• Home
  • »
  • News
  • »
  • state
  • »
  • Girls Missing: ಬೆಂಗಳೂರು ಟು ಚೆನ್ನೈ: ನಾಪತ್ತೆಯಾಗಿದ್ದ ಮೂವರ ಪೈಕಿ ಇಬ್ಬರು ಪರಸ್ಪರ ಮದ್ವೆಯಾಗಲು ಪ್ಲ್ಯಾನ್!

Girls Missing: ಬೆಂಗಳೂರು ಟು ಚೆನ್ನೈ: ನಾಪತ್ತೆಯಾಗಿದ್ದ ಮೂವರ ಪೈಕಿ ಇಬ್ಬರು ಪರಸ್ಪರ ಮದ್ವೆಯಾಗಲು ಪ್ಲ್ಯಾನ್!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಂಟೋನ್ಮೆಂಟ್ ನಿಲ್ದಾಣಕ್ಕೆ ಬಂದಿಳಿದಾಗ ಕಾಣೆಯಾಗಿರುವ ತಮ್ಮ ಪೋಸ್ಟರ್ ನೋಡಿದ್ದಾರೆ. ಕೂಡಲೇ ಅಲರ್ಟ್​ ಆದ ಬಾಲಕಿಯರು ದೆಹಲಿಗೆ ಹೊರಟ ರೈಲು ಹತ್ತಿ ಮಾರ್ಗ ಮಧ್ಯೆ ಇಳಿದು ಮತ್ತೆ ಚೆನ್ನೈ ಸೇರಿದ್ದಾರೆ.

  • Share this:

ಬೆಂಗಳೂರಿನ ಪುಲಕೇಶಿ ನಗರದ (Pulakeshinagara, Bengaluru) ಶಾಲಾ ವಸತಿ ನಿಲಯದಿಂದ (Hostel Girls Missing) ನಾಪತ್ತೆಯಾಗಿದ್ದ ಮೂವರು ವಿದ್ಯಾರ್ಥಿನಿಯರು ಚೆನ್ನೈನಲ್ಲಿ ಪತ್ತೆಯಾಗಿದ್ದರು. ಇದೀಗ ಪ್ರಕರಣದ ಒಂದೊಂದು ಮಾಹಿತಿ ಹೊರ ಬಂದಿದ್ದು, ಬಾಲಕಿಯರ ಕಥೆ ಕಣ್ಣೀರಿನ ಜೊತೆಗೆ ಆಶ್ಚರ್ಯ ತರಿಸುತ್ತಿದೆ. ಬಾಲಕಿಯರು ಹೇಗೆ ಚೆನ್ನೈ (Chennai) ತಲುಪಿದ್ರು? ಅಲ್ಲಿ ಉಳಿದುಕೊಂಡಿದ್ದು ಎಲ್ಲಿ? ವಸತಿ ನಿಲಯದಿಂದ (Hostel) ಹೊರ ಬಂದಿದ್ಯಾಕೆ ಎಂಬುದರ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಮೂವರ ಪೈಕಿ ಇಬ್ಬರು ಪರಸ್ಪರ ಮದುವೆಯಾಗಲು (Marriage) ನಿರ್ಧರಿಸಿದ್ರು ಎಂದು ವರದಿಯಾಗಿದೆ. ಚೆನ್ನೈನಲ್ಲಿಯೇ ಉಳಿದುಕೊಂಡು ಜೀವನ ಕಟ್ಟಿಕೊಳ್ಳಲು ಮೂವರು ನಿರ್ಧರಿಸಿದ್ದರು ಎಂದು ವರದಿ ಬಂದಿದೆ.


ಪುಲಕೇಶಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಯಲ್ಲಿ ಮೂವರು ಓದುತ್ತಿದ್ದರು. ಇಬ್ಬರು ಶಾಲೆಯ ಹಾಸ್ಟೆಲ್​ನಲ್ಲಿ ಉಳಿದುಕೊಂಡಿದ್ದರು. ಓರ್ವ ವಿದ್ಯಾರ್ಥಿನಿ ಮನೆಯಿಂದ ಶಾಲೆಗೆ ಬಂದು ಹೋಗುತ್ತಿದ್ದಳು. 10ನೇ ತರಗತಿ ಓದುತ್ತಿದ್ದ ಬಾಲಕಿಗೆ ತಂದೆ ಮತ್ತು ತಾಯಿ ಇರಲಿಲ್ಲ. 9ನೇ ತರಗತಿ ಓದುತ್ತಿದ್ದ ಬಾಲಕಿಗೆ ತಾಯಿ ಇರಲಿಲ್ಲ. ಹಾಗಾಗಿ ಇಬ್ಬರನ್ನು ಪೋಷಕರು ಹಾಸ್ಟೆಲ್​ಗೆ ಹಾಕಿದ್ದರು ಎಂದು ವರದಿಯಾಗಿದೆ.


ಜೊತೆಯಾಗಿ ಊರು ತೆರೆಯುವ ನಿರ್ಧಾರ


ವಸತಿ ನಿಲಯದಲ್ಲಿದ್ದ ಇಬ್ಬರ ಮಧ್ಯೆ ಪ್ರೀತಿ ಉಂಟಾಗಿತ್ತು. ಪರಸ್ಪರ ಪ್ರೀತಿಸಲು ಆರಂಭಿಸಿದ್ದರು. ಇತ್ತ ಮೂರನೇ ಬಾಲಕಿಗೆ ಓದಿನ ವಿಚಾರವಾಗಿ ಪೋಷಕರು ಸಿಟ್ಟು ಮಾಡಿದ್ದರು. ಇದರಿಂದಾಗಿ ಮೂವರು ಜೊತೆಯಾಗಿ ಬೆಂಗಳೂರು ತೊರೆಯಲು ನಿರ್ಧರಿಸಿದ್ದರು.


ವಿದ್ಯಾರ್ಥಿನಿಯರ ಬಳಿ ಹಣ ಎಲ್ಲಿಂದ ಬಂತು?


ಊರು ಬಿಡಲು ನಿರ್ಧರಿಸಿದ್ದ ಮೂವರು ಮನೆಯಲ್ಲಿ ಕಷ್ಟವಿದೆ ಎಂದು ಹೇಳಿ ಸ್ನೇಹಿತೆಯರ ಬಳಿ ಹಣ ಪಡೆದುಕೊಂಡಿದ್ದರು. ಹೀಗೆ ಅವರಿವರಿಂದ ಪಡೆದ ಹಣ 21 ಸಾವಿರ ರೂಪಾಯಿ ಆಗಿತ್ತು. ಪ್ಲ್ಯಾನ್ ಮಾಡಿಕೊಂಡಂತೆ ಸೆಪ್ಟೆಂಬರ್ 6ರಂದು ಹಾಸ್ಟೆಲ್ ವಾರ್ಡನ್ ಮತ್ತು ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಹಾಸ್ಟೆಲ್​​ನಿಂದ ಹೊರ ಬಂದಿದ್ದರು. ಮಾರ್ಗ ಮಧ್ಯೆ ಮೂರನೇ ಬಾಲಕಿ ಇವರ ಜೊತೆ ಸೇರಿಕೊಂಡಿದ್ದಳು.


ಹಾಸ್ಟೆಲ್​ನಿಂದ ಹೊರ ಬಂದ ಮೂವರು ಸೇವಾನಗರಕ್ಕೆ ತೆರಳಿದ್ದ ಇವರು ಬಟ್ಟೆ ಮತ್ತು ಮೊಬೈಲ್ ಖರೀದಿ ಮಾಡಿದ್ದಾರೆ. ಅಲ್ಲಿಂದ ಶಿವಾಜಿ ನಗರದ ಕಂಟೋನ್ಮೆಂಟ್ ರೈಲು ನಿಲ್ದಾಣ ತಲುಪಿದ್ದರು. ವೇಲಂಗಣಿಗೆ ತೆರಳು ನಿರ್ಧರಿಸಿದ್ದ ಬಾಲಕಿಯರು ತಪ್ಪಿ ಚೆನ್ನೈ ರೈಲು ಹತ್ತಿದ್ದಾರೆ.


ಬೆಂಗಳೂರು ಟು ಚೆನ್ನೈ ಟು ಬೆಂಗಳೂರು ಟು ಚೆನ್ನೈ


ಸೆಪ್ಟೆಂಬರ್ 7ರಂದು ಚೆನ್ನೈಗೆ ಬಂದಿಳಿದ ಬಾಲಕಿಯರು ಸಂಜೆವರೆಗೂ ಅಲ್ಲಿಯೇ ಸಮಯ ಕಳೆದಿದ್ದಾರೆ.  ಚೆನ್ನೈ ರೈಲ್ವೇ ಪೊಲೀಸರು ಬಾಲಕಿಯರನ್ನು ವಿಚಾರಿಸಿ ಮತ್ತೆ ಬೆಂಗಳೂರು ಟ್ರೈನ್ ಹತ್ತಿದ್ದಾರೆ. ಇತ್ತ ಪೋಷಕರು ಮಕ್ಕಳು ಕಾಣೆಯಾಗಿರುವ ಬಗ್ಗೆ ದೂರು ಸಲ್ಲಿಸಿದ್ದರು. ಕಂಟೋನ್ಮೆಂಟ್ ನಿಲ್ದಾಣಕ್ಕೆ ಬಂದಿಳಿದಾಗ ಕಾಣೆಯಾಗಿರುವ ತಮ್ಮ ಪೋಸ್ಟರ್ ನೋಡಿದ್ದಾರೆ. ಕೂಡಲೇ ಅಲರ್ಟ್​ ಆದ ಬಾಲಕಿಯರು ದೆಹಲಿಗೆ ಹೊರಟ ರೈಲು ಹತ್ತಿ ಮಾರ್ಗ ಮಧ್ಯೆ ಇಳಿದು ಮತ್ತೆ ಚೆನ್ನೈ ಸೇರಿದ್ದಾರೆ.


Bengaluru hostel girls missing case story details mrq
ಸಾಂದರ್ಭಿಕ ಚಿತ್ರ


ಕಥೆ ಹೇಳಿದ್ದ  ಬಾಲಕಿಯರು


ಚೆನ್ನೈ ರೈಲ್ವೇ ನಿಲ್ದಾಣದಿಂದ ಹೊರ ಬಂದ ಬಾಲಕಿಯರನ್ನು ಆಟೋ ಚಾಲಕರು ಪ್ರಶ್ನೆ ಮಾಡಿದ್ದಾರೆ. ಹಾಸ್ಟೆಲ್​​ನಲ್ಲಿ ಕಿರುಕುಳ ನೀಡಲಾಗುತ್ತಿತ್ತು. ಆದ್ದರಿಂದ ಓಡಿ ಬಂದಿದ್ದೇವೆ ಎಂದು ತಮಿಳು ಭಾಷೆ ಬಲ್ಲ ಬಾಲಕಿ ಹೇಳಿದ್ದಾಳೆ. ಇದಕ್ಕೂ ಮುನ್ನ ನಿಲ್ದಾಣದಲ್ಲಿ ಬಾಲಕಿಯರು ಹಣ ಕಳೆದುಕೊಂಡಿದ್ದರು. ಇನ್ನು ಇವರ ಮಾತು ನಂಬಿದ ಚಾಲಕ ಚರ್ಚ್​ ಬಳಿ ಕರೆದುಕೊಂಡು ಹೋಗಿ ಮನೆ ಮಾಡಿಕೊಂಡಿದ್ದನು.


ಇದನ್ನೂ ಓದಿ:  Hubballi: ದೀಪಕ್ ಕೊಲೆ ಆರೋಪಿಗಳಿಗೆ ಸಿಐಡಿ ಡ್ರಿಲ್; ಮತ್ತೊಂದೆಡೆ SDPI, PFI ಮುಖಂಡರು ಅಂದರ್​


ಬಾಲಕಿಯರು ಸಿಕ್ಕಿದ್ದು ಹೇಗೆ?


ಇನ್ನು ಬೆಂಗಳೂರು ತೊರೆದಿದ್ದ ಬಾಲಕಿಯರು, ಕಾಲ್ ಮಾಡಲು ಕಾಯಿನ್ ಬೂತ್ ಬಳಕೆ ಮಾಡಿದ್ದರು ಎಂದು ತಿಳಿದು ಬಂದಿದೆ. ಮೂವರ ಪೈಕಿ ಓರ್ವ ಬಾಲಕಿ ಖರೀದಿಸಿದ ಹೊಸ ಮೊಬೈಲ್​ನಿಂದ ತಂದೆಗೆ ಮಿಸ್ಡ್​ ಕಾಲ್ ಮಾಡಿದ್ದಾಳೆ. ಬಾಲಕಿಯ ತಂದೆ ಪುನಃ ಕಾಲ್ ಮಾಡಿದಾಗ ಕರೆ ಸ್ವೀಕರಿಸಿಲ್ಲ. ಈ ಮಾಹಿತಿಯನ್ನು ಪೋಷಕರು ಪೊಲೀಸರಿಗೆ ನೀಡಿದ್ದಾರೆ.


Bengaluru hostel girls missing case story details mrq
ಸಾಂದರ್ಭಿಕ ಚಿತ್ರ


ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಚೆನ್ನೈ ಠಾಣೆಯನ್ನು ಸಂಪರ್ಕಿಸಿ ಬಾಲಕಿಯರ ಮಾಹಿತಿ ನೀಡಿದ್ದಾರೆ. ಚೆನ್ನೈ ಪೊಲೀಸರು ಬಾಲಕಿಯರನ್ನು ಪತ್ತೆ ಮಾಡಿ ಬೆಂಗಳೂರಿಗೆ ತಲುಪಿಸಿದ್ದಾರೆ.


ಇದನ್ನೂ ಓದಿ:  PFI Raid: ಬಂಧಿತ ಸದಸ್ಯರ ಫೋನ್​ನಿಂದ ಬಯಲಾಯ್ತು ಶಾಕಿಂಗ್ ಮಾಹಿತಿ!


ಮದುವೆಯಾಗಲು ಪ್ಲಾನ್


ಬಾಲಕಿಯರು ಕಾಣೆಯಾದ 20 ದಿನವದ್ರೂ ಪತ್ತೆಯಾಗಿರಲಿಲ್ಲ. ಈ ನಡುವೆ ಓರ್ವ ಬಾಲಕಿ ಕೆಲಸಕ್ಕೆ ಹೋಗಲು ಆರಂಭಿಸಿದ್ದಳು.  ಮೂವರಲ್ಲಿ ಒಬ್ಬಳು ಹುಡುಗನ ರೀತಿ ಓಡಾಡುತ್ತಿದ್ದಳು. ಇದರಲ್ಲಿ ಮದುವೆಯಾಗಲು ಸಿದ್ಧತೆ ಸಹ ಮಾಡಿಕೊಂಡಿದ್ದರು.

Published by:Mahmadrafik K
First published: