ಚಾಕು ಇರಿದು ಬೆಂಗಳೂರಿನ ವೃದ್ಧ ದಂಪತಿಯ ಬರ್ಬರ ಕೊಲೆ; ಡಬಲ್ ಮರ್ಡರ್ ಹಿಂದಿದೆಯಾ ಪರಿಚಿತರ ಕೈವಾಡ?

Bangalore Crime: ಗರುಡಾಚಾರ್ ಪಾಳ್ಯದಲ್ಲಿ 17 ವರ್ಷಗಳಿಂದ ವಾಸವಾಗಿದ್ದ ಈ ದಂಪತಿಯನ್ನು ಬುಧವಾರ ರಾತ್ರಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಹಾಲ್​ನಲ್ಲಿ ಮಲಗಿದ್ದ ಚಂದ್ರೇಗೌಡ ಮತ್ತು ರೂಂನಲ್ಲಿ ಮಲಗಿದ್ದ ಲಕ್ಷ್ಮಮ್ಮ ಅವರನ್ನು ಕೊಲೆ ಮಾಡಲಾಗಿತ್ತು.

Sushma Chakre | news18-kannada
Updated:October 18, 2019, 12:45 PM IST
ಚಾಕು ಇರಿದು ಬೆಂಗಳೂರಿನ ವೃದ್ಧ ದಂಪತಿಯ ಬರ್ಬರ ಕೊಲೆ; ಡಬಲ್ ಮರ್ಡರ್ ಹಿಂದಿದೆಯಾ ಪರಿಚಿತರ ಕೈವಾಡ?
ಚಂದ್ರೇಗೌಡ- ಲಕ್ಷ್ಮಮ್ಮ
  • Share this:
ಬೆಂಗಳೂರು (ಅ. 18): ಬೆಂಗಳೂರಿನ ಗರುಡಾಚಾರ್​ಪಾಳ್ಯದಲ್ಲಿ ಬುಧವಾರ ರಾತ್ರಿ ನಡೆದ ವೃದ್ಧ ದಂಪತಿಯ ಭೀಕರ ಕೊಲೆಗೆ ಸಿಲಿಕಾನ್ ಸಿಟಿ ಬೆಚ್ಚಿಬಿದ್ದಿತ್ತು. ಆ ಪ್ರಕರಣದ ಬೆನ್ನು ಹತ್ತಿರುವ ಮಹದೇವಪುರ ಪೊಲೀಸರು ಪರಿಚಿತರಿಂದಲೇ ಈ ಕೊಲೆ ನಡೆದಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಬುಧವಾರ ರಾತ್ರಿ ವೃದ್ದ ದಂಪತಿಯನ್ನು ಬರ್ಬರವಾಗಿ ಕೊಲೆ ಮಾಡಿ, ದರೋಡೆ ಮಾಡಲಾಗಿತ್ತು. ಗರುಡಾಚಾರ್​ಪಾಳ್ಯದ ಆರ್​ಎಚ್​ಬಿ ಕಾಲೋನಿಯ 63 ವರ್ಷದ ಚಂದ್ರೇಗೌಡ ಮತ್ತು ಅವರ ಪತ್ನಿ 55 ವರ್ಷದ ಲಕ್ಷ್ಮಮ್ಮ ಕೊಲೆಯಾದ ದಂಪತಿ. ಲಕ್ಷ್ಮಮ್ಮ ಮತ್ತು ಚಂದ್ರೇಗೌಡ ದಂಪತಿ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನವರಾಗಿದ್ದು, ಮಕ್ಕಳಿಲ್ಲದ ಈ ದಂಪತಿ ಒಂದು ಹೆಣ್ಣು ಮಗುವನ್ನು ದತ್ತು ಪಡೆದಿದ್ದರು. ಆ ಸಾಕುಮಗಳಿಗೂ ಮದುವೆಯಾಗಿತ್ತು.

ಗರುಡಾಚಾರ್ ಪಾಳ್ಯದಲ್ಲಿ 17 ವರ್ಷಗಳಿಂದ ವಾಸವಾಗಿದ್ದ ಈ ದಂಪತಿಯನ್ನು ಬುಧವಾರ ರಾತ್ರಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಐದಾರು ಮನೆಗಳನ್ನು ಬಾಡಿಗೆಗೆ ನೀಡಿ ಒಂದು ಮನೆಯಲ್ಲಿ ವಾಸವಾಗಿದ್ದ ಈ ವೃದ್ದ ದಂಪತಿಯನ್ನು ಬುಧವಾರ ಮನೆಯಲ್ಲಿ ಕೊಲೆ ಮಾಡಲಾಗಿತ್ತು. ಹಾಲ್​ನಲ್ಲಿ ಮಲಗಿದ್ದ ಚಂದ್ರೇಗೌಡ ಮತ್ತು ರೂಂನಲ್ಲಿ ಮಲಗಿದ್ದ ಲಕ್ಷ್ಮಮ್ಮ ಅವರನ್ನು ಕೊಲೆ ಮಾಡಲಾಗಿತ್ತು. ನಂತರ ರೂಮಿನ ಬೀರು ಬಾಗಿಲು ತೆಗೆದು ಬಟ್ಟೆಗಳನ್ನು ಚೆಲ್ಲಾಡಿದ್ದ ಕಳ್ಳರು ಆ ಬಟ್ಟೆಗಳನ್ನು ಲಕ್ಷ್ಮಮ್ಮ ಅವರ ಮೈಮೇಲೆ ಹಾಕಿದ್ದರು. ನಂತರ ಮನೆ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿಕೊಂಡು ಹೋಗಿದ್ದರು.

ಮೂರು ಕರುಗಳಿಗೆ ಜನ್ಮ ನೀಡಿದ ಹಸು; ಚಿಕ್ಕಮಗಳೂರಿನಲ್ಲಿ ಅಪರೂಪದ ಘಟನೆ

ಕೊಲೆಗೂ ಮೊದಲು ಈ ದಂಪತಿಯ ಮನೆಗೆ ಅತಿಥಿಗಳು ಬಂದಿದ್ದ ಬಗ್ಗೆ ಅಕ್ಕಪಕ್ಕದ ಮನೆಯವರು ಮಾಹಿತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ಯಾರೋ ಪರಿಚಿತರಿಂದಲೇ ಈ ಕೃತ್ಯ ನಡೆದಿರುವ ಬಗ್ಗೆ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಕೊಲೆಯಾದ ದಿನ ರಾತ್ರಿ ಮನೆಯಲ್ಲಿ ಮಗುವಿನ ಜೊತೆ ಆಟವಾಡುತ್ತಿದ್ದ ಚಂದ್ರೇಗೌಡರನ್ನು ಪಕ್ಕದ ಅಂಗಡಿಯ ಮಹಿಳೆ ಮಾತನಾಡಿಸಿದ್ದರು. 'ಯಾರೋ ನೆಂಟರು ಬಂದ ಹಾಗಿದ್ಯಲ್ಲ, ಮಗು ಅಳ್ತಾ ಇರೋ ಶಬ್ದ ಕೇಳ್ತಾ ಇದೆ' ಎಂದು ಆಕೆ ಕೇಳಿದ್ದರು.

ಆಗ ಆಕೆಗೆ ಉತ್ತರ ನೀಡಿದ್ದ ಚಂದ್ರೇಗೌಡ, 'ಹೌದು ಬಂದಿದ್ದಾರೆ, ದಸರಾಗೆ ಸ್ವೀಟ್ ತಂದು ಕೊಟ್ಟಿದ್ರಲ್ಲ ಅವರು ಬಂದಿದ್ದಾರೆ.ಮಗು ಇದೆ, ಆಟವಾಡ್ತಿದೆ' ಎಂದಿದ್ದರು. ಆ ಅತಿಥಿಗಳಾರು ಎಂಬ ಬಗ್ಗೆ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಆಸ್ತಿ ವಿಚಾರಕ್ಕೆ ಕೊಲೆ ನಡೆದಿರೋ ಶಂಕೆ ವ್ಯಕ್ತವಾಗಿದ್ದು, ಕೊಲೆ ಆರೋಪಿಗಳ ಪತ್ತೆಗೆ ಮೂರು ತಂಡ ರಚಿಸಲಾಗಿದೆ.

(ವರದಿ: ಮುನಿರಾಜು)
First published:October 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading