• Home
  • »
  • News
  • »
  • state
  • »
  • Banglore| ಪಿಂಚಣಿ ಹಾಗೂ ಪಿಎಫ್ ಹಣ ವಿನಿಯೋಗಿಸಿ ತಮ್ಮದೇ ಸ್ವಂತ ಖರ್ಚಿನಲ್ಲಿ ರಸ್ತೆ ಕಾಮಗಾರಿ ನಡೆಸಿದ ಹಿರಿಯ ನಾಗರಿಕರು!

Banglore| ಪಿಂಚಣಿ ಹಾಗೂ ಪಿಎಫ್ ಹಣ ವಿನಿಯೋಗಿಸಿ ತಮ್ಮದೇ ಸ್ವಂತ ಖರ್ಚಿನಲ್ಲಿ ರಸ್ತೆ ಕಾಮಗಾರಿ ನಡೆಸಿದ ಹಿರಿಯ ನಾಗರಿಕರು!

ಜನರೇ ನಿರ್ಮಿಸಿರುವ ರಸ್ತೆ.

ಜನರೇ ನಿರ್ಮಿಸಿರುವ ರಸ್ತೆ.

30 ಮನೆಗಳಿರುವ ಲೇಔಟ್‌ನಲ್ಲಿ 20 ಮನೆಯವರು ರಸ್ತೆ ಗುಂಡಿಗಳನ್ನು ಮುಚ್ಚುವ ತೀರ್ಮಾನಕ್ಕೆ ಬಂದಿದ್ದು ಹಿರಿಯ ನಾಗರಿಕರು ತಮ್ಮ ಪಿಂಚಣಿ ಹಾಗೂ ಪಿಎಫ್‌ ಹಣದಿಂದಲೇ ರಸ್ತೆ ರಿಪೇರಿ ನಡೆಸಿದ್ದಾರೆ.

  • Trending Desk
  • 4-MIN READ
  • Last Updated :
  • Share this:

ಬೆಂಗಳೂರು: ಬೆಳಂದೂರಿನ (bellandur) ಕೆಸವನಹಳ್ಳಿಯ ತುಳಸಿ ಲೇಔಟ್‌ನಲ್ಲಿರುವ ಹಿರಿಯ ನಾಗರಿಕರು (senior citizen) ಅಧಿಕಾರಿಗಳ ಬೇಜಾವಾಬ್ದಾರಿತ ನದಿಂದ ಕೆರಳಿ ತಮ್ಮ ಸ್ಥಳದ ಮುಖ್ಯ ರಸ್ತೆಯನ್ನು ತಮ್ಮ ಪಿಂಚಣಿ (Pension) ಹಾಗೂ ಉಳಿತಾಯದ ಹಣದಿಂದ (Savings) ದುರಸ್ತಿಗೊಳಿ ಸಿದ್ದಾರೆ. 300 ಮೀಟರ್ ಉದ್ದದ ರಸ್ತೆಯು ತುಳಸಿ ಲೈಔಟ್‌ನ ನಿವಾಸಿಗಳ ಮುಖ್ಯ ಸಂಪರ್ಕ ಸೇತುವಾಗಿದ್ದು ಮೂರು ವರ್ಷಗಳಿಂದ ಅತ್ಯಂತ ಕಳಪೆ ಸ್ಥಿತಿಯಲ್ಲಿತ್ತು. ರಸ್ತೆಯ ಮೇಲ್ಮೈ ಕಿತ್ತುಬಂದಿದ್ದ ರಿಂದ ರಸ್ತೆಯು ಸಂಪೂರ್ಣ ವಾಗಿ ಗುಂಡಿಗಳಿಂದ ತುಂಬಿತ್ತು. ನಾವು ನಿಷ್ಟೆಯಿಂದ ನ್ಯಾಯುತವಾಗಿ ತೆರಿಗೆಗ ಳನ್ನು ಪಾವತಿಸುತ್ತಿ ದ್ದರೂ ಈ ರೀತಿಯ ರಸ್ತೆಯ ಭಾಗ್ಯ ನಮಗೆ ದೊರೆತಿದೆ. ಒಂದು ಪ್ಯಾಕೆಟ್ ಹಾಲು ತರಲು ಈ ರಸ್ತೆಯಲ್ಲಿ ತೆರಳುವುದು ಸವಾಲಿನ ಕೆಲಸವಾಗಿದೆ ಎಂದು 75 ರ ಹರೆಯದ ಸತ್ಯನರನ್ ರಾವ್ ತಿಳಿಸಿದ್ದಾರೆ.


2015 ರಲ್ಲಿ ರಸ್ತೆ ಅಗೆತದ ಕಾರ್ಯ ಅಭಿವೃದ್ಧಿಗೊಂಡಿತ್ತು. ಗ್ಯಾಸ್ ಪೈಪ್‌ಲೈನ್ ಅಳವಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮೊದಲಿಗೆ ಅಗೆದರು. ಕರ್ವಿ ಪೈಪ್‌ಲೈನ್ ಅಳವಡಿಕಸಲು ಇನ್ನೊಂದು ಸುತ್ತಿನ ಅಗೆತ ನಡೆಯಿತು. ಡ್ರೈನೇಜ್ ಕೆಲಸಕ್ಕಾಗಿ ಮೇಲಕ್ಕೆ ಕೆಳಕ್ಕೆ ರಸ್ತೆಯನ್ನು ತಿರುಗಿಸಿದರು. ಆದರೆ ಅಗೆತದ ಕೆಲಸ ನಡೆಸಿದ ಯಾವುದೇ ಸಂಸ್ಥೆಗಳು ಅದನ್ನು ಸರಿಪಡಿಸುವ ಗೋಜಿಗೆ ಹೋಗಲಿಲ್ಲ ಎಂದು 65 ರ ಹರೆಯದ ವೃದ್ಧರೊಬ್ಬರು ಆಕ್ಷೇಪಿಸಿದ್ದಾರೆ.


ನಾವು ಸಮಸ್ಯೆಯ ಕುರಿತು ಬಿಬಿಎಂಪಿ ಇಂಜಿನಿಯರ್‌ರೊಬ್ಬರ ಬಳಿ ಮಾತನಾಡಲು ಪ್ರಯತ್ನಿಸಿದೆವು ಆದರೆ ಅವರು ಅದಕ್ಕೆ ಪ್ರಾಧಾನ್ಯತೆ ನೀಡಲಿಲ್ಲ. ಹಾಗಾಗಿ ನಮ್ಮಷ್ಟಕ್ಕೆ ನಮ್ಮ ಸ್ವಂತ ಖರ್ಚಿನಿಂದ ರಸ್ತೆ ರಿಪೇರಿ ಮಾಡುವುದೆಂದು ನಿರ್ಧರಿಸಿದೆವು ಎಂದು ಇನ್ನೊಬ್ಬ ಹಿರಿಯ ನಾಗರಿಕರು ತಿಳಿಸಿದ್ದಾರೆ.


30 ಮನೆಗಳಿರುವ ಲೇಔಟ್‌ನಲ್ಲಿ 20 ಮನೆಯವರು ರಸ್ತೆ ಗುಂಡಿಗಳನ್ನು ಮುಚ್ಚುವ ತೀರ್ಮಾನಕ್ಕೆ ಬಂದಿದ್ದು ಹಿರಿಯ ನಾಗರಿಕರು ತಮ್ಮ ಪಿಂಚಣಿ ಹಾಗೂ ಪಿಎಫ್‌ ಹಣದಿಂದಲೇ ರಸ್ತೆ ರಿಪೇರಿ ನಡೆಸಿದ್ದಾರೆ. ಲೇಔಟ್‌ನಲ್ಲಿರುವ ಹೆಚ್ಚಿನ ನಿವಾಸಿಗಳು ಮಾಜಿ ಸರಕಾರಿ ಉದ್ಯೋಗಿಗಳಾಗಿದ್ದಾರೆ ಹಾಗೂ ಮೂಲಸೌಕರ್ಯ ಇಂಜಿನಿಯರ್‌ಗಳಾಗಿದ್ದಾರೆ.


ಇದನ್ನೂ ಓದಿ: Siddaramaiah: ಅಧಿಕಾರಲ್ಲಿರೋರ ಮನೆ ಬಾಗಿಲಿಗೆ ನಾನು ಯಾವತ್ತೂ ಹೋಗಿಲ್ಲ; ಬಿಎಸ್​ವೈ ಭೇಟಿ ವಿಚಾರಕ್ಕೆ ಸಿದ್ದರಾಮಯ್ಯ ಉತ್ತರ


ಒದಗಿಸಿದ ಸಾಮಾಗ್ರಿಯಿಂದ ರಸ್ತೆಯನ್ನು ಸಮತಟ್ಟುಮಾಡಲು ಕಾರ್ಮಿಕರು ಹಾಗೂ ಯಂತ್ರಗಳನ್ನು ಗೊತ್ತುಪಡಿಸಿದ್ದಾರೆ. ಕೆಲವು ಹಿರಿಯ ನಾಗರಿಕರು 20,000 ರೂವನ್ನು ನೀಡಿದ್ದು ಇನ್ನು ಕೆಲವರು ಇನ್ನಷ್ಟು ಹಣ ಸಹಾಯವನ್ನು ನೀಡಿದ್ದಾರೆ. ಅವರಿಗೆ ಬೇಕಾಗುವಂತೆ ನಾವು ಹಣ ಸಹಾಯ ಮಾಡುತ್ತೇವೆ ಎಂದು ಹಿರಿಯ ನಾಗರಿಕರು ತಿಳಿಸಿದ್ದಾರೆ. ಇದೀಗ ರಸ್ತೆಗೆ ಒದ್ದೆ ಮಿಶ್ರಣವನ್ನು ಹಾಕಿದ್ದು ಸಿಮೆಂಟ್‌ನ ಮೇಲೆ ಪದರದಂತೆ ಹೊದಿಸಲಾಗಿದೆ. ಇನ್ನು ಡಾಂಬರು ಹಾಕುವ ಕೆಲಸ ನಡೆಯುತ್ತಿದೆ.


ನಮ್ಮ ಸಂಬಂಧಿಕರನ್ನು ಭೇಟಿಮಾಡಲು ಸ್ನೇಹಿತರನ್ನು ಸಂಧಿಸಲು ನಮಗೂ ಇಷ್ಟವಿದೆ ಆದರೆ ಕಳಪೆ ರಸ್ತೆಯಿಂದ ನಮಗೆ ರಸ್ತೆಗಿಳಿಯಲು ಬೇಸರವಾಗುತ್ತಿದೆ. ಕೊನೆಗೆ ನಮ್ಮ ಜೀವನಮಟ್ಟವನ್ನು ಸುಧಾರಿಸಲು ನಾವೇ ಏನಾದರೂ ಮಾಡಬೇಕಾಯಿತು ಎಂದು ಹಿರಿಯ ನಾಗರಿಕರನ್ನು ಬೆಂಬಲಿಸುತ್ತಿರುವ ಹರಿ ಅವರ ಅಭಿಪ್ರಾಯವಾಗಿದೆ.


ಇದನ್ನೂ ಓದಿ: HDK vs Siddaramaiah: ತೊಟ್ಟಿಲನ್ನೂ ತೂಗಿ, ಮಗುವಿನ ಕತ್ತನ್ನೂ ಕುಯ್ಯುವ ನಿಮ್ಮ ನೀಚ ಬುದ್ಧಿ ಮುಸ್ಲಿಂರಿಗೆ ಗೊತ್ತಾಗಿದೆ; ಸಿದ್ದರಾಮಯ್ಯ ವಿರುದ್ಧ ಎಚ್​ಡಿಕೆ ವಾಗ್ದಾಳಿ


ಸೇವ್ ಬೆಳಂದೂರು ಫಾರ್ಮ್‌ನ ಸದಸ್ಯರಾಗಿರುವ ವಿಷ್ಣು ಪ್ರಸಾದ್ ಹೇಳುವಂತೆ ಸಂಪೂರ್ಣ ಪ್ರದೇಶದಲ್ಲಿರುವ ರಸ್ತೆ ಕಾಮಗಾರಿ ಅಭಿವೃದ್ಧಿಗೆ ಬಿಬಿಎಂಪಿ ಯಾವುದೇ ಆಸಕ್ತಿಯನ್ನು ತೋರುತ್ತಿಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಮ್ಮ ಜೀವನವೇ ಕಳಪೆ ರಸ್ತೆಯಿಂದ ದುಃಖದಾಯಕವಾಗಿದೆ ಈಗ ಹಿರಿಯ ನಾಗರಿಕರು ತಮ್ಮ ಪಿಂಚಣಿ ಹಾಗೂ ಪಿಎಫ್ ಹಣವನ್ನು ವಿನಿಯೋಗಿಸಿ ರಸ್ತೆ ಕಾಮಗಾರಿಗೆ ಕೈ ಹಾಕಿದ್ದಾರೆ. ತುಳಸಿ ಲೇಔಟ್‌ನಲ್ಲಿರುವ ನಿವಾಸಿಗಳು ದಾರಿ ತೋರಿಸಿದ್ದಾರೆ. ಇನ್ನು ಶೀಘ್ರದಲ್ಲಿಯೇ ಪಕ್ಕದಲ್ಲಿರುವ ನಿವಾಸಿಗಳು ಕೂಡ ತಮ್ಮಷ್ಟಕ್ಕೆ ರಸ್ತೆ ರಿಪೇರಿ ಮಾಡುವುದಕ್ಕೆ ಆಸಕ್ತಿ ತೋರಿಸಲಿದ್ದಾರೆ ಎಂದು ವಿಷ್ಣು ತಿಳಿಸುತ್ತಾರೆ.

First published: