ಬೆಂಗಳೂರು: ನಗರದ ಹೊಯ್ಸಳ ಪೊಲೀಸ್ ಸಿಬ್ಬಂದಿಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಈ ಘಟನೆ ಶನಿವಾರ (ಮೇ 19) ನಡೆದಿದ್ದು, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದೆ. ಮೇ 19ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ (Kantheerava Stadium) ಪ್ರಮಾಣ ವಚನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಲಕ್ಷಕ್ಕೂ ಅಧಿಕ ಜನರು ಸೇರಿದ್ದರು. ಈ ಹಿನ್ನೆಲೆ ಕಂಠೀರವ ಕ್ರೀಡಾಂಗಣ ಸುತ್ತಮುತ್ತ ದೊಡ್ಡಮಟ್ಟದಲ್ಲಿಯೇ ಟ್ರಾಫಿಕ್ (Bengaluru Traffic) ಜಾಮ್ ಉಂಟಾಗಿತ್ತು. ಇನ್ನು ಅಂದೇ ಸಿಇಟಿ ಪರೀಕ್ಷೆ ಇತ್ತು. ಈ ಹಿನ್ನೆಲೆ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಪೊಲೀಸರು ಎಚ್ಚರಿಕೆ ತೆಗೆದುಕೊಂಡಿದ್ದಾರೆ.
ಶನಿವಾರ ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿಯನ್ನು ಕೊತ್ತನೂರು ಹೊಯ್ಸಳ ಪೊಲೀಸ್ ಸಿಬ್ಬಂದಿ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಕೋರಮಂಗಲದ ಜೆಎನ್ಸಿ ಕಾಲೇಜಿಗೆ ಕೇವಲ 15 ನಿಮಿಷದಲ್ಲಿ ಕರೆದುಕೊಂಡು ಹೋಗಿ ಪರೀಕ್ಷೆಗೆ ಹಾಜರಾಗುವಂತೆ ನೋಡಿಕೊಂಡಿದ್ದಾರೆ.
ಸಿಬ್ಬಂದಿಯ ಕಾರ್ಯಕ್ಕೆ ಮೆಚ್ಚುಗೆ
ಹೊಯ್ಸಳ ವಾಹನದಲ್ಲಿಯೇ ವಿದ್ಯಾರ್ಥಿಯನ್ನು ಕರೆದುಕೊಂಡು ಹೋಗಲಾಗಿದೆ. ಇದೀಗ ಹೊಯ್ಸಳ ಸಿಬ್ಬಂದಿಗಳಾದ ಗೌರಿಶ್ ಹಾಗೂ ಸೋಮಶೇಖರ್ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: Bengaluru Rains: ಭಾರೀ ಮಳೆ ಸೂಚನೆ ಬೆನ್ನಲ್ಲೇ ಸಂಚಾರಿ ಪೊಲೀಸರು ಅಲರ್ಟ್; ಸಿಬ್ಬಂದಿಗೆ ಹೊಸ ಟಾಸ್ಕ್
#Listen: 2 Hoysala officers Gowrish & Somashekar of Kothanur P.S managed to successfully drop a student to his CET centre from Majestic to JNC in Koramangala in 15 mins in peak traffic, Which otherwise would have taken the student more than an hour to reach his centre. pic.twitter.com/0DiIR6XMbA
— Muhammad Wajihulla (@wajihulla) May 20, 2023
ಟ್ರಾಫಿಕ್ನಿಂದಾಗಿ ಮಧ್ಯಾಹ್ನ 1.45ಕ್ಕೆ ಮೆಜೆಸ್ಟಿಕ್ ನಿಲ್ದಾಣಕ್ಕೆ ಬಂದೆ. ಆದ್ರೆ ಪರೀಕ್ಷೆ 2 ಗಂಟೆ ಆರಂಭವಾಗುತ್ತಿತ್ತು. ಆಗ ನಾನು ಹೊಯ್ಸಳ ಪೊಲೀಸ್ ಸಿಬ್ಬಂದಿಯ ಸಹಾಯ ತೆಗೆದುಕೊಂಡೆ. ಸೈರನ್ ಹಾಕಿಕೊಂಡು ಕೇವಲ 15 ನಿಮಿಷದಲ್ಲಿಯೇ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದಕ್ಕೆ ಪೊಲೀಸ್ ಸಿಬ್ಬಂದಿಗೆ ನನ್ನ ಧನ್ಯವಾದಗಳು ಎಂದು ವಿದ್ಯಾರ್ಥಿ ಹೇಳಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ