಮೆಟ್ರೋ ರೈಲು

ಹಸಿರು ಹಾಗೂ ನೇರಳೆ ಲೈನ್​ನಲ್ಲಿನ ರೈಲುಗಳು 12ಗಂಟೆವರೆಗೂ ಸಂಚರಿಸಲಿದೆ. ಇದರಿಂದ ಪ್ರಯಾಣಿಕರಿಗೆ ಸಹಾಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Seema.R | news18-kannada
Updated:January 18, 2020, 12:42 PM IST
ಭಾರತ- ಆಸ್ಟ್ರೇಲಿಯಾ ಪಂದ್ಯಕ್ಕಾಗಿ ಮಧ್ಯರಾತ್ರಿ 12ಗಂಟೆವರೆಗೂ ಓಡಾಲಿದೆ ಮೆಟ್ರೋ ರೈಲು
ನಮ್ಮ ಮೆಟ್ರೋ
  • Share this:
ಬೆಂಗಳೂರು (ಜ.18): ಕ್ರೀಡಾಭಿಮಾನಿಗಳಲ್ಲಿ ಕುತೂಹಲ ಮೂಡಿಸಿರುವ ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯ ನಾಳೆ ಸಿಲಿಕಾನ್​ ಸಿಟಿಯ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ಮಧ್ಯಾಹ್ನ 1.30ರಿಂದ ಆರಂಭವಾಗಲಿರುವ ಏಕದಿನ ಪಂದ್ಯ ರಾತ್ರಿ 10ರವರೆಗೆ ನಡೆಯಲಿದ್ದು, ಈ ವೇಳೆ ಕ್ರೀಡಾಭಿಮಾನಿಗಳ ಸಂಚಾರಕ್ಕೆ ಯಾವುದೇ ತೊಂದರೆಯಾಗದಿರಲಿ ಎಂದು ಬಿಎಂಆರ್​ಸಿಎಲ್​ ಮೆಟ್ರೋ ರೈಲು ಸಂಚಾರ ವೇಳೆ ವಿಸ್ತರಿಸಿದೆ.

ಪಂದ್ಯ ಮುಗಿದ ಬಳಿಕವೂ ರಾತ್ರಿ 12ಗಂಟೆವರೆಗೂ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಇನ್ನು ಹಸಿರು ಹಾಗೂ ನೇರಳೆ ಲೈನ್​ನಲ್ಲಿನ ರೈಲುಗಳು 12ಗಂಟೆವರೆಗೂ ಸಂಚರಿಸಲಿದೆ. ಇದರಿಂದ ಪ್ರಯಾಣಿಕರಿಗೆ ಸಹಾಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನು ಓದಿ: IND vs AUS: ಕೆ ಎಲ್ ರಾಹುಲ್ ಮಿಂಚಿನ ಸ್ಟಂಪಿಂಗ್; ಧೋನಿ ಜಾಗಕ್ಕೆ ಕನ್ನಡಿಗನೇ ಫಿಕ್ಸ್​ ಎಂದ ಅಭಿಮಾನಿಗಳು!

ಪಂದ್ಯ ಇರುವ ಹಿನ್ನೆಲೆ ಅತಿ ಹೆಚ್ಚಿನ ಸಂಖ್ಯೆಯ ಜನರು ಮೆಟ್ರೋ ಬಳಸುವ ಸಾಧ್ಯತೆ ಇದೆ. ಅದರಲ್ಲಿಯೂ ಕಬ್ಬನ್​ ಪಾರ್ಕ್​ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಲಿದೆ. ಈ ಹಿನ್ನೆಲೆಯಲ್ಲಿ ಕಬ್ಬನ್​ ಪಾರ್ಕ್​ನಿಂದ ಪ್ರಯಾಣಿಸುವ ಪ್ರಯಾಣಿಕರಿಗೆ 50 ರೂ ಪೇಪರ್​ ಟಿಕೆಟ್ ನೀಡಲಾಗುವುದು.
First published:January 18, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ