Bengaluru Drug Case: 18 ವರ್ಷದೊಳಗಿನವರೇ ಇವರ ಟಾರ್ಗೆಟ್; ಜೆಲ್ಲಿ ರೂಪದಲ್ಲಿ ಮಕ್ಕಳಿಗೆ ಡ್ರಗ್ ಪೂರೈಕೆ!

ಮಕ್ಕಳನ್ನ ಟಾರ್ಗೆಟ್ ಮಾಡಿ ಅವರಿಗಾಗೇ ವಿಶೇಷ ರೀತಿಯಲ್ಲಿ ಡ್ರಗ್ ತಯಾರಿ ಮಾರಾಟ ಮಾಡುತ್ತಿದ್ದ ಇಬ್ಬರು ಡ್ರಗ್ಸ್ ಪೆಡ್ಲರ್​ಗಳು ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ.18 ವರ್ಷದೊಳಗಿನ ಮಕ್ಕಳನ್ನ ಸೆಳೆಯುವ ಸಲುವಾಗಿ ಜೆಲ್ಲಿ ರೂಪದಲ್ಲಿ ಡ್ರಗ್ಸ್ ತಯಾರಿಸಿ ಮಾರಾಟ ಮಾಡಲಾಗುತ್ತಿತ್ತು.

news18-kannada
Updated:September 18, 2020, 12:04 PM IST
Bengaluru Drug Case: 18 ವರ್ಷದೊಳಗಿನವರೇ ಇವರ ಟಾರ್ಗೆಟ್; ಜೆಲ್ಲಿ ರೂಪದಲ್ಲಿ ಮಕ್ಕಳಿಗೆ ಡ್ರಗ್ ಪೂರೈಕೆ!
ನಿಕೋಲಸ್ ಮತ್ತು ಇರ್ಫಾನ್ ಶೇಖ್
  • Share this:
ಬೆಂಗಳೂರು (ಸೆ. 18): ರಾಜ್ಯಾದ್ಯಂತ ಡ್ರಗ್ ಮಾಫಿಯಾ ತನ್ನ ಕಬಂಧ ಬಾಹುಗಳನ್ನು ಚಾಚಿದೆ. ಪೊಲೀಸರು ಡ್ರಗ್ ಜಾಲವನ್ನು ಭೇದಿಸಲು ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ವಿದ್ಯಾರ್ಥಿಗಳು, ಟೆಕ್ಕಿಗಳು, ಗಣ್ಯ ವ್ಯಕ್ತಿಗಳ ಪುತ್ರರು, ನಟ- ನಟಿಯರಿಗೆ ಡ್ರಗ್ ಪೂರೈಕೆ ಮಾಡುತ್ತಿದ್ದ ಡ್ರಗ್ ಪೆಡ್ಲರ್​ಗಳು ಈಗ ಮುಗ್ಧ ಮಕ್ಕಳ ಮೇಲೂ ತಮ್ಮ ವಕ್ರದೃಷ್ಟಿ ನೆಟ್ಟಿದ್ದಾರೆ. ಪುಟ್ಟ ಮಕ್ಕಳನ್ನು ಡ್ರಗ್ಸ್ ಮೋಹದಲ್ಲಿ ಸಿಲುಕಿಸುವ ಸಲುವಾಗಿ ಜೆಲ್ಲಿ ರೂಪದಲ್ಲಿ ಮಾದಕ ವಸ್ತುಗಳನ್ನು ಪೂರೈಕೆ ಮಾಡುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 

ಸ್ಯಾಂಡಲ್ ವುಡ್ ನಟ- ನಟಿಯರ ಮಾದಕಲೋಕದ ಮೋಹವನ್ನು ಬಯಲಿಗೆ ಎಳೆದಿದ್ದ ಸಿಸಿಬಿ ಪೊಲೀಸರು ಇದೀಗ ಮತ್ತೊಂದು ಡ್ರಗ್ ಜಾಲವನ್ನ ಭೇದಿಸಿದ್ದಾರೆ. ಮಕ್ಕಳನ್ನ ಟಾರ್ಗೆಟ್ ಮಾಡಿ ಅವರಿಗಾಗೇ ವಿಶೇಷ ರೀತಿಯಲ್ಲಿ ಡ್ರಗ್ ತಯಾರಿ ಮಾರಾಟ ಮಾಡುತ್ತಿದ್ದ ಇಬ್ಬರು ಡ್ರಗ್ಸ್ ಪೆಡ್ಲರ್​ಗಳು ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. 18 ವರ್ಷದೊಳಗಿನ ಮಕ್ಕಳನ್ನ ಸೆಳೆಯುವ ಸಲುವಾಗಿ ಜೆಲ್ಲಿ ರೂಪದಲ್ಲಿ ಡ್ರಗ್ಸ್ ತಯಾರಿಸಿ ಅದನ್ನು ಮಾರಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.

Bengaluru Drug Case: Bangalore Police Arrested Drug Peddlers who Supplying Jelly Drug to Children.
ಮಕ್ಕಳಿಗೆ ನೀಡುತ್ತಿದ್ದ ಜೆಲ್ಲಿ ರೂಪದ ಡ್ರಗ್ಸ್​


ಇದನ್ನೂ ಓದಿ: ಮೊಬೈಲ್ ಚಾರ್ಜರ್​ನಿಂದ ಗಂಡನ ಕೊಲೆ ಮಾಡಿದ ವಕೀಲೆಗೆ ಜೀವಾವಧಿ ಶಿಕ್ಷೆ

ಬೆಂಗಳೂರಿನ ಎಂ.ಜಿ. ರಸ್ತೆಯ ಆರ್​ಎಸ್​ಐ ಕಾಂಪೌಂಡ್ ಬಳಿ‌ ಇಬ್ಬರು ವ್ಯಕ್ತಿಗಳು ಮಕ್ಕಳು ಸೇವಿಸುವ ಜೆಲ್ಲಿ, LSD ಮತ್ತು XTC ಎಂಬ ಪಿಲ್ಸ್​ಗಳನ್ನ ಮಾರಾಟ ಮಾಡುತ್ತಿದ್ದರಂತೆ. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಸಿಸಿಬಿ ಪೊಲೀಸರು ಜೆ.ಪಿ ನಗರದ ನಿಕೋಲಸ್ ಮತ್ತು ಕೊತ್ತನೂರಿನ ಇರ್ಫಾನ್ ಶೇಖ್ ಎಂಬುವರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳ ಬಳಿ ಎಲ್ ಎಸ್ಡಿ ಪೇಪರ್, ಎಕ್ಸ್ ಟಿಸಿ ಪಿಲ್ಸ್ ಮತ್ತು ಟಿಹೆಚ್ ಸಿ ಮಾತ್ರೆಗಳನ್ನು ಜಪ್ತಿ ಮಾಡಲಾಗಿದೆ.

ಸಿಸಿಬಿ ಪೊಲೀಸರು ಜಪ್ತಿ ಮಾಡಿದ ಡ್ರಗ್ಸ್ ನಲ್ಲಿ ನಾಲ್ಕು ಲಕ್ಷ ಮೌಲ್ಯದ 50 THC- tetra hydro cannabinol-- (ಮಕ್ಕಳಿಗಾಗಿ ಸಿದ್ದಪಡಿಸಿದ ಜೆಲ್ಲಿಗಳು) 34 XTC  ಪಿಲ್ಸ್ ಗಳು ಹಾಗೂ 27 LSD ಪೇಪರ್ ಗಳು ಪತ್ತೆಯಾಗಿವೆ. ಇಬ್ಬರು ಆರೋಪಿಗಳು ಆಶ್ವಿನ್ ಎಂಬಾತನಿಂದ ಡ್ರಗ್ಸ್ ಖರೀದಿ ಮಾಡಿ ನಂತರ ಅವುಗಳನ್ನ ಹೆಚ್ಚಿನ ಬೆಲೆಗೆ ನಗರದ ವಿವಿಧೆಡೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಆಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಂದ ಎರಡು ಮೊಬೈಲ್ ಮತ್ತು ಕಾರು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸಿದ್ದಾರೆ.
Published by: Sushma Chakre
First published: September 18, 2020, 12:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading