ಬೆಂಗಳೂರು: ನಗರದ ಗಾಂಧಿಬಜಾರ್ ಅನ್ನು ಹೈಟೆಕ್ ಮಾಡುವ ಬಿಬಿಎಂಪಿ ಯೋಜನೆ ವಿರುದ್ಧ ಅಪಸ್ವರ ಕೇಳಿಬಂದಿದೆ. ಬಿಬಿಎಂಪಿ ವಿರುದ್ಧ ಸ್ಥಳೀಯರು ಆಕ್ರೋಶಗೊಂಡಿದ್ದಾರೆ. ‘ಮನಸು ಗಾಂಧಿ ಬಜಾರ್’ ಯೋಜನೆ ನಮ್ಮ ಮನಸ್ಸು ಒಡೆದಿದೆ ಅಂತ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ರಾಮಕೃಷ್ಣ ಆಶ್ರಮದಿಂದ ಟಾಗೋರ್ ವೃತ್ತದ ವರೆಗೂ 800 ಮೀಟರ್ ರಸ್ತೆಯನ್ನ ಕೇವಲ ಪಾದಾಚಾರಿಗಳ ಮಾರ್ಗವನ್ನಾಗಿ ಪರಿವರ್ತಿಸಲಾಗುತ್ತಿದೆ. ಅಲ್ಲದೆ 70 ಅಡಿ ರಸ್ತೆಯನ್ನು 20 ಅಡಿಗೆ ಕಡಿಮೆ ಮಾಡಲಾಗ್ತಿದೆ. ಅಲ್ಲದೇ ಇಲ್ಲಿ ವಾಹನ ಸಂಚಾರಕ್ಕೂ ಅವಕಾಶ ಇಲ್ಲ. ಹೀಗಾಗಿ ಇದು ಇಲ್ಲಿನ ಮೂಲ ನಿವಾಸಿಗಳು, ವ್ಯಾಪಾರಕ್ಕೆ ಬರೋ ಜನರಿಗೆ ತೊಂದರೆ ಆಗ್ತಿದೆ ಅಂತ ಅಸಮಾಧಾನ ಹೊರಹಾಕಿದ್ದಾರೆ.
ಪಾದಾಚಾರಿಗಳ ಮಾರ್ಗ ಮಾಡಲಾಗುತ್ತಿದೆ. ಪಾದಾಚಾರಿಗಳ ಮಾರ್ಗದಲ್ಲಿ ಬೀದಿ ವ್ಯಾಪರಿಗಳಿಗೆ ಅವಕಾಶ ನೀಡಲಾಗುತ್ತೆ. ಸುಮಾರು 250 ಬೀದಿ ಬದಿ ವ್ಯಾಪರಿಗಳಿಗೆ ಸ್ಟಾಲ್ ಹಾಕಿಕೊಡಲು ಬಿಬಿಎಂಪಿ ಮುಂದಾಗಿದೆ. ಈ ರಸ್ತೆಯಲ್ಲಿ ವಾಹನ ಸಂಚಾರ ಕೂಡ ನಿಷೇಧಿಸಲಾಗುತ್ತೆ. ಎಲೆಕ್ಟ್ರಾನಿಕ್ ಗೇಟ್ ಅಳವಡಿಸಿ ಇಲ್ಲಿನ ನಿವಾಸಿಗಳಿಗೆ ಪಾಸ್ಗಳನ್ನು ವಿತರಿಸಿ ಅವರ ವಾಹನಕ್ಕೆ ರಾತ್ರಿ ವೇಳೆ ಮಾತ್ರ ಬಿಡಲಾಗುತ್ತೆ.
ಇದನ್ನೂ ಓದಿ: Makar Sankranti 2023: ಸಂಕ್ರಾಂತಿ ಸಂಭ್ರಮ, ಮಾರುಕಟ್ಟೆಯಲ್ಲಿ ಖರೀದಿ ಜೋರು; ಹಬ್ಬದ ಎಫೆಕ್ಟ್ನಿಂದ ಬೆಲೆ ಹೆಚ್ಚಳ
ಚರ್ಚ್ಸ್ಟ್ರೀಟ್ ರೀತಿಯಲ್ಲಿಯೇ ಗಾಂಧಿ ಬಜಾರ್ ಅಭಿವೃದ್ದಿ ಮಾಡಲು ಪಾಲಿಕೆ ಯೋಜನೆ ಹಾಕಿಕೊಂಡಿದೆ. ಆದರೆ ಬಿಬಿಎಂಪಿ ಈ ಯೋಜನೆ ವಿರುದ್ಧ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಮೂಲನಿವಾಸಿಗಳು ಮತ್ತು ಗಾಂಧಿ ಬಜಾರ್ಗೆ ವ್ಯಾಪಾರಕ್ಕಾಗಿ ಬರುವ ಜನಸಾಮಾನ್ಯರಿಗೆ ಈ ತೊಂದರೆ ಉಂಟಾಗುತ್ತೆ ಅಂತ ಬೇಸರ ವ್ಯಕ್ತಪಡಿಸಿದ್ದಾರೆ.
ಗಾಂಧಿ ಬಜಾರ್ ರಸ್ತೆಯಲ್ಲಿ ಎರಡು ಬದಿಗಳಲ್ಲಿ ಸುಮಾರು 150ಕ್ಕೂ ಹೆಚ್ಚು ಮನೆಗಳಿವೆ. ನೂರಾರು ವರ್ಷಗಳಿಂದ ಈ ಕುಟುಂಬಗಳು ಇಲ್ಲಿ ವಾಸವಾಗಿವೆ. ಈ ಯೋಜನೆಯಿಂದ ಸ್ಥಳೀಯ ನಿವಾಸಿಗಳ ಸ್ವಾತಂತ್ರ್ಯವನ್ನೇ ಹರಣ ಮಾಡಿದಂತಾಗುತ್ತದೆ ಎಂಬುದು ಈ ಯೋಜನೆ ವಿರೋಧಕ್ಕೆ ಪ್ರಮುಖ ಕಾರಣವಾಗಿದೆ.
ಮೆಟ್ರೋ ಪಿಲ್ಲರ್ ಬಿದ್ದಿದ್ದು ಹೇಗೆ ಅನ್ನೋದು ಇನ್ನೂ ನಿಗೂಢ
ಮೆಟ್ರೋ ಪಿಲ್ಲರ್ ಬಿದ್ದು ತಾಯಿ, ಮಗು ಸಾವು ಪ್ರಕರಣದ ತನಿಖೆ ನಡೆಯುತ್ತಿದೆ. ಆದರೆ ಮೆಟ್ರೋ ಪಿಲ್ಲರ್ ಬಿದ್ದಿದ್ದು ಹೇಗೆ ಅನ್ನೋದು ಮಾತ್ರ ನಿಗೂಢವಾಗಿಯೇ ಉಳಿದಿದೆ. ಘಟನೆಯ ಅಸಲಿ ಕಾರಣ ತಿಳಿಯಲು ಖಾಕಿ ಪಡೆ ಐಐಟಿ ಮೊರೆ ಹೋಗಿದ್ದಾರೆ.
ಏನಿದು ಪ್ರಕರಣ?
ಜನವರಿ 10 ರಂದು ನಾಗವಾರದ ಹೆಚ್ಬಿಆರ್ ಲೇಔಟ್ ಬಳಿ ಮೆಟ್ರೋ ಪಿಲ್ಲರ್ ಕುಸಿದು ತಾಯಿ ಮಗು ಸಾವನ್ನಪ್ಪಿದ್ದರು. ಈ ಬಗ್ಗೆ ಗೋವಿಂದಪುರ ಪೊಲೀಸ್ ಠಾಣೆಯಲ್ಲಿ ಕೇಸ್ ಕೂಡ ದಾಖಲಾಗಿದ್ದು, ಪೊಲೀಸರು ಕೇಸ್ ಬೆನ್ನತ್ತಿದ್ದಾರೆ. ಘಟನೆ ನಡೆದು 5 ದಿನ ಕಳೆದರೂ ಪಿಲ್ಲರ್ ಕುಸಿದಿದ್ದು, ಹೇಗೆ ಅನ್ನೋ ಸೀಕ್ರೆಟ್ ಮಾತ್ರ ಇನ್ನೂ ರಿವೀಲ್ ಆಗಿಲ್ಲ. ಇದರ ನಡುವೆ ಪೊಲೀಸರು ಮತ್ತೆ ತನಿಖೆಯ ದಿಕ್ಕು ಬದಲಿಸಿದ್ದು, ಹೈದರಾಬಾದ್ನ ಐಐಟಿ ತಜ್ಞರು ನೀಡುವ ವರದಿ ಆಧಾರದ ಮೇಲೆ ಕ್ರಮ ಕೈಗೊಳ್ಳಲು ಚಿಂತನೆ ನಡೆಸಿದ್ದಾರೆ.
ಘಟನಾ ಸ್ಥಳದಲ್ಲಿ IITತಜ್ಞರಿಂದ ಸ್ಯಾಂಪಲ್ಸ್ ಕಲೆಕ್ಟ್
ಆರಂಭದಲ್ಲಿ IISC ವರದಿ ಮೇಲೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಪೊಲೀಸರು ನಿರ್ಧರಿಸಿದ್ದರು. ಬಳಿಕ IISC ನೀಡುವ ವರದಿ BMRCLಗೆ ಸಲ್ಲಿಕೆಯಾಗುತ್ತೆ, ಹೈದರಾಬಾದ್ ಐಐಟಿ ತಜ್ಞರು ನೀಡುವ ವರದಿ ಮೇಲೆ ಪೊಲೀಸರು ಕ್ರಮ ಕೈಗೊಳ್ಳಲಿದ್ದಾರೆ ಎಂದು ಪೂರ್ವ ವಲಯದ ಹೆಚ್ಚುವರಿ ಆಯುಕ್ತ ಎಂ.ಚಂದ್ರಶೇಖರ್ ಸ್ಪಷ್ಟಪಡಿಸಿದರು.
ಈಗಾಗಲೇ ಐಐಟಿ ಪ್ರೊಫೆಸರ್ಸ್ ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಸಿ, ಕೆಲ ಸ್ಯಾಂಪಲ್ಗಳನ್ನ ಕಲೆಕ್ಟ್ ಮಾಡಿ ತೆಗೆದುಕೊಂಡು ಹೋಗಿದ್ದಾರೆ. ಶೀಘ್ರದಲ್ಲೇ ಈ ಬಗ್ಗೆ ವರದಿ ನೀಡಲಿದ್ದು ಆ ಬಳಿಕ ಪಿಲ್ಲರ್ ಕುಸಿತದ ಅಸಲಿ ಸತ್ಯ ಹೊರ ಬರಲಿದೆ.
ಇದನ್ನೂ ಓದಿ: Bengaluru: ಕೋರಮಂಗಲ ಕಿಡ್ನಾಪ್ ಕೇಸ್ಗೆ ರೋಚಕ ಟ್ವಿಸ್ಟ್; ಮಹಿಳೆಯ ಮೊಬೈಲ್ನಲ್ಲಿತ್ತು ನಗ್ನ ಫೋಟೋ
ಮೆಟ್ರೋ ಪಿಲ್ಲರ್ ಕುಸಿತದ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಎನ್ಸಿಸಿ ಕಂಪನಿ ಎಂಜಿನಿಯರ್ಗಳು ಹಾಗೂ ಮೆಟ್ರೋ ಎಂಜಿನಿಯರ್ಗಳನ್ನ ಇಂದು ಸಹ ಪೊಲೀಸರು ವಿಚಾರಣೆ ನಡೆಸಿದ್ದಾರೆ.. ಸದ್ಯ ಘಟನೆ ಬಗ್ಗೆ ಅಧಿಕಾರಿಗಳ ಹೇಳಿಕೆ ಪಡೆದು, ಪಿಲ್ಲರ್ ನಿರ್ಮಾಣದ ಉಸ್ತುವಾರಿ ಮತ್ತು ಜವಾಬ್ದಾರಿ ಯಾರು ಅನ್ನೋ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ