• Home
  • »
  • News
  • »
  • state
  • »
  • Bengaluru: ಪಾಕ್ ಪರ ಘೋಷಣೆ ಕೂಗಿದ್ದ ವಿದ್ಯಾರ್ಥಿಗಳು ಕಾಲೇಜಿನಿಂದ ಸಸ್ಪೆಂಡ್

Bengaluru: ಪಾಕ್ ಪರ ಘೋಷಣೆ ಕೂಗಿದ್ದ ವಿದ್ಯಾರ್ಥಿಗಳು ಕಾಲೇಜಿನಿಂದ ಸಸ್ಪೆಂಡ್

ಪಾಕ್ ಪರ ಘೋಷಣೆ ಕೂಗಿದ ವಿದ್ಯಾರ್ಥಿ

ಪಾಕ್ ಪರ ಘೋಷಣೆ ಕೂಗಿದ ವಿದ್ಯಾರ್ಥಿ

ಮೂವರು ಪಾಕಿಸ್ತಾನ ಪರ ಘೋಷಣೆ ಕೂಗುತ್ತಿದ್ದಂತೆ ಸ್ಥಳದಲ್ಲಿದ್ದ ಇತರರು ವಿದ್ಯಾರ್ಥಿಗಳನ್ನು ಥಳಿಸಲು ಮುಂದಾಗಿದ್ದಾರೆ. ಕೂಡಲೇ ಎಚ್ಚೆತ್ತ ಮೂವರು ಕ್ಷಮೆ ಕೇಳಿದ್ದಾರೆ. ಪಾಕ್​ ಪರ ಘೋಷಣೆ ಕೂಗಿರುವ ಮೂವರು ಫಸ್ಟ್ ಇಯರ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ.

  • Share this:

ಬೆಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ (Private College) ಕೆಲ ಕಿಡಿಗೇಡಿ ವಿದ್ಯಾರ್ಥಿಗಳು (Students) ಪಾಕಿಸ್ತಾನ ಪ್ರೇಮ ಮೆರೆದಿದ್ದಾರೆ. ನೂರಾರು ವಿದ್ಯಾರ್ಥಿಗಳು ಹಾಗೂ ಜನರ ಎದುರೇ ಪಾಕಿಸ್ತಾನ್​ಗೆ (Pakistan) ಜೈಕಾರ ಕೂಗಿ ಎಡವಟ್ಟು ಮಾಡಿಕೊಂಡಿದ್ದಾರೆ. ಓರ್ವ ಯುವಕ ಹಾಗೂ ಯುವತಿ ಈ ರೀತಿ ಕೂಗಿದ್ದು, ವಿಡಿಯೋ ವೈರಲ್ (Viral Video) ಆದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವಕ ಹಾಗೂ ಯುವತಿಯನ್ನ ವಶಕ್ಕೆ (Detained) ಪಡೆದು ವಿಚಾರಣೆ ಮಾಡಿದ್ದಾರೆ. ಈ ವೇಳೆ ತಾವು ತಮಾಷೆಗಾಗಿ ಈ ರೀತಿ ಮಾಡಿರೋದಾಗಿ ಪೊಲೀಸರ ಮುಂದೆ ವಿದ್ಯಾರ್ಥಿಗಳು ಹೇಳಿಕೆ ನೀಡಿದ್ದಾರೆ. ಸದ್ಯ ಮಾರತ್​ಹಳ್ಳಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


ಸದ್ಯ ಪೊಲೀಸರು ಯುವಕ ಮತ್ತು ಯುವತಿಯ ಕಾಲೇಜ್ ಐಡಿ ಮತ್ತು ಆಧಾರ್ ಕಾರ್ಡ್​ ವಶಕ್ಕೆ ಪಡೆದು ಮಾಹಿತಿ ಕಲೆ ಹಾಕುತ್ತಿದ್ದಾರೆ. ವಿದ್ಯಾರ್ಥಿಗಳು ಕ್ಷಮೆ ಕೇಳಿ, ತಮಾಷೆ ಎಂದು ಹೇಳಿಕೆ ನೀಡಿದ್ರೂ ಇವರೆಲ್ಲ ಯಾರು ಎಂಬುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ಮೂವರ ವಿರುದ್ಧ ಪ್ರಕರಣ ದಾಖಲು


ಕಾಲೇಜಿನಲ್ಲಿ ಕಾರ್ಯಕ್ರಮವೊಂದನ್ನು ಆಯೋಜನೆ ಮಾಡಲಾಗಿತ್ತು. ಈ ವೇಳೆ ದಾವಣೆಗೆರೆ ಮೂಲದ ರಿಯಾ (18), ಪಂಜಾಬ್ ಮೂಲದ ಆರ್ಯನ್ (18) ಮತ್ತು ಆಂಧ್ರ ಮೂಲದ 17 ವರ್ಷದ ವಿದ್ಯಾರ್ಥಿ ಪಾಕ್ ಪ್ರೇಮ ಮೆರೆದಿದ್ದಾರೆ. ಈ ಸಂಬಂಧ ಮೂವರ ವಿರುದ್ಧ ಐಪಿಸಿ 153, 505(1)B ಅಡಿಯಲ್ಲಿ ಎಫ್​ಐಆರ್ ದಾಖಲಾಗಿದೆ. ಮೂವರ ಪೈಕಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.


 Bengaluru engineering student suspend after shouted pro-Pakistan slogans mrq
ಮಾರತ್​ಹಳ್ಳಿ ಪೊಲೀಸ್ ಠಾಣೆ


ಮೂವರು ಪಾಕಿಸ್ತಾನ ಪರ ಘೋಷಣೆ ಕೂಗುತ್ತಿದ್ದಂತೆ ಸ್ಥಳದಲ್ಲಿದ್ದ ಇತರರು ವಿದ್ಯಾರ್ಥಿಗಳನ್ನು ಥಳಿಸಲು ಮುಂದಾಗಿದ್ದಾರೆ. ಕೂಡಲೇ ಎಚ್ಚೆತ್ತ ಮೂವರು ಕ್ಷಮೆ ಕೇಳಿದ್ದಾರೆ. ಪಾಕ್​ ಪರ ಘೋಷಣೆ ಕೂಗಿರುವ ಮೂವರು ಫಸ್ಟ್ ಇಯರ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿಯೇ ಐಪಿಎಲ್​ ತಂಡಗಳ ಪರವಾಗಿಯೂ ಘೋಷಣೆ ಕೂಗಿದ್ದಾರೆ.


ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್


ಮೂವರು ಪಾಕ್​ ಪರ ಘೋಷಣೆ ಕೂಗುವ ವಿಡಿಯೋವನ್ನು ಇತರ ವಿದ್ಯಾರ್ಥಿಗಳು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ವಿಡಿಯೋ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.


 Bengaluru engineering student suspend after shouted pro-Pakistan slogans mrq
ಮಾರತ್​ಹಳ್ಳಿ ಪೊಲೀಸ್ ಠಾಣೆ


ವಿದ್ಯಾರ್ಥಿಗಳು ಸಸ್ಪೆಂಡ್


ಇತ್ತ ವಿಡಿಯೋ ವೈರಲ್ ಬೆನ್ನಲ್ಲೇ ಕಾಲೇಜು ಆಡಳಿತ ಮಂಡಳಿ ಮೂವರು ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ. ಘಟನೆ ಸಂಬಂಧ ಮಾರತ್ತಹಳ್ಳಿ ಪೊಲೀಸ್ ಠಾಣೆಗೆ ದೂರು ಸಹ ನೀಡಿದೆ.


ಇದನ್ನೂ ಓದಿ:  ಅಮೂಲ್ಯ-ಆರ್ದ್ರಾ ದೇಶದ್ರೋಹ ಪ್ರಕರಣ; ಪೊಲೀಸ್ ತನಿಖೆಯಲ್ಲಿ ಅಚ್ಚರಿಯ ಸಂಗತಿ ಬಯಲು


ಪಾಕ್ ಪರ ಘೋಷಣೆ ಕೂಗಿದ್ದಅಮೂಲ್ಯ ಲಿಯೋನಾ


ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಫ್ರೀಡಂ ಪಾರ್ಕ್​​ನಲ್ಲಿ ನಡೆದ ಕಾರ್ಯಕ್ರಮದಲ್ಲಿ 'ಪಾಕಿಸ್ತಾನ್‌ ಜಿಂದಾಬಾದ್‌' ಎಂದು ಅಮೂಲ್ಯ ಲಿಯೋನಾ ಎಂಬಾಕೆ ಘೋಷಣೆ ಕೂಗಿದ್ದಳು.


ಅಮೂಲ್ಯ ಲಿಯೋನ್‌ 'ಪಾಕಿಸ್ತಾನ್‌ ಜಿಂದಾಬಾದ್‌' ಎಂದು ಘೋಷಣೆ ಕೂಗಿದ ಸುದ್ದಿಯೂ ಪಾಕ್​​ನ ಪ್ರಮುಖ ಪತ್ರಿಕೆ 'ಡಾನ್‌'ನಲ್ಲಿ ಪ್ರಕಟವಾಗಿತ್ತು. ಡಾನ್​​ ಪತ್ರಿಕೆ ಅಮೂಲ್ಯ ಘೋಷಣೆ ಕೂಗುವ ವೇಳೆ ಅಸಾದುದ್ದೀನ್‌ ಓವೈಸಿ ಮೈಕ್​​ ಕಸಿದುಕೊಳ್ಳಲು ಯತ್ನಿಸಿದ ಚಿತ್ರವನ್ನು ಪ್ರಕಟಿಸಿತ್ತು. ಎಎನ್‌ಐ ಮತ್ತು ವೈರ್ ವೆಬ್‌ಸೈಟ್‌ ಮಾಡಿದ ಸುದ್ದಿಯ ಆಧಾರದ ಮೇಲೆ ಈ ಘಟನೆ ಬಗ್ಗೆ ಡಾನ್‌ ವರದಿ ಮಾಡಿದ್ದಾಗಿ ಬರೆದುಕೊಂಡಿತ್ತು. ಅಲ್ಲದೇ ಅಮೂಲ್ಯ ಕೂಗಿದ ಘೋಷಣೆ ವಿಡಿಯೋ ಬಗ್ಗೆಯೂ ಪ್ರಸ್ತಾಪಿಸಿತ್ತು.


ದೇಶದ್ರೋಹದ ಪ್ರಕರಣ


ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಫೆ.21, 2020 ರಂದು ಪ್ರತಿಭಟನೆ ಆಯೋಜಿಸಲಾಗಿತ್ತು. ಈ ಪ್ರತಿಭಟನಾ ಸಭೆಯಲ್ಲಿ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಪಾಲ್ಗೊಂಡಿದ್ದರು.


ಇದನ್ನೂ ಓದಿ:  B C Nagesh: ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ; ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ


ಪ್ರತಿಭಟನೆ ಆರಂಭವಾಗುತ್ತಿದ್ದಂತೆ ವೇದಿಕೆ ಮೇಲೆ ಬಂದ ಅಮೂಲ್ಯ ಎಂಬ ಯುವತಿ ಇದ್ದಕ್ಕಿದ್ದ ಹಾಗೆ ‘ಪಾಕಿಸ್ತಾನ ಜಿಂದಾಬಾದ್’ ಎಂದು ಎರಡು ಬಾರಿ ಘೋಷಣೆ ಕೂಗಿದ್ದಳು. ತಕ್ಷಣ ಆಕೆಯನ್ನು ವೇದಿಕೆಯಿಂದ ಕೆಳಗಿಳಿಸಿದ ಆಯೋಜಕರು ಪೊಲೀಸರ ವಶಕ್ಕೆ ಒಪ್ಪಿಸಿದ್ದರು. ಆಕೆಯನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದ ಪೊಲೀಸರು ಆಕೆಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿದ್ದರು.

Published by:Mahmadrafik K
First published: