ಬೆಂಗಳೂರು ಡ್ರಗ್​ ಕೇಸ್​; ಗೂಢಾಚಾರಿ ಕೆಲಸ ಮಾಡ್ತಿದ್ದ ಎಸಿಪಿ ಮತ್ತು ಕಾನ್ಸ್​​ಟೇಬಲ್ ಅಮಾನತು

ಕಚೇರಿಯ ಅನುಮಾನಿತ ಇನ್ಸ್ ಪೆಕ್ಟರ್ ಹಾಗೂ ಕೆಲ ಸಿಬ್ಬಂದಿಯನ್ನ ವಿಚಾರಿಸಿ ಮೊಬೈಲ್ ಪರಿಶೀಲಿಸಿದ್ದರು. ಆಗ ಮಲ್ಲಿಕಾರ್ಜುನ್ ಮೊಬೈಲ್ ನಲ್ಲಿ ಎಸಿಪಿ ಮುದವಿ ಷೇಕ್ ಫಾಜಿಲ್ ವಕೀಲರೊಂದಿಗೆ ಮಾತನಾಡಿರೋ ಆಡಿಯೋ ಕ್ಲಿಪ್ ಪತ್ತೆಯಾಗಿತ್ತು.

news18-kannada
Updated:September 24, 2020, 2:20 PM IST
ಬೆಂಗಳೂರು ಡ್ರಗ್​ ಕೇಸ್​; ಗೂಢಾಚಾರಿ ಕೆಲಸ ಮಾಡ್ತಿದ್ದ ಎಸಿಪಿ ಮತ್ತು ಕಾನ್ಸ್​​ಟೇಬಲ್ ಅಮಾನತು
ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್
  • Share this:
ಬೆಂಗಳೂರು(ಸೆ.24): ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ್ ತನಿಖೆ ಚುರುಕುಗೊಂಡಿದೆ. ಈ ನಡುವೆ ಪ್ರಕರಣದಲ್ಲಿ ಆರೋಪಿಗಳಿಗೆ ತನಿಖಾ ಮಾಹಿತಿ ಸೋರಿಕೆ ಹಿನ್ನಲೆ‌ ಓರ್ವ ಎಸಿಪಿ ಹಾಗೂ ಹೆಡ್ ಕಾನ್ಸ್ ಟೇಬಲ್ ಇಬ್ಬರಿಗೂ  ತಲೆತಂಡವಾಗಿದೆ. ಹೌದು ಕರ್ತವ್ಯದಲ್ಲಿದ್ದುಕೊಂಡೇ ಆರೋಪಿ ಜೊತೆ ಸ್ನೇಹ ಬೆಳೆಸಿ,  ಗೂಢಾಚಾರಿ ಕೆಲಸ ಮಾಡುತ್ತಿದ್ದರು. ಹಣದಾಸೆಗೆ ಪೊಲೀಸ್ ಕಸ್ಟಡಿಯಲ್ಲಿರೋ ವಿರೇಶ್​​ ಖನ್ನಾಗೆ ಮೊಬೈಲ್ ಕೊಟ್ಟು ಸ್ನೇಹಿತರೊಂದಿಗೆ ಚರ್ಚಿಸಿಲು ಸಹಕಾರ ನೀಡಿದ್ದರು ಎನ್ನಲಾಗಿದೆ. ಮಧ್ಯರಾತ್ರಿ ಹಾಗೂ ಮುಂಜಾನೆ ಸಮಯದಲ್ಲಿ ಫೋನ್ ಕೊಟ್ಟು ಸಿಸಿಬಿ ತನಿಖೆ ಬಗ್ಗೆ ಮಾಹಿತಿ ಸೋರಿಕೆ ಮಾಡಿದ್ದಲ್ಲದೆ, ಎಸ್ಕೇಪ್ ಆಗಿರುವ ಮತ್ತೊಬ್ಭ ಆರೋಪಿ ಶೇಕ್ ಫಾಜಿಲ್ ಕುಟುಂಬಸ್ಥರೊಂದಿಗೆ ಸಂಪರ್ಕ ಬೆಳೆಸಿದ್ದರು ಎಂಬ ಮಾಹಿತಿ ಲಭಿಸಿದೆ. ಎಸಿಪಿ ಮುದವಿ ಮತ್ತು ಹೆಡ್  ಕಾನ್ಸ್ ಟೇಬಲ್ ಮಲ್ಲಿಕಾರ್ಜುನ್ ಅವರಿಂದ ತನಿಖೆ ಬಗ್ಗೆ ಆರೋಪಿ ಪರ ವಕೀಲರಿಗೆ ಮಾಹಿತಿ ಹೋಗಿದೆ ಎನ್ನಲಾಗಿದೆ. ಈ ಹಿಂದೆ ವಿರೇನ್ ಖನ್ನಾನನ್ನು ಎರಡನೇ ಬಾರಿ ವಶಕ್ಕೆ ಪಡೆದಾಗಲೇ ಅನುಮಾನಿಸಿದ್ದ ಅಧಿಕಾರಿಗಳು, ಅಂದಿನಿಂದಲೇ ಆಂತರಿಕ ತನಿಖೆ ನಡೆಸಲು ಶುರುಮಾಡಿದ್ದರು.

ಈಗ‌ ಮತ್ತೆ ಕಸ್ಟಡಿಗೆ ಪಡೆದಾಗ ಹಳೇ ಚಾಳಿಯನ್ನ ಎಸಿಪಿ ಮುಂದುವರೆಸಿದ್ದರು ಎನ್ನಲಾಗಿದೆ. ಡ್ಯೂಟಿಯಲ್ಲಿರುವಾಗಲೇ ಶೇಕ್​ ಫಾಜಿಲ್ ಮನೆಗೆ ಹೋಗಿ ಕುಟುಂಬಸ್ಥರು ಮತ್ತು ವಕೀಲರಿಗೆ ಪೇದೆ ಮಲ್ಲಿಕಾರ್ಜುನ್ ಮಾಹಿತಿ ಕೊಡ್ತಿದ್ದ. ಕಳೆದ ಮೂರು ದಿನದಿಂದ‌ ಈ ಬಗ್ಗೆ ಬಹಳ ಗಂಭೀರವಾಗಿ ತನಿಖೆ ನಡೆಸಲಾಗಿತ್ತು.

Business Ideas: ಕೆಲಸವಿಲ್ಲದೇ ಮನೆಯಲ್ಲಿ ಕುಳಿತಿದ್ದೀರಾ?; ಗ್ರಾಮೀಣ ಭಾಗದ ಯುವಕರಿಗೆ ಕೆಲವೊಂದು ಬ್ಯುಸಿನೆಸ್​ ಟಿಪ್ಸ್​​

ಕಚೇರಿಯ ಅನುಮಾನಿತ ಇನ್ಸ್ ಪೆಕ್ಟರ್ ಹಾಗೂ ಕೆಲ ಸಿಬ್ಬಂದಿಯನ್ನ ವಿಚಾರಿಸಿ ಮೊಬೈಲ್ ಪರಿಶೀಲಿಸಿದ್ದರು. ಆಗ ಮಲ್ಲಿಕಾರ್ಜುನ್ ಮೊಬೈಲ್ ನಲ್ಲಿ ಎಸಿಪಿ ಮುದವಿ ಷೇಕ್ ಫಾಜಿಲ್ ವಕೀಲರೊಂದಿಗೆ ಮಾತನಾಡಿರೋ ಆಡಿಯೋ ಕ್ಲಿಪ್ ಪತ್ತೆಯಾಗಿತ್ತು.

ಬಳಿಕ ಎಸಿಪಿ ಮತ್ತು ಮಲ್ಲಿಕಾರ್ಜುನ್ ತೀವ್ರ ವಿಚಾರಣೆ ನಡೆಸಿದಾಗ ಗೂಡಾಚಾರಿ ಕೆಲಸ ಮಾಡಿರೋದು ಬೆಳಕಿಗೆ ಬಂದಿದೆ. ಸದ್ಯ ಎಸಿಪಿ ಮತ್ತು ಕಾನ್ಸ್ ಟೇಬಲ್ ಇಬ್ಬರನ್ನೂ ಅಮಾನತು ಮಾಡಲಾಗಿದೆ.
Published by: Latha CG
First published: September 24, 2020, 1:48 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading