Family Suicide: ಬೆಂಗಳೂರಿನಲ್ಲಿ ಫ್ಯಾಮಿಲಿ ಸೂಸೈಡ್​, ಅಂಬಿ ಅಭಿಮಾನಿಯ ಅಂತಿಮ ದರ್ಶನ ಪಡೆದ ಅಭಿಷೇಕ್​!

ಬೆಂಗಳೂರಿನಲ್ಲಿ ರೆಬೆಲ್ ಸ್ಟಾರ್ ಅಂಬರೀಶ್​ರವರ ಅಭಿಮಾನಿಯಾಗಿದ್ದ ಇಡೀ ಫ್ಯಾಮಿಲಿಯೇ ನೇಣಿಗೆ ಶರಣಾಗಿದೆ. ಅಂಬರೀಶ್​, ಸುಮಲತಾ, ಅಭಿಷೇಕ್​​ ಸಂಭ್ರಮದಲ್ಲಿ ಮಹೇಶ್​ವರು ಭಾಗಿಯಾಗಿರುತ್ತಿದ್ದರು. ಬರ್ತ್​ಡೇಯನ್ನೆಲ್ಲಾ ಸಂಭ್ರಮದಿಂದ ಆಚರಿಸುತ್ತಿದ್ದರು.

ಬೆಂಗಳೂರಿನಲ್ಲಿ ಫ್ಯಾಮಿಲಿ ಸೂಸೈಡ್

ಬೆಂಗಳೂರಿನಲ್ಲಿ ಫ್ಯಾಮಿಲಿ ಸೂಸೈಡ್

  • Share this:
ಕಾಡಿದ ಅನಾರೋಗ್ಯಕ್ಕೆ (Health Issue) ಬೇಸತ್ತು ಬೆಂಗಳೂರಿನ (Bengaluru) ಕೋಣನಕುಂಟೆಯಲ್ಲಿ ಒಂದೇ ಕುಟುಂಬದ (Family) ಮೂವರು ಸಾವನ್ನಪ್ಪಿದ್ದರು. ಬಿಬಿಎಂಪಿ (BBMP) ಗುತ್ತಿಗೆ ನೌಕರ ಮಹೇಶ್​​, ಪತ್ನಿ ಜ್ಯೋತಿ ಮತ್ತು ಮಗ ನಂದೀಶ್​ ನಿನ್ನೆ ಸಾವಿಗೆ ಶರಣಾಗಿದ್ದರು. ಮೃತ ಮಹೇಶ್​ರ ಇಡೀ ಕುಟುಂಬದ ಸದಸ್ಯರು ರೆಬೆಲ್ ಸ್ಟಾರ್​ ಅಂಬರೀಶ್​ (Ambareesh) ಅವರ ಅಭಿಮಾನಿಗಳಾಗಿದ್ದರು. ಇಂದು ಅಭಿಷೇಕ್ ಅಂಬರೀಶ್​ರವರು ಶವಾಗಾರದಲ್ಲಿ ಮಹೇಶ್​ರ ಅಂತಿಮ ದರ್ಶನ ಪಡೆದರು. ಇನ್ನು ದುರಂತ ಎಂದರೆ ಇಂದು ಶ್ರೀಕೃಷ್ಣ ಜನ್ಮಾಷ್ಟಮಿಯಾಗಿದ್ದು, ಈ ಹಿನ್ನೆಲೆ ತಮ್ಮ ಮಗನಿಗೆ ಕೃಷ್ಣ ವೇಷ ಹಾಕಲು ಗಂಡ-ಹೆಂಡತಿ (Husband Wife) ನಿರ್ಧರಿಸಿದ್ದರು. ಆದರೆ ಅದಕ್ಕೂ ಮುನ್ನವೇ ಬೆಂಗಳೂರಿನಲ್ಲಿ ಹೃದಯವಿದ್ರಾವಕ ಘಟನೆ ನಡೆದೋಗಿದೆ.

ಬೆಂಗಳೂರಿನಲ್ಲಿ ರೆಬೆಲ್ ಸ್ಟಾರ್ ಅಂಬರೀಶ್​ರವರ ಅಭಿಮಾನಿಯಾಗಿದ್ದ ಇಡೀ ಫ್ಯಾಮಿಲಿಯೇ ನೇಣಿಗೆ ಶರಣಾಗಿದೆ. ಅಂಬರೀಶ್​, ಸುಮಲತಾ, ಅಭಿಷೇಕ್​​ ಸಂಭ್ರಮದಲ್ಲಿ ಮಹೇಶ್​ವರು ಭಾಗಿಯಾಗಿರುತ್ತಿದ್ದರು. ಬರ್ತ್​ಡೇಯನ್ನೆಲ್ಲಾ ಸಂಭ್ರಮದಿಂದ ಆಚರಿಸುತ್ತಿದ್ದರು.

ಮಗನ ಬರ್ತ್​ಡೇಯಲ್ಲೂ ಅಭಿಷೇಕ್ ಅಂಬರೀಶ್!

ನಿನ್ನೆ ಮಹೇಶ್​ರ ಕುಟುಂಬ ಸಾವಿಗೆ ಶರಣಾಗಿತ್ತು. ಸಾವನ್ನಪ್ಪಿದ ಮಹೇಶ್​ರವರ ಪತ್ನಿ, ಮಗ ನಟ ಅಂಬರೀಶ್ ಅವರ ಅಭಿಮಾನಿಗಳಾಗಿದ್ರು. ಇತ್ತೀಚೆಗಷ್ಟೇ ಮಗನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ಅದು ಅಂಬಿ ಪುತ್ರ ಅಭಿಷೇಕ್ ಜೊತೆಗೆ ತಮ್ಮ ಮಗ ಇರುವ ಫೋಟೋ ಕೇಕ್ ಮಾಡಿಸಿ ಸಂಭ್ರಮಿಸಿದ್ರು.

Bengaluru Family suicide case Mahesh hardcore fan of Ambareesh
ಸಾವನ್ನಪ್ಪಿದ ಮಹೇಶ್​​


ಇದನ್ನೂ ಓದಿ: ಧರೆಗುರುಳಿದ 4 ಅಂತಸ್ತಿನ ಕಟ್ಟಡ; ಅವಶೇಷಗಳಡಿ ತೀವ್ರ ಹುಡುಕಾಟ ಶುರು

ಅಂತಿಮ ದರ್ಶನ ಪಡೆದ ಅಭಿಷೇಕ್ ಅಂಬರೀಶ್

ನಟ ಅಭಿಷೇಕ್ ಅಂಬರೀಶ್ ಅಭಿಮಾನಿ ಮಹೇಶ್​ರ ಅಂತಿಮ ದರ್ಶನ ಪಡೆದರು. ಬಳಿಕ ಮಾತನಾಡಿದ ಅವರು, ಹಲವು ಬಾರಿ ಮಹೇಶ್​ ನನ್ನನ್ನು ಭೇಟಿಯಾಗಲು ಬಂದಿದ್ದರು. ನನ್ನ ಬಗ್ಗೆ ಅವರಿಗೆ ಚಿಕ್ಕ ವಯಸ್ಸಿನಿಂದಲೂ ಗೊತ್ತು. ಯಾರೂ ಕೂಡ ಇಂತಹ ಕೃತ್ಯಕ್ಕೆ ಮುಂದಾಗಬಾರದು ಅಂತಾ ಅಭಿಷೇಕ್ ಅಂಬರೀಶ್​ ಹೇಳಿದ್ರು.

Bengaluru Family suicide case Mahesh hardcore fan of Ambareesh
ಅಂಬಿ ಅಭಿಮಾನಿಯಾಗಿದ್ದ ಮಹೇಶ್​


ಕೃಷ್ಣ ವೇಷ ಹಾಕಲು ಬಟ್ಟೆ ಖರೀದಿಸಿದ್ದ ತಂದೆ!

ಏಳು ವರ್ಷದ ತಮ್ಮ ಮಗನನ್ನು ಕೃಷ್ಣನ‌ ವೇಷದಲ್ಲಿ ಕಣ್ತುಂಬಿಕೊಳ್ಳಲು ದಂಪತಿ ಕಾಯ್ತಿದ್ದರು. ಇಂದು ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ ನಿನ್ನೆ ಮಹೇಶ್ ತಮ್ಮ ಮಗ ನಂದೀಶ್​​​ಗಾಗಿ ಕೃಷ್ಣವೇಷದ ಬಟ್ಟೆ ಖರೀದಿಸಿದ್ದರು. ಇವತ್ತು ಮಗನಿಗೆ ಕೃಷ್ಣವೇಷ ಹಾಕಿ ಶಾಲೆಗೆ ಕಳುಹಿಸಲು ಬಯಸಿದ್ದರು. ಆದರೆ ಇಡೀ ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ.

ಮಹಿಳೆ ಸಹೋದರನಿಂದ ದೂರು ದಾಖಲು

ಪ್ರಕರಣ ಸಂಬಂಧ ಮೃತ ಮಹಿಳೆ ಜ್ಯೋತಿ ಸಹೋದರ ಕೋಣನಕುಂಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಜ್ಯೋತಿ ಸಹೋದರ ಅಂಕೇಗೌಡ ದೂರಿನ ಹಿನ್ನಲೆ ಕೊಲೆ ಪ್ರಕರಣ ದಾಖಲಾಗಿದೆ. ಮಹೇಶ್​ರವರು ಪತ್ನಿ ಜ್ಯೋತಿ ಮತ್ತು ಪುತ್ರನನ್ನು ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ದೂರಿನಲ್ಲಿ ಉಲ್ಲೇಖಿಸಿಲಾಗಿದೆ.

ಇದನ್ನೂ ಓದಿ: ಆರು ವರ್ಷದ ಪ್ರೀತಿ, ಮದುವೆ ಮನೆಗೆ ಬರಬೇಕಿದ್ದ ವರ ನಾಪತ್ತೆ, ಕಾರಣವೇನು ಗೊತ್ತಾ?

ನಿನ್ನೆ ಬೆಳಗ್ಗೆ ಮಹೇಶ್​​ ವೈದ್ಯರನ್ನು ಭೇಟಿ ಮಾಡಿದ್ದರು. ಈ ವೇಳೆ ಮಹೇಶ್​ಗೆ ಡಾಕ್ಟರ್​ ನುಕಿಮಿಯಾ ಕ್ಯಾನ್ಸರ್ ಇದೆ ಎಂದಿದ್ದರು. ಈ ಮಾತು ಕೇಳುತ್ತಲೇ ಮಗ ನಂದೀಶ್​ನನ್ನು ಶಾಲೆಯಿಂದ ಕರೆತಂದಿದ್ದರು. ಬಳಿಕ ಇಬ್ಬರನ್ನು ಸಾಯಿಸಿ ಡೆತ್​​ನೋಟ್​ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಹೇಶ್​ ಡೆತ್​ನೋಟ್​ನಲ್ಲಿ ಏನಿದೆ?

ಸಹೋದರರೇ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ. ನನ್ನ ಹೆಸರಲ್ಲಿ ಒಂದು ಲಕ್ಷ ಎಫ್​​ಡಿ ಇದೆ. ನೀವು ಸಮಾನಾಗಿ ಹಂಚಿಕೊಳ್ಳಿ. ಸಾಲ‌ ನೀಡಿದ್ದೀನಿ ಅದನ್ನು ಹಂಚಿಕೊಳ್ಳಿ ಎಂದು ಡೆತ್​ನೋಟ್​ನಲ್ಲಿ ಉಲ್ಲೇಖ ಮಾಡಲಾಗಿದೆ.

ನಿನ್ನೆ ವಿಪರೀತ ಆರೋಗ್ಯ ಸಮಸ್ಯೆಯಿಂದ ಮಹೇಶ್​​, ಪತ್ನಿ ಜ್ಯೋತಿ ಮತ್ತು 7 ವರ್ಷದ ಪುತ್ರ ಆತ್ಮಹತ್ಯೆಗೆ ಶರಣಾಗಿದ್ದರು. ಮಗನ ಸಮೇತ ಗಂಡ-ಹೆಂಡತಿ ಮನೆಯೊಳಗೆ ನೇಣು ಬಿಗಿದುಕೊಂಡು ಸೂಸೈಡ್​ ಮಾಡಿಕೊಂಡಿದ್ದರು. ಬೆಂಗಳೂರಿನ ಕೋಣನಕುಂಟೆ ಬಳಿಯ ಚುಂಚನಕಟ್ಟೆ ಸರ್ಕಲ್ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದರು.
Published by:Thara Kemmara
First published: