• Home
  • »
  • News
  • »
  • state
  • »
  • Bengaluru: ಕೊಟ್ಟ ಮಾತಿನಂತೆ ನಡೆದ KSRTC ನಿಗಮ; ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿ ಕುಟುಂಬಕ್ಕೆ ಕೋಟಿ ರೂಪಾಯಿ ನೆರವು

Bengaluru: ಕೊಟ್ಟ ಮಾತಿನಂತೆ ನಡೆದ KSRTC ನಿಗಮ; ಅಪಘಾತದಲ್ಲಿ ಮೃತಪಟ್ಟ ಸಿಬ್ಬಂದಿ ಕುಟುಂಬಕ್ಕೆ ಕೋಟಿ ರೂಪಾಯಿ ನೆರವು

KSRTC ಕಚೇರಿ

KSRTC ಕಚೇರಿ

ಇತ್ತೀಚೆಗೆ ಅಪಘಾತವೊಂದರಲ್ಲಿ ಮೃತಪಟ್ಟ ಸಾರಿಗೆ ಇಲಾಖೆಯ ಸಿಬ್ಬಂದಿಯ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ವಿಮೆ ನೆರವಿನ ಚೆಕ್​ ಅನ್ನು ಸಾರಿಗೆ ಸಚಿವ ಶ್ರೀರಾಮಲು ಅವರು ಹಸ್ತಾಂತರ ಮಾಡಿದ್ದಾರೆ.

  • News18 Kannada
  • Last Updated :
  • Bangalore [Bangalore], India
  • Share this:

ಬೆಂಗಳೂರು: ದೇಶದಲ್ಲೇ ಮೊದಲ ಬಾರಿಗೆ ಅದರಲ್ಲೂ ಸಾರಿಗೆ ಸಂಸ್ಥೆಗಳ (Karnataka State Road Transport Corporation ) ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ತನ್ನ ಸಿಬ್ಬಂದಿಗೆ ಒಂದು ಕೋಟಿ ರೂಪಾಯಿ ಮೊತ್ತದ ಅಪಘಾತ ವಿಮೆ ಯೋಜನೆ (Accident Insurance Policy )ಜಾರಿಗೆ ತಂದಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಕೊಟ್ಟ ಮಾತಿನಂತೆ ನಡೆದುಕೊಂಡಿದೆ. ಇತ್ತೀಚೆಗೆ ಅಪಘಾತವೊಂದರಲ್ಲಿ ಮೃತಪಟ್ಟ ಚಾಲಕನ ಕುಟುಂಬಕ್ಕೆ ಒಂದು ಕೋಟಿ ರೂಪಾಯಿ ವಿಮೆ ನೆರವಿನ ಚೆಕ್​​ ಅನ್ನು ಸಾರಿಗೆ ಸಚಿವ ಶ್ರೀರಾಮಲು (Minister Sriramulu) ಅವರು ಹಸ್ತಾಂತರ ಮಾಡಿದ್ದಾರೆ.


ಚಿತ್ರದುರ್ಗ ಡಿಪೋಗೆ ಸೇರಿದ್ದ ಚಾಲಕ ಕಮ್​ ನಿರ್ವಾಹಕ ಉಮೇಶ್ ಅಪಘಾತದಲ್ಲಿ ನಿಧನರಾಗಿದ್ದರು. ಬಸ್ ಚಾಲನೆ ಮಾಡುವ ವೇಳೆ ನಡೆದ ಅಪಘಾತ ಜೀವ ಕಳೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಇನ್ಶ್ಯೂರೆನ್ಸ್ ಕೋಟಾ ಮೂಲಕ ಒಂದು ಕೋಟಿ ರೂಪಾಯಿ ಚೆಕ್ ಅನ್ನು ಸಚಿವರು ಮೃತ ಉಮೇಶ್​ ಕುಟುಂಬಕ್ಕೆ ವಿತರಣೆ ಮಾಡಿದ್ದಾರೆ. ಇಂದು ಶಾಂತಿನಗರ KSRTC ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್​​, ಮತ್ತು ಎಸ್​​ಬಿಐ ಬ್ಯಾಂಕ್​ನಿಂದ ನೆರವುವನ್ನು ಉಮೇಶ್​​ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ.


Good news for KSRTC staff; 1 Crore Rs. Implementation of Sum Accident Insurance Scheme
KSRTC ಸಿಬ್ಬಂದಿಗೆ ಗುಡ್​ ನ್ಯೂಸ್​


ಇದನ್ನೂ ಓದಿ: Heart Warming Story: ಗಂಡ ಬಸ್ ಡ್ರೈವರ್ ಹೆಂಡತಿ ಕಂಡಕ್ಟರ್! 20 ವರ್ಷದ ಲವ್​ಸ್ಟೋರಿ, ಲವ್ಲೀ ಆಗಿದೆ ಲೈಫ್ ಜರ್ನಿ


ಸಾರಿಗೆ ಸಿಬ್ಬಂದಿಗೆ ಗುಡ್​​ನ್ಯೂಸ್​ ಕೊಟ್ಟಿದ್ದ ಕೆಎಸ್​ಆರ್​ಟಿಸಿ


ಕಳೆದ ನವೆಂಬರ್​ನಲ್ಲಿ ಕೆಎಸ್​ಆರ್​ಟಿಸಿ ನಿಗಮ ತನ್ನ ನೌಕರರಿಗೆ ಒಂದು ಕೋಟಿ ರೂಪಾಯಿ ಮೊತ್ತದ ಅಪಘಾತ ವಿಮೆ ಯೋಜನೆ ಜಾರಿ ಮಾಡಿತ್ತು. ಈ ಹಿಂದೆ ಅಪಘಾತ ವಿಮಾ ಯೋಜನೆಗೆ ಸಂಬಂಧಿಸಿದಂತೆ ಎಸ್​ಬಿಐ​​ನೊಂದಿಗೆ ಮಾಡಿಕೊಂಡಿದ್ದ ಒಡಂಬಡಿಕೆಯಂತೆ 50 ಲಕ್ಷ ರೂಪಾಯಿ ಹಾಗೂ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್​​ ಸಂಸ್ಥೆಯೊಂದಿಗೆ ಮಾಡಿಕೊಂಡ ಒಡಂಬಡಿಕೆಯ 50 ಲಕ್ಷ ರೂಪಾಯಿ ಸೇರಿ ಒಟ್ಟು ಒಂದು ಕೋಟಿ ರೂಪಾಯಿ ಅಪಘಾತ ವಿಮೆಯನ್ನು ಸಿಬ್ಬಂದಿಗೆ ನೀಡುವುದಾಗಿ ಘೋಷಿಸಿತ್ತು.


ಕೆಎಸ್​ಆರ್​ಟಿಸಿ ಸಂಸ್ಥೆಯ ಈ ಕಾರ್ಯದಿಂದ ಸಿಬ್ಬಂದಿ ಅಪಘಾತದಲ್ಲಿ ಮೃತಪಟ್ಟರೇ ಅಥವಾ ಶಾಶ್ವತ ಅಂಗವೈಕಲ್ಯಕ್ಕೆ ತುತ್ತಾದರೆ ದೊಡ್ಡ ಮೊತ್ತದ ಪರಿಹಾರ ಅವರಿಗೆ ಅಥವಾ ಕುಟುಂಬಸ್ಥರಿಗೆ ಸಿಗುವ ಅನುಕೂಲವಾಗಿತ್ತು. ಈ ವಿಮಾ ಯೋಜನೆಗೆ ಸಿಬ್ಬಂದಿಗಳು ತಿಂಗಳಿಗೆ 62.50 ರೂಪಾಯಿ ಮತ್ತು ಜೆಎಸ್​ಟಿ ಸೇರಿದಂತೆ ಒಟ್ಟಾರೆ ವಾರ್ಷಿಕವಾಗಿ 885 ರೂಪಾಯಿ ಪ್ರೀಮಿಯಂ ಹಣ ಪಾವತಿಸಬೇಕಾಗಿತ್ತು. ಅಂದು ಕೆಎಸ್​​​ಆರ್​ಟಿಸಿ ಅಧ್ಯಕ್ಷ ಎಂ.ಚಂದ್ರಪ್ಪ ಅವರ ಸಮ್ಮುಖದಲ್ಲಿ ಕೆಎಸ್​​ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್​ ಅವರು, ಯುನೈಟೆಡ್​ ಇಂಡಿಯಾ ಇನ್ಸೂರೆನ್ಸ್ ಕಂಪನಿಯ ಅಧಿಕಾರಿಗಳು ಒಡಂಬಡಿಕೆಗೆ ಸಹಿ ಹಾಕಿದ್ದರು.


Good news for KSRTC staff; 1 Crore Rs. Implementation of Sum Accident Insurance Scheme
KSRTC ಸಿಬ್ಬಂದಿಗೆ ಗುಡ್​ ನ್ಯೂಸ್​


ಇದನ್ನೂ ಓದಿ: Rishabh Pant: ರಿಷಭ್ ಪಂತ್​ ಜೀವ ಉಳಿಸಿದ ವ್ಯಕ್ತಿಗೆ ರಾಜ್ಯ ಸರ್ಕಾರದಿಂದ ಸನ್ಮಾನ, ಭೀಕರ ಅಪಘಾತದ ಕಥೆ ಬಿಚ್ಚಿಟ್ಟ ಚಾಲಕ


ಯದ್ವಾತದ್ವಾ ಚಲಿಸಿ ಐದು ವಾಹನಗಳಿಗೆ ಡಿಕ್ಕಿ ಹೊಡದ ಕಾರು


ಸಿಲಿಕಾನ್ ಸಿಟಿಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಸರ್ಜಾಪುರ ರಸ್ತೆಯ ವಿಪ್ರೋ ಗೇಟ್ ಬಳಿ ಅತಿವೇಗವಾಗಿ ಕಾರು ಚಲಾಯಿಸಿಕೊಂಡು ಬಂದ ಚಾಲಕ ಆಟೋ ಸೇರಿದಂತೆ ಐದು ಕಾರು ಹಾಗೂ ಬೈಕ್​​ವೊಂದಕ್ಕೆ ಡಿಕ್ಕಿ ಹೊಡೆದು ಜಖಂಗೊಳಿಸಿದ್ದರು. ಘಟನೆಯಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.


ಕಾರು ಡಿಕ್ಕಿ ಹೊಡೆಯುವ ದೃಶ್ಯ ಮತ್ತೊಂದು ಕಾರಿನ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ. ಘಟನೆ ಸಂಬಂಧ ಹೆಚ್ಎಸ್ಆರ್ ಲೇಔಟ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published by:Sumanth SN
First published: