ಬೆಂಗಳೂರಿನಲ್ಲಿ ನಡೆಯುತ್ತಿರುವ ಒತ್ತುವರಿ ತೆರವು ಕಾರ್ಯಚರಣೆಗೆ (Bengaluru Illegal Building Demolish) ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತರುತ್ತಿದ್ದಾರೆ. ಮತ್ತೊಂದು ಕಡೆ ಬಿಬಿಎಂಪಿ ಅಧಿಕಾರಿಗಳ (BBMP Officer) ಮೇಲೆ ರಾಜಕೀಯ ಒತ್ತಡ ಕೇಳಿ ಬಂದಿದೆಯಾ ಅನ್ನೋ ಅನುಮಾನಗಳು ಮೂಡಿವೆ. ಚಳ್ಳಘಟ್ಟದಲ್ಲಿರುವ ನಲಪಾಡ್ ಅಕ್ಯಾಡೆಮಿ (Nalapad Academy) ಒತ್ತುವರಿ ತೆರವಿಗೆ ತಡೆಯಾಜ್ಞೆ ಪಡೆಯಲು ಕೋರ್ಟ್ ಮೊರೆ ಹೋಗಿದ್ದಾರಂತೆ. ಕೋರ್ಟ್ ತೀರ್ಪು ಬರೋ ಮೊದಲೇ ಸ್ಥಗಿತಕ್ಕೆ ಬಿಬಿಎಂಪಿ ವಕೀಲರು (BBMP Lawyer) ಸೂಚಿಸಿದ್ದಾರಂತೆ ಎಂದು ಹೇಳಲಾಗುತ್ತಿದೆ. ಅಧಿಕಾರಿಗಳ ಜೊತೆ ಶಾಸಕ ಹ್ಯಾರಿಸ್ ಪುತ್ರ ನಲಪಾಡ್ (MLA Harrish Son Nalpad) ವಾಗ್ವಾದ ನಡೆಸುತ್ತಿರುವ ವಿಡಿಯೋ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ.
ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿರುವ AEE ಮಾರ್ಕಂಡೇಯ ಮೇಲೆ ವಕೀಲರ ಮೂಲಕ ಒತ್ತಡ ತರಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಕೋರ್ಟ್ ತೀರ್ಮಾನ ಬರೋವರೆಗೂ ತೆರವುಗೊಳಿಸಬೇಡಿ. ಸ್ಟೇ ಇಲ್ಲದಿದ್ದರೂ ಕಾರ್ಯಾಚರಣೆ ನಡೆಸಬೇಡಿ ಎಂದು ಸೂಚನೆ ನೀಡಲಾಗಿದೆಯಂತೆ.
ನ್ಯೂಸ್18 ಕನ್ನಡ ಪ್ರತಿನಿಧಿ ಜೊತೆ AEE ಮಾರ್ಕಂಡೇಯ ಮಾತನಾಡಿದ್ದಾರೆ. ವಕೀಲರು ಕೋರ್ಟ್ ಸೂಚನೆ ನೋಡಿಕೊಂಡು ಮುಂದುವರಿಯಲಿ ಎಂದು ಸೂಚನೆ ನೀಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ನ್ಯೂಸ್ 18 ಪ್ರತಿನಿಧಿ ಜೊತೆ AEE ಮಾರ್ಕಂಡೇಯ ಮಾತನಾಡಿರುವ ಸಂಭಾಷಣೆ ಇಲ್ಲಿದೆ.
ನ್ಯೂಸ್18 ಪ್ರತಿನಿಧಿ: ನಲಪಾಡ್ ಅಕ್ಯಾಡೆಮಿದು ಕೋರ್ಟ್ಗೆ ಹೋಗಿದೆಯಂತೆ ಏನ್ ಸರ್ ವಿಚಾರ?
ಮಾರ್ಕಂಡೇಯ, AEE, ಬಿಬಿಎಂಪಿ: ಹೈಕೋರ್ಟ್ಗೆ ಏನು ಹೋಗಿದ್ದಾರಂತೆ. ನಮಗೆ ಅಡ್ವೊಕೇಟ್ ಕರೆ ಮಾಡಿ, ಡೆಮಾಲಿಷನ್ ಸ್ಟಾಪ್ ಮಾಡಿರಿ, ನಾಳೆನೇ ಕೋರ್ಟ್ ಕೇಸ್, ಏನಾಗುತ್ತೆ ನೋಡ್ಕೊಂಡು ಮುಂದುವರಿಯಿರಿ ಅಂದ್ರು. ಅದಕ್ಕೆ ಇವತ್ತು ಸ್ಟಾಪ್ ಮಾಡಿದ್ದೀವಿ.
ನ್ಯೂಸ್18 ಪ್ರತಿನಿಧಿ: ಬಿಬಿಎಂಪಿ ಅಡ್ವೊಕೇಟ್ ಹೇಳಿದ್ರಾ ಸರ್?
ಮಾರ್ಕಂಡೇಯ, AEE, ಬಿಬಿಎಂಪಿ: ಹೌದು.
ನ್ಯೂಸ್18 ಪ್ರತಿನಿಧಿ: ಇನ್ನೂ ಜಡ್ಜ್ಮೆಂಟ್ ಬಂದಿಲ್ಲ, ಜಡ್ಜ್ ಏನೂ ಹೇಳಿಲ್ಲ ಅಲ್ವಾ?
ಮಾರ್ಕಂಡೇಯ, AEE, ಬಿಬಿಎಂಪಿ: ನಮಗೆ ಕಾಪಿ ಬಂದಿಲ್ಲ, ಆದ್ರೆ ಜಡ್ಜ್ ಹತ್ರ ಡಿಸ್ಕಷನ್ ಆಯ್ತು ಹೋಲ್ಡ್ ಮಾಡಿ, ಶುಕ್ರವಾರ ಕೇಸ್ ನೋಡ್ಕೊಂಡು ಮುಂದುವರಿಯಿರಿ ಅಂತ ನಮ್ಮ ಲಾಯರ್ ಹೇಳಿದಾರೆ.
ಮಾರ್ಕಂಡೇಯ, AEE, ಬಿಬಿಎಂಪಿ: ದೇವೇಂದ್ರಪ್ಪ ಅಂತ ಲಾಯರ್, ಸ್ಟೇ ಕಾಪಿ ಇದ್ರೆ ನಾವು ನಿಲ್ಲಿಸಬಹುದು, ಇಲ್ಲಾಂದ್ರೆ ಮಾಧ್ಯಮಗಳಿಗೆ ಉತ್ತರಿಸಲು ಆಗಲ್ಲ, ಓರಲ್ಲಾಗ್ ಹೇಳಿದ್ದು ಹೇಗೆ ಪರಿಗಣಿಸೋದು ಅಂತ ಕೇಳ್ದೆ. ಅದಕ್ಕೆ ಅವ್ರು ಇದ್ರ ಮೇಲೆ ನಿಮ್ಮಿಷ್ಟ ಅಪ್ಪ, ಪ್ರಾಬ್ಲಂ ಆದ್ರೆ ನಾವೇನೂ ಮಾಡಕ್ಕಾಗಲ್ಲ ಅಂದ್ರು.
ಇದನ್ನೂ ಓದಿ: Anand Mamani: ಉಪಸಭಾಪತಿ ಅನಂದ್ ಮಾಮನಿ ಆರೋಗ್ಯ ಸ್ಥಿತಿ ಗಂಭೀರ
ನ್ಯೂಸ್18 ಪ್ರತಿನಿಧಿ: ಜಡ್ಜ್ ಹೇಳಿಲ್ಲ, ಸ್ಟೇ ಕಾಪಿ ಸಿಕ್ಕಿಲ್ಲ, ಕರೆ ಮಾಡಿ ಸ್ಥಗಿತಕ್ಕೆ ತಿಳಿಸಿದ್ರು.
ಮಾರ್ಕಂಡೇಯ, AEE, ಬಿಬಿಎಂಪಿ: ಹೌದು ಹಾಗೇ ಹೇಳಿದ್ದು.
ನ್ಯೂಸ್18 ಪ್ರತಿನಿಧಿ: ಸ್ಟೇ ಕಾಪಿ ಸಿಕ್ಕಿಲ್ಲ ಅಂದ್ರೆ ನಾಳೆ ಏನ್ ಮಾಡ್ತೀರಾ ಸರ್?
ಮಾರ್ಕಂಡೇಯ, AEE, ಬಿಬಿಎಂಪಿ: ಸ್ಟೇ ಕಾಪಿ ಬರಹದಲ್ಲಿ ಸಿಗದಿದ್ದರೆ ನಾವು ಮುಂದುವರೀತೀವಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ