Bengaluru: ಕಬಾಬ್ ರುಚಿಯಾಗಿಲ್ಲ ಎಂದು ಹೆಂಡತಿಗೆ ಚಾಕುವಿನಿಂದ ಇರಿದ; ಭಯದಲ್ಲಿ ಇದೇನು ಮಾಡಿಕೊಂಡ?

ಕಬಾಬ್ ತಿಂದ ಸುರೇಶ್, ಕಬಾಬ್​ ರುಚಿಯಾಗಿಲ್ಲ ಎಂದು ಬೈದಾಡಿದ್ದಾನೆ. ಈ ವೇಳೆ ಗಂಡ ಹೆಂಡತಿ ನಡುವೆ ಜಗಳವಾಗಿದೆ. ಬಳಿಕ ಚಾಕುವಿನಿಂದ ಆಕೆಯ ಕೈಗಳನ್ನು ಕತ್ತರಿಸಿ ಪರಾರಿಯಾಗಿದ್ದಾನೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಜು.31): ಪತ್ನಿ ಮಾಡಿದ ಕಬಾಬ್ (Kabab) ರುಚಿಯಾಗಿಲ್ಲ ಎಂದು ಹೆಂಡತಿಗೆ (Wife) ಚಾಕುವಿನಿಂದ ಇರಿದು ಕೊಲೆ ಮಾಡಿರೋ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಬನ್ನೇರುಘಟ್ಟ ರಸ್ತೆಯ ಅರೆಕೆರೆ ಲೇಔಟ್‌ನಲ್ಲಿ ಈ ಘಟನೆ ನಡೆದಿದ್ದು, 48 ವರ್ಷದ ಗಾರ್ಮೆಂಟ್ಸ್ ಉದ್ಯೋಗಿ (Garments Employee) ತನ್ನ ಪತ್ನಿ ತಯಾರಿಸಿದ ಕಬಾಬ್‌ ರುಚಿಯಿಲ್ಲ ಎಂದು ಜಗಳ ತೆಗೆದಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಜಗಳ ತಾರಕಕ್ಕೇರಿ ಚಾಕುವಿನಿಂದ ಪತ್ನಿಗೆ ಇರಿದಿದ್ದಾನೆ.

ಕಬಾಬ್ ರುಚಿಯಾಗಿಲ್ಲ ಎಂದು ಹೆಂಡತಿ ಕೊಂದ

ಬೊಮ್ಮನಹಳ್ಳಿಯ ಗಾರ್ಮೆಂಟ್ಸ್ ಉದ್ಯೋಗಿ ಸುರೇಶ್  ಎಂಬಾತ ಕೆಲಸ ಮುಗಿಸಿ ಮನೆಗೆ ಬಂದಿದ್ದ . ಮನೆಯಲ್ಲಿ ಕುಡಿಯಲು ಮದ್ಯ ತಂದಿದ್ದಾನೆ. ಈ ವೇಳೆ ಪತ್ನಿ ಶಾಲಿನಿಗೆ ಕಬಾಬ್  ಮಾಡಿ ಕೊಡುವಂತೆ ಹೇಳಿದ್ದಾನೆ. ಅದರಂತೆ ಪತ್ನಿ ಶಾಲಿನಿ ಕಬಾಬ್ ಮಾಡಿಕೊಟ್ಟಿದ್ದು, ಕಬಾಬ್ ತಿಂದ ಸುರೇಶ್, ಕಬಾಬ್​ ರುಚಿಯಾಗಿಲ್ಲ ಎಂದು ಮನಸೋ ಇಚ್ಛೆ ಬೈದಾಡಿದ್ದಾನೆ.  ಈ ವೇಳೆ ಗಂಡ ಹೆಂಡತಿ ನಡುವೆ ಜಗಳವಾಗಿದೆ. ಬಳಿಕ ಚಾಕುವಿನಿಂದ ಆಕೆಯ ಕೈಗಳನ್ನು ಕತ್ತರಿಸಿ ಪರಾರಿಯಾಗಿದ್ದಾನೆ. ಪತ್ನಿ ಕೂಗುತ್ತಲೇ  ಆಕೆಯನ್ನು ಬಿಟ್ಟು ಸುರೇಶ್ ಪರಾರಿಯಾಗಿದ್ದಾನೆ.

ನೇಣು ಬಿಗಿದುಕೊಂಡು ಆತ್ಮಹತ್ಯೆ

ಈ ವೇಳೆ ಆಕೆ ಕಿರುಚಲು ಆರಂಭಿಸಿದ್ದು, ನೆರೆಹೊರೆಯವರು ಆಕೆಯನ್ನು ರಕ್ಷಿಸಿ ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಸ್ತುತ ಆಕೆ ಚೇತರಿಸಿಕೊಳ್ಳುತ್ತಿದ್ದಾರೆ. ಸ್ಥಳೀಯರಿಂದ ಥಳಿತಕ್ಕೊಳಗಾಗುವ ಭಯದಿಂದ ಸುರೇಶ್ ಮನೆಯಿಂದ ಓಡಿ ಹೋಗಿದ್ದಾನೆ. ಆಸ್ಪತ್ರೆ ಸಿಬ್ಬಂದಿ ಬನ್ನೇರುಘಟ್ಟ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಾರಿಯಾಗಿರುವ ಪತಿಗೆ ಶೋಧ ನಡೆಸಿದಾಗ ಆತ ಸಮೀಪದ ಖಾಲಿ ನಿವೇಶನದಲ್ಲಿ ಮರದ ಕೊಂಬೆಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Assam Drugs: 1,920 ಕೋಟಿ ಮೌಲ್ಯದ ಡ್ರಗ್ಸ್ ಸುಟ್ಟು ಹಾಕಿದ ಅಸ್ಸಾಂ ಪೋಲಿಸರು!

ಆನೇಕಲ್: ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ

ಆನೇಕಲ್ ಪಟ್ಟಣದ ಹೂವಾಡಿಗಾರ ಬೀದಿಯಲ್ಲಿ ಪತಿಯೇ ಪತ್ನಿಯನ್ನು ಕೊಲೆಗೈದಿದ್ದಾನೆ. ಪ್ರೇಮಾ (25) ಕೊಲೆಯಾದ ಮಹಿಳೆ. ವೆಂಕಟೇಶಾಚಾರಿ ಕೊಲೆ ಮಾಡಿದ ಪಾಪಿ ಪತಿ. ಪ್ರೇಮಾ ಮತ್ತು ವೆಂಕಟೇಶಾಚಾರಿ 9 ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು.

ದಂಪತಿಗೆ ಏಳು ವರ್ಷದ ಮಗಳಿದ್ದಾಳೆ. ಆದ್ರೆ ದಂಪತಿ ನಡುವೆ ಅನೈತಿಕ ಸಂಬಂಧ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಪತ್ನಿ ಪ್ರೇಮಾ ಮೊಬೈಲ್ ನಲ್ಲಿ ಬೇರೊಬ್ಬನ ಜೊತೆ ಮಾತನಾಡುತ್ತಿದ್ರು. ಇದನ್ನ ಶುಕ್ರವಾರ ರಾತ್ರಿ ಕೇಳಿಸಿಕೊಂಡಿದ್ದಾನೆ.

ಇಂದು ಬೆಳಗ್ಗೆ ಸುಮಾರು 6 ಗಂಟೆಯ ಮಚ್ಚಿನಿಂದ ಕೊಲೆ ಮಾಡಿದ್ದಾನೆ.  ಕತ್ತು ಹಾಗೂ ಕೈ ಭಾಗಕ್ಕೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಘಟನಾ ಸ್ಥಳಕ್ಕೆ ಆನೇಕಲ್ ಪೋಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹೆಂಡತಿ ಚೆನ್ನಾಗಿಲ್ಲ ಎಂದು ಕೊಂದೇ ಬಿಟ್ಟ

ತೆಲಂಗಾಣ: ಆಕೆ ತುಂಬು ಗರ್ಭಿಣಿ (Pregnant). ಪುಟ್ಟ ಕಂದನ (Baby) ಬಗ್ಗೆ ನೂರಾರು ಕನಸು (Dreams) ಕಂಡವಳು, ಮಗು (Child) ಮಡಿಲಿಗೆ ಬರುತ್ತಿದ್ದಂತೆ ಮುದ್ದಾಡಬೇಕು, ಮಗುವನ್ನು ಜೀವಕ್ಕಿಂತ ಹೆಚ್ಚಾಗಿ ಕಾಪಾಡಿಕೊಳ್ಳಬೇಕು ಅಂತ ಕನಸು ಕಂಡಿದ್ದಳು. ಈ ವೇಳೆ ಆಕೆಗೆ ಗಂಡ (Husband) ಎನಿಸಿಕೊಂಡವ ಜೊತೆಯಾಗಿ ಇರಬೇಕಿತ್ತು. ಹೆಂಡತಿಯ (Wife) ಜೊತೆಗೆ ಮಗುವನ್ನೂ ಜೀವಕ್ಕಿಂತ ಹೆಚ್ಚಾಗಿ ಕಾಪಾಡಿಕೊಳ್ಳಬೇಕಿತ್ತು.

ಇದನ್ನೂ ಓದಿ: Siddaramotsava: ಮುಂದಿನ ಸಿಎಂ ಸಿದ್ದರಾಮಯ್ಯ; ಡಿಕೆಶಿಗೆ ಬ್ಯಾನರ್ ಮೂಲಕ ಟಕ್ಕರ್​ ಕೊಟ್ಟ ಸಿದ್ದು ಬೆಂಬಲಿಗರು

ಆದರೆ ಈ ಪತಿರಾಯ ತಾಯಿ ಹಾಗೂ ಇನ್ನೂ ಜೀವನವನ್ನೇ ನೋಡದ ಕಂದನ ಪಾಲಿಗೆ ಯಮನಾಗಿ ಬಿಟ್ಟಿದ್ದಾನೆ. ತನ್ನ ಕೈಯಾರೆ ಹೆಂಡತಿ ಹಾಗೂ ಆಕೆಯ ಹೊಟ್ಟೆಯೊಳಗಿದ್ದ ಪಾಪದ ಕೂಸುವನ್ನು ಕೊಂದೇ (Murder) ಬಿಟ್ಟಿದ್ದಾನೆ. ಈ ಘೋರ ಘಟನೆ ಬಗ್ಗೆ ತಿಳಿದು ಜನರೆಲ್ಲ ಮಮ್ಮಲ ಮರುಗಿದ್ದಾರೆ. ಆ ಪಾಪಿಗೆ ಶಿಕ್ಷೆ (Punishment) ಆಗಲೇ ಬೇಕು ಅಂತ ಆಗ್ರಹಿಸಿದ್ದಾರೆ.
Published by:Pavana HS
First published: