ಮೆಟ್ರೊ (Metro), ಬೆಂಗಳೂರಿನಲ್ಲಿ ರಸ್ತೆ ಅಗಲೀಕರಣ ಮಾಡಲು ಆಸ್ತಿ ಸ್ವಾಧೀನಪಡಿಸಿಕೊಳ್ಳುತ್ತಿರುವುದು ಎಲ್ಲರಿಗೂ ತಿಳಿದೆ ಇದೆ. ಈ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ನಮ್ಮ ಮೆಟ್ರೊ 1,754 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ ಮತ್ತು ವಿದ್ಯುತ್ (Current) ಉಪಯುಕ್ತತೆಗಳನ್ನು ಶಿಫ್ಟಿಂಗ್ (Shifting) ಮಾಡಲು ಹೆಚ್ಚುವರಿಯಾಗಿ 82.89 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಮೆಟ್ರೋ ಅಧಿಕಾರಿಗಳ ಪ್ರಕಾರ, ಮೆಟ್ರೋ ಮಾರ್ಗಗಳು ಮತ್ತು ನಿಲ್ದಾಣಗಳನ್ನು ನಿರ್ಮಿಸಲು ಸರಿಯಾದ ಮಾರ್ಗವನ್ನು ಒದಗಿಸಲು ಈ ಹೆಚ್ಚುವರಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಮುಂದೆ ನಿರ್ವಹಣೆಗಾಗಿ ಈ ರಸ್ತೆಗಳನ್ನು (Road) ನಾಗರಿಕ ಸಂಸ್ಥೆಗೆ (Organisation) ವರ್ಗಾಯಿಸಲು ಬಿ. ಎಮ್. ಆರ್ .ಸಿ .ಎಲ್ ಯೋಜಿಸಿದೆ.
ನಮ್ಮ ಮೆಟ್ರೊದ ಎರಡನೇ ಹಂತದ ವಿಸ್ತರಣೆಗೆ ಗಣನೀಯವಾಗಿ ವೆಚ್ಚವಾಗಿದ್ದು, ಕೇವಲ ರಸ್ತೆ ವಿಸ್ತರಣೆಗೆ 1,483 ಕೋಟಿ ರೂ. ಗಳನ್ನು ವ್ಯಯ ಮಾಡಲಾಗಿದೆ.
ಬನ್ನೇರುಘಟ್ಟ ರಸ್ತೆ (ಡೈರಿ ವೃತ್ತದಿಂದ ಗೊಟ್ಟಿಗೆರೆವರೆಗೆ), ವೈಟ್‌ಫೀಲ್ಡ್ ಮುಖ್ಯ ರಸ್ತೆ (ಮಹದೇವಪುರ ಮೆಟ್ರೊ ನಿಲ್ದಾಣದವರೆಗೆ), ಟಿನ್ ಫ್ಯಾಕ್ಟರಿ ಜಂಕ್ಷನ್ ಮತ್ತು ಹೊಸೂರು ರಸ್ತೆ (ಸಿಲ್ಕ್ ಬೋರ್ಡ್ ಜೆಎನ್‌ನಿಂದ ಬೊಮ್ಮಸಂದ್ರ) ಕೆಲವು ರಸ್ತೆಗಳನ್ನು ಈ ಹಂತದಲ್ಲಿ ವಿಸ್ತರಿಸಲಾಗಿದೆ.
ಒಟ್ಟಾರೆಯಾಗಿ, ನಮ್ಮ ಮೆಟ್ರೊ 1.76 ಲಕ್ಷ ಚದರ ಮೀಟರ್‌ನ ಹೊಸ ರಸ್ತೆಗಳನ್ನು ನಿರ್ಮಿಸಲು 1,691 ಆಸ್ತಿಗಳನ್ನು ಸ್ವಾಧೀನಪಡಿಸಿಕೊಂಡಿದ್ದು ಪ್ರತಿ ಚದರ ಅಡಿ ಭೂಮಿಗೆ ಸರಾಸರಿ 9,000 ರೂ.ಗಳನ್ನು ನೀಡಿದೆ.
ಆದಾಗ್ಯೂ, ವಿದ್ಯುತ್ ಉಪಕರಣಗಳನ್ನು ಶಿಫ್ಟಿಂಗ್ ಮಾಡುವ ವೆಚ್ಚ ಕಡಿಮೆಯಾಗಿದೆ. ಇದು ಇಲ್ಲಿಯವರೆಗೆ 8,756 ಚದರ ಮೀಟರ್‌ಗಳಲ್ಲಿ ಹರಡಿರುವ 261 ಆಸ್ತಿಗಳನ್ನು ಪಡೆದುಕೊಂಡಿತು ಮತ್ತು ಭೂಮಾಲೀಕರಿಗೆ ಪರಿಹಾರವಾಗಿ 82.29 ಕೋಟಿ ರೂ. ನೀಡಿದೆ.
ಇದನ್ನೂ ಓದಿ: 8 ವರ್ಷ ಸೇವೆ ಸಲ್ಲಿಸಿದ ಪೊಲೀಸ್ ನಾಯಿಗೆ ಭಾವುಕ ಬೀಳ್ಕೊಡುಗೆ!
"ಹಂತ I ಮತ್ತು II (ರೀಚ್ 1, 2, ಮತ್ತು 4 ವಿಸ್ತರಣೆಗಳು) ರಸ್ತೆಗಳನ್ನು ಈಗಾಗಲೇ ನಿರ್ವಹಣೆಗಾಗಿ ಬಿ.ಬಿಎಂ.ಪಿ.ಗೆ ಹಸ್ತಾಂತರಿಸಲಾಗಿದೆ. ಜೊತೆಗೆ ರಸ್ತೆ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಂಡಿರುವ ಆಸ್ತಿಯನ್ನು ಸಂಪೂರ್ಣವಾಗಿ ರಸ್ತೆ ರಚನೆಗೆ ಬಳಸಿರುವುದರಿಂದ, ಈ ಸ್ಥಳಗಳು ಇನ್ನು ಮುಂದೆ ಬಿ .ಎಮ್. ಆರ್. ಸಿ .ಎಲ್ ನ ಆಸ್ತಿಗಳಾಗಿರುವುದಿಲ್ಲ.
ಅವುಗಳನ್ನು BMRCLನ ಭೂ ಆಸ್ತಿ ಎಂದು ಪರಿಗಣಿಸುವ ಅಗತ್ಯವಿಲ್ಲ," ಎಂದು ಮೆಟ್ರೋ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕಾಮಗಾರಿ ಪೂರ್ಣಗೊಂಡ ನಂತರ ಹಂತ 2 ಮತ್ತು 2ಬಿ ಅಡಿಯಲ್ಲಿ 5 ಮತ್ತು 6 ರೀಚ್‌ಗಳಿಗೆ ವಿಸ್ತರಿಸಿದ ರಸ್ತೆಗಳನ್ನು ವರ್ಗಾಯಿಸಲು ನಮ್ಮ ಮೆಟ್ರೊ ಉದ್ದೇಶಿಸಿದೆ.
ಅಧಿಕಾರಿಗಳ ಪ್ರಕಾರ, ಮೆಟ್ರೊ ಕಾರಿಡಾರ್‌ಗಳು, ನಿಲ್ದಾಣಗಳು ಮತ್ತು ಇತರ ಅಗತ್ಯ ಮೂಲಸೌಕರ್ಯಗಳನ್ನು ನಿರ್ಮಿಸಲು ಅಗತ್ಯವಾದ ಮಾರ್ಗವನ್ನು (RoW) ಪಡೆಯಲು ರಸ್ತೆಗಳ ಅಗಲೀಕರಣ ಮತ್ತು ವಿದ್ಯುತ್ ಉಪಯುಕ್ತತೆಗಳ ಸ್ಥಳಾಂತರವನ್ನು ಕಾರ್ಯಗತಗೊಳಿಸಲಾಗಿದೆ.
ಇದನ್ನೂ ಓದಿ: ಹಸಿರುಮಕ್ಕಿಗೆ ಬಂತು ಸಿಗಂದೂರು ಲಾಂಚ್, ಇಲ್ಲಿದೆ ನೋಡಿ ಕಾರಣ
ಭಾರತದ ಮೆಟ್ರೊ ಮ್ಯಾನ್ ಎಂದು ಕರೆಯಲ್ಪಡುವ ಇ ಶ್ರೀಧರನ್, ಪ್ರತಿ ದಿನ ವಿಳಂಬವಾದ ನಿರ್ಮಾಣದಿಂದ BMRCLಗೆ ಸುಮಾರು 1.5 ಕೋಟಿ ರೂಪಾಯಿಗಳಷ್ಟು ವೆಚ್ಚವಾಗುತ್ತದೆ ಎಂದು ಹೇಳಿದ್ದರು.
ಮೆಟ್ರೊದ 2 ನೇ ಹಂತಕ್ಕೆ ನಮ್ಮ ರಾಜ್ಯ ಸರ್ಕಾರ 2012 ರಲ್ಲಿ ಮತ್ತು ಕೇಂದ್ರ ಸರ್ಕಾರವು 2014 ರಲ್ಲಿ ಅನುಮತಿ ನೀಡಿತು. ಇದನ್ನು ಅನುಮೋದಿಸುವಾಗ ಸರ್ಕಾರವು ಸುಮಾರು 27,000 ಕೋಟಿ ರೂಪಾಯಿ ವೆಚ್ಚವಾಗಲಿದೆ ಮತ್ತು 2017 ರಲ್ಲಿ ಪೂರ್ಣಗೊಳ್ಳಲಿದೆ ಎಂದು ಹೇಳಿತ್ತು.
ನಂತರ, ಮುಂದೆ ಈ ಗಡುವನ್ನು 2020 ರವರೆಗೆ ವಿಸ್ತರಿಸಲಾಯಿತು ಮತ್ತು ನಂತರ 2025 ವರೆಗೆ ಏರಿಸಲಾಯಿತು. ಇದು ಈಗ ಈ ವೆಚ್ಚವನ್ನು 30,695 ಕೋಟಿ ರೂ.ಗೆ ಏರುವುದೆಂದು ನೀರಿಕ್ಷಿಸಿದೆ. ಒಟ್ಟಿನಲ್ಲಿ ನಮ್ಮ ಮೆಟ್ರೊ ಬೆಂಗಳೂರು ನಾಗರಿಕರ ಅನುಕೂಲಕ್ಕಾಗಿ ಮೆಟ್ರೊ ನಿರ್ಮಾಣ ಕಾರ್ಯವನ್ನು ಭರದಿಂದ ಮುಂದುವರಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ