ಬೆಂಗಳೂರು: ಹೆಬ್ಬಾಳ ಮೇಲ್ಸೇತುವೆ (Hebbal Flyover) ಸಂಚಾರ ಮಾಡುವ ದ್ವಿಚಕ್ರ ವಾಹನ (Bike) ಹಾಗೂ ಆಟೋ (Auto) ಸವಾರರೇ ಎಚ್ಚರ ಎಚ್ಚರ. ಸ್ವಲ್ಪ ಯಾಮಾರಿದರೂ ನಿಮ್ಮ ವಾಹನ ಬೀಳೋದು ಗ್ಯಾರಂಟಿ ಅಂತಿದ್ದಾರೆ ಇಲ್ಲಿ ನಿತ್ಯ ಸಂಚರಿಸುವ ವಾಹನ ಸವಾರರು. ಹೌದು, ಹೆಬ್ಬಾಳ ಮೇಲ್ಸೇತುವೆ ಉದ್ಘಾಟನೆಯಾಗಿ ಬಳಕೆಗೆ ಬಂದ ಬಳಿಕ ಸದಾ ಒಂದಿಲ್ಲೊಂದು ಸಮಸ್ಯೆಗಳಿಂದಲೇ ಸುದ್ದಿಯಾಗಿ ವಾಹನ ಸವಾರರಲ್ಲಿ ಆತಂಕ ಮೂಡಿಸುತ್ತಿದೆ. 5 ನಿಮಿಷಕ್ಕೊಂದು ದ್ವಿಚಕ್ರ ವಾಹನಗಳು ಸ್ಕಿಡ್ (Vehicle Skid) ಆಗಿ ಬೀಳ್ತಿವೆಯಂತೆ. ಸದಾ ಸಮಸ್ಯೆಗಳಿಂದಲೇ ಸುದ್ದಿಯಾಗುವ ಹೆಬ್ಬಾಳ ಸೇತುವೆ ಈಗ ಮತ್ತೆ ಸಮಸ್ಯೆಯ ಸುಳಿಯಲ್ಲಿದೆ. ದಿನಕ್ಕೆ ಎರಡು ಮೂರು ಲಘು ಅಪಘಾತಗಳು (Accident) ಆಗುತ್ತಿದೆ.
ಈ ಕುರಿತಂತೆ ನ್ಯೂಸ್18 ಕನ್ನಡದೊಂದಿಗೆ ಮಾತನಾಡಿರುವ ಆಟೋ ಚಾಲಕರೊಬ್ಬರು, ರಸ್ತೆ ನಡುವೆ ಗ್ಯಾಪ್ ಬಂದಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಎಷ್ಟು ದೊಡ್ಡ ಗ್ಯಾಪ್ ಇದೆ ಎಂದರೇ ಯಾವುದೇ ಟೂ ವೀಲರ್ ಗಾಡಿ ಬಂದರೂ ಗ್ಯಾಪ್ ನಡುವೆ ವೀಲ್ ಸಿಕ್ಕಿಹಾಕಿಕೊಂಡು ಬೀಳುತ್ತಾರೆ. ಇದನ್ನು ಯಾರು ಕೇಳುವವರು ಇಲ್ಲ. ಬಿದ್ದರೆ ಮೇಲಕ್ಕೆತ್ತಲು ಕೂಡ ಯಾರು ಬರೋದಿಲ್ಲ. ಇಂಟರ್ ನ್ಯಾಷನಲ್ ಏರ್ಪೋರ್ಟ್ ರಸ್ತೆ ಅಂತಾರೆ, ಬೆಂಗಳೂರಿಗೆ ನಾಚಿಕೆ ಆಗುತ್ತೆ ಇಂತಹ ರಸ್ತೆಗಳಿದ್ದರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: Crime News: ಕೋಲ್ಡ್ ಕೇಸ್ ಸಿನಿಮಾ ಮಾದರಿಯಲ್ಲಿ ಮಹಿಳೆಯ ಅಸ್ತಿಪಂಜರ ಪತ್ತೆ; ನೇಣು ಬೀಗಿದ ಸ್ಥಿತಿಯಲ್ಲಿ ಸಿಕ್ತು ಬುರುಡೆ!
ಹೆಬ್ಬಾಳ ಮೇಲ್ಸೇತುವೆ ಮೇಲಿನ ರಸ್ತೆ ನಿರ್ಮಾಣಕ್ಕೆ ರೈಲ್ವೆ ಹಳಿ ಮಾದರಿಯ ದೊಡ್ಡ ಕಂಬಿಗಳನ್ನ ಹಾಕಲಾಗಿದೆ. ಈ ಕಂಬಿಗಳ ಮೇಲೆ ಹಾಕಿದ್ದ ಡಾಂಬರ್ ಕಿತ್ತು ಬಂದಿದೆ. ಕಂಬಿಗಳ ಮಧ್ಯ ಉದ್ದುದ್ದ ಗುಂಡಿಗಳು ಬಿದ್ದಿವೆ. ಈ ಕಂಬಿಗಳ ಮೇಲೆ ದ್ವಿಚಕ್ರ, ತ್ರಿಚಕ್ರ ವಾಹನಗಳು ಹೋದಾಗ ವೀಲ್ ಸ್ಕಿಡ್ ಆಗುತ್ತಿದೆ. ಕಂಬಿ ಮಧ್ಯ ಇರುವ ಗುಂಡಿಗಳಿಗೆ ಚಕ್ರ ಸಿಕ್ಕಿ ವಾಹನಗಳು ಬಿದ್ದು, ಹಿಂದೆ ವೇಗವಾಗಿ ಬರುವ ವಾಹನಗಳು ಡಿಕ್ಕಿಯಾಗುತ್ತಿವೆ. ಈ ಸೇತುವೆ ನಿರ್ಮಾಣ ಮಾಡಿರುವ ಬಿಡಿಎ ಅಧಿಕಾರಿಗಳು ಸಮಸ್ಯೆ ಸರಿಪಡಿಸಿ ಪ್ರಯಾಣಿಕರ ಸಮಸ್ಯೆ ಸರಿಪಡಿಸಬೇಕಿದೆ.
ಬೆಂಗಳೂರಿನಲ್ಲಿ ಬೈಕ್ ಸವಾರನ ದುಸ್ಸಾಹಸ!
ಸಾಮಾನ್ಯವಾಗಿ ಓನ್ ವೇ ಅಥವಾ ವಾಹನಗಳ ಎದುರು ದಿಕ್ಕಿನಲ್ಲಿ, ಬೈಕ್, ಕಾರು ಓಡಿಸುವ ದೃಶ್ಯಗಳನ್ನ ನಾವು ಸಿನಿಮಾಗಳಲ್ಲಿ ನೋಡಿರುತ್ತೇವೆ. ಆದರೆ ಸಿನಿಮಾ ಮೀರಿಸುವ ರೀತಿಯಲ್ಲಿ ಸಿಲಿಕಾನ್ ಸಿಟಿಯಲ್ಲಿ ವ್ಯಕ್ತಿಯೊಬ್ಬ ಬೈಕ್ ಓಡಿಸಿ ದುಸ್ಸಾಹಸ ಮೆರೆದಿದ್ದಾನೆ. ಹೊಸೂರು ರಸ್ತೆಯ ಎಕ್ಸ್‌ಪ್ರೆಸ್ ವೇ ಫ್ಲೈ ಓವರ್ ಮೇಲೆ ವಿರುದ್ಧ ದಿಕ್ಕಿನಲ್ಲಿ ಬೈಕ್ ಓಡಿಸಿರುವ ದೃಶ್ಯ ಈಗ ಸಾಮಾಜಿಕವಾಗಿ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: Crime News: ಬೆಂಗಳೂರು ಹೆಣಗಳಿಗೆ ಚಾರ್ಮಾಡಿಯೇ ಸ್ಮಶಾಣ; ಕೊಂದವರು ತಪ್ಪಿಸಿಕೊಳ್ಳಲು ಆಸರೆ ಆಯ್ತು ಪ್ರಪಾತ!
ಸಿನಿಮಾ ಶೈಲಿಯಲ್ಲೇ ಯುವಕ ವೇಗವಾಗಿ ಬೈಕ್ ಚಲಾಯಿಸಿದ್ದು, ಇದನ್ನ ನೋಡಿದ ಕೆಲವು ಪ್ರಯಾಣಿಕರು ವಿಡಿಯೋ ಮಾಡಿ, ಬೈಕ್ ಸವಾರನಿಗೆ ಬುದ್ಧಿ ಹೇಳಲು ಪ್ರಯತ್ನ ನಡೆಸಿದ್ದಾರೆ. ಅದರೆ ಯಾವುದನ್ನೂ ಕಿವಿಗೆ ಹಾಕಿಕೊಳ್ಳದ ಬೈಕ್ ಸವಾರ ಒಂದೇ ವೇಗದಲ್ಲಿ ಹೊರಟಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ