ಹಬ್ಬದ ಮರುದಿನ ಬೆಂಗಳೂರು ಗಾರ್ಬೆಜ್ ಸಿಟಿ ; ಎಲ್ಲೆಂದರಲ್ಲಿ ಕಸದ ರಾಶಿ

ನಿನ್ನೆ ಗಿಜುಗುಡುತ್ತಿದ್ದ ಮಾರುಕಟ್ಟೆಯಲ್ಲಿ ಇಂದು ಗ್ರಾಹಕರ ಪ್ರಮಾಣ ಇಳಿಮುಖವಾಗಿತ್ತು. ನಿನ್ನೆ ಬಿಸಾಡಿದ್ದ ಕಸವೆಲ್ಲಾ ಇಂದು ಕೊಳೆತು ನಾರುತ್ತದೆ. ಆದರಿಂದ ಇವತ್ತು ಜನರು ಮಾಸ್ಕ್ ಹಾಕಿದರೂ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ

news18-kannada
Updated:October 27, 2020, 10:37 PM IST
ಹಬ್ಬದ ಮರುದಿನ ಬೆಂಗಳೂರು ಗಾರ್ಬೆಜ್ ಸಿಟಿ ; ಎಲ್ಲೆಂದರಲ್ಲಿ ಕಸದ ರಾಶಿ
ಕಸದ ರಾಶಿ
  • Share this:
ಬೆಂಗಳೂರು (ಅಕ್ಟೋಬರ್​. 27) : ಕೊರೋನಾ ಶುರುವಾದ ಮೇಲೆ ನಗರದ ಮಾರುಕಟ್ಟೆಗಳು ಪುಲ್ ಸ್ವಚ್ಚ ವಾಗಿದ್ದವು. ಆದರೆ, ನೆನ್ನೆ ವಿಜಯ ದಶಮಿ ಮುಗಿಯುತ್ತಿದ್ದಂತೆ ನಗರದ ರಸ್ತೆಗಳಲ್ಲಿ ರಾಶಿ ರಾಶಿ ಕಸ ಕೊಳೆಯಲು ಆರಂಭಿಸಿದೆ. ಕೊರೋನಾ ಜೊತೆ ಮಳೆ ಮುನ್ಸೂಚನೆ ಇದ್ದರೂ ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಡೆಡ್ಲಿ ಕೊರೋನಾ ಬಳಿಕ ಮಾರುಕಟ್ಟೆಗಳಿಗೆ ನವರಾತ್ರಿಯಿಂದ ವಿಶೇಷ ಕಳೆ ಬಂದಿತ್ತು. ಹಬ್ಬದ ಸಂಭ್ರಮದಲ್ಲಿ ನಿನ್ನೆ ಖರೀದಿ ಭರಾಟೆ ಬಲು ಜೋರಾಗಿತ್ತು. ಆದರೆ, ಇಂದು ಹಬ್ಬ ಮುಗಿಯುತ್ತಿದ್ದಂತೆಯೇ ಮಾರುಕಟ್ಟೆಯ ಕಳೆಯೆಲ್ಲಾ ಹೋಗಿ ಕೊಳೆಯಾಗಿದೆ. ನವರಾತ್ರಿ ಹಬ್ಬದ ಹಿನ್ನೆಲೆ ಕೆ.ಆರ್. ಮಾರುಕಟ್ಟೆಯಲ್ಲಿ ಕಲರ್​ ಫುಲ್ ಹೂವುಗಳ ಬಾಳೆದಿಂಡು ಹಾಗೂ ಹಣ್ಣು ತರಕಾರಿಗಳಿಂದ ಕಂಗೊಳಿಸುತ್ತಿತ್ತು. ಆದರೆ, ಹಬ್ಬ ಮುಗಿಯುವ ಸಮಯದಲ್ಲಿ ಮಾರುಕಟ್ಟೆ ತನ್ನ ಸಹಜ ಸ್ಥಿತಿಯನ್ನು ಕಳೆದುಕೊಂಡಿದೆ.

ಎಲ್ಲಿ ನೋಡಿದರೂ ಕೊಳೆತ ಬಾಳೆದಿಂಡು, ವೇಸ್ಟ್ ತರಕಾರಿ, ಹಣ್ಣು ಹೂವುಗಳು ಸೊಪ್ಪು ಹೀಗೆ ಕಸ ರಾಶಿಯಿಂದ ಮಾರುಕಟ್ಟೆ ತುಂಬಿ ಹೋಗಿತ್ತು. ವ್ಯಾಪಾರದ ಬ್ಯುಸಿಯಲ್ಲಿ ಜನ ಎಲ್ಲೆಂದರಲ್ಲಿ ಕಸವನ್ನು ಎಸೆದಿರುವುದರಿಂದ ಕೊಳೆತು ಮಾರುಕಟ್ಟೆ ಕಸದಿಂದ ದುರ್ವಾಸನೆ ಬೀರುತ್ತಿದೆ. ಅಂದಹಾಗೆ ಕೇವಲ ಕೆ.ಆರ್ ಮಾರುಕಟ್ಟೆ ಅಷ್ಟೆ ಅಲ್ಲ ಯಶವಂತಪುರ ಮಾರುಕಟ್ಟೆ, ಮತ್ತಿಕೆರೆ ಮಾರುಕಟ್ಟೆ, ಬಸವನಗುಡಿ ಮಾರುಕಟ್ಟೆ ಸೇರಿದಂತೆ ಬಹುತೇಕ ಎಲ್ಲಾ ಮಾರುಕಟ್ಟೆಗಳಲ್ಲಿ ಇದೆ ಸ್ಥಿತಿ ಇದೆ. ಜೊತೆಗೆ ರಸ್ತೆ ಬದಿಗಳಲ್ಲೂ ಕೂಡ ಎಲ್ಲೆದ್ದರಲ್ಲಿ ರಾಶಿ ರಾಶಿ ಕಸ ಗೊಬ್ಬು ನಾರುತ್ತಿದೆ.

ನಿನ್ನೆ ಗಿಜುಗುಡುತ್ತಿದ್ದ ಮಾರುಕಟ್ಟೆಯಲ್ಲಿ ಇಂದು ಗ್ರಾಹಕರ ಪ್ರಮಾಣ ಇಳಿಮುಖವಾಗಿತ್ತು. ನಿನ್ನೆ ಬಿಸಾಡಿದ್ದ ಕಸವೆಲ್ಲಾ ಇಂದು ಕೊಳೆತು ನಾರುತ್ತದೆ. ಆದರಿಂದ ಇವತ್ತು ಜನರು ಮಾಸ್ಕ್ ಹಾಕಿದರೂ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ನಗರದಲ್ಲಿ ಭಾರಿ ಪ್ರಮಾಣದಲ್ಲಿ ತ್ಯಾಜ್ಯ ಉತ್ಪತ್ತಿಯಾಗಿದೆ.

ಇದನ್ನೂ ಓದಿ : Suicide: ಬಿಬಿಎಂಪಿ ಮಾಜಿ ಕಾರ್ಪೊರೇಟರ್ ಹೆಂಡತಿ ಆತ್ಮಹತ್ಯೆಗೆ ಶರಣು..!

ಸಾಮಾನ್ಯ ದಿನಗಳಲ್ಲಿ ನಗರದಲ್ಲಿ 4000 ಟನ್ ತ್ಯಾಜ್ಯ ಉತ್ಪತ್ತಿಯಾದರೆ ಹಬ್ಬದ ಸಂದರ್ಭದಲ್ಲಿ ಶೇ.20 ರಿಂದ ಶೇ.40 ರಷ್ಟು ಹೆಚ್ಚುವರಿ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಈ ಹೆಚ್ಚುವರಿ ತ್ಯಾಜ್ಯ ವಿಲೇವಾರಿ ಸವಾಲಾಗಿ ಪರಿಣಮಿಸಿದ್ದು, ವಿಲೇವಾರಿಯಾಗದೆ ಉಳಿದ ತ್ಯಾಜ್ಯ ಅಲ್ಲಲ್ಲೇ ಉಳಿದಿದೆ.

ಒಟ್ಟಿನಲ್ಲಿ ಕೊರೋನಾ ಹಾಗೂ ಹಿಂಗಾರ ಮಳೆ ಇರುವ ಹಿನ್ನೆಲೆ ಬಿಬಿಎಂಪಿಯ ಘನತಾಜ್ಯ ಅಧಿಕಾರಿಗಳು ಆದಷ್ಟು ಬೇಗ ಕಸ ವಿಲೇವಾರಿ ಮಾಡಬೇಕಿದೆ. ಇಲ್ಲವಾದ್ರೆ ಕೊರೋನಾ ಜೊತೆಗೆ ಮತ್ತಷ್ಟು ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಶುರುವಾಗಿದೆ.
Published by: G Hareeshkumar
First published: October 27, 2020, 10:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading