ಬೆಂಗಳೂರಿನ ಜೆಪಿ ನಗರ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ; 76 ಲಕ್ಷ ಮೌಲ್ಯದ ಗಾಂಜಾ ಸೀಜ್

ಅಸ್ಗರ್ ಖಾನ್  ಬೆಂಗಳೂರು ಗ್ರಾಮಾಂತರದವನಾಗಿದ್ದು, ಖಾಸಗಿ ಕಂಪನಿಯೊಂದರಲ್ಲಿ ಡ್ರೈವರ್ ಆಗಿದ್ದ. 9 ನೇ ತರಗತಿ ವಿದ್ಯಾಭ್ಯಾಸ ಮಾಡಿದ್ದು, ಡ್ರೈವರ್ ಕೆಲಸ ಮಾಡಿಕೊಂಡೇ ಗಾಂಜಾ ವ್ಯಸನಿಯಾಗಿದ್ದ.

news18-kannada
Updated:September 30, 2020, 1:04 PM IST
ಬೆಂಗಳೂರಿನ ಜೆಪಿ ನಗರ ಪೊಲೀಸರಿಂದ ಭರ್ಜರಿ ಕಾರ್ಯಾಚರಣೆ; 76 ಲಕ್ಷ ಮೌಲ್ಯದ ಗಾಂಜಾ ಸೀಜ್
ಆರೋಪಿಗಳು
  • Share this:
ಬೆಂಗಳೂರು(ಸೆ.30): ಸಿಲಿಕಾನ್‌ ಸಿಟಿಯಲ್ಲಿ ಮಾದಕ ವಸ್ತು ಜಾಲದ ವಿರುದ್ದ ಪೊಲೀಸರು ಸಮರ ಸಾರಿದ್ದಾರೆ. ವಿದೇಶ ಹಾಗೂ ಅಂತರರಾಜ್ಯದಿಂದ ಬರುವ ಡ್ರಗ್ಸ್ ಮತ್ತು ಗಾಂಜಾವನ್ನು ಎಲ್ಲಾ ಕಡೆ ಸೀಜ್ ಮಾಡಲಾಗ್ತಿದೆ. ಹೀಗೆ ಪೆಡ್ಲರ್ ಗಳಿಗೂ ಬಿಸಿ ಮುಟ್ಟಿಸುತ್ತಿದ್ದಾರೆ. ಹೀಗಿರುವಾಗಿ ಜೆ ಪಿ ನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, 76 ಲಕ್ಷ ಬೆಲೆ ಬಾಳುವ 127 ಕೆಜಿ ಮಾದಕ ವಸ್ತು ಜಪ್ತಿ ಮಾಡಿದ್ದಾರೆ. ಅಂತರರಾಜ್ಯ ಪೆಡ್ಲರ್ ಗಳಾದ ಕಿರಣ್ ಜಿ, ಮಹಿಪಾಲ್ ಬಂಧಿತ ಆರೋಪಿಗಳಾಗಿದ್ದಾರೆ. ಈ ಹಿಂದೆ ಗಾಂಜಾ ಕೇಸ್ ಮೇಲೆ ಅಸ್ಗರ್ ಎಂಬಾತ ನನ್ನ ಬಂಧಿಸಲಾಗಿತ್ತು.ಈತ ಕೊಟ್ಟ ಮಾಹಿತಿ ಮೇಲೆ ಕಾರ್ಯಾಚರಣೆ ನಡೆಸಲಾಗಿತ್ತು. ಸದ್ಯ ಅಸ್ಗರ್ ಖಾನ್ ನಿಂದ 649 ಗ್ರಾಂ ತೂಕದ ಗಾಂಜ ಒಂದು ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಈ ಆರೋಪಿಗಳು ತೆಲಂಗಾಣ ರಾಜ್ಯದಿಂದ ಬೀದರ್ ಮೂಲಕ ಬೆಂಗಳೂರಿಗೆ ಗಾಂಜಾ ತರುತ್ತಿದ್ದರು.  ಆರೋಪಿಗಳಿಂದ 127 ಕೆಜಿ ಗಾಂಜಾ, 3 ಮೊಬೈಲ್ ಹ್ಯಾಂಡ್ ಸೆಟ್, ಸ್ವಿಫ್ಟ್ ಕಾರ್ ವಶಕ್ಕೆ ಪಡೆದಿದ್ದಾರೆ.

ಇನ್ನು ಆರೋಪಿಗಳ ಹಿನ್ನಲೆ ನೋಡೋದಾದ್ರೆ,  ಅಸ್ಗರ್ ಖಾನ್  ಬೆಂಗಳೂರು ಗ್ರಾಮಾಂತರದವನಾಗಿದ್ದು, ಖಾಸಗಿ ಕಂಪನಿಯೊಂದರಲ್ಲಿ ಡ್ರೈವರ್ ಆಗಿದ್ದ. 9 ನೇ ತರಗತಿ ವಿದ್ಯಾಭ್ಯಾಸ ಮಾಡಿದ್ದು, ಡ್ರೈವರ್ ಕೆಲಸ ಮಾಡಿಕೊಂಡೇ ಗಾಂಜಾ ವ್ಯಸನಿಯಾಗಿದ್ದ. ಡ್ರೈವರ್ ಕೆಲಸದಿಂದ ಬರುತ್ತಿದ್ದ ಸಂಬಳ ಸಾಲದ ಹಿನ್ನಲೆ  ಕಮಿಷನ್ ಹಣಕ್ಕೆ ಫೆಡ್ಲರ್ ಗಳ ಜೊತೆಗೂಡಿ ಗಾಂಜಾ ಸಪ್ಲೈ ಮಾಡಲು ಮುಂದಾಗಿದ್ದ ಎಂದು ತಿಳಿದು ಬಂದಿದೆ.

ರಾಜ್ಯದ ಕಾರಾಗೃಹಗಳಲ್ಲಿ ಕೋವಿಡ್ -19 ನಿಯಮ ಗಾಳಿಗೆ ತೂರಿದ ಜೈಲಾಧಿಕಾರಿಗಳು

ಬೀದರ್ ನಿಂದ 12 ಕೆಜಿ ಗಾಂಜಾ ತಂದು ಸಹಚರರ ಮೂಲಕ ಸಪ್ಲೈ ಮಾಡುತ್ತಿದ್ದ. ಮೂಲತಃ ತೆಲಂಗಾಣ ನಿವಾಸಿಯಾಗಿರುವ ಕಿರಣ್, ಐಟಿಐ ಮಾಡಿ ಅತಿಥಿ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದ. ಕೋವಿಡ್ 19ನಿಂದ ಸಂಪಾದನೆ ಇಲ್ಲದ ಹಿನ್ನಲೆ ಜಹಿರಾಬಾದ್ ನಿಂದ ಗಾಂಜಾ ತಂದು ಬೀದರ್ ನಲ್ಲಿ ಮಾರಾಟ ಮಾಡುತ್ತಿದ್ದ. ಅಲ್ಲದೆ ಪರಿಚಿತರ ಕಾರನ್ನು ಪಡೆದುಕೊಂಡು ಬೀದರ್ ಮೂಲಕ ಬೆಂಗಳೂರಿಗೂ ಗಾಂಜಾ ತರುತ್ತಿದ್ದ ಎನ್ನಲಾಗಿದೆ.

ಮಹಿಪಾಲ್ ಕೂಡ ಕೋವಿಡ್ 19ನಿಂದ ಕೆಲಸವಿಲ್ಲದೆ ಜಹಿರಾಬಾದ್ ನಿಂದ ಬೀದರ್ ಗೆ ಕಿರಣ್ ಜೊತೆಗೂಡಿ ಗಾಂಜಾ ಸಪ್ಲೈ ಮಾಡಿ ಹಣ ಸಂಪಾದನೆ ಮಾಡುತ್ತಿದ್ದ. ಕೆಲಸವಿಲ್ಲದೆ ಹಣಕ್ಕಾಗಿ ಈ ಮಾರ್ಗ ಹಿಡಿದಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.
Published by: Latha CG
First published: September 30, 2020, 1:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading