ತನ್ನ ಅತ್ತೆಗಾಗಿ ತಲೆ ಬೋಳಿಸಿಕೊಂಡ ಬೆಂಗಳೂರು ಯುವತಿ!

ನಮಿತಾ ಅವರ ಅತ್ತೆ 3ನೇ ಹಂತದ ಸ್ತನ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಕೀಮೋಥೆರಪಿಯಿಂದ ಅವರ ತಲೆಕೂದಲು ಉದುರಿತ್ತು. ಇದರಿಂದ ಖಿನ್ನತೆಗೊಳಗಾಗಿದ್ದ ಅವರಿಗೆ ಮಾನಸಿಕ ಸ್ಥೈರ್ಯ ತುಂಬಲು ನಿರ್ಧರಿಸಿದ ನಮಿತಾ ತಾವೂ ಕೂಡ ತಲೆ ಬೋಳಿಸಿಕೊಂಡರು.

Sushma Chakre | news18
Updated:July 24, 2019, 12:38 PM IST
ತನ್ನ ಅತ್ತೆಗಾಗಿ ತಲೆ ಬೋಳಿಸಿಕೊಂಡ ಬೆಂಗಳೂರು ಯುವತಿ!
ನಮಿತಾ ವರ್ಮ
  • News18
  • Last Updated: July 24, 2019, 12:38 PM IST
  • Share this:
ಇಬ್ಬರು ಮಹಿಳೆಯರು ಒಂದೇ ಮನೆಯಲ್ಲಿ ಜೀವಿಸೋಕೆ ಸಾಧ್ಯವಿಲ್ಲ ಅಂತ ಹೇಳ್ತಾರೆ. ಎರಡು ಜಡೆ ಒಂದೇ ಕಡೆ ಇರೋಕೆ ಸಾಧ್ಯವಿಲ್ಲ ಎಂಬ ಗಾದೆಯೇ ಇದೆ. ಅದರಲ್ಲೂ ಅತ್ತೆ- ಸೊಸೆಯರು ಹೊಂದಾಣಿಕೆಯಿಂದ ಬದುಕೋದು ಬಹಳ ಅಪರೂಪ. ಆದರೆ, ಇಲ್ಲೋರ್ವ ಯುವತಿ ಆ ಮಾತನ್ನು ಸುಳ್ಳಾಗಿಸಿದ್ದಾಳೆ. ಈಕೆ ತನ್ನ ಅತ್ತೆಗೋಸ್ಕರ ಏನು ಮಾಡಿದ್ದಾಳೆ ಗೊತ್ತಾ?

ಬೆಂಗಳೂರು ಮೂಲದ ನಮಿತಾ ವರ್ಮ ರಾಜೇಶ್ ಎಂಬ ಮಹಿಳೆ ತಲೆ ಬೋಳಿಸಿಕೊಂಡಿರುವ ತನ್ನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್​ ಮಾಡಿದ್ದಾರೆ. ಸಾಮಾನ್ಯವಾಗಿ ಮಹಿಳೆಯರಿಗೆ ತಾನು ಸುಂದರವಾಗಿ ಕಾಣಬೇಕೆಂಬ ಬಯಕೆ ಇದ್ದೇ ಇರುತ್ತದೆ. ಸುಂದರವಾಗಿ ಕಾಣಲು ನಾನಾ ರೀತಿಯಲ್ಲಿ ಪ್ರಯತ್ನಿಸುವ ಅವರು ಎಲ್ಲರ ಗಮನ ತಮ್ಮ ಮೇಲೇ ಇರಬೇಕೆಂದು ಬಯಸುತ್ತಾರೆ. ಆದರೆ, ನಮಿತಾ ವರ್ಮ ತನ್ನ ಅತ್ತೆಗಾಗಿ ತನ್ನ ಕೂದಲನ್ನೇ ಬೋಳಿಸಿಕೊಂಡಿದ್ದಾರೆ.

ನಮಿತಾ ವರ್ಮ


ಸರ್ಕಾರ ರಚನೆಗೆ ಆತುರ ತೋರದ ಬಿಎಸ್​ವೈ; 2008ರ ಇತಿಹಾಸ ಮರುಕಳಿಸದಂತೆ ಮುನ್ನೆಚ್ಚರಿಕೆ ವಹಿಸಿರುವ ಭಾವಿ ಸಿಎಂ!

ನಮಿತಾ ಅವರ ಅತ್ತೆ 3ನೇ ಹಂತದ ಸ್ತನ ಕ್ಯಾನ್ಸರ್​ನಿಂದ ಬಳಲುತ್ತಿದ್ದರು. ಕೀಮೋಥೆರಪಿಯಿಂದ ಅವರ ತಲೆಕೂದಲು ಉದುರಿತ್ತು. ಇದರಿಂದ ಖಿನ್ನತೆಗೊಳಗಾಗಿದ್ದ ಅವರಿಗೆ ಮಾನಸಿಕ ಸ್ಥೈರ್ಯ ತುಂಬಲು ನಿರ್ಧರಿಸಿದ ನಮಿತಾ ತಾವೂ ಕೂಡ ತಲೆ ಬೋಳಿಸಿಕೊಂಡರು. ತಮ್ಮ ಕೂದಲನ್ನು ದಾನ ಮಾಡಿದ ಅವರು 'ನನಗೂ ತಲೆಯಲ್ಲಿ ಕೂದಲಿಲ್ಲ, ಇದೆಲ್ಲ ಮಾಮೂಲು' ಎಂಬುದನ್ನು ಅತ್ತೆಗೆ ಅರ್ಥ ಮಾಡಿಸುವ ಮೂಲಕ ಭಾವನಾತ್ಮಕ ಬೆಂಬಲ ನೀಡಿದ್ದಾರೆ ಎಂದು ಟೈಮ್ಸ್​ ಆಫ್​ ಇಂಡಿಯಾ ವರದಿ ಮಾಡಿದೆ.ಯಡ್ಯೂರಪ್ಪ ಮತ್ತೆ ಯಡಿಯೂರಪ್ಪ; ಹೊಸ ಸರ್ಕಾರ ನಿರ್ಮಾಣದ ಹೊಸ್ತಿಲಲ್ಲಿ ಹಳೆಯ ಹೆಸರು
Loading...

ಕ್ಯಾನ್ಸರ್​ನಿಂದ ಬಳಲುವವರು ಕೀಮೋಥೆರಪಿಯಿಂದ ಕೂದಲು ಕಳೆದುಕೊಂಡಾಗ ಸಾಕಷ್ಟು ಕುಗ್ಗಿಹೋಗುತ್ತಾರೆ. ಅವರಿಗಾಗಿ ನಮ್ಮ ಕೂದಲನ್ನು ದಾನ ಮಾಡುವ ಬಗ್ಗೆ ಹೆಚ್ಚು ಜನ ಯೋಚಿಸಬೇಕು. ನಾವು ನೀಡುವ ಕೂದಲಿಂದ ಮಾಡುವ ವಿಗ್ ಅವರ ಆತ್ಮಸ್ಥೈರ್ಯವನ್ನು ಹೆಚ್ಚಿಸಬಲ್ಲದು ಎಂದು ನಮಿತಾ ವರ್ಮ ಮನವಿ ಮಾಡಿದ್ದಾರೆ. ಇವರು ಆನ್​ಲೈನ್​ ಮಾರ್ಕೆಟಿಂಗ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ

  
View this post on Instagram
 

Hair now, gone tomorrow! . I went from 14+inch hair to bald. Yeah... Here's the story, since I don't want to bore your Instagram feed with it: https://whatshallwetalkabouttoday.wordpress.com/2019/07/16/shall-we-talk-of-hair-donation-today-with-a-free-baldness-story-thrown-in/ . A big shoutout to @frieshwarya and @vishing_well for being there with me throughout this journey and to @felix5389 and @prachi.vocalist for forever supporting me from the background. You guys are my fortress. . Hair donated to @hairforhopeindia. They're doing wonderful work. Do see if you can donate hair or volunteer. . . . #hairdonation #hairforhope #hairforhopeindia #hairforcancer #cancercharity #goingbald #baldgirl #baldwomen #cancerwigs #wigsforcancer #cancer #breastcancer #cancerawarness #womenpower #hairpower #shorthairdontcare


A post shared by Namitha (@bibliogasmic) on


First published:July 24, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...