Indira Canteen: ಇಸ್ಕಾನ್ ಸಂಸ್ಥೆಗೆ ಇಂದಿರಾ ಕ್ಯಾಂಟೀನ್‌ ನಿರ್ವಹಣೆಯ ಜವಾಬ್ದಾರಿ? ನಗರಾಭಿವೃದ್ಧಿ ಇಲಾಖೆಗೆ BBMP ಪ್ರಸ್ತಾವನೆ ಸಲ್ಲಿಕೆ

ಇಂದಿರಾ ಕ್ಯಾಂಟೀನ್‌ಗಳ ನಿರ್ವಹಣೆಯನ್ನು ಇಸ್ಕಾನ್‌ಗೆ ಹಸ್ತಾಂತರಿಸಲು ಉತ್ಸುಕವಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಗರಾಭಿವೃದ್ಧಿ ಇಲಾಖೆಗೆ ಈ ಕುರಿತಾದ ಪ್ರಸ್ತಾವನೆಯನ್ನು ಸಲ್ಲಿಸಿದೆ.

ಇಂದಿರಾ ಕ್ಯಾಂಟೀನ್‌

ಇಂದಿರಾ ಕ್ಯಾಂಟೀನ್‌

  • Share this:
ಇಂದಿರಾ ಕ್ಯಾಂಟೀನ್‌ಗಳ (Indira Canteen) ನಿರ್ವಹಣೆಯನ್ನು ಇಸ್ಕಾನ್‌ಗೆ (Iskcon) ಹಸ್ತಾಂತರಿಸಲು ಉತ್ಸುಕವಾಗಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) (BBMP) ನಗರಾಭಿವೃದ್ಧಿ ಇಲಾಖೆಗೆ ಈ ಕುರಿತಾದ ಪ್ರಸ್ತಾವನೆಯನ್ನು ಸಲ್ಲಿಸಿದೆ. "ನಾವು ನಗರಾಭಿವೃದ್ಧಿ ಇಲಾಖೆ (ಯುಡಿಡಿ)ಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದೇವೆ. ಇಂದಿರಾ ಕ್ಯಾಂಟೀನ್‌ಗಳನ್ನು ಇಸ್ಕಾನ್‌ ನಿರ್ವಹಿಸಬಹುದು ಎಂದು ಬಿಬಿಎಂಪಿ ವಿಶೇಷ ಆಯುಕ್ತೆ  (ಹಣಕಾಸು) (BBMP Special Commissioner) ತುಳಸಿ ಮದ್ದಿನೇನಿ ಹೇಳಿದ್ದಾರೆ. ಈ ನಿರ್ಧಾರದ ಬಗ್ಗೆ ಮಾತನಾಡಿದ ತುಳಸಿ, ಬಿಬಿಎಂಪಿ ಗುತ್ತಿಗೆದಾರರ ಬಗ್ಗೆ ತೃಪ್ತಿ ಹೊಂದಿಲ್ಲ ಎಂದು ಹೇಳಿದರು. “ನಾವು ಟೆಂಡರ್‌ಗಳನ್ನು ಕರೆದು ಇಂದಿರಾ ಕ್ಯಾಂಟೀನ್ ಗಳ ನಿರ್ವಹಣೆಯನ್ನು ಹಸ್ತಾಂತರಿಸಿದಾಗ ಏನಾಯಿತು ಎಂಬುದನ್ನು ನೋಡಿದ್ದೇವೆ ಎಂದು ಹೇಳಿದ್ದಾರೆ.

“ಇಸ್ಕಾನ್ ಗೆ ಆಹಾರ ವಿತರಣೆ ಬಗ್ಗೆ ಅಪಾರ ಅನುಭವವಿದೆ”


ಈ ಕ್ಯಾಂಟೀನ್‌ಗಳನ್ನು ಉದಾತ್ತ ಉದ್ದೇಶಕ್ಕಾಗಿ ತೆರೆಯಲಾಗಿದೆ ಮತ್ತು ನಮಗೆ ಬಿಬಿಎಂಪಿ ಜತೆಗೆ ನಿಸ್ವಾರ್ಥ ಸೇವೆ ಸಲ್ಲಿಸುವವರ ಅಗತ್ಯವಿದೆ. ಪೌರ ಕಾರ್ಮಿಕರು, ಶಾಲಾ ಮಕ್ಕಳಿಗೆ ಇಸ್ಕಾನ್ ಆಹಾರ ಪೂರೈಸುತ್ತಿರುವ ವಿಧಾನ ನೋಡಿದರೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ ಎಂಬ ನಂಬಿಕೆ ಇದೆ ಮತ್ತು ಅವರಿಗೆ ಈ ಬಗ್ಗೆ ಅಪಾರದವಾದ ಅನುಭವವಿದೆ” ಎಂದು ತುಳಸಿ ಮದ್ದಿನೇನಿ ಹೇಳಿದರು.

ಇಂದಿರಾ ಕ್ಯಾಂಟೀನ್ ನಲ್ಲಿ ಕಳಪೆ ಗುಣಮಟ್ಟದ ಆಹಾರದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಇಸ್ಕಾನ್ ಅನ್ನು ಮಂಡಳಿಗೆ ತರಲು ಬಿಬಿಎಂಪಿ ಉತ್ಸುಕವಾಗಿದೆಯಾದರೂ, ಇದು ಹೆಚ್ಚುವರಿ ಆರ್ಥಿಕತೆಗೆ ಕಾರಣವಾಗಬಹುದು ಎಂದು ಅಂದಾಜಿಸಲಾಗಿದೆ. “ನಾವು ಈಗ ದಿನಕ್ಕೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿಯ ಊಟವೂ ಸೇರಿದಂತೆ 55 ರೂಪಾಯಿಗಳನ್ನು ಪಾವತಿಸುತ್ತೇವೆ.

2017ರಿಂದ ಇಲ್ಲಿಯವರೆಗೆ, ಬೆಲೆಗಳು ಎಲ್ಲಾ ಅಗತ್ಯ ವಸ್ತುಗಳ ಮೇಲೆ ಹೆಚ್ಚಳವಾಗಿದೆ. 2017ರಲ್ಲಿ ನಿಗದಿ ಮಾಡಿದ ದರದಲ್ಲೇ ಊಟ ಪೂರೈಕೆ ಮಾಡಲಾಗುತ್ತಿದೆ ಮತ್ತು ಬೆಲೆ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಇಸ್ಕಾನ್ ದಿನದ ಊಟಕ್ಕೆ ರೂ. 78 ಅನ್ನು ಉಲ್ಲೇಖಿಸಿದೆ. ನಾವು ಅಷ್ಟು ಪಾವತಿಸಲು ಸಾಧ್ಯವಾಗದಿರಬಹುದು. ನಾವು ಈ ಬಗ್ಗೆ ಅವರೊಟ್ಟಿಗೆಮಾತುಕತೆ ನಡೆಸುತ್ತೇನೆ” ಎಂದು ತುಳಸಿ ಹೇಳಿದರು.

ಇದನ್ನೂ ಓದಿ:   Dowry Torcher: ಬಾಣಲೆಯಲ್ಲಿ ಕುದಿಯುತ್ತಿದ್ದ ಎಣ್ಣೆ ತೆಗೆದು ಅಡುಗೆ ಮಾಡ್ತಿದ್ದ ಹೆಂಡ್ತಿ ಮೇಲೆ ಸುರಿದ

ಬೆಲೆ ಹೆಚ್ಚಳದಿಂದಾಗಿ ಫಲಾನುಭವಿಗಳಿಗೆ ಯಾವುದೇ ರೀತಿಯ ಹೊರೆಯಾಗುವುದಿಲ್ಲ ಎಂದು ಅವರು ಹೇಳಿದರು. “ಫಲಾನುಭವಿಗಳಿಗೆ ಎಂದಿನಂತೆ ಬೆಳಗಿನ ಉಪಾಹಾರ 5 ರೂ. ಮತ್ತು ಊಟ 10 ರೂ.ಗೆ ಲಭ್ಯವಾಗುತ್ತದೆ ಮತ್ತು ಹೆಚ್ಚುವರಿ ಹೊರೆಯನ್ನು ಬಿಬಿಎಂಪಿಯೇ ಭರಿಸಲಿದೆ” ಎಂದು ಹೇಳಿದರು.

ಬೆಳ್ಳುಳ್ಳಿ ಮತ್ತು ಈರುಳ್ಳಿಯನ್ನು ಇಸ್ಕಾನ್ ಬಳಸದೇ ಅಡುಗೆ ಮಾಡುವುದರಿಂದ ಆಹಾರದ ರುಚಿ ಕೊಂಚ ಕಡಿಮೆಯಾಗಬಹುದು ಇದು ಫಲಾನುಭವಿಗಳಿಗೆ ತೃಪ್ತಿ ನೀಡದಿರಬಹುದೆಂಬ ಪ್ರಸ್ತಾಪ ಸಹ ಕೇಳಿ ಬಂದಿವೆ. ಈ ಕುರಿತು ಮಾತನಾಡಿದ ತುಳಸಿ ಅವರು ಜನರಿಗೆ ಎಂದಿನಂತೆ ರುಚಿಕರವಾದ ಮತ್ತು ಗುಣಮಟ್ಟದ ಆಹಾರದ ಭರವಸೆ ನೀಡಿದ್ದಾರೆ.

ಇಂದಿರಾ ಕ್ಯಾಂಟೀನ್‌ ವ್ಯವಸ್ಥೆಯಲ್ಲಿ ಬದಲಾವಣೆ

ಈ ಕ್ಯಾಂಟೀನ್‌ಗಳ ಕಾರ್ಯಾಚರಣೆಯ ವಿಧಾನವನ್ನು ಬದಲಾಯಿಸಲು ಬಿಬಿಎಂಪಿ ಮುಂದಾಗಿದೆ. ಇಲ್ಲಿಯವರೆಗೆ ಗುತ್ತಿಗೆದಾರರು ಫಲಾನುಭವಿಗಳಿಂದ ಹಣ ವಸೂಲಿ ಮಾಡುತ್ತಿದ್ದು, ಹೆಚ್ಚುವರಿ ವೆಚ್ಚವನ್ನು ಬಿಬಿಎಂಪಿ ಭರಿಸಲಿದೆ. ಇಂದಿರಾ ಕ್ಯಾಂಟೀನ್ಗಳನ್ನು ಇಸ್ಕಾನ್ಗೆ ಹಸ್ತಾಂತರಿಸಿದ ಬಳಿಕ ಪಾಲಿಕೆಯ ಮಾರ್ಷಲ್ಲುಗಳೆ ಟೋಕನ್ನುಗಳನ್ನು ವಿತರಿಸಿ, ಗ್ರಾಹಕರಿಂದ ಹಣ ಸಂಗ್ರಹಿಸಲಿದ್ದಾರೆ. ಆ ಮೊತ್ತವನ್ನು ಅದೇ ದಿನ ಸಂಜೆ ಪಾಲಿಕೆಯ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. ಇದರಿಂದ ನಿತ್ಯ ಎಷ್ಟು ಮಂದಿ ತಿಂಡಿ, ಊಟ ಸೇವಿಸುತ್ತಿದ್ದಾರೆ ಎಂಬ ನಿಖರ ಅಂಕಿ-ಅಂಶ ಗೊತ್ತಾಗಲಿದೆ,'' ಎಂದು ತುಳಸಿ ಹೇಳಿದರು.

ಇದನ್ನೂ ಓದಿ:  Crime News: ಅನ್ನ ಮಾಡದ್ದಕ್ಕೆ ಹೆಂಡತಿಯನ್ನು ಹೊಡೆದು ಕೊಂದ!

ಕರ್ನಾಟಕ ಪಾರದರ್ಶಕ ಸಾರ್ವಜನಿಕ ಸಂಗ್ರಹಣೆ ಕಾಯ್ದೆ 1999 ರ ಅಡಿಯಲ್ಲಿ 4G ವಿನಾಯತಿ ಪಡೆದು ಟೆಂಡರ್ ಕರೆಯದೇ ನಗರದಲ್ಲಿ 178 ಇಂದಿರಾ ಕ್ಯಾಂಟೀನ್‌ಗಳನ್ನು ಇಸ್ಕಾನ್‌ಗೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ. ಈ ಕ್ರಮವನ್ನು ಒಂದು ವರ್ಗದ ಜನರು ಪ್ರಶ್ನಿಸಿದ್ದಾರೆ. ಪ್ರಗತಿಪರ ಸಂಘಟನೆಗಳ ಒಕ್ಕೂಟದ ಬಹುತ್ವ ಕರ್ನಾಟಕದ ವಿನಯ್ ಶ್ರೀನಿವಾಸ ಮಾತನಾಡಿ, ಟೆಂಡರ್ ಇಲ್ಲದೆ ಕ್ಯಾಂಟೀನ್‌ಗಳಿಗೆ ಆಹಾರ ಸರಬರಾಜು ಮಾಡುವ ಗುತ್ತಿಗೆಯನ್ನು ನೀಡುವುದು ಭ್ರಷ್ಟಾಚಾರಕ್ಕೆ ಸಮಾನವಾಗಿದೆ ಎಂದಿದ್ದಾರೆ.
Published by:Ashwini Prabhu
First published: