HOME » NEWS » State » BENGALURU KARNATAKA BHATKAL 14 MONTH OLD CHILD GETS 16 CRORE DRUG THROUGH LOTTERY STG SCT

ಭಟ್ಕಳದ 14 ತಿಂಗಳ ಕಂದಮ್ಮನ ಚಿಕಿತ್ಸೆಗೆ ಲಾಟರಿಯಲ್ಲಿ ಬಂತು 16 ಕೋಟಿ ರೂ.!

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ 14 ತಿಂಗಳ ಮಗು ಫಾತಿಮಾ ಸ್ನಾಯು ಸಮಸ್ಯೆಯಿಂದ ಜೀವನ್ಮರಣ ಹೋರಾಟ ನಡೆಸಿದ್ದಳು. ಆಕೆಯ ಚಿಕಿತ್ಸೆಗೆ ವೈದ್ಯರು 16 ಕೋಟಿ ರೂ. ಭರಿಸಬೇಕು ಎಂದಿದ್ದರು. ಚಿಕಿತ್ಸೆಗೆ ಹಣವಿಲ್ಲದೇ ಪರದಾಟ ನಡೆಸಿದ ವೇಳೆಯೇ ಅವರು ಲಾಟರಿ ಗೆದ್ದಿದ್ದಾರೆ.

news18-kannada
Updated:February 18, 2021, 2:59 PM IST
ಭಟ್ಕಳದ 14 ತಿಂಗಳ ಕಂದಮ್ಮನ ಚಿಕಿತ್ಸೆಗೆ ಲಾಟರಿಯಲ್ಲಿ ಬಂತು 16 ಕೋಟಿ ರೂ.!
ಭಟ್ಕಳದ ಮೊಹಮ್ಮದ್ ಬೆಸಿಲ್ ಮತ್ತು ಖಾದಿಜಾ ಅವರ 14 ತಿಂಗಳ ಮಗು ಫಾತಿಮಾ
  • Share this:
ಬೆಂಗಳೂರು (ಫೆ. 18): ಜೀವನದಲ್ಲಿ ಯಾರ ಅದೃಷ್ಟ ಹೇಗೆ ಬದಲಾಗುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಆದರೆ, ಅದೃಷ್ಟ ಯಾವ ರೂಪದಲ್ಲಿ ಆದರೂ ಸಹಾಯಕ್ಕೆ ಬಂದರೆ ಎಷ್ಟೇ ನೋವುಗಳು ಇದ್ದರೂ ಮರೆಯುವಂತೆ ಮಾಡುತ್ತದೆ. ಇನ್ನು, 14 ತಿಂಗಳ ಪುಟ್ಟ ಕಂದಮ್ಮ ಅನಾರೋಗ್ಯದಿಂದ ಜೀವನ್ಮರಣದ ಹೋರಾಟ ನಡೆಸಿದ್ದಳು. ಆಕೆಯ ಚಿಕಿತ್ಸೆಗೆ ವೈದ್ಯರು 16 ಕೋಟಿ ರೂ. ಭರಿಸಬೇಕು ಎಂದಿದ್ದರು. ಚಿಕಿತ್ಸೆಗೆ ಹಣವಿಲ್ಲದೇ ಪರದಾಟ ನಡೆಸಿದ ವೇಳೆಯೇ ಅವರು ಲಾಟರಿ ಗೆದ್ದು ಅದೃಷ್ಟ ಪರೀಕ್ಷೆಯಲ್ಲಿ ಪಾಸ್‌ ಆಗಿದ್ದಾರೆ.

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮೊಹಮ್ಮದ್ ಬೆಸಿಲ್ ಮತ್ತು ಖಾದಿಜಾ ಅವರ 14 ತಿಂಗಳ ಮಗು ಫಾತಿಮಾ ಸ್ನಾಯು ಸಮಸ್ಯೆಯಿಂದ ಜೀವನ್ಮರಣ ಹೋರಾಟ ನಡೆಸಿದ್ದಳು. ಜನವರಿ ತಿಂಗಳಿನಿಂದ ಬೆಂಗಳೂರಿನ ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಫಾತಿಮಾ ಚಿಕಿತ್ಸೆ ಪಡೆಯುತ್ತಿದ್ದಾಳೆ. ಆಕೆಗೆ ಜೊಲ್‌ಗೆನ್ಸ್ಮಾ (Zolgensma ) ಚಿಕಿತ್ಸೆ ನೀಡಿದ ಬಳಿಕ ಆರೋಗ್ಯ ಸುಧಾರಣೆಗೊಂಡಿದೆ. ಕಂದಮ್ಮಳಿಗೆ ಆಸ್ಪತ್ರೆಯಲ್ಲಿ ಜೀನ್ ಚಿಕಿತ್ಸೆ ಕೂಡ ನೀಡಲಾಗಿದೆ.

ಕಂದಮ್ಮಳ ಆರೋಗ್ಯ ಚೇತರಿಕಗೆ ಹೆಚ್ಚಿನ ಹಣ ಅಗತ್ಯವಿತ್ತು. ಈ ವೇಳೆ ಪುಟ್ಟ ಬಾಲಕಿಗೆ ಹಣ ಲಾಟರಿ ಮೂಲಕ ಬಂದಿದೆ. ಪ್ರಮುಖ ಔಷಧಿ ಕಂಪನಿ ನೊವಾರ್ಟಿಸ್‌, ಜೀವನ್ಮರಣದಿಂದ ಹೋರಾಟ ನಡೆಸಿರುವ ಬಾಲಕಿಗೆ ಚಿಕಿತ್ಸೆ ಪಡೆಯಲು ಹಣ ನೀಡಲು ಮುಂದೆ ಬಂದಿದ್ದಾರೆ. ಕೇವಲ ಮಿಲಿಯನೇರ್‌ಗಳಿಂದ ಮಾತ್ರ ಈ ಚಿಕಿತ್ಸೆ ಪಡೆಯಲು ಸಾಧ್ಯ ಎಂದು ಆಸ್ಪತ್ರೆ ತಿಳಿಸಿದೆ. ಬಾಲಕಿ ಚಿಕಿತ್ಸೆಗೆ ತಗುಲುವ ವೆಚ್ಚ ಸುಮಾರು 16 ಕೋಟಿ ರೂ. ಎಂದು ಆಸ್ಪತ್ರೆಯ ಸಿಇಒ ನವೀನ್ ಥಾಮಸ್ ಹೇಳಿದ್ದಾರೆ. ನರಗಳ ಸಮಸ್ಯೆಯಿಂದಾಗಿ ಮಕ್ಕಳಿಗೆ ಸ್ನಾಯು ಸಮಸ್ಯೆ ಕಾಣಿಸುತ್ತದೆ. ಮಕ್ಕಳ ತಂದೆ-ತಾಯಿ ಇಬ್ಬರಲ್ಲಿ ಕೆಲವೊಂದು ದೋಷಗಳಿಂದ ಮಗು ಕೆಲವೊಮ್ಮೆ ಅಸ್ವಸ್ಥತೆಯಿಂದ ಬಳಲುವಂತೆ ಆಗುತ್ತದೆ. ಕಳೆದ ವರ್ಷ ಇದೇ ಕಾಯಿಲೆಯಿಂದಾಗಿ 38 ಮಕ್ಕಳು ಕೊನೆಯುಸಿರೆಳೆದಿದ್ದಾರೆ ಎಂದು ನವೀನ್‌ ಹೇಳಿದರು.

ಇದನ್ನೂ ಓದಿ: ಗಾಳಿಯಿಂದ ಗರ್ಭ ಧರಿಸಿ ಹೆಣ್ಣು ಮಗುವಿಗೆ ಜನ್ಮ ನೀಡಿದೆ...!; ಇಂಡೋನೇಷ್ಯಾ ಮಹಿಳೆಯ ಮಾತು

ಇನ್ನು, ಮಗಳು ಫಾತಿಮಾಗೆ ಚಿಕಿತ್ಸೆ ಬಳಿಕ ಸ್ನಾಯು ಸಮಸ್ಯೆ ಸುಧಾರಣೆ ಆಗುತ್ತಿದೆ. ಅವಳು ಈಗ ಕಾಲು ಸರಿಸಲು ಶಕ್ತಳಾಗಿದ್ದಾಳೆ. ಸಾಮಾನ್ಯ ಮಗುವಿನಂತೆ ಆಗಲು ಕೆಲವು ದಿನಗಳು ಬೇಕಾಗುತ್ತದೆ ಎಂದು ಬಾಲಕಿಯ ತಂದೆ ಪಿಟಿಐಗೆ ತಿಳಿಸಿದ್ದಾರೆ.

ಕೋಟ್ಯಾಧಿಪತಿಗಳಿಗೆ ಮಾತ್ರವೇ ಸೀಮಿತವಾದ ಚಿಕಿತ್ಸೆ!:

ಜೊಲ್‌ಗೆನ್ಸ್ಮಾ ಮತ್ತು ಜೀನ್ ಚಿಕಿತ್ಸೆ ಇದು ಕೇವಲ ಕೋಟ್ಯಾಧಿಪತಿಗಳ ಮಕ್ಕಳ ಚಿಕಿತ್ಸೆಗೆ ಸೀಮಿತವಾಗಿದೆ. ಸಾಮಾನ್ಯ ಜನರು ಈ ಚಿಕಿತ್ಸೆಯನ್ನು ಮಕ್ಕಳಿಗೆ ಕೊಡಿಸಲು ಕಷ್ಟಸಾಧ್ಯ. ಕರ್ನಾಟಕದಲ್ಲಿ ಮೊದಲ ಬಾರಿಗೆ ಜೊಲ್‌ಗೆನ್ಸ್ಮಾ ಚಿಕಿತ್ಸೆಯನ್ನು ಬ್ಯಾಪಿಸ್ಟ್‌ ಆಸ್ಪತ್ರೆಯಲ್ಲಿ ನೊವಾರ್ಟಿಸ್ ಮಾನವೀಯತೆ ತೋರಿದರಿಂದಾಗಿ ಬಡ ತಂದೆ-ತಾಯಿಯ ಕಂದಮ್ಮ ಚಿಕಿತ್ಸೆ ಪಡೆಯಲು ಶಕ್ತಳಾಗಿದ್ದಾಳೆ.

ಈ ಬಗ್ಗೆ ಮಕ್ಕಳ ನರವಿಜ್ಞಾನಿ ಮತ್ತು ನರಸ್ನಾಯುಕ ತಜ್ಞ ಸಲಹೆಗಾರ ಡಾ.ಆನ್ ಆಗ್ನೆಸ್ ಮ್ಯಾಥ್ಯೂ ಮಾತನಾಡಿ, ಇದು ಅಪರೂಪದ ಕಾಯಿಲೆ ಆಗಿದೆ. ಪ್ರಸ್ತುತ ಸುಮಾರು 200 ಮಕ್ಕಳು ಬ್ಯಾಪ್ಟಿಸ್ಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
Published by: Sushma Chakre
First published: February 18, 2021, 2:59 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories