• Home
  • »
  • News
  • »
  • state
  • »
  • Samrat Restaurant: ಬೆಂಗಳೂರಿನ ಐಕಾನಿಕ್​ ಹೋಟೆಲ್​ ಬಂದ್​, ಇಲ್ಲಿನ ಮಸಾಲೆ ದೋಸೆ-ಬಾದಾಮ್​ ಹಲ್ವಾ ಇನ್ನೂ ನೆನಪು ಮಾತ್ರ!

Samrat Restaurant: ಬೆಂಗಳೂರಿನ ಐಕಾನಿಕ್​ ಹೋಟೆಲ್​ ಬಂದ್​, ಇಲ್ಲಿನ ಮಸಾಲೆ ದೋಸೆ-ಬಾದಾಮ್​ ಹಲ್ವಾ ಇನ್ನೂ ನೆನಪು ಮಾತ್ರ!

ಸಾಮ್ರಾಟ್​ ರೆಸ್ಟೋರೆಂಟ್

ಸಾಮ್ರಾಟ್​ ರೆಸ್ಟೋರೆಂಟ್

ಉದ್ಯಾನನಗರಿಯಲ್ಲಿ ಕೆಲ ಐಕಾನಿಕ್ ಹೋಟೆಲ್‌ಗಳ ಪೈಕಿ ಒಂದೆಂದು ಗುರುತಿಸಲಾಗುವ ಸಾಮ್ರಾಟ್ ರೆಸ್ಟೋರೆಂಟ್ ಇನ್ಮುಂದೆ ಕಾಣಸಿಗುವುದಿಲ್ಲ. ಹೋಟೆಲ್ ಚಾಲುಕ್ಯದಲ್ಲಿರುವ ಸಾಮ್ರಾಟ್ ರೆಸ್ಟೋರೆಂಟ್ ಸೆಪ್ಟೆಂಬರ್ 26ರಂದು ಬಾಗಿಲು ಬಂದ್ ಮಾಡಲಿದೆ.

  • Share this:

    ಮಸಾಲೆ ದೋಸೆ (Masala Dose) ಅಂದರೆ ಬೆಂಗಳೂರಿಗರಿಗೆ (Bengaluru) ತುಂಬಾ ಇಷ್ಟವಾದ ತಿಂಡಿ. ಕೇವಲ ಬೆಂಗಳೂರಿಗರಿಗಷ್ಟೇ ಅಲ್ಲ ಮಸಾಲೆ ದೋಸೆ ಅಂದರೆ ವಿದೇಶಿಗರ ಬಾಯಲ್ಲೂ ನೀರು ಬರುತ್ತೆ. ಮಸಾಲೆ ದೋಸೆ ಬೆಂಗಳೂರಿನ ಬಹುತೇಕ ಕಡೆಗಳಲ್ಲಿ ಸಿಗುತ್ತೆ. ಆದರೆ ಕೆಲವೊಂದು ಹೋಟೆಲ್ (Hotel)​ ಅಂದರೆ ಮಸಾಲೆ ದೋಸೆ, ಮಸಾಲೆ ದೋಸೆ ಅಂದರೆ ಆ ಹೋಟೆಲ್​ ಅನ್ನುವಂತಿರುತ್ತೆ. ಉದಾಹರಣೆಗೆ ಸಿಟಿಆರ್​ ಹೋಟೆಲ್ (CTR Hotel)​, ಗಾಂಧಿ ಬಜಾರ್​​ನ ವಿದ್ಯಾರ್ಥಿ ಭವನ್​ (Vidhyarthi Bhavan) ಸೇರಿದಂತೆ ಸಾಕಷ್ಟು ಹೋಟೆಲ್​ಗಳೂ ಮಸಾಲೆ ದೋಸೆಗೆ ಫೇಮಸ್​. ಇವರಂತೆ ಮತ್ತೊಂದು ಹೋಟೆಲ್​ನ  ಗರಿ ಗರಿಯಾದ ಮಸಾಲೆ ದೋಸೆ ಅಂದರೆ ಎಲ್ಲರಿಗೂ ಪಂಚಪ್ರಾಣ. ಅದರ ಜೊತೆ ಬಾದಾಮ್​ ಹಲ್ವಾ (Badham Halwa) ತಿಂದು ಬಿಟ್ಟರೆ ಸ್ವರ್ಗಕ್ಕೆ ಮೂರೇ ಗೇಣು.


    ಸಾಮ್ರಾಟ್​ ರೆಸ್ಟೋರೆಂಟ್ ಇಂದಿನಿಂದ ಬಂದ್​!


    ಈ ಹೋಟೆಲ್​ಗೆ ಬರುವವರಲ್ಲಿ ರಾಜಕಾರಣಿಗಳು, ವಿಐಪಿಗಳೇ ಹೆಚ್ಚು. ಅಂತಹ ಹೋಟೆಲ್​ಗಿಂದು ಕೊನೆಯ ದಿನ. ಇಂದಿನಿಂತ ಅಲ್ಲಿ ಘಮ ಘಮದ ಸುವಾಸನೆ ಬರೋದಿಲ್ಲ. ಜಗಮಗಿಸೋ ಲೈಟ್​ಗಳು ಕೂಡ ಆನ್​ ಆಗುವುದಿಲ್ಲ. ಯಾಕೆಂದರೆ ಇನ್ನೂ ಮುಂದೆ ಆ ಹೋಟೆಲ್​ ಕಾರ್ಯ ನಿರ್ವಹಿಸುವುದಿಲ್ಲ. ಉದ್ಯಾನನಗರಿಯಲ್ಲಿ ಕೆಲ ಐಕಾನಿಕ್ ಹೋಟೆಲ್‌ಗಳ ಪೈಕಿ ಒಂದೆಂದು ಗುರುತಿಸಲಾಗುವ ಸಾಮ್ರಾಟ್ ರೆಸ್ಟೋರೆಂಟ್ ಇನ್ಮುಂದೆ ಕಾಣಸಿಗುವುದಿಲ್ಲ. ಹೋಟೆಲ್ ಚಾಲುಕ್ಯದಲ್ಲಿರುವ ಸಾಮ್ರಾಟ್ ರೆಸ್ಟೋರೆಂಟ್ ಸೆಪ್ಟೆಂಬರ್ 26ರಂದು ಬಾಗಿಲು ಬಂದ್ ಮಾಡಲಿದೆ.


    ಬೆಂಗಳೂರಿನ ಐಕಾನಿಕ್​ ಹೋಟೆಲ್​ ಸಾಮ್ರಾಟ್​!


    ರೇಸ್‌ಕೋರ್ಸ್ ರಸ್ತೆ ಹಾಗೂ ಪ್ಲಾನಿಟೋರಿಯಂ ಮತ್ತು ವಿಧಾನಸೌಧಕ್ಕೆ ಹತ್ತಿರದಲ್ಲೇ ಇರುವ ಸಾಮ್ರಾಟ್ ರೆಸ್ಟೋರೆಂಟ್ ಹಲವು ದಶಕಗಳಿಂದ ಬೆಂಗಳೂರಿಗರ ಅನೇಕರಿಗೆ ನೆಚ್ಚಿನ ರೆಸ್ಟೋರೆಂಟ್‌ಗಳಲ್ಲಿ ಒಂದೆನಿಸಿದೆ. ಇಲ್ಲಿಯ ದಕ್ಷಿಣ ಭಾರತೀಯ ತಿನಿಸುಗಳು ಜನಪ್ರಿಯವೆನಿಸಿವೆ. ಮಸಾಲದಸೆ, ಇಡ್ಲಿ ಇಲ್ಲಿ ಫೇಮಸ್. ಹಳೆಯ ತಲೆಮಾರಿನ ಜನರ ನೆಚ್ಚಿನ ತಿಂಡಿ ಅಡ್ಡಾ ಇದು. ಅಷ್ಟೇ ಅಲ್ಲದೇ ವಿಧಾನಸೌಧಕ್ಕೆ ಹತ್ತಿರ ಇದ್ದ ಕಾರಣ, ಎಲ್ಲ ರಾಜಕಾರಣಿಗಳು ಇಲ್ಲೇ ಬಂದು ತಿಂಡಿ ತಿನ್ನುತ್ತಿದ್ದರು. ಇಲ್ಲಿನ ಕಾಫಿ ಸವಿಯುತ್ತಾ ಆನಂದಿಸುತ್ತಿದ್ದರು. ಆದರೆ ಕಾರಣಾಂತರಗಳಿಂದ ಇಂದಿನಿಂದ ಸಾಮ್ರಾಟ್​ ಕಾಣಸಿಗುವುದಿಲ್ಲ.


    ಇದನ್ನೂ ಓದಿ: ಫೇಮಸ್ ಆದ ಬೆಂಗಳೂರಿನ ರಸ್ತೆ ಗುಂಡಿಗಳು, ಸಿಲಿಕಾನ್ ಸಿಟಿ ಫುಲ್ ಟ್ರೋಲ್!


    45 ವರ್ಷಗಳ ಸುದೀರ್ಘ ಪಯಣ!


    ಸಿಲಿಕಾನ್​ ಸಿಟಿ ಬೆಂಗಳೂರಿನ ಹಳೇ ರೌಡಿಗಳ ಭೇಟಿಯ ತಾಣಗಳಲ್ಲಿ ಈ ಹೋಟೆಲ್ ಕೂಡ ಒಂದಾಗಿತ್ತು. 45 ವರ್ಷಗಳ ಸುದೀರ್ಘ ಪಯಣದಲ್ಲಿ ಈ ಹೋಟೆಲ್ ಹಲವು ಘಟನೆಗಳಿಗೆ ಸಾಕ್ಷಿಯಾಗಿದೆ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.1977ರಲ್ಲಿ ಆರಂಭವಾದ ಹೋಟೆಲ್‌ ಅನ್ನು ಈ ಹಿಂದೆ ಲಕ್ಷ್ಮಣ್ ಶಾನಭಾಗ್ ಅವರು ನಡೆಸುತ್ತಿದ್ದರು. ಅವರ ನಿಧನದ ಬಳಿಕ ಮಗ ಸಂತೋಷ್ ಮುನ್ನಡೆಸುತ್ತಿದ್ದಾರೆ. 90ಕ್ಕೂ ಅಧಿಕ ಜನ ಕೆಲಸ ಮಾಡುತ್ತಿದ್ದಾರೆ. ಪ್ರತಿದಿನ 3 ಸಾವಿರಕ್ಕೂ ಅಧಿಕ ಮಂದಿ ಈ ಹೋಟೆಲ್‌ಗೆ ಭೇಟಿ ನೀಡುತ್ತಾರೆ. ವಾರಾಂತ್ಯದಲ್ಲಿ 5 ಸಾವಿರಕ್ಕೂ ಹೆಚ್ಚು ಮಂದಿ ಇಲ್ಲಿ ಬಂದು ತಿಂಡಿ ತಿಂದು ಕಾಲ ಕಳೆಯುತ್ತಿದ್ದರು.


    ಇದನ್ನೂ ಓದಿ: ರಾಜ್ಯದಲ್ಲಿ ಜಾರಿಗೆ ಬರಲಿದೆ ಗುಜರಿ ನೀತಿ; ಸ್ಕ್ರ್ಯಾಪಿಂಗ್ ಪಾಲಿಸಿ ಬಗ್ಗೆ ಗೊತ್ತಿರಬೇಕಾದ ವಿಷಯ


    ಗುತ್ತಿಗೆ ಅವಧಿ ಮುಕ್ತಾಯದಿಂದ ಹೋಟೆಲ್​ ಕ್ಲೋಸ್​​!


    ಕಟ್ಟಡದ ಮಾಲೀಕರೊಂದಿಗೆ ಮಾಡಿಕೊಂಡಿದ್ದ ಗುತ್ತಿಗೆ ಅವಧಿ ಮುಕ್ತಾಯವಾಗಿದ್ದರಿಂದ ಹೋಟೆಲ್ ಮುಚ್ಚಲಾಗುತ್ತಿದೆ. ಬೇರೆ ಕಡೆಗೆ ಸ್ಥಳಾಂತರ ಆಗುತ್ತಿರುವ ಯಾವುದೇ ಮಾಹಿತಿ ಇಲ್ಲ. ಬೇರೆ ಕಡೆ ಕೆಲಸ ನೋಡಿಕೊಳ್ಳಬೇಕಾದ ಅನಿವಾರ್ಯ ಇದೆ ಎಂದು ಹೋಟೆಲ್​ನ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ. ಹೋಟೆಲ್ ಮುಚ್ಚುತ್ತಿರುವುದು ಆಗಾಗ ಹೋಟೆಲ್‌ಗೆ ಬರುವ ಜನರ ಬೇಸರಕ್ಕೂ ಕಾರಣವಾಗಿದೆ.

    Published by:ವಾಸುದೇವ್ ಎಂ
    First published: