ಬೆಂಗಳೂರು(ಜ.14): ಸ್ವಂತ ಉದ್ಯಮ ಆರಂಭಿಸಿ ಯಶಸ್ಸು ಪಡೆಯಬೇಕೆಂಬ ಯೋಚನೆಯಿಂದ ಮೈತುಂಬಾ ಸಾಲ ಮಾಡಿಕೊಂಡಿದ್ದ ವ್ಯಕ್ತಿ, ಪಡೆದ ಸಾಲ ಹಿಂತಿರುಗಿಸಲು ಅಡ್ಡ ದಾರಿ ಹಿಡಿದು ಪೊಲೀಸರ (Police) ಅತಿಥಿಯಾಗಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಹೌದು ಬಂಧಿತ ವ್ಯಕ್ತಿಯನ್ನು ಕಲ್ಲೇಗೌಡ ಎಂದು ಗುರಿತಿಸಲಾಗಿದೆ. ತಾನು ಆರಂಭಿಸಿದ ಜಿಮ್ (Gym) ಲಾಸ್ ಆಗಿ ಸಾಲ ತೋರಿಸಲಾಗದೇ ಪರದಾಡುತ್ತಿದ್ದ ಕಲ್ಲೇಗೌಡ ರಕ್ತಚಂದನ ಸ್ಮಗ್ಲಿಂಗ್ (Smuggling) ಮಾಡುವ ಅಡ್ಡದಾರಿ ಹಿಡಿದಿದ್ದಾನೆ.
ಇದನ್ನೂ ಓದಿ: Mamata Banerjee: ಬುಡಕಟ್ಟು ಜನಾಂಗದ ಮಹಿಳೆಯರ ಜೊತೆ ಸಿಎಂ ಸಖತ್ ಡ್ಯಾನ್ಸ್!
ಹೌದು ಆರೋಪಿ ಕಲ್ಲೇಗೌಡ ಜೀಮ್ ಆರಂಭಿಸಲು 27 ಲಕ್ಷ ಸಾಲ ಮಾಡಿಕೊಂಡಿದ್ದ. ಆದರೆ ಈ ನಡುವೆ ಜಿಮ್ ಲಾಸ್ ಆಗಿದೆ. ಇದರಿಂದ ಚಿಂತೆಗೀಡಾದ ಕಲ್ಲೇಗೌಡ ಸಾಲ ಹೇಗೆ ತೋರಿಸಬೇಕೆಂದು ತಿಳಿಯದೆ ಅಕ್ರಮ ದಂಧೆಗೆ ಕೈ ಹಾಕಿದ್ದ. ಹೌದು ಜಿಮ್ ಲಾಸ್ ಆಗಿ ಸಾಲ ತೀರಿಸುವ ಚಿಂತೆಯಲ್ಲಿದ್ದ ಕಲ್ಲೇಗೌಡ ಬೇಗ ಹಣ ಮಾಡಲು ರಕ್ತಚಂದನ ಮಾರಾಟಕ್ಕೆ ಮುಂದಾಗಿದ್ದ. ಆದರೀಗ ಡೀಲ್ ಕುದುರಿಸುವ ವೇಳೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.
ಇದನ್ನೂ ಓದಿ: Mamata Banerjee| ಭಾರತವನ್ನು ತಾಲಿಬಾನ್-ಪಾಕಿಸ್ತಾನ ಆಗಲು ನಾವು ಅವಕಾಶ ನೀಡುವುದಿಲ್ಲ; ಮಮತಾ ಬ್ಯಾನರ್ಜಿ
ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿರುವ ಪೊಲೀಸರು, ಬಂಧಿತನಿಂದ ಕಾರು ಸಹಿತ 12 ಲಕ್ಷ ಮೌಲ್ಯದ ರಕ್ತಚಂದನ ವಶಕ್ಕೆ ಪಡೆದಿದ್ದಾರೆ. ಸದ್ಯ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ