Accident: ಬೆಂಗಳೂರಿನ ಹೆದ್ದಾರಿಯಲ್ಲಿ ಅಪಘಾತಗಳ ಸರಮಾಲೆ; ಭಯದಲ್ಲಿ ವಾಹನ ಸವಾರರು!

ಕಳೆದ ಮೂರು ದಿನಗಳ ಹಿಂದೆ ಎಲೆಕ್ಟ್ರಾನಿಕ್​ ಸಿಟಿ ಫ್ಲೈಓವರ್​  (electronic city Accident)ನಲ್ಲಿ ಬೈಕ್​ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿತ್ತು. ಈ ಅಪಘಾತದ ರಭಸಕ್ಕೆ ಬೈಕ್​ನಲ್ಲಿದ್ದ ಯುವಕ ಮತ್ತು ಯುವತಿ ಫ್ಲೈ ಓವರ್​  ಮೇಲಿಂದ ಬಿದ್ದು ಸಾವನ್ನಪ್ಪಿದ್ದರು.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:
ಆನೇಕಲ್ : ಕಳೆದ ಹಲವು ದಿನಗಳಿಂದ ಅಪಘಾತಗಳದ್ದೇ (Accident) ಸದ್ದು ಮತ್ತು ಸುದ್ದಿ. ಹೌದು ಕೊರಮಂಗಲ, ಎಲೆಕ್ಟ್ರಾನಿಕ್ ಸಿಟಿ ಮತ್ತು ಅತ್ತಿಬೆಲೆ (Koramangala, Electronic City, Attibele) ಬಳಿ ನಡೆದ ಭೀಕರ ಅಪಘಾತಗಳು ಹಲವರನ್ನು ಅಮಾನುಷವಾಗಿ ಬಲಿ ಪಡೆದಿವೆ. ಇದು ಕೆಲವರಿಗೆ ಭಯ ಹುಟ್ಟಿಸಿದ್ರೆ, ಮತ್ತೂ ಕೆಲವರಿಗೆ ಅದರ ಅರಿವೆ ಇಲ್ಲದಂತೆ ಅಪಘಾತ ಹಾಟ್ ಸ್ಪಾಟ್​ಗಳಲ್ಲಿಯೇ ಡ್ಯಾನ್ಸ್ ಮಾಡಿ ಮೋಜು ಮಸ್ತಿ ಮಾಡಿದ್ದಾರೆ.

ಅಪಘಾತ ನಡೆದ ಸ್ಥಳದಲ್ಲಿ ಯುವಕ ಯುವತಿ ಡ್ಯಾನ್ಸ್. ಯುವಕರಿಗೆ ಚೆಲ್ಲಾಟ, ವಾಹನ ಸವಾರರಿಗೆ ಪ್ರಾಣ ಸಂಕಟ. ಹೌದು ಬೆಂಗಳೂರಿನ ಹಲವು ಕಡೆ ನಡೆದ ಭೀಕರ ಅಪಘಾತಗಳು ಜನರ ಮನಸ್ಸಿನಿಂದ ಇನ್ನೂ ಮಾಸಿಲ್ಲ. ಅಪಘಾತಗಳ ಭೀಕರತೆ ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಸೇರಿದಂತೆ ಹೊಸೂರು ಹೆದ್ದಾರಿಯಲ್ಲಿ ಸಂಚರಿಸಲು ವಾಹನ ಸವಾರರು ಭಯ ಪಡುವಂತಾಗಿದೆ. ಎಚ್ ಎಸ್‌ ಆರ್ ಲೇಔಟ್, ಮಾರತಹಳ್ಳಿ ಕಡೆಯಿಂದ ಬರುವ ವಾಹನ ಸವಾರರು ಆನೇಕಲ್, ಅತ್ತಿಬೆಲೆ ಚಂದಾಪುರ ಹೋಗಬೇಕಾದ್ರೆ ಈ ಹತ್ತು ಕಿಲೋ ಮೀಟರ್ ನ ಫ್ಲೈ ಓವರ್ ದಾಟಿಕೊಂಡು ಹೊಸೂರು ಹೆದ್ದಾರಿಯಲ್ಲಿ ಸಾಗಬೇಕು. ಅದರಲ್ಲು ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲೆ‌ ನಡೆದ ಅಪಘಾತ ಕೆಲ ವಾಹನ ಸವಾರರಿಗೆ ಭಯ ಹುಟ್ಟಿಸಿದೆ. ಆದ್ರೆ  ಇನ್ನೂ ಕೆಲ ಯುವಕರು ಅಪಘಾತ ನಡೆದ ಸ್ಥಳದಲ್ಲಿಯೇ ಮಸ್ತ್ ಡ್ಯಾನ್ಸ್ ಮಾಡಿ   ಮೋಜು ಮಸ್ತಿ ಮಾಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲಿನ ಯುವತಿಯರ ಡ್ಯಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕವಾಗಿ ಆಕ್ರೋಶ ವ್ಯಕ್ತವಾಗಿದೆ.

ಇನ್ನೂ ವಾಹನ ಸವಾರರು ಮಡಿವಾಳ ದಾಟಿ ಹೊಸೂರು ರಸ್ತೆ ಪ್ರಾರಂಭವಾಗುತ್ತಲೇ ಇದೀಗ ವಾಹನ ಸವಾರರಿಗೆ ಅಪಘಾತ ಭಯ ಕಾಡತೊಡಗಿದೆ. ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್ ಮೇಲಿನಿಂದ ಹೋದರೆ ಹಿಂದಿನಿಂದ ಯಾವ ವಾಹನ ಗುದ್ದುತ್ತದೆಯೋ ಅನ್ನೊ ಭಯ ಒಂದು ಕಡೆ ಕಾಡಿದ್ರೆ, ಕೆಳಗಡೆ ಹೋದ್ರೂ ಮೇಲುಗಡೆಯಿಂದ ಯಾವ ವಾಹನ ನಮ್ಮ ಮೇಲೆ ಬೀಳುತ್ತೋ ಎಂಬ ಆತಂಕನೂ ಮನೆ ಮಾಡಿದೆ. ಇಂತಹ ಸಂದರ್ಭದಲ್ಲಿ ಮೇಲೆ ನಿಂತು ಕುಡಿದು ಕುಣಿದು ಕುಪ್ಪಳಿಸುವವರು ತಮ್ಮ ಕಾರನ್ನು ಅತ್ಯಂತ ವೇಗವಾಗಿ ಚಲಿಸಿ ಅಪಘಾತಕ್ಕೆ ಕಾರಣರಾಗಬಹದು ಅನ್ನೋ ಅನುಮಾನ ಈಗ ಪ್ರತಿ ಕ್ಷಣ ಕಾಡುತ್ತಿದೆ. ಇಂತಹ ಅವಘಡಗಳಿಗೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕಾರಣ. ಸರಿಯಾಗಿ ರಸ್ತೆ ನಿಯಮಗಳನ್ನು ಕಾರ್ಯಗತಗೊಳಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ. ಅನಾಹುತ ಸಂಭವಿಸಿದರೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಪಂದಿಸುವುದಿಲ್ಲ ಎಂದು ಸಾರ್ವಜನಿಕರಾದ ಮುನಿರಾಜ್ ಮತ್ತು ಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದ್ಯ ಎಲೆಕ್ಟ್ರಾನಿಕ್ ಸಿಟಿ ಲೆಬೈ ಬಳಿ ಕೆಲವು ಸುರಕ್ಷಿತ ಕ್ರಮ ಕೈಗೊಳ್ಳೋದಕ್ಕೆ ಎಲಿವೇಟರ್ ಅಥಾರಿಟಿ ಮುಂದಾಗಿದ್ದು ಬೀಳುವ ಹಂತದಲ್ಲಿರುವ ಎಲಿವೇಟರ್ ಅಡ್ಡಗೋಡೆ ಬಳಿ ಸಿಮೆಂಟ್ ಬ್ಯಾರಿಕೇಡ್ ಅಳವಡಿಸಿದೆ. ಆದ್ರೂ ಪೊಲೀಸರು ಅಪಘಾತ ವಲಯ ಅನ್ನೋ ಎಚ್ಚರಿಕಾ ಬೋರ್ಡ್ ಹಾಕಬೇಕು ಅಂತ ಸಾರ್ವಜನಿಕರು ಆಗ್ರಹ ಮಾಡಿದ್ದಾರೆ. ಈ ಕುರಿತು ಎಲಕ್ಟ್ರಾನಿಕ್ ಸಿಟಿ ಪೊಲೀಸರು‌ ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕು.

ಇದನ್ನು ಓದಿ: Explained: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಬಗ್ಗೆ ಜೆಡಿಎಸ್ ದ್ವಂದ್ವ ನಿಲುವು; ಎಚ್​ಡಿಕೆ ಹೇಳಿಕೆ ಹಿಂದಿನ ಉದ್ದೇಶವೇನು?

ಫ್ಲೈಒವರ್​ನಿಂದ ಕೆಳಗೆ ಬಿದ್ದು ಸಾವು

ಕಳೆದ ಮೂರು ದಿನಗಳ ಹಿಂದೆ ಎಲೆಕ್ಟ್ರಾನಿಕ್​ ಸಿಟಿ ಫ್ಲೈಓವರ್​  (electronic city Accident)ನಲ್ಲಿ ಬೈಕ್​ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿತ್ತು. ಈ ಅಪಘಾತದ ರಭಸಕ್ಕೆ ಬೈಕ್​ನಲ್ಲಿದ್ದ ಯುವಕ ಮತ್ತು ಯುವತಿ ಫ್ಲೈ ಓವರ್​  ಮೇಲಿಂದ ಬಿದ್ದು ಸಾವನ್ನಪ್ಪಿದ್ದರು. ಓವರ್​ ಟೇಕ್​ ಮಾಡವ ರಭಸದಲ್ಲಿ ಈ ದುರ್ಘಟನೆ ಸಂಭವಿಸಿದೆ. ಅಪಘಾತವಾದ ರಭಸಕ್ಕೆ ಯುವತಿ ಯುವಕನ ಜೊತೆ ಬ್ಯಾರಿಕೇಡ್​ ಕೂಡ ಫ್ಲೈ ಓವರ್​​ನಿಂದ ಕೆಳಗೆ ಬಿದ್ದಿದೆ. ಮೇಲಿಂದ ಇಬ್ಬರು ಕೆಳಗೆ ಬಿದ್ದಿರುವ ಹಿನ್ನಲೆ ಮೃತದೇಹಗಳು ಛಿದ್ರಗೊಂಡಿದ್ದವು.

ವರದಿ : ಆದೂರು ಚಂದ್ರು 
Published by:HR Ramesh
First published: