• Home
 • »
 • News
 • »
 • state
 • »
 • Bengaluru Karaga: ಇಂದು ರಾತ್ರಿ 10ಕ್ಕೆ ಬೆಂಗಳೂರು ಕರಗಕ್ಕೆ ವಿದ್ಯುಕ್ತ ಚಾಲನೆ; ಎಂದಿನಂತೆ ದರ್ಗಾ ಪ್ರವೇಶ

Bengaluru Karaga: ಇಂದು ರಾತ್ರಿ 10ಕ್ಕೆ ಬೆಂಗಳೂರು ಕರಗಕ್ಕೆ ವಿದ್ಯುಕ್ತ ಚಾಲನೆ; ಎಂದಿನಂತೆ ದರ್ಗಾ ಪ್ರವೇಶ

ಕರಗ ಮಹೋತ್ಸವ (ಫೈಲ್​ ಫೋಟೋ)

ಕರಗ ಮಹೋತ್ಸವ (ಫೈಲ್​ ಫೋಟೋ)

ಸಾಂಪ್ರದಾಯಿಕ ಪದ್ಧತಿಯಂತೆ ಮುಸ್ಲಿಮರ ಸಹಭಾಗಿತ್ವದಲ್ಲಿಯೇ ಕರಗ ಶಕ್ತ್ಯೋತ್ಸವ ಜರುಗಲಿದೆ. 

 • Share this:

  ಬೆಂಗಳೂರು (ಏ. 8): ಕೋವಿಡ್ (covid) ಕರಿನೆರಳಲ್ಲಿ ಕಳೆದೆರಡು ವರ್ಷಗಳಿಂದ ಸರಳವಾಗಿ ನಡೆದಿದ್ದ ಬೆಂಗಳೂರು ಕರಗಕ್ಕೆ (Bengaluru Karaga) ಈ ಬಾರಿ ವಿಜೃಂಭಣೆಯಿಂದ ನಡೆಯಲಿದೆ. ಈಗಾಗಲೇ ಇತಿಹಾಸ ಪ್ರಸಿದ್ಧ ಕರಗ ಉತ್ಸಹ ಆಚರಣೆಗೆ ಎಲ್ಲಾ ರೀತಿಯ ಅಂತಿಮ ಸಿದ್ಧತೆ ನಡೆದಿದ್ದು, ಇಂದು ರಾತ್ರಿ 10ಗಂಟೆಗೆ ಕರಗ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ಸಿಗಲಿದೆ. ವಿವಾದಗಳ ಹೊರತಾಗಿ  ಕರಗವೂ ಎಂದಿನಂತೆ ಚಿಕ್ಕಪೇಟೆಯ ಮಸ್ತಾನ್​​ ಸಾಬ್​ ದರ್ಗಾಕ್ಕೆ ಭೇಟಿ ಪ್ರವೇಶಿಸಲಿದೆ.ಈ ಮೂಲಕ 300ಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಹಿಂದೂ-ಮುಸ್ಲಿಂ ಸಾಮರಸ್ಯಕ್ಕೆ ಸಾಕ್ಷಿಯಾಗಲಿದೆ 


  ಸಾಂಪ್ರದಾಯಿಕ ಪದ್ಧತಿಯಂತೆ ಮುಸ್ಲಿಮರ ಸಹಭಾಗಿತ್ವದಲ್ಲಿಯೇ ಕರಗ ಶಕ್ತ್ಯೋತ್ಸವ ಜರುಗಲಿದೆ. ಸಂಪ್ರದಾಯದಂತೆ ಕೆ. ಆರ್. ಮಾರುಕಟ್ಟೆ ವೃತ್ತದಲ್ಲಿ ಮಸ್ತಾನ್ ಸಾಬ್ ದರ್ಗಾಗೆ ಭೇಟಿ, ನಂತರ ಒಂತು ಸುತ್ತು ದರ್ಗಾ ಸುತ್ತಿ ಪ್ರಾರ್ಥನೆ ನಡೆಯಲಿದೆ


  9 ದಿನಗಳ ಕಾಲ ನಡೆಯುವ ಐತಿಹಾಸಿಕ ಕರಗ


  ಇಂದಿನಿಂದ ಆರಂಭವಾಗುವ ಕರಗ  ಏಪ್ರಿಲ್ 18ಕ್ಕೆ ಕರಗ ಸಮಾರೋಪಗೊಳ್ಳಲಿದ್ದು, ಇದರ ಕೊನೆಯ ದಿನದಂದು ಕರಗ ಬೆಂಗಳೂರು ದರ್ಶನವಿರಲಿದೆ.  ಶುಕ್ರವಾರದಿಂದಲೇ ದೇವಸ್ಥಾನದಲ್ಲಿ ವಿವಿಧ ಧಾರ್ಮಿಕ ಕೈಂಕರ್ಯಗಳು ಆರಂಭ ಆಗಲಿದೆ. ಬೆಂಗಳೂರಿನ ಕಲ್ಯಾಣ ಹಾಗೂ ಜನಜೀವನ ಸಮೃದ್ಧಿಯಾಗಿ ಇರಲು ಪ್ರತಿ ವರ್ಷ ಚೈತ್ರ ಮಾಸದ ಹುಣ್ಣಿಮೆ ದಿನದಂದು ಕರಗ ಉತ್ಸವ ನಡೆಯುತ್ತದೆ. ಬೆಂಗಳೂರು ಮಧ್ಯಭಾಗದಲ್ಲಿರುವ ತಿಗಳರ ಪೇಟೆಯ ಧರ್ಮರಾಯ ದೇವಸ್ಥಾನದಲ್ಲಿ ದ್ರೌಪದಿ ಕರಗ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. 9 ದಿನಗಳ ಉತ್ಸವಕ್ಕೆ ಸಕಲ ತಯಾರಿ ನಡೆಯುತ್ತಿದ್ದು, ಈ ಸಾಲಿನ ಕರಗ ಪೂಜಾರಿ ಎ. ಜ್ಞಾನೇಂದ್ರ ಅವರು ಹೊರಲಿದ್ದಾರೆ‌.‌


  9 ದಿನವೂ ಆಚರಣೆ


  ಇಂದು ರಾತ್ರಿ 10 ಗಂಟೆಗೆ ರಥೋತ್ಸವ ಧ್ವಜಾರೋಹಣ, ಏ.9ರಂದು ರಾತ್ರಿ 7.30ಕ್ಕೆ ವಿಶೇಷ ಪೂಜಗಳು. ಶಕ್ತ್ಯೋತ್ಸವವರೆಗೂ ಏ.13ರಂದು ಏಕಾದಶಿ ವೇಳೆ ರಾತ್ರಿ 3 ಗಂಟೆಗೆ ಆರತಿದೀಪ ನಡೆಯಲಿದೆ. ನಾಳೆ ಏ. 14ರ ಮುಂಜಾನೆ ಹಸಿ ಕರಗ ಉತ್ಸವ ನಡೆಯಲಿದೆ. ಏ. 15ಕ್ಕೆ ರಾತ್ರಿ 3ಕ್ಕೆ ಪೋಮಗಲು ಸೇವೆಯ ಜೊತೆ ಪುರಾಣ ಕಥನ ಜರಗಲಿವೆ. ಏ. 16ರ ರಾತ್ರಿ 12ಕ್ಕೆ ಬಹು ನಿರೀಕ್ಷಿತ ದ್ರೌಪದಮ್ಮನ ಕರಗ ಶಕ್ತ್ಯೋತ್ಸವ ಹಾಗೂ ಧರ್ಮರಾಯಸ್ವಾಮಿ ಮಹಾರಥೋತ್ಸವ ನಡೆಯಲಿದೆ.


  ಇದನ್ನು ಓದಿ: Bomb Threat in Bangalore Schools: ಶಾಂತಿ ಕದುಡುವ ಹುನ್ನಾರ ಎಂದ ಸಿಎಂ ಬೊಮ್ಮಾಯಿ


  ಏಪ್ರಿಲ್ 17ಕ್ಕೆ ರಾತ್ರಿ 2 ಗಂಟೆಗೆ ಪುರಾಣ ಪ್ರವಚನ ಹಾಗೂ ಏ.18ರ ಸಂಜೆ 4ಕ್ಕೆ ವಸಂತೋತ್ಸವ ರಾತ್ರಿ 12ಕ್ಕೆ ಧ್ವಜಾರೋಹಣ ನೆರವೇರಿಸುವ ಮೂಲಕ ಕರ ಉತ್ಸವಕ್ಕೆ ತೆರೆಬೀಳಲಿದೆ


  ಯಾವ ದಿನ ಏಲ್ಲೇಲ್ಲಿ ಪೂಜೆ?
  ಏ. 08 - ಶುಕ್ರವಾರ - ರಾತ್ರಿ 10 ದೇವರ ಉತ್ಸವ ಮುಂಜಾನೆ 4 ಘಂಟೆಗೆ ಧ್ವಜಾರೋಹಣ.
  ಏ.09 -  ಶನಿವಾರ - ಮಧ್ಯಾಹ್ನ 12:30 ಕ್ಕೆ ಕರಗದ ಕುಂಟೆ (ಕಬ್ಬನ್ ಪಾರ್ಕ್) ವಿಶೇಷ ಪೂಜೆ.
  ಏ. 10 - ಭಾನುವಾರ - ಮಧ್ಯಾಹ್ನ 12:30 ಕ್ಕೆ ಸಂಪಂಗಿ ಕೆರೆಯ ಅಂಗಳದಲ್ಲಿ ವಿಶೇಷ ಪೂಜೆ (ಶಕ್ತಿಪೀಠ).
  ಏ. 11 - ಸೋಮವಾರ ಮುನೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ.
  ಏ.12 - ಮಂಗಳವಾರ- ಜಲಕಂಠೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ.
  ಏ.13- ಬುಧವಾರ - ಅಣ್ಣಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ.
  ಏ. 14- ಗುರುವಾರ- ಕರಗದ ಕುಂಟೆ ವಿಶೇಷ ಪೂಜೆ.
  ಏ. 15 - ಶುಕ್ರವಾರ - ಕಲಾಸಿಪಾಳ್ಯ ಮರಿಸ್ವಾಮಿ ಮಠದಲ್ಲಿ ವಿಶೇಷ ಪೂಜೆ.
  ಏ.16 - ಶನಿವಾರ - ಕರಗದ ಕುಂಟೆ, ಧರ್ಮರಾಯಸ್ವಾಮಿ ರಥೋತ್ಸವ ಮತ್ತು ಶ್ರೀ ದ್ರೌಪದಿ ದೇವಿಯ ಕರಗಶಕ್ತ್ಯೋತ್ಸವ
  ಏ. 17- ಭಾನುವಾರ - ಭಾರತ ಕಥಾ ಪ್ರವಚನ ಶಕ್ತಿ ಸ್ಥಳ ಏಳುಸುತ್ತಿನ ಕೋಟೆ.
  ಏ.18 - ಸೋಮವಾರ - ವಸಂತೋತ್ಸವ, ದೇವತಾ ಉತ್ಸವ ಮತ್ತು ಧ್ವಜಾರೋಹಣ.

  Published by:Seema R
  First published: