Bengaluru Flood: ಪ್ರತಿಷ್ಠಿತ ವಿಲ್ಲಾದಲ್ಲಿ ಈಜಾಡಿದ ವ್ಯಕ್ತಿ; ವಿಡಿಯೋ ವೈರಲ್

ವಿಪ್ರೋ ಚೇರ್​ಮ್ಯಾನ್ ರಿಷಾದ್ ಪ್ರೇಮ್​​ಜಿ, ಬ್ರಿಟಾನಿಯಾ ಸಿಎಓ ವರುಣ್ ಬೆರ್ರಿ ಅಂತಹ ಜನರು ವಾಸಿಸುವ Epsilon ಪ್ರತಿಷ್ಠಿತ ಏರಿಯಾಗಳು ಸಹ ಜಲಾವೃತಗೊಂಡಿವೆ.

ವಿಲ್ಲಾ ಜಲಾವೃತ

ವಿಲ್ಲಾ ಜಲಾವೃತ

  • Share this:
ಈ ಬಾರಿ ಸುರಿದ ಮಳೆ ಬೆಂಗಳೂರಿಗೆ (Bengaluru Rains) ಹಲವು ಪಾಠದ ಜೊತೆ ಎಚ್ಚರಿಕೆಯನ್ನು ನೀಡಿದೆ. ಈ ಹಿಂದೆ ಮಳೆಯಾದ್ರೆ ತಗ್ಗು ಪ್ರದೇಶಗಳು ಮತ್ತು ಅಂಡರ್​​​ಪಾಸ್​ಗಳು ಜಲಾವೃತಗೊಳ್ಳುತ್ತಿದ್ದವು. ಆದ್ರೆ ಈ ಬಾರಿ ಬಿಬಿಎಂಪಿ (BBMP) ಊಹೆ ಮಾಡದ ಸ್ಥಳಗಳಲ್ಲಿ ಪ್ರವಾಹ (Bengaluru Flood) ಉಂಟಾಗಿದೆ. ಕಾಣೆಯಾಗಿದ್ದ ನದಿಗಳು (Rivers) ಮರುಜೀವ ಪಡೆದುಕೊಂಡ ತಮ್ಮ ಸ್ಥಳವನ್ನು ಆವರಿಸಿಕೊಂಡವರಿಗೆ ಎಚ್ಚರಿಕೆ ನೀಡಿವೆ. ಇನ್ನು ಬತ್ತಿ ಹೋಗಿದ್ದ ಕೆರೆಗಳ (Bengaluru Lake) ಕೋಡಿ ಬಿದ್ದಿದೆ. ಮಹದೇವಪುರ ವ್ಯಾಪ್ತಿಯ ಬೆಳ್ಳಂದೂರು (Bellanduru Flood)) ಭಾಗದಲ್ಲಿ ಪ್ರವಾಹ ಉಂಟಾಗಿತ್ತು. ಪರಿಣಾಮ ಐಟಿ ಬಿಟಿ ಕಂಪನಿಗಳ ಉದ್ಯೋಗಿಗಳು ಟ್ರ್ಯಾಕ್ಟರ್​​​ಗಳಲ್ಲಿ ಕೆಲಸಕ್ಕೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಳೆದ ಮೂರು ದಿನಗಳಿಂದ ರಾಜಧಾನಿಯಲ್ಲಿ ಮಳೆಯ ಪ್ರಮಾಣ ಇಳಿಕೆಯಾದ ಪರಿಣಾಮ ಜಲಾವೃತಗೊಂಡಿದ್ದ ಲೇಔಟ್​, ವಿಲ್ಲಾಗಳಲ್ಲಿ (Villa Submerge) ನೀರಿನ ಪ್ರಮಾಣ ಇಳಿಕೆಯಾಗಿದೆ. ಜನರು ಮನೆ  ಮತ್ತು ಆವರಣದಲ್ಲಿ ತಂಬಿಕೊಂಡಿರುವ ಕೆಸರು ತೆಗೆಯಲು ಹರಸಾಹಸ ಮಾಡುತ್ತಿದ್ದಾರೆ.

ಮಳೆ ನಿಂತರೂ ಇಲ್ಲಿ ಉಂಟಾದ ಅವಾಂತರದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ. ವಿಪ್ರೋ ಚೇರ್​ಮ್ಯಾನ್ ರಿಷಾದ್ ಪ್ರೇಮ್​​ಜಿ, ಬ್ರಿಟಾನಿಯಾ ಸಿಎಓ ವರುಣ್ ಬೆರ್ರಿ ಅಂತಹ ಜನರು ವಾಸಿಸುವ Epsilon ಪ್ರತಿಷ್ಠಿತ ಏರಿಯಾಗಳು ಸಹ ಜಲಾವೃತಗೊಂಡಿವೆ.

ವಿಲ್ಲಾದಲ್ಲಿ ಈಜಾಡಿದ ವ್ಯಕ್ತಿ

ವ್ಯಕ್ತಿಯೊಬ್ಬರು ವಿಲ್ಲಾದ ಲಿವಿಂಗ್ ರೂಮ್​ನಲ್ಲಿ ಈಜಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮನೆಯಲ್ಲಿ ಹಲವು ವಸ್ತುಗಳು ಜಲಾವೃತ ಆಗಿರೋದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಮನೆಯಲ್ಲಿದ್ದ ಪಿಯಾನೋ ಸಂಪೂರ್ಣವಾಗಿ ಜಲಾವೃತವಾಗಿದೆ.ಮತ್ತೊಂದು ವಿಡಿಯೋದಲ್ಲಿ ವಿಲ್ಲಾದ ನಿವಾಸಿಗಳು ಟ್ರ್ಯಾಕ್ಟರ್​​ಗಳಲ್ಲಿ ಕುಳಿತು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳುತ್ತಿದ್ದಾರೆ. ವಿಡಿಯೋದಲ್ಲಿ ವಿಲ್ಲಾ ಮುಂದೆ ನಿಲ್ಲಿಸಲಾಗಿರುವ ಐಷಾರಾಮಿ ಕಾರ್​ಗಳು ನೀರಿನಲ್ಲಿ ನಿಂತಿರೋದನ್ನು ಗಮನಿಸಬಹುದಾಗಿದೆ. ಕೋಟಿ ಕೋಟಿ ಹಣ ನೀಡಿ ವಿಲ್ಲಾ ಖರೀದಿಸಿದ್ರೂ ಜನರು ಈಗ ಎಲ್ಲವನ್ನೂ ತೊರೆದು ಸುರಕ್ಷಿತ ಸ್ಥಳಕ್ಕೆ ಶಿಫ್ಟ್ ಆಗಿದ್ದಾರೆ.

ಇದನ್ನೂ ಓದಿ:  Jana Spandana: ಬಿಜೆಪಿಯ ಜನಸ್ಪಂದನ ಕಾರ್ಯಕ್ರಮಕ್ಕೆ ಆರು ಸಚಿವರ ಗೈರು; ಸ್ಮೃತಿ ಇರಾನಿ ಅವರಿಂದ ಚಾಲನೆ

ಇಡೀ ಲೇಔಟ್ ಖಾಲಿ, ನಿವಾಸಿಗಳೆಲ್ಲ ಹೋಟೆಲ್​ನಲ್ಲಿ!

ಬೆಂಗಳೂರಿನಲ್ಲಿ ಮಳೆ ಆರ್ಭಟ ಇನ್ನೂ ಕಡಿಮೆಯಾಗಿಲ್ಲ. ಮಳೆಯಿಂದ ಉಂಟಾಗಿರುವ ಸಮಸ್ಯೆಗಳು ಮುಂದುವರಿದಿವೆ. ಮಳೆ ಅಬ್ಬರಕ್ಕೆ ಸರ್ಜಾಪುರ ಮುಖ್ಯರಸ್ತೆಯಲ್ಲೆ ಇರುವ ದಿ ಕಂಟ್ರಿ ಸೈಡ್ ಲೇಔಟ್ ಖಾಲಿಯಾಗಿದೆ. ಲೇಔಟ್​​ಗೆ ನೀರು ನುಗ್ಗಿದ್ದರಿಂದ  ನಿವಾಸಿಗಳು ಮನೆ ಖಾಲಿ ಮಾಡಿಕೊಂಡು ಹೋಗಿದ್ದಾರೆ.

Bengaluru Flood Man swims in living room of luxurious villa mrq
ಬೆಂಗಳೂರು ವಿಲ್ಲಾ ಜಲಾವೃತ


ಒಟ್ಟು 35 ವಿಲ್ಲಾಗಳಿರುವ ಕಂಟ್ರಿ ಸೈಡ್ ಲೇಔಟ್​ನಲ್ಲಿ ಓರ್ವ ನಿವಾಸಿ ಹೊರತುಪಡಿಸಿ ಮಿಕ್ಕೆಲ್ಲರೂ ಬೇರೆಡೆ ಶಿಫ್ಟ್ ಆಗಿದ್ದಾರೆ. ಸದ್ಯ ಲೇಔಟ್​ನಲ್ಲಿ ನೀರು ಸಂಪೂರ್ಣ ಖಾಲಿಯಾಗಿದೆ. ನೀರು ಖಾಲಿಯಾದರೂ ನಿವಾಸಿಗಳು ಇನ್ನೂ ಮನೆಗಳ ಕಡೆ ಸುಳಿದಿಲ್ಲ. ಮಳೆಯಿಂದಾಗಿ ಮನೆಗಳ ಆವರಣದಲ್ಲಿ ಕೆಸರು ತುಂಬಿಕೊಂಡಿದೆ. ಕೆಲ ವಿಲ್ಲಾಗಳ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ ಎನ್ನಲಾಗಿದೆ. ಇದೆಲ್ಲದರ ರಿಪೇರಿಗೆ ಸುಮಾರು ಒಂದು ತಿಂಗಳು ಬೇಕಾಗಬಹುದು ಎಂದು ಹೇಳಲಾಗಿದೆ.ಅಸಮರ್ಪಕ ಒಳಚರಂಡಿ ವ್ಯವಸ್ಥೆ

ನಾವು ನಮ್ಮ ವಿಲ್ಲಾಗಳ ಬಡಾವಣೆಯನ್ನು ಸುಸಜ್ಜಿತವಾಗಿ ಇಟ್ಟುಕೊಂಡಿದ್ದೇವೆ. ಇಲ್ಲಿಯ ಒಳಚರಂಡಿಯ ವ್ಯವಸ್ಥೆಯ ಸರಿಯಾಗಿದೆ. ಆದ್ರೆ ಹೊರ ಭಾಗದಲ್ಲಿ ಚರಂಡಿಯ ವ್ಯವಸ್ಥೆ ಸರಿಯಾಗಿಲ್ಲ. ಆದ ಕಾರಣ ವಿಲ್ಲಾಗಳು ಜಲಾವೃತಗೊಂಡಿವೆ ಎಂದು ಸ್ಥಳೀಯ ನಿವಾಸಿಗಳು ಹೇಳುತ್ತಿದ್ದಾರೆ.

Bengaluru Flood Man swims in living room of luxurious villa mrq
ಬೆಂಗಳೂರು ವಿಲ್ಲಾ ಜಲಾವೃತ


ಇದನ್ನೂ ಓದಿ: Potholes: ಜನರ ಜೀವದ ಜೊತೆ ಅಧಿಕಾರಿಗಳ ಚೆಲ್ಲಾಟ; ತಾನೇ ರಚಿಸಿದ್ದ ನಿಯಮ ಬ್ರೇಕ್ ಮಾಡಿದ BBMP

ಬೆಂಗಳೂರಿಗೆ ಯೆಲ್ಲೋ ಅಲರ್ಟ್

ಬೆಂಗಳೂರಿನಲ್ಲಿಂದು ಯೆಲ್ಲೋ ಅಲರ್ಟ್ (Bengaluru Yellow Alert) ಪ್ರಕಟಿಸಲಾಗಿದ್ದು, ವರುಣ ಅಬ್ಬರಿಸಲಿದ್ದಾನೆ. ಬೆಂಗಳೂರು ನಗರ, ವೆಂಗಳೂರು ಗ್ರಾಮಾಂತರದಲ್ಲಿ ಮಳೆಯಾಗುವ ಸಾಧ್ಯತೆಗಳು ದಟ್ಟವಾಗಿವೆ. ಇನ್ನೊಂದು ವಾರ ಬೆಂಗಳೂರಿನಲ್ಲಿ ಮಳೆಯಾಗಲಿದೆ.
Published by:Mahmadrafik K
First published: