HOME » NEWS » State » BENGALURU KANNADA BREAKING NEWS LIVE UPDATES COMMERCIAL TAX OFFICERS RAID ON BANGALORE TURF CLUB KKN LG

ತೆರಿಗೆ ವಂಚನೆ ಆರೋಪ; ಬೆಂಗಳೂರಿನ ಟರ್ಫ್​ ಕ್ಲಬ್​ ಮೇಲೆ ಅಧಿಕಾರಿಗಳ ದಾಳಿ

Commercial Tax Officers Raid on Turf Club: ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ನಿತೀಶ್ ಪಾಟೀಲ್​​​ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಅಧಿಕಾರಿಗಳು ಟರ್ಫ್​ ಕ್ಲಬ್​ ಮೇಲೆ ದಾಳಿ ನಡೆಸಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಜಿಎಸ್ ಟಿ ವಂಚನೆ ಮಾಡಿರುವ ದೂರು ಬಂದ ಹಿನ್ನೆಲೆ, ಇಂದು ವಾಣಿಜ್ಯ ಇಲಾಖಾ ಅಧಿಕಾರಿಗಳು ದಾಳಿ ನಡೆಸಿದ್ಧಾರೆ.

news18-kannada
Updated:February 19, 2020, 12:57 PM IST
ತೆರಿಗೆ ವಂಚನೆ ಆರೋಪ; ಬೆಂಗಳೂರಿನ ಟರ್ಫ್​ ಕ್ಲಬ್​ ಮೇಲೆ  ಅಧಿಕಾರಿಗಳ ದಾಳಿ
ಟರ್ಫ್​ ಕ್ಲಬ್​
  • Share this:
ಬೆಂಗಳೂರು(ಫೆ.19): ಭಾರೀ ಪ್ರಮಾಣದ ತೆರಿಗೆ ವಂಚನೆ ಆರೋಪ ಕೇಳಿ ಬಂದ ಹಿನ್ನೆಲೆ ಬೆಂಗಳೂರಿನ ಟರ್ಫ್ ಕ್ಲಬ್ ಮೇಲೆ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ. 

ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ನಿತೀಶ್ ಪಾಟೀಲ್​​​ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಅಧಿಕಾರಿಗಳು ಟರ್ಫ್​ ಕ್ಲಬ್​ ಮೇಲೆ ದಾಳಿ ನಡೆಸಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಜಿಎಸ್ ಟಿ ವಂಚನೆ ಮಾಡಿರುವ ದೂರು ಬಂದ ಹಿನ್ನೆಲೆ, ಇಂದು ವಾಣಿಜ್ಯ ಇಲಾಖಾ ಅಧಿಕಾರಿಗಳು ದಾಳಿ ನಡೆಸಿದ್ಧಾರೆ.

ಅಧಿಕಾರಿಗಳು 20 ತಂಡಗಳಾಗಿ ಬೆಂಗಳೂರಿನ ಟರ್ಫ್​​​​  ಕ್ಲಬ್ ಒಳಗಿನ 20 ಬುಕ್ಕಿ ಸ್ಟಾಲ್​​ಗಳನ್ನು ರೇಡ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಜೊತೆಗೆ  20 ಹೆಚ್ಚು ಬುಕ್ಕಿಗಳ ಮನೆ ಹಾಗೂ ಕಚೇರಿಗಳ ಮೇಲೆ ದಾಳಿ ನಡೆದಿದ್ದು, ಶೋಧ ನಡೆಸಲಾಗುತ್ತಿದೆ.

SSLC ಪೂರ್ವಭಾವಿ ಪರೀಕ್ಷೆ: ಬಳ್ಳಾರಿಯಲ್ಲಿ ಇಂಗ್ಲೀಷ್ ಪ್ರಶ್ನೆ ಪತ್ರಿಕೆ ಲೀಕ್​

ಈ ಹಿಂದೆ ಸಿಸಿಬಿ ಅಧಿಕಾರಿಗಳು ಕೂಡ ಟರ್ಫ್​​ ಕ್ಲಬ್ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಕುದುರೆ ರೇಸ್ ನಲ್ಲಿ ಖಾಸಗಿ ಸ್ಟಾಲ್​​ನ ಬುಕ್ಕಿಗಳು ಕೈವಾಡ ಇತ್ತು. ಖಾಸಗಿಯವರಿಗೆ ಸ್ಟಾಲ್ ಹಾಕಲು ಟರ್ಪ್ ಕ್ಲಬ್ ಆಡಳಿತ ಮಂಡಳಿ ಹಣ ಪಡೆಯುತ್ತಿತ್ತು. ಇವರಿಂದ ಸಂಗ್ರಹ ಮಾಡುತ್ತಿದ್ದ ಹಣಕ್ಕೆ ಯಾವುದೇ ತೆರಿಗೆ ಕಟ್ಟದೇ ವಂಚಿಸುತ್ತಿದ್ದರು. ಸಿಸಿಬಿ ಅಧಿಕಾರಿಗಳು ಕೂಡ ವಾಣಿಜ್ಯ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದರು. ಜಿ ಎಸ್ ಟಿ ವಂಚನೆ ಮಾಡುತ್ತಿರುವ ಬಗ್ಗೆ ಪತ್ರ ಬರೆದು ಗಮನಕ್ಕೆ ತಂದಿದ್ದರು ಎಂದು ತಿಳಿದು ಬಂದಿದೆ.
Youtube Video
First published: February 19, 2020, 12:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories