HOME » NEWS » State » BENGALURU GANG RAPE CASE CHARGE SHEET READY FOR 11 ACCUSED RHHSN

Bengaluru Gang Rape: ಬಾಂಗ್ಲಾ ಯುವಕರಿಂದ ಯುವತಿ ಮೇಲೆ ಗ್ಯಾಂಗ್ ರೇಪ್ ಪ್ರಕರಣ; 11 ಆರೋಪಿಗಳ ವಿರುದ್ದ ಚಾರ್ಜ್ ಶೀಟ್ ಸಿದ್ಧ

ಸಂತ್ರಸ್ತ ಯುವತಿ ತನಗೆ ಕುಟುಂಬಸ್ಥರಿಲ್ಲ, ಪೋಷಕರಿಲ್ಲ ಎಂದು ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ. ಈ ಹಿಂದೆ ದುಬೈನಲ್ಲಿ ಕೆಲಸ ಮಾಡ್ತಿದ್ದು, ಡ್ಯಾನ್ಸರ್ ಸಹ ಆಗಿದ್ದೆ ಎಂದು ಹೇಳಿದ್ದಾಳೆ. ಆ ಬಳಿಕ ಆರೋಪಿಗಳ ಸಂಪರ್ಕ ಬೆಳೆದು ಢಾಕಾದಿಂದ ಅಕ್ರಮವಾಗಿ ಬೆಂಗಳೂರಿಗೆ ಬಂದಿರುವ ಬಗ್ಗೆ ಯುವತಿ ಸ್ಪಷ್ಟನೆ ನೀಡಿದ್ದಾಳೆ.

news18-kannada
Updated:June 22, 2021, 11:00 PM IST
Bengaluru Gang Rape: ಬಾಂಗ್ಲಾ ಯುವಕರಿಂದ ಯುವತಿ ಮೇಲೆ ಗ್ಯಾಂಗ್ ರೇಪ್ ಪ್ರಕರಣ; 11 ಆರೋಪಿಗಳ ವಿರುದ್ದ ಚಾರ್ಜ್ ಶೀಟ್ ಸಿದ್ಧ
ಗ್ಯಾಂಗ್ ರೇಪ್​ನ ಮೊದಲು ವೈರಲ್​ ಆಗಿದ್ದ ವಿಡಿಯೋದ ದೃಶ್ಯ
  • Share this:
ಬೆಂಗಳೂರು: ಬಾಂಗ್ಲಾದೇಶದ ಯುವಕರಿಂದ ನಗರದಲ್ಲಿ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣ ಸಂಬಂಧ 11 ಆರೋಪಿಗಳ ವಿರುದ್ದ ಚಾರ್ಜ್ ಶೀಟ್ ಸಿದ್ಧವಾಗಿದೆ. ರಾಮೂರ್ತಿನಗರ ಪೊಲೀಸರು 30ಕ್ಕೂ ಹೆಚ್ಚು ಸಾಕ್ಷಿಗಳ ಸಮೇತ ಚಾರ್ಜ್ ಶೀಟ್ ಸಿದ್ದಪಡಿಸಿದ್ದಾರೆ. 30 ಸಾಕ್ಷಿಗಳಲ್ಲಿ ಪ್ರಮುಖವಾಗಿ 6 ಮಂದಿಯಿಂದ 164 ಹೇಳಿಕೆ ದಾಖಲು ಮಾಡಿಕೊಳ್ಳಲಾಗಿದೆ. ಜೊತೆಗೆ ಕೃತ್ಯ ನಡೆದ ಜಾಗದ ಸಾಕ್ಷಿಗಳೇ ಹೈಲೈಟ್ ಮಾಡಲಾಗಿದೆ. 

ಆರೋಪಿಗಳ ಪೋನ್ ನ ಟೆಕ್ನಿಕಲ್ ಎವಿಡೆನ್ಸ್, ಅರೋಪಿಗಳ‌ ಮೊಬೈಲ್ ನಲ್ಲಿ ಸೆರೆಯಾಗಿರುವ ಡಿಜಿಟಲ್ ಎವಿಡೆನ್ಸ್, ಸ್ಥಳದ ಸಾಕ್ಷಿಗಳು FSL ಟೀಂ ನಿಂದ ಸಂಗ್ರಹ ಮಾಡಿ ಆರೋಪಿಗಳ ಡಿಎನ್ಎ ಸ್ಯಾಂಪಲ್ ಪಡೆದು ರವಾನೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನೆ ಮಾಡಲಾಗಿದೆ. ಎಲ್ಲಾ ಆರೋಪಿಗಳ ಮೊಬೈಲ್ ಸೀಜ್ ಮಾಡಲಾಗಿದೆ. ಅವರ ಮೊಬೈಲ್ ನ ಡಿಜಿಟಲ್ ಎವಿಡೆನ್ಸ್ ರಿಪೋರ್ಟ್ ಬರಬೇಕಿದೆ. ಪೊಲೀಸರು ಆರೋಪಿಗಳ ವಾಯ್ಸ್ ಸ್ಯಾಂಪಲ್ ಸಹ ಪಡೆದಿದ್ದಾರೆ.

ಘಟನೆಯ ವಿಡಿಯೋದಲ್ಲಿ‌ ಮುಖ ಕಾಣದ ಅನೇಕ ಮಂದಿ ಇದ್ದಾರೆ. ಇತರ ಆರೋಪಿಗಳ ಹೇಳಿಕೆಯ ಮೇಲೆ ಅವರನ್ನು ಬಂಧಿಸಲಾಗಿದೆ. ಅದಕ್ಕೆ ಪೂರಕವಾಗಿ ವಾಯ್ಸ್ ಮ್ಯಾಚ್ ರಿಪೋರ್ಟ್ ಬರಬೇಕಿದೆ. ಇಡೀ ಘಟನೆಗೆ ಕಾರಣ ಆರೋಪಿಗಳು ಮತ್ತು ಸಂತ್ರಸ್ತೆ ನಡೆಸುತ್ತಿದ್ದ ದಂಧೆ.! ಎಂದು ಖುದ್ದು ಚಾರ್ಜ್ ಶೀಟ್ ನಲ್ಲಿ‌ ಪೊಲೀಸರು ಉಲ್ಲೇಖ ಮಾಡಿದ್ದಾರೆ. ಪ್ರಮುಖ ಆರೋಪಿಗಳು ಯುವತಿಯರನ್ನ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರು. ಅವರಲ್ಲಿ ಸಂತ್ರಸ್ತೆ ತಪ್ಪಿಸಿಕೊಂಡಿದ್ದರು. ಅಲ್ಲದೇ ದಂಧೆಯಿಂದ 4 ಮಂದಿ ಯುವತಿಯರನ್ನು ದೂರ ಮಾಡಿದ್ದಳು. ಇದರಿಂದ ಯುವತಿಯರ ಮೇಲೆ ಏಳು ಲಕ್ಷ ಬಂಡವಾಳದ ಹಣ ಲಾಸ್ ಆಗಿತ್ತು. ಈ ವಿಷಯಕ್ಕೆ ಇಡೀ ಘಟನೆ ನಡೆದಿರುವುದಾಗಿ ತನಿಖೆಯಲ್ಲಿ ಪತ್ತೆ ಆಗಿದೆ. ಚಾರ್ಜ್ ಶೀಟ್ ನಲ್ಲಿ ಈ ಅಂಶಗಳನ್ನು ಪೊಲೀಸರು ಹೇಳಲಿದ್ದಾರೆ ಎಂದು ಪೊಲೀಸ್ ತನಿಖಾ ಮೂಲಗಳ ಮಾಹಿತಿ ಸಿಕ್ಕಿದೆ.

ಹಣಕಾಸಿನ ವಿಚಾರಕ್ಕಾಗಿಯೇ ದೌರ್ಜನ್ಯ ಮಾಡಲಾಗಿದೆ ಎಂದು ಸಂತ್ರಸ್ತ ಯುವತಿ (28 ವರ್ಷ) ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಘಟನೆ ನಡೆದ ಸಂದರ್ಭದಲ್ಲಿ ಓರ್ವ ಯುವತಿ ಸಹ ಇದ್ದಳು ಎಂದು ಸಂತ್ರಸ್ತೆ ಹೇಳಿಕೆ ಕೊಟ್ಟಿದ್ದಾಳೆ. ಸಂತ್ರಸ್ತೆಯ ಹೇಳಿಕೆ ಪಡೆದ ಪೊಲೀಸರು ಪ್ರಕರಣದಲ್ಲಿ ಭಾಗಿಯಾಗಿದ್ದ ಯುವತಿ ಹಾಗೂ ಇತರೆ ಆರೊಪಿಗಳನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಘಟನೆ ನಡೆದ ಬಳಿಕ ಯುವತಿ ತನ್ನ ಬಾಯ್​ಫ್ರೆಂಡ್​ ಜೊತೆ ಎಲ್ಲವನ್ನೂ ಹೇಳಿಕೊಂಡಿದ್ದಳು ಎಂದು ತಿಳಿದು ಬಂದಿದೆ. ಆಗ ಆತ ನೀನು ಬೆಂಗಳೂರಿನಲ್ಲಿ ಇರುವುದು ಬೇಡ, ಕೇರಳಕ್ಕೆ ಬಾ ಎಂದು ಹೇಳಿದ್ದನು. ಹೀಗಾಗಿ ಘಟನೆ ನಡೆದ ಮರುದಿನವೇ ಯುವತಿ ಕೇರಳಕ್ಕೆ ತೆರಳಿದ್ದಳು. ಬಳಿಕ ಪೊಲೀಸರು ಯುವತಿಯನ್ನು ಪತ್ತೆಹಚ್ಚಿ ಕೇರಳದಿಂದ ಬೆಂಗಳೂರಿಗೆ ಕರೆತಂದಿದ್ದರು.

ಇದನ್ನು ಓದಿ: ದೆಹಲಿಯಲ್ಲಿ ಮೂರು ದಿನ ಕಾದು ಸಿದ್ದರಾಮಯ್ಯ ವಿರುದ್ಧ ದೂರು ನೀಡಿದ ಡಿ.ಕೆ. ಶಿವಕುಮಾರ್!

ಸಂತ್ರಸ್ತ ಯುವತಿ ತನಗೆ ಕುಟುಂಬಸ್ಥರಿಲ್ಲ, ಪೋಷಕರಿಲ್ಲ ಎಂದು ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ. ಈ ಹಿಂದೆ ದುಬೈನಲ್ಲಿ ಕೆಲಸ ಮಾಡ್ತಿದ್ದು, ಡ್ಯಾನ್ಸರ್ ಸಹ ಆಗಿದ್ದೆ ಎಂದು ಹೇಳಿದ್ದಾಳೆ. ಆ ಬಳಿಕ ಆರೋಪಿಗಳ ಸಂಪರ್ಕ ಬೆಳೆದು ಢಾಕಾದಿಂದ ಅಕ್ರಮವಾಗಿ ಬೆಂಗಳೂರಿಗೆ ಬಂದಿರುವ ಬಗ್ಗೆ ಯುವತಿ ಸ್ಪಷ್ಟನೆ ನೀಡಿದ್ದಾಳೆ.
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
Published by: HR Ramesh
First published: June 22, 2021, 11:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories