• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Traffic: ಪಾಲಿಕೆ ಎಡವಟ್ಟು, ರಾಜಧಾನಿಯಲ್ಲಿ ಫುಲ್​ ಟ್ರಾಫಿಕ್; ಕಿ.ಮೀ.ಗಟ್ಟಲೆ ನಿಂತ ವಾಹನ!

Traffic: ಪಾಲಿಕೆ ಎಡವಟ್ಟು, ರಾಜಧಾನಿಯಲ್ಲಿ ಫುಲ್​ ಟ್ರಾಫಿಕ್; ಕಿ.ಮೀ.ಗಟ್ಟಲೆ ನಿಂತ ವಾಹನ!

ಚಾಲುಕ್ಯ ಸರ್ಕಲ್, ಬೆಂಗಳೂರು

ಚಾಲುಕ್ಯ ಸರ್ಕಲ್, ಬೆಂಗಳೂರು

ವಾಹನಗಳು ಮೊದಲಿಗಿಂತ ಈಗ ಹೆಚ್ಚು ಕ್ಯೂನಲ್ಲಿ ನಿಲ್ಲುವಂತಾಗಿದೆ. ಅದರಲ್ಲೂ ಪೀಕ್ ಅವರ್​​ನಲ್ಲಿ ಕಿಲೋ ಮೀಟರ್‌ವರೆಗೂ ಜಾಮ್​ ಆಗುತ್ತಿದ್ದು, ಗಂಟೆಗಟ್ಟಲ್ಲೇ ರಸ್ತೆಯಲ್ಲೇ ನಿಲ್ಲುವ ಪರಿಸ್ಥಿತಿ ಎದುರಾಗಿದೆ.

 • News18 Kannada
 • 4-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರು: ಟ್ರಾಫಿಕ್ (Traffic) ಟ್ರಾಫಿಕ್ ಟ್ರಾಫಿಕ್ ಸಿಲಿಕಾನ್​ ಸಿಟಿಯಲ್ಲಿ (Silicon City) ಎಲ್ಲಿ ನೋಡಿದರೂ ಟ್ರಾಫಿಕ್‌​ ಜಾಮ್​ನದ್ದೇ ಸಮಸ್ಯೆ. ಅದರಲ್ಲೂ ಮುಖ್ಯರಸ್ತೆಗಳಲ್ಲಿ ಸ್ವಲ್ಪ ಜಾಗ ಕಡಿಮೆಯಾದರೂ ಕಿ.ಮೀ ಗಟ್ಟಲೆ ಟ್ರಾಫಿಕ್ ಆಗಿಡುತ್ತದೆ. ಹೀಗಿರುವಾಗ ಪಾಲಿಕೆ ಮಾಡುತ್ತಿರು ಎಡವಟ್ಟಿನಿಂದ ಈಗ ಆ ರಸ್ತೆಯಲ್ಲಿ ಮತ್ತಷ್ಟು ಟ್ರಾಫಿಕ್ ಆಗುತ್ತಿದೆ. ನೀವೀಗ ನೋಡುತ್ತಿರುವ ಸರ್ಕಲ್ ಬೇರೆ ಯಾವುದು ಅಲ್ಲ. ಚಾಲುಕ್ಯದಿಂದ (Chalukya) ಗಾಲ್ಫ್ ಕ್ಲಬ್‌ (Golf Club) ಕಡೆ ಹೋಗುವ ಪ್ಯಾಲೇಸ್ ರಸ್ತೆ. ಮೊದಲೇ ಈ ರಸ್ತೆಯಲ್ಲಿ ಸಿಕ್ಕಾಪಟ್ಟೆ ಟ್ರಾಫಿಕ್ ಜಾಮ್.


ಟ್ರಾಫಿಕ್‌ನಲ್ಲಿ ಆ ರಸ್ತೆ ದಾಟುವುದೇ ಸಾಹಸ. ಟ್ರಾಫಿಕ್‌ನಿಂದ​ ವಾಹನ ಸವಾರರಿಗೆ ಕಿರಿಕಿರಿ ಅಷ್ಟಿಷ್ಟಲ್ಲ. ಈಗಾಗಲೇ ಟ್ರಾಫಿಕ್‌ನಿಂದ ಬೇಸತ್ತಿರುವ ಜನರಿಗೆ ಪಾಲಿಕೆ ಮಾಡಿರುವ ಎಡವಟ್ಟಿನಿಂದ ವಾಹನ (Vehicle) ಸವಾರರು ಹೆಚ್ಚು ಸಮಯ ಟ್ರಾಫಿಕ್​ನಲ್ಲೇ ಕಳೆಯುವಂತಾಗಿದೆ.


ಇದನ್ನೂ ಓದಿ: ಬೆಂಗಳೂರಿನಲ್ಲಿ ನಾಳೆ-ನಾಡಿದ್ದು ಎಲ್ಲೋ ಅಲರ್ಟ್​


ಈ ಹಿಂದೆ ಚಿಕ್ಕದಾಗಿದ್ದ ರಸ್ತೆಯನ್ನು, ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಸುಮಾರು 10-15 ಅಡಿಯಷ್ಟು ವೃತವನ್ನಾಗಿ ನಿರ್ಮಾಣ ಮಾಡಲಾಗುತ್ತಿದೆ. ಮೊದಲೇ ಇಲ್ಲಿನ ರಸ್ತೆ ಚಿಕ್ಕದಾಗಿದ್ದು, ಇದರ ಜೊತೆ ಈ ದೊಡ್ಡ ಸರ್ಕಲ್ ಮಾಡುತ್ತಿರುವುದರಿಂದ ಮತ್ತಷ್ಟು ಟ್ರಾಫಿಕ್​ ಜಾಮ್​ಗೆ ಕಾರಣವಾಗುತ್ತಿದೆ.


ಚಾಲುಕ್ಯ ಸರ್ಕಲ್​ ರಸ್ತೆ, ಬೆಂಗಳೂರು


ವಾಹನಗಳು ಮೊದಲಿಗಿಂತ ಈಗ ಹೆಚ್ಚು ಕ್ಯೂನಲ್ಲಿ ನಿಲ್ಲುವಂತಾಗಿದೆ. ಅದರಲ್ಲೂ ಪೀಕ್ ಅವರ್​​ನಲ್ಲಿ ಕಿಲೋ ಮೀಟರ್‌ವರೆಗೂ ಜಾಮ್​ ಆಗುತ್ತಿದ್ದು, ಗಂಟೆಗಟ್ಟಲ್ಲೇ ರಸ್ತೆಯಲ್ಲೇ ನಿಲ್ಲುವ ಪರಿಸ್ಥಿತಿ ಎದುರಾಗಿದೆ.


ಈ ಸರ್ಕಲ್‌ನಿಂದಲೇ ವಿಧಾನಸೌಧ, ರಾಜಭವನ ರೋಡ್, ವಸಂತ ನಗರ ಹಾಗೂ ಯಲಹಂಕಕ್ಕೆ ಮಾರ್ಗ ಕಲ್ಪಿಸಲಾಗಿದೆ. ಈ ಹಿನ್ನೆಲೆ ದಿನನಿತ್ಯ ಸಾವಿರಾರು ಜನರು ಈ ರಸ್ತೆ ಮಾರ್ಗವಾಗಿಯೇ ಸಂಚಾರ ಮಾಡುತ್ತಾರೆ. ಹೀಗಾಗಿ ಟ್ರಾಫಿಕ್ ಪೊಲೀಸರು ಪರ್ಯಾಯ ಮಾರ್ಗವನ್ನಾದರೂ ಮಾಡಬೇಕು ಅನ್ನೋದು ವಾಹನ ಸವಾರರ ಮನವಿಯಾಗಿದೆ.

First published: