Bengaluru Rains: ಬೆಂಗಳೂರು ಮಳೆ: ಮನೆಗೆ ನೀರು, ಅಂಡರ್ ಪಾಸ್ ಜಲಾವೃತ, ಧರೆಗೆ ಉರುಳಿದ ಮರ

ಅಂಡರ್ ಪಾಸ್(Underpass) ಗಳು ಜಲಾವೃತವಾಗಿದ್ದರಿಂದ ಟ್ರಾಫಿಕ್ (Traffic)ಉಂಟಾಗಿತ್ತು. ರಸ್ತೆ ಮೇಲೆಯೇ ಹೊಳೆಯಂತೆ ನೀರು ಹರಿದ ಪರಿಣಾಮ ದ್ವಿಚಕ್ರ ವಾಹನ ಸವಾರರು ಭಯದಲ್ಲಿಯೇ ತೆರಳುವಂತಾಗಿದೆ. ಬೆಂಗಳೂರಿನಲ್ಲಿ ನಿರಂತರ ಮಳೆಯಿಂದಾಗಿ ರಸ್ತೆಗಳು ಗುಂಡಿಮಯ(Potholes)ವಾಗಿದ್ದು, ಯಮರಾಜ ಕಾಯುತ್ತಾ ಕುಳಿತಿದ್ದಾನೆ.

ಬೆಂಗಳೂರು ಮಳೆ

ಬೆಂಗಳೂರು ಮಳೆ

  • Share this:
ಬೆಂಗಳೂರು: ಶನಿವಾರ ರಾತ್ರಿ ಸುರಿದ ಮಳೆಗೆ ಬೆಂಗಳೂರಿನ (Bengaluru Rains) ಕೆಲ ಭಾಗಗಳಲ್ಲಿ ನೀರು ನುಗ್ಗಿದ್ದು,  ಜನಜೀವನ ಅಸ್ತವ್ಯಸ್ತವಾಗಿತ್ತು. ರಾಜಾಜಿನಗರ, ಯಶವಂತಪುರ, ಮಲ್ಲೇಶ್ವರಂ, ಬೊಮ್ಮನಹಳ್ಳಿ, ಜಯ‌ನಗರ ಸುತ್ತಮುತ್ತ ಮಳೆಯಾಗಿದ್ದು, ತಡರಾತ್ರಿ ಮನೆಗೆ ಹೊರಟಿದ್ದ ಜನರು ಮಳೆಯಲ್ಲಿ ಸಿಲುಕಿ ಪರದಾಡುವಂತಾಯ್ತು. ಅಂಡರ್ ಪಾಸ್(Underpass) ಗಳು ಜಲಾವೃತವಾಗಿದ್ದರಿಂದ ಟ್ರಾಫಿಕ್ (Traffic)ಉಂಟಾಗಿತ್ತು. ರಸ್ತೆ ಮೇಲೆಯೇ ಹೊಳೆಯಂತೆ ನೀರು ಹರಿದ ಪರಿಣಾಮ ದ್ವಿಚಕ್ರ ವಾಹನ ಸವಾರರು ಭಯದಲ್ಲಿಯೇ ತೆರಳುವಂತಾಗಿದೆ. ಬೆಂಗಳೂರಿನಲ್ಲಿ ನಿರಂತರ ಮಳೆಯಿಂದಾಗಿ ರಸ್ತೆಗಳು ಗುಂಡಿಮಯ(Potholes)ವಾಗಿದ್ದು, ಯಮರಾಜ ಕಾಯುತ್ತಾ ಕುಳಿತಿದ್ದಾನೆ. ಮಳೆಯಿಂದಾಗಿ ಎಲ್ಲಿ ರಸ್ತೆ ಇದೆ ಅಂತ ಹುಡಕಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಿಬಿಎಂಪಿ (BBMP) ಹೇಳುವ ಪ್ರಕಾರ, ಮನೆಗಳಿಗೆ ನೀರು ನುಗ್ಗಿಲ್ಲ ಮತ್ತು ಮರಗಳು ಬಿದ್ದಿರುವ ಬಗ್ಗೆ ಕಂಟ್ರೋಲ್ ರೂಮ್ ಗೆ ಯಾವುದೇ ಕರೆ ಬಂದಿಲ್ಲ.

ಬಿಬಿಎಂಪಿ ಮಳೆ ವರದಿ

ಪೂರ್ವ ವಲಯ : ಮಳೆಯಿಂದಾಗಿ ಯಾವುದೇ ಹಾನಿ ಆಗಿಲ್ಲ

ಪಶ್ಚಿಮ ವಲಯ : ಜ್ಯೋತಿ ನಗರ 6ನೇ ಕ್ರಾಸ್ ಗೆ ನುಗ್ಗಿದ ನೀರು

ದಕ್ಷಿಣ ವಲಯ : ಮಳೆಯಿಂದಾಗಿ ಯಾವುದೇ ಹಾನಿ ಆಗಿಲ್ಲ

ಆರ್ ಆರ್ ನಗರ : ರಾಘವೇಂದ್ರ ನಗರ ವಾರ್ಡ್ 40 ರಲ್ಲಿ ಮಳೆ ನೀರಿನಿಂದ ಅವಾಂತರ

ದಾಸರಹಳ್ಳಿ : ಮಳೆಯಿಂದಾಗಿ ಯಾವುದೇ ಹಾನಿ ಆಗಿಲ್ಲ

ಮಹಾದೇವಪುರ : ಮೂರು ಕಡೆ ನೀರು ನುಗ್ಗಿ ಅವಾಂತರ, ಪನಾಮಿ ಬಿಲ್ಟ್ ಅಪಾರ್ಟ್ಮೆಂಟ್ ಬೇಸ್ಮೆಂಟ್ ಗೆ ‌ನುಗ್ಗಿದ  ನೀರು, ಹರಲೂರು ರಸ್ತೆ ಜಲಾವೃತ ಮತ್ತು ಶ್ರೀ ಸಾಯಿ‌ ಲೇಔಟ್ ಗೆ ನುಗ್ಗಿದ ನೀರು

ಯಲಹಂಕ : ವಾರ್ಡ್ 7 ರಲ್ಲಿ ಧರೆಗುರುಳಿದ ಮೂರು‌ ಮರಗಳು (ರಾತ್ರಿಯೇ ತೆರವು ಮಾಡಲಾಗಿದೆ)

ಬೊಮ್ಮನಹಳ್ಳಿ : ಮಳೆಯಿಂದಾಗಿ ಯಾವುದೇ ಹಾನಿ  ಆಗಿಲ್ಲ

ಬೆಂಗಳೂರಿನ ಮೆಜೆಸ್ಟಿಕ್, ರಾಜಾಜಿನಗರ, ಬಸವೇಶ್ವರ ನಗರ, ಯಶವಂತಪುರ ಸೇರಿದಂತೆ ಹಲವೆಡೆ ಮಳೆಯಾಗಿದೆ. ಮುಂದಿನ ವಾರ ಮಳೆಯ ಪ್ರಮಾಣ ಕಡಿಮೆಯಾಗಲಿದೆ. ಹಿಂಗಾರು ಮಾರುತಗಳಿಂದ ಅಕ್ಟೋಬರ್ ಕೊನೆಯ ವಾರದ ಹೊತ್ತಿಗೆ ಮತ್ತೆ ನಗರದಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: Karnataka Weather Today: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯ ಆರ್ಭಟ: ಇಂದು ಸಹ ಅಬ್ಬರಿಸಲಿದ್ದಾನೆ ವರುಣದೇವ

ರಾಜ್ಯದ ಹಲವೆಡೆ ಮಳೆ

ಚಿಕ್ಕಮಗಳೂರಿನಲ್ಲಿ ಸುರಿದ ಮಳೆಗೆ ಕುರುವಂಗಿ ಕೆರೆ ತುಂಬಿ ರಸ್ತೆಗೆ ನೀರು ಹರಿದಿದೆ. ಕೆರೆಯ ಸಣ್ಣ ನಾಲೆಯಿಂದ ಹರಿದ ನೀರು ಸಮೀಪದ ಮನೆಗಳಿಗೂ ನುಗ್ಗಿದೆ.ರಸ್ತೆಯಲ್ಲಿ ಅಪಾರ ಪ್ರಮಾಣದ  ನೀರು ಹರಿದ ಪರಿಣಾಮ ಜನರು ಪರದಾಡುವಂತಾಯ್ತು. ಇನ್ನು ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಗುಡುಗು-ಸಿಡಿಲು ಸಹಿತ ಭಾರೀ ಮಳೆಯಾಗಿದೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಯಲ್ಲಾಪುರ ತಾಲೂಕಿನ ಕಿರವತ್ತಿ ಖಾರೆವಾಡದ ರೈತ ಮಹಿಳೆ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. ಮೃತಯ ಮಹಿಳೆಯನ್ನು 40 ವರ್ಷದ ಜಾನುಬಾಯಿ ಕಾನು ಶಳಕೆ ಎಂದು ಗುರುತಿಸಲಾಗಿದೆ. ಕುಕನೂರು ತಾಲೂಕು ಕುದರಿಮೋತಿ ಗ್ರಾಮದ ರೈತ ಲಾಡೆನ್ ಸಾಬ್ ಮನೆಗೆ ಹಿಂದಿರುಗುವ ವೇಳೆ ಸಿಡಿಲು ಬಡಿದು ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: Match Box Price Hike: 14 ವರ್ಷಗಳ ಬಳಿಕ ಬೆಂಕಿ ಪೊಟ್ಟಣದ ಬೆಲೆ ಏರಿಕೆ: ಡಿಸೆಂಬರ್​ನಿಂದ ಮ್ಯಾಚ್​ಬಾಕ್ಸ್​ 2 ರೂಪಾಯಿ!

ಮನೆಗಳಿಗೆ ನುಗ್ಗಿದ ನೀರು

ಗದಗ ಮತ್ತು ಕೊಪ್ಪಳ ಜಿಲ್ಲೆಯಲ್ಲಿಯೂ ಭಾರೀ ಮಳೆಯಾಗಿದೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ, ತಾವರೆಗೆರೆ, ಗಜೇಂದ್ರಗಢ ಸೇರಿದಂತೆ ಸುತ್ತಲಿನ ಪರಿಸರದಲ್ಲಿ ಎರಡು ಗಂಟೆಗೂ ಅಧಿಕ ಕಾಲ ಮಳೆಯಾಗಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ  ಯತ್ತಿನಹಳ್ಳಿಯಲ್ಲಿ ಸುಮಾರು 80 ಕ್ಕೂ ಹೆಚ್ಚು ಮನೆಗಳಿಗೆ ಮಳೆಯ ನೀರು ನುಗ್ಗಿದೆ. ಮನೆಯಲ್ಲಿದ್ದ ದವಸ ಧಾನ್ಯ, ದಿನಸಿ ಸಾಮಾಗ್ರಿಗಳು ಹಾನಿಯಾಗಿವೆ. ಮನೆಯಿಂದ ಮಳೆ ನೀರು ಹೊರ ಹಾಕಲು ಜನರು ಪರದಾಡುವಂತಾಯ್ತು. ಕೆಲವರಿಗೆ ಮನೆಯಲ್ಲಿ ನಿದ್ರೆ ಮಾಡೋಕೆ ಜಾಗೆ ಇದಲ್ಲ ಪರಿಸ್ಥಿತಿ ನಿರ್ಮಾಣವಾಗಿತ್ತು. ಗ್ರಾಮದ ಹೊರವಲಯದಲ್ಲಿರುವ ಹಳ್ಳ ಕಟ್ಟಿದ ಪರಿಣಾಮ ಗ್ರಾಮಕ್ಕೆ ಮಳೆಯ ನೀರು ನುಗ್ಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಉಪ ಚುನಾವಣೆ ಕ್ಷೇತ್ರ ಹಾನಗಲ್ ನಲ್ಲಿಯೂ ರಾಜಕೀಯ ನಾಯಕರ ಪ್ರಚಾರಕ್ಕೆ ಮಳೆ ಅಡ್ಡಿಯುಂಟು ಮಾಡಿತ್ತು.
Published by:Mahmadrafik K
First published: