• Home
  • »
  • News
  • »
  • state
  • »
  • Crime News: ಬೆಂಗಳೂರಿನಲ್ಲಿ ಗುಂಡಿನ ದಾಳಿ ಕೇಸ್​; ಆರೋಪಿಗಳು ಬಾಯ್ಬಿಟ್ಟರು ಸ್ಫೋಟಕ ಸತ್ಯ!

Crime News: ಬೆಂಗಳೂರಿನಲ್ಲಿ ಗುಂಡಿನ ದಾಳಿ ಕೇಸ್​; ಆರೋಪಿಗಳು ಬಾಯ್ಬಿಟ್ಟರು ಸ್ಫೋಟಕ ಸತ್ಯ!

ತನಿಖೆ ವೇಳೆ ಸ್ಫೋಟಕ ಸತ್ಯ ಬಯಲು

ತನಿಖೆ ವೇಳೆ ಸ್ಫೋಟಕ ಸತ್ಯ ಬಯಲು

ಡೀಲ್ ಕೊಟ್ಟವರು ಯಾವುದೇ ಕಾರಣಕ್ಕೂ ಟಾರ್ಗೆಟ್ ಮಿಸ್ ಆಗ್ಬಾರ್ದು ಅಂದಿದ್ರು. ಮೊದಲ ಬುಲೆಟ್ ಎದೆಗೆ ಬೀಳಬೇಕು ಅಂತ ಸೂಚಿಸಿದ್ರು. ಗಾಬರಿಯಿಂದ ಫೈರ್ ಮಾಡಿದ್ರಿಂದ ಮಿಸ್ ಫೈರ್ ಜಾಸ್ತಿ ಆಯ್ತು ಎಂದು ಆರೋಪಿಗಳು ಬಾಯ್ಬಿಟ್ಟಿದ್ದಾರೆ.

  • Share this:

ಬೆಂಗಳೂರು (ಡಿ.11): ಬೆಂಗಳೂರಿನಲ್ಲಿ ಮದನಪಲ್ಲಿ ರೌಡಿಶೀಟರ್ (Rowdy Sheeter) ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ವೇಳೆ ಸ್ಫೋಟಕ ಮಾಹಿತಿ ಹೊರಬಿದ್ದಿದ್ದು, ಕೊಲೆ ಮಾಡಲು ಸುಪಾರಿ (Supari) ನೀಡಿರೋದು ತನಿಖೆ ವೇಳೆ ಬಯಲಾಗಿದೆ. ಸದ್ಯಕ್ಕೆ ಖರ್ಚಿಗೆ ಮಾತ್ರ ಹಣ ಕೊಟ್ಟಿದ್ದು, ಕೆಲಸ ಆದ ಬಳಿಕ ಉಳಿದ ಹಣ ನೀಡೋದಾಗಿ ಸುಪಾರಿ ಕೊಡಲಾಗಿತ್ತಂತೆ. ಬೈಯ್ಯಾರೆಡ್ಡಿ ಸಂಬಂಧಿಕನಿಂದ ಕೊಲೆಗೆ (Murder) ಸುಪಾರಿ ನೀಡಲಾಗಿದ್ದು, ಪೊಲೀಸರು (Police) ಮೂರು ವಿಶೇಷ ತಂಡ ರಚಿಸಿ ಸುಪಾರಿ ಕೊಟ್ಟವನಿಗಾಗಿ ಹುಡುಕಾಡ್ತಿದ್ದಾರೆ.


ಟಾರ್ಗೆಟ್​ ಮಿಸ್​ ಮಾಡದಂತೆ ವಾರ್ನಿಂಗ್​


ಡೀಲ್ ಕೊಟ್ಟವರು ಯಾವುದೇ ಕಾರಣಕ್ಕೂ ಟಾರ್ಗೆಟ್ ಮಿಸ್ ಆಗ್ಬಾರ್ದು ಅಂದಿದ್ರು. ಮೊದಲ ಬುಲೆಟ್ ಎದೆಗೆ ಬೀಳಬೇಕು ಅಂತ ಸೂಚಿಸಿದ್ರು. ಗಾಬರಿಯಿಂದ ಫೈರ್ ಮಾಡಿದ್ರಿಂದ ಮಿಸ್ ಫೈರ್ ಜಾಸ್ತಿ ಆಯ್ತು. ಆದ್ರೆ ಸುದ್ದಿ ತಿಳಿದು ಡೀಲ್ ಕೊಟ್ಟವರು ಮೊಬೈಲ್ ಸ್ವಿಚ್ಆಪ್ ಮಾಡಿದ್ರು ಎಂದು ಆರೋಪಿಗಳು ಹೇಳಿದ್ದಾರೆ.




ಹಳೇ ವೈಷಮ್ಯಕ್ಕೆ ಸುಪಾರಿ


ಶಿವಶಂಕರ್ ರೆಡ್ಡಿ ಅಪ್ರಾಪ್ತನಾಗಿದ್ದಾಗಲೇ ವೈಷಮ್ಯಗಳನ್ನು ಬೆಳೆಸಿಕೊಂಡಿದ್ದನು. ಅದರಂತೆ 2011ರ ದ್ವೇಷಕ್ಕೆ ಸಂಬಂಧಿಸಿದಂತೆ ಭೈಯ್ಯಾರೆಡ್ಡಿ ಸಂಬಂಧಿಕನೊಬ್ಬನಿಂದ ಕೊಲೆಗೆ ಸುಪಾರಿ ನೀಡಿದ್ದಾನೆ. ಸದ್ಯ ಸದ್ಯ ಸಪಾರಿ ಕೊಟ್ಟ ವ್ಯಕ್ತಿಯ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಈಗಾಗಲೇ ಆರೋಪಿಗಳ ಬಂಧನಕ್ಕೆ ರಚಿಸಿದ್ದ ಮೂರು ವಿಶೇಷ ತಂಗಳಿಂದಲೇ ಸುಪಾರಿ ಕೊಟ್ಟ ಆರೋಪಿಯ ಶೋಧ ಕಾರ್ಯ ನಡೆಸಲಾಗುತ್ತಿದೆ.


ಮೂವರು ಆರೋಪಿಗಳ ಬಂಧನ


ರೌಡಿ ಶೀಟರ್ ಆಗಿದ್ದ ಬಿಲ್ಡರ್ ಹಾಗೂ ಆತನ ಚಾಲಕನ ಮೇಲೆ ಗುಂಡಿನ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು 11 ವರ್ಷದ ಕೊಲೆಗೆ ಸೇಡು ತೀರಿಸಿಕೊಳ್ಳಲು ಬಿಲ್ಡರ್ ಮೇಲೆ ಗುಂಡು ಹಾರಿಸಿದ್ದಾರೆ. ಬಂಧಿತರನ್ನು ಮನೋಜ್ ಕುಮಾರ್, ಜಯಪ್ರಕಾಶ್ ಮತ್ತು ಪ್ರವೀಣ್ ಎಂದು ಗುರುತಿಸಲಾಗಿದೆ. ಆರೋಪಿಗಳ ಪತ್ತೆಗೆ ರಚಿಸಲಾಗಿದ್ದ 4 ತಂಡಗಳು ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ಅವರನ್ನು ಬಂಧಿಸಿವೆ.


ಡಿ.​ 8 ಗುರುವಾರದಂದು ಗುಂಡಿನ ದಾಳಿ 


ಡಿಸೆಂಬರ್​ 8 ಗುರುವಾರದಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಆರೋಪಿಗಳು ಕುರುಡು ಸೊಣ್ಣೇನಹಳ್ಳಿಯಲ್ಲಿ ಶಿವಶಂಕರರೆಡ್ಡಿ (29) ಮತ್ತು ಅವರ ಚಾಲಕ ಅಶೋಕ್ ರೆಡ್ಡಿ (33) ಮೇಲೆ ಗುಂಡಿನ ದಾಳಿ ನಡೆಸಿದ್ದರು. ಕಾಮಗಾರಿಯ ಮೇಲ್ವಿಚಾರಣೆ ನಡೆಸುತ್ತಿದ್ದ ವೇಳೆ ಎರಡು ಬೈಕ್‌ಗಳಲ್ಲಿ ಬಂದ ಆರೋಪಿಗಳು ಬಿಲ್ಡರ್ ಮೇಲೆ ಗುಂಡಿನ ದಾಳಿ ನಡೆಸಿದ್ದರು. ದಾಳಿಯಲ್ಲಿ ಶಿವಶಂಕರ್ ಹಾಗೂ ಅಶೋಕ್ ಅಪಾಯದಿಂದ ಪಾರಾಗಿದ್ದಾರೆ.


ಶಿವಶಂಕರ್ ಚಿತ್ತೂರಿನ ವನಮರೆಡ್ಡಿಗಾರುಪಲ್ಲಿಯ ತುಮ್ಮಲಪಲ್ಲಿಯವರು. ಅವರು ಮತ್ತು ಅವರ ತಂದೆ ಜಯಚಂದ್ರ ರೆಡ್ಡಿ ಅವರಿಗೆ ನೆರೆಹೊರೆಯವರಾದ ಬಯ್ಯಾ ರೆಡ್ಡಿ ಅವರೊಂದಿಗೆ ಮನಸ್ತಾಪವಿತ್ತು. 2011 ರಲ್ಲಿ, ಜಯಚಂದ್ರ ರೆಡ್ಡಿ ಮತ್ತು ಶಿವಶಂಕರ್ ಅವರು ಬಯ್ಯಾನನ್ನು ಕೊಂದಿದ್ದರು. ನಂತರ ಬಯ್ಯಾನ ಸಹಚರರು ಜಯಚಂದ್ರನನ್ನು ಕೊಲೆ ಮಾಡಿದ್ದರು ಎಂದು ವರದಿಯಾಗಿದೆ.


ಪ್ರತೀಕಾರಕ್ಕಾಗಿ ಕೊಲೆ ಪ್ಲಾನ್​


ಶಿವಶಂಕರ್ ತನ್ನ ತಂದೆಯ ಹತ್ಯೆಗೆ ಪ್ರತೀಕಾರವಾಗಿ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂದು ಬಯ್ಯಾನ ಸಹಚರರಿಗೆ ತಿಳಿದುಬಂದಿದೆ. ಹೀಗಾಗಿ ಶಿವಶಂಕರ್‌ ಕೆಆರ್‌ ಪುರಂನಲ್ಲಿ ಅಪಾರ್ಟ್‌ಮೆಂಟ್‌ ನಿರ್ಮಾಣ ಮಾಡುತ್ತಿರುವ ವಿಚಾರ ತಿಳಿದು ಆತನನ್ನು ಕೊಲ್ಲಲು ಇಲ್ಲಿಗೆ ಬಂದಿದ್ದರು ಎಂದು ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ಇದನ್ನೂ ಓದಿ: Moral Policing: ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ; ಭಜರಂಗದಳ ಕಾರ್ಯಕರ್ತರು ಅರೆಸ್ಟ್​


ಗುಂಡಿನ ಗಾಯಗಳ ನಡುವೆಯೂ ಶಿವಶಂಕರ್ ಅವರನ್ನು ಚಾಲಕ ಆಸ್ಪತ್ರೆಗೆ ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದ್ದಾನೆ. ಬಿಲ್ಡರ್ ವಿರುದ್ಧ ಚಿತ್ತೂರಿನ ಮುಡಿವೇಡು ಪೊಲೀಸ್ ಠಾಣೆಯಲ್ಲಿ 6 ಪ್ರಕರಣಗಳು, ಮದನಪಲ್ಲಿ, ತುಮ್ಮಲಪಲ್ಲಿ ಮತ್ತು ವೈಟ್‌ಫೀಲ್ಡ್ ಪೊಲೀಸ್ ಠಾಣೆಗಳಲ್ಲಿ 3 ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

Published by:ಪಾವನ ಎಚ್ ಎಸ್
First published: