• Home
  • »
  • News
  • »
  • state
  • »
  • Bengaluru: ಪಾಕ್‌ ಪರ ಘೋಷಣೆ ಕೂಗಿದವ್ರಿಗೆ ಖಾಕಿ ಶಾಕ್! ಮಾಡೋದ್ ಮಾಡಿ ತಮಾಷೆಗೆ ಅಂದ ಕಿಡಿಗೇಡಿಗಳು!

Bengaluru: ಪಾಕ್‌ ಪರ ಘೋಷಣೆ ಕೂಗಿದವ್ರಿಗೆ ಖಾಕಿ ಶಾಕ್! ಮಾಡೋದ್ ಮಾಡಿ ತಮಾಷೆಗೆ ಅಂದ ಕಿಡಿಗೇಡಿಗಳು!

ಪಾಕ್ ಪರ ಘೋಷಣೆ ಕೂಗಿದ ವಿದ್ಯಾರ್ಥಿ

ಪಾಕ್ ಪರ ಘೋಷಣೆ ಕೂಗಿದ ವಿದ್ಯಾರ್ಥಿ

ಪಾಕ್ ಪರ ಘೋಷಣೆ ಕೂಗಿದ ಮೂವರನ್ನು ಇತರ ವಿದ್ಯಾರ್ಥಿಗಳು ಥಳಿಸಲು ಮುಂದಾಗಿದ್ದಾರೆ. ಕೂಡಲೇ ವಿದ್ಯಾರ್ಥಿಗಳು (Student) ಉಳಿದ ವಿದ್ಯಾರ್ಥಿಗಳ ಬಳಿ ಕ್ಷಮೆಯಾಚಿಸಿದ್ದಾರೆ.

  • News18 Kannada
  • Last Updated :
  • Karnataka, India
  • Share this:

ಬೆಂಗಳೂರು (ನ.18): ಬೆಂಗಳೂರಿನಲ್ಲಿ​ ಕಾಲೇಜು ವಿದ್ಯಾರ್ಥಿಗಳು ಪಾಕ್ ಪ್ರೇಮ ಮೆರೆದಿದ್ದಾರೆ. ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ. ನಗರದ ನ್ಯೂ ಹೊರೈಜನ್ ಕಾಲೇಜಿನ ಮೂವರು ಇಂಜಿನಿಯರಿಂಗ್‌ ವಿದ್ಯಾರ್ಥಿಗಳು (Engineering Students) ಪಾಕ್‌ ಪರ ಘೋಷಣೆ ಕೂಗಿದ್ದಾರೆ. ಇಂಜಿನಿಯರಿಂಗ್‌ (Engineering) ಮೊದಲ ವರ್ಷದ ಆರ್ಯನ್ (Aryan), ದಿನಕರ್‌, ರಿಯಾ ರವಿಚಂದ್ರ (Riya Ravichandran) ಕಾಮೇಡ್ಕರ್‌  ಪಾಕ್​ ಪರ ಘೋಷಣೆ ಕೂಗಿದ್ದಾರೆ.


Bengaluru engineering students shouted pro-Pakistan slogans
ಪಾಕ್ ಪರ ಘೋಷಣೆ ಕೂಗಿದ ವಿದ್ಯಾರ್ಥಿ


ಕೂಡಲೇ ಕ್ಷಮೆ ಕೇಳಿದ ವಿದ್ಯಾರ್ಥಿಗಳು


ಪಾಕ್ ಪರ ಘೋಷಣೆ ಕೂಗಿದ ಮೂವರನ್ನು ಇತರ ವಿದ್ಯಾರ್ಥಿಗಳು ಥಳಿಸಲು ಮುಂದಾಗಿದ್ದಾರೆ. ಕೂಡಲೇ ವಿದ್ಯಾರ್ಥಿಗಳು (Student) ಉಳಿದ ವಿದ್ಯಾರ್ಥಿಗಳ ಬಳಿ ಕ್ಷಮೆಯಾಚಿಸಿದ್ದಾರೆ.


ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ


ವಿದ್ಯಾರ್ಥಿಗಳ ವಿರುದ್ಧ ಮಾರತ್‌ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮೂವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಮಾಷೆ ಮಾಡಲು ಹೀಗೆ ಮಾಡಿದ್ದೇವೆ ಎಂದಿದ್ದಾರೆ. ಆದರೂ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸುತ್ತಿದ್ದಾರೆ.


ಮೈಸೂರಿನಲ್ಲಿ 'ಗುಂಬಜ್' ಬಸ್ ನಿಲ್ದಾಣ ಜಟಾಪಟಿ!


ಸರ್ವಜನಾಂಗದ ಶಾಂತಿಯ ತೋಟ ಅಂತಾನೇ ಕರೆಸಿಕೊಂಡ ಕರ್ನಾಟಕದಲ್ಲಿ ಜಾತಿ ಜಾತಿಗಳ (Caste) ಮಧ್ಯೆ ಸಂಘರ್ಷ (conflict), ಧರ್ಮ ಧರ್ಮಗಳ (religions) ಮಧ್ಯೆ ಸಂಘರ್ಷ ಜೋರಾಗುತ್ತಿದೆ. ಹಿಜಾಬ್ ವಿವಾದ (Hijab controversy), ಕೇಸರಿ ಶಾಲು ವಿವಾದ, ಜಟ್ಕಾ ಕಟ್ ಹಲಾಲ್ ಕಟ್ ಮಾಂಸ ವಿವಾದ, ಹಿಂದೂ (Hindu) ಜಾತ್ರೆಗಳಲ್ಲಿ ಮುಸ್ಲಿಂ (Muslim) ವ್ಯಾಪಾರಿಗಳಿಗೆ ನಿಷೇಧ, ಆಜಾನ್ (Azan) ವಿವಾದ.. ಹೀಗೆ ಧರ್ಮ ಧರ್ಮಗಳ ಮಧ್ಯೆ ನಡೆಯುತ್ತಿರುವ ವಿವಾದಗಳ ಪಟ್ಟಿ ಬೆಳೆಯುತ್ತಲೇ ಇದೆ. ಇದೀಗ ಈ ವಿವಾದಕ್ಕೆ ಗುಮ್ಮಟ ವಿವಾದವೂ (Gumbaz Controversy) ಸೇರಿಕೊಂಡಿದೆ! ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಜೆಎಸ್‌ಎಸ್ ಕಾಲೇಜು ಎದುರು ಅಪೂರ್ಣಗೊಂಡಿರುವ ಬಸ್ ಶೆಲ್ಟರ್‌ನಲ್ಲಿ ಈ ರೀತಿಯ ರಚನೆ ಮಾಡಲಾಗಿದೆ. ಗೋಪುರಗಳು ಮೇಲೆ ಕಳಶದ ಆಕೃತಿ ಮಾಡಿದ್ದು, ಇದಕ್ಕೆ ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ (Pratap Simha) ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ವಿವಾದ ಹುಟ್ಟಿಕೊಂಡಿದೆ.  


ವಿವಾದದ ಮೂಲವಾದ ಬಸ್ ನಿಲ್ದಾಣ!
ಮೈಸೂರು-ನಂಜನಗೂಡು ರಸ್ತೆಯಲ್ಲಿರುವ ಜೆಎಸ್‌ಎಸ್ ಕಾಲೇಜು ಎದುರು ಅಪೂರ್ಣಗೊಂಡಿರುವ ಬಸ್ ಶೆಲ್ಟರ್‌ಈಗ ವಿವಾದದ ಕೇಂದ್ರ ಬಿಂದುವಾಗಿದೆ. ಬಸ್ ಶೆಲ್ಟರ್‌ನಲ್ಲಿ ಸುತ್ತೂರು ಮಠದ ಮಾಜಿ ಮಠಾಧೀಶರಾದ ಶಿವರಾತ್ರಿ ರಾಜೇಂದ್ರ ಸ್ವಾಮಿ ಮತ್ತು ಆದಿಜಗದ್ಗುರು ಶಿವರಾತ್ರೀಶ್ವರ ಶಿವಯೋಗಿ ಸ್ವಾಮಿಗಳ ಭಾವಚಿತ್ರವಿದೆ. ಈ ಬಸ್ ನಿಲ್ದಾಣದ ಮೇಲೆ ಗುಮ್ಮಟದ ಆಕೃತಿ ಇದೆ, ಅದಕ್ಕೆ ಕಳಶ ಜೋಡಿಸಲಾಗಿದೆ. ಅಂದಹಾಗೆ ಬಿಜೆಪಿ ಶಾಸಕ ಎಸ್‌ಎ ರಾಮದಾಸ್ ಅವರು ವಿಧಾನಸಭೆಯಲ್ಲಿ ಪ್ರತಿನಿಧಿಸುವ ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಈ ವಿವಾದಾತ್ಮಕ ಬಸ್ ನಿಲ್ದಾಣವಿದೆ.


ಸೋಶಿಯಲ್ ಮೀಡಿಯಾಗಳಲ್ಲಿ ಫೋಟೋ ವೈರಲ್


ಗುಮ್ಮಟದ ಮೇಲೆ ಕಳಶಗಳನ್ನು ಇರಿಸಲಾಗಿದ್ದು, ಇದು ಮುಸ್ಲಿಮರ ಆರಾಧನ ಕೇಂದ್ರವಾದ ಮಸೀದಿಗಳನ್ನು ಹೋಲುತ್ತದೆ ಎನ್ನುವ ಕಾರಣದಿಂದ ವಿವಾದಕ್ಕೆ ತುತ್ತಾಗಿದೆ. ಕಳಶ ಇರುವ ಗುಮ್ಮಟಗಳ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಇದಾದ ಬಳಿಕ ಹಿಂದೂ ಕಾರ್ಯಕರ್ತರು ಸಿಡಿದೆದ್ದಿದ್ದರು. ದೊಡ್ಡದಾಗಿ ಹೋರಾಟ ನಡೆಸುವ ಎಚ್ಚರಿಕೆಯನ್ನೂ ನೀಡಿದ್ದರು. ಇಷ್ಟಾಗುತ್ತಿದ್ದಂತೆ ಒಂದು ದಿನದ ನಂತರ 'ಕಲಶ' ಮತ್ತು ದಾರ್ಶನಿಕರ ಚಿತ್ರಗಳು ಬಂದಿವೆ.


ಇದನ್ನೂ ಓದಿ: Green Hydrogen: ಗ್ರೀನ್‌ ಹೈಡ್ರೋಜನ್‌ ಪ್ರಾಜೆಕ್ಟ್​ಗಳಿಗೆ ಮಂಗಳೂರನ್ನೇ ಆಯ್ಕೆ ಮಾಡುತ್ತಿರೋದೇಕೆ? ಬಯಲಾಯ್ತು ಕುತೂಹಲಕಾರಿ ಮಾಹಿತಿ!


ಬಸ್ ನಿಲ್ದಾಣ ಒಡೆಯುತ್ತೇನೆ ಎಂದ ಪ್ರತಾಸ್ ಸಿಂಹ


ಬಸ್ ನಿಲ್ದಾಣದಲ್ಲಿ ಗುಂಬಜ್ ತರಹದ ವಿನ್ಯಾಸದ ಬಗ್ಗೆ ತಿಳಿದು ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದರು. ಮೈಸೂರಿನಲ್ಲಿ ಹೊಸದಾಗಿ ನಿರ್ಮಿಸಲಾದ ಬಸ್ ಶೆಲ್ಟರ್‌ನ ಮೇಲಿರುವ 'ಗುಂಬಜ್' ತರಹದ ರಚನೆಗಳನ್ನು ತೆಗೆದುಹಾಕುವಂತೆ ಆಗ್ರಹಿಸಿದ್ರು. ಅಧಿಕಾರಿಗಳಿಗೆ ನಾಲ್ಕು ದಿನಗಳ ಗಡುವು ವಿಧಿಸಿದ್ದು, ಅಧಿಕಾರಿಗಳು ಗುಮ್ಮಟಗಳನ್ನು ಕೆಳಗಿಳಿಸದಿದ್ದರೆ ಮಸೀದಿಗೆ ಹೋಲಿಸಿದ ಕಟ್ಟಡವನ್ನು ಕೆಡವುದಾಗಿ ಎಚ್ಚರಿಕೆ ನೀಡಿದ್ದರು.

Published by:ಪಾವನ ಎಚ್ ಎಸ್
First published: