• Home
  • »
  • News
  • »
  • state
  • »
  • Anti-Cancer Drug: ಸಸ್ಯಾಧಾರಿತ ಕ್ಯಾನ್ಸರ್ ಔಷಧ ತಯಾರಿಸಿದ ಬೆಂಗಳೂರಿನ ವೈದ್ಯರು! ಗಿಡಮೂಲಿಕೆ ಸಿಕ್ಕಿದ್ದು ರಾಮನಗರದಲ್ಲಿ

Anti-Cancer Drug: ಸಸ್ಯಾಧಾರಿತ ಕ್ಯಾನ್ಸರ್ ಔಷಧ ತಯಾರಿಸಿದ ಬೆಂಗಳೂರಿನ ವೈದ್ಯರು! ಗಿಡಮೂಲಿಕೆ ಸಿಕ್ಕಿದ್ದು ರಾಮನಗರದಲ್ಲಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬೆಂಗಳೂರಿನ ವೈದ್ಯರು ಸಸ್ಯಾಧಾರಿತ ಕ್ಯಾನ್ಸರ್ ಔಷಧ ಅಭಿವೃದ್ಧಿಪಡಿಸಿದ್ದಾರೆ. ವಿಶೇಷವೆಂದರೆ ಈ ಗಿಡಮೂಲಿಕೆ ಸಿಕ್ಕಿರುವುದು ರಾಮನಗರದಲ್ಲಿ.

  • News18 Kannada
  • Last Updated :
  • Bangalore, India
  • Share this:

ಬೆಂಗಳೂರು(ನ.06): ಕ್ಯಾನ್ಸರ್​ಗೆ ಔಷಧಿ (Anti-Cancer Drug) ಪತ್ತೆ ಹಚ್ಚುವುದು ಬಹಳಷ್ಟು ವರ್ಷಗಳಿಂದ ವೈದ್ಯಕೀಯ ಕ್ಷೇತ್ರಕ್ಕೆ ದೊಡ್ಡ ಸವಾಲಾಗಿತ್ತು. ಈ ಬಗ್ಗೆ ನಿರಂತರ ಸಂಶೋಧನೆ ನಡೆಯುತ್ತಲೇ ಇದೆ. ಕ್ಯಾನ್ಸರ್ ವಿರೋಧಿ ಔಷಧ ಪತ್ತೆಗೆ ದೊಡ್ಡ ಮಟ್ಟದಲ್ಲಿ ಸಂಶೋಧನೆ, ಪ್ರಯೋಗಗಳಾಗಿವೆ. ಇದೀಗ ಬೆಂಗಳೂರು  (Bengaluru) ಮೂಲದ ಓಂಕೋಲಜಿಸ್ಟ್ (Oncologist) ಹಾಗೂ ಅವರ ತಂಡ ಕ್ಯಾನ್ಸರ್ ಚಿಕಿತ್ಸೆಗೆ ಸಸ್ಯಾಧಾರಿತ ಔಷಧ ಅಭುವೃದ್ಧಿಪಡಿಸಿದ್ದಾರೆ. ಇದ ರೋಗಿಗಳಿಗೆ ಬಳಸಲು ಆಯುಷ್ ಸಚಿವಾಲಯ (Ministry Of Ayush) ಅನುಮತಿಯನ್ನೂ ಕೊಟ್ಟಿದೆ.


ಬೆಂಗಳೂರಿನಲ್ಲಿ ಸರ್ಜಿಕಲ್ ಓಂಕೋಲಜಿಸ್ಟ್ ಆಗಿರುವ ಡಾ. ವಿಶಾಲ್ ರಾವ್ (Dr. Vishal Rao) ಹಾಗೂ ಫಾರ್ಮಕಾಲಜಿಸ್ಟ್ ಶ್ರೀನಿವಾಸ್ ಎಚ್, ಸಂಶೋಧನೆ ಹಾಗೂ ಅಭಿವೃದ್ಧಿ, ವೆಂಕಟ್ ಫಾರ್ಮ ಸಂಯೋಗದಲ್ಲಿ ಕ್ಯಾಪ್ಕನ್ ಅಭಿವೃದ್ಧಿಪಡಿಸಿದ್ದಾರೆ. ಸಿಮರೋಬಾ ಗಿಡದಲ್ಲಿರುವ ಕ್ಯಾನ್ಸರ್ ವಿರೋಧಿ ಅಂಶಗಳನ್ನು ಬಳಸಿ ಈ ಔಷಧ ಅಭಿವೃದ್ಧಿಪಡಿಸಲಾಗಿದೆ.


ಗ್ಲೈಕೋಲೈಟಿಕ್ ವಿಧಾನ ಗುರಿಯಾಗಿಸುವ ಕ್ಯಾನ್ಸರ್ ವಿರೋಧಿ ಏಜೆಂಟ್‌ಗಳಿಗೆ ಇದರ ಪೇಟೆಂಟ್ ಮಾಡಲಾಗಿದೆ. ರಾಮನಗರದಲ್ಲಿ ಸಿಮರೋಬಾ ಸಸ್ಯ ಕಂಡುಬರುತ್ತದೆ. ರಾಮನಗರದ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಾಜ್ಯ ಜೈವಿಕ ತಂತ್ರಜ್ಞಾನ ಸಚಿವ ಸಿಎನ್ ಅಶ್ವಥ್ ನಾರಾಯಣ್ ಅವರು ಸಸ್ಯ ಆಧಾರಿತ ಸಂಶೋಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


2016ರಲ್ಲಿ ಆರಂಭವಾಗಿತ್ತು ಸಂಶೋಧನೆ


2016 ರಲ್ಲಿ ಸಂಶೋಧನೆ ಪ್ರಾರಂಭವಾಯಿತು. ಕ್ಯಾನ್ಸರ್ ಕೋಶಗಳು ಅಗಾಧ ಪ್ರಮಾಣದ ಸಕ್ಕರೆ ಮಟ್ಟವನ್ನು ಬಳಸಿಕೊಂಡು ಹೇಗೆ ಬೆಳೆಯುತ್ತವೆ, ಮೈಟೊಕಾಂಡ್ರಿಯಾವನ್ನು ಬೈಪಾಸ್ ಮಾಡುವ ಮೂಲಕ ಕ್ಯಾನ್ಸರ್ ಕೋಶ ಬೆಳೆಯುವ ಬಗ್ಗೆ ನಾವು ಸಂಶೋಧನೆ ಮಾಡುತ್ತಿದ್ದೆವು. ನಾವು ಅಭಿವೃದ್ಧಿಪಡಿಸಿದ ತತ್ವವನ್ನು ಅನುಮೋದಿಸಲಾಗಿದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿಷ್ಠಿತ ಜರ್ನಲ್‌ನಲ್ಲಿ ಈ ವಿಚಾರವನ್ನು ಪ್ರಕಟಿಸಲಾಗಿದೆ.


ಗಿಡ ಮೂಲಿಕೆ ಆಯ್ಕೆ ಮತ್ತು ಮಿಶ್ರಣ


ನಂತರದ ಪ್ರಯತ್ನವು ಒಂದೇ ರೀತಿಯ ಗುಣಲಕ್ಷಣಗಳನ್ನು ತೋರಿಸುವ ಗಿಡ ಮೂಲಿಕೆಯನ್ನು ಹುಡುಕುವುದಾಗಿತ್ತು. ಸಿಮರೋಬಾ ಹಲವಾರು ಕ್ಯಾನ್ಸರ್-ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವ ಕುರಿತು ಮಾತುಕತೆಗಳು ನಡೆದಿದ್ದವು. ಇದರಲ್ಲಿ 40  ಜಾತಿಗಳಿವೆ. ಔಷಧಶಾಸ್ತ್ರಜ್ಞ ಶ್ರೀನಿವಾಸ ಅವರು ಸರಿಯಾದ ಸಸ್ಯವನ್ನು ಗುರುತಿಸಿದರು. ಸಾವಯವ ರಸಾಯನಶಾಸ್ತ್ರ ಪಿಎಚ್‌ಡಿ ಹೊಂದಿರುವ ಗಣೇಶ್ ಎಸ್ ಅವರು ಈ ಔಷಧ ಸಂಯೋಜನೆಯ ಸಿನರ್ಜಿಯು ಸಂಪೂರ್ಣ ಮೂಲಿಕೆ ಸಾರದಿಂದ ಬರುತ್ತದೆ ಎಂದು ಸಲಹೆ ನೀಡಿದರು. ಇವೆಲ್ಲವೂ ಒಟ್ಟಾಗಿ ಔಷಧ ಮಿಶ್ರಣವನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಿತು ಎಂದು ಡಾ ರಾವ್ ಹೇಳಿದರು.


ಇದನ್ನೂ ಓದಿ: Breast Cancer: ಸ್ತನ ಕ್ಯಾನ್ಸರ್‌ ಎಂದರೇನು? ಬೇಗ ಗುಣಪಡಿಸೋದು ಹೇಗೆ? ಇಲ್ಲಿದೆ ಮಾಹಿತಿ


ವಾಂತಿ ತಡೆಯುವ, ಹಸಿವು ಸುಧಾರಿಸುವ ಕೆಲವು ಪ್ರಬಲ ಗಿಡಮೂಲಿಕೆಗಳ ಸಿನರ್ಜಿಯನ್ನು ತಂಡವು ಬಳಸಿಕೊಂಡಿದೆ. ಜೀರ್ಣಕಾರಿ ರಸವನ್ನು ಸ್ರವಿಸುವ ಮೂಲಕ ಹೀರಿಕೊಳ್ಳುವಿಕೆಯನ್ನು ಸುಧಾರಿಸುವ ಕರಿಮೆಣಸು, ಇಮ್ಯುನ್ ಮಾಡ್ಯುಲೇಟರ್ ಕಡಿಮೆ ಮಾಡುವ ಟುಟಾವನ್ನು ಬಳಸಲಾಗಿದೆ. ಇದು ಕ್ಯಾನ್ಸರ್ ಕೋಶಗಳಿಂದ ಸಕ್ಕರೆ ಅಂಶ ಹೀರಿಕೊಳ್ಳುತ್ತದೆ. ಅಶ್ವಗಂಧ ಗೆಡ್ಡೆ-ಸಂಬಂಧಿತ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇವೆಲ್ಲದರ ಸಾರವನ್ನು ಔಷಧದಲ್ಲಿ ಬಳಸಲಾಗಿದೆ.


flash radiation therapy shows good result for bone cancer
ಸಾಂದರ್ಭಿಕ ಚಿತ್ರ


ಮಾನವ ದೇಹದ ಹೊರಗಿನ ಕ್ಯಾನ್ಸರ್ ಕೋಶಗಳ ಮೇಲೆ ಈ ಮಿಶ್ರಣವನ್ನು ಪ್ರಯೋಗಿಸಲಾಗಿದೆ. ಇದರಲ್ಲಿ ಕಂಡುಬಂದ ಫಲಿತಾಂಶಗಳು ಭರವಸೆ ಮೂಡಿಸಿದೆ. ಪ್ರತಿರಕ್ಷಣಾ ವ್ಯವಸ್ಥೆಗೆ ತೊಂದರೆಯಾಗದಂತೆ, ಕ್ಯಾನ್ಸರ್ ಕೋಶಗಳ ಗ್ಲೂಕೋಸ್ ಚಯಾಪಚಯವನ್ನು ಕಡಿತಗೊಳಿಸದೆ. ಕೀಮೋಥೆರಪಿ ಔಷಧಿಗಳ ರಾಸಾಯನಿಕ ಅಡ್ಡ-ಪರಿಣಾಮವನ್ನು ಕಡಿಮೆ ಮಾಡುವ ಅತ್ಯುತ್ತಮವಾದ ಕ್ಯಾನ್ಸರ್ ವಿರೋಧಿ ಪರಿಣಾಮವನ್ನು ಹೊಂದಿರುವ ಮಿಶ್ರಣವನ್ನು ಅಭಿವೃದ್ಧಿಪಡಿಸಿದ್ದೇವೆ ಎಂದಿದ್ದಾರೆ.


Why is the risk of cancer higher in men and how it is formed here know
ಸಾಂದರ್ಭಿಕ ಚಿತ್ರ


ಅನೇಕ ಯುರೋಪಿಯನ್ ದೇಶಗಳು ಈ ಉತ್ಪನ್ನದಲ್ಲಿ ಆಸಕ್ತಿಯನ್ನು ವ್ಯಕ್ತಪಡಿಸಿವೆ. ನಮ್ಮೊಂದಿಗೆ ಸಹಕರಿಸುತ್ತಿವೆ ಎಂದು ಅವರು ಹೇಳಿದರು. ಇದು ಘನ ಕ್ಯಾನ್ಸರ್ ಮತ್ತು ಲ್ಯುಕೇಮಿಯಾಕ್ಕೆ ಪರಿಣಾಮಕಾರಿ ಎಂದು ಕಂಡುಬಂದಿದೆ.


ಇದನ್ನೂ ಓದಿ: Breast Cancer: ಸ್ತನ ಕ್ಯಾನ್ಸರ್ ಬರಲು ಇದೇ ಕಾರಣವಂತೆ, ಅದರ ಲಕ್ಷಣಗಳು ಇಲ್ಲಿದೆ


ರಾಮನಗರ ಮೂಲದ ವೆಂಕಟ್ ಫಾರ್ಮಾ ಈ ಔಷಧವನ್ನು ತಯಾರಿಸಿದೆ. ನಾವು ಅಂದುಕೊಂಡಿದ್ದನ್ನು ನಾವು ಸಾಧಿಸಿದ್ದೇವೆ. ಕ್ಯಾನ್ಸರ್ ಕೋಶವನ್ನು ಕೊಲ್ಲುವುದು, ಪ್ರತಿರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸುವುದು, ಗೆಡ್ಡೆಯನ್ನು ಸ್ವಲ್ಪಮಟ್ಟಿಗೆ ಕುಗ್ಗಿಸುವುದು ನಮ್ಮ ಉದ್ದೇಶವಾಗಿತ್ತು. ಇದು ಕಿಮೊಥೆರಪಿಯ ದೊಡ್ಡ ಡೋಸ್ನಷ್ಟು ತೀವ್ರವಾಗಿರದೆ ಇರಬಹುದು. ಇದು ಯಾವುದಕ್ಕೂ ಬದಲಿ ಅಲ್ಲ. ಆದರೆ ವಿಜ್ಞಾನದ ವಿಧಾನವನ್ನು ಮರುಚಿಂತನೆ ಮಾಡುವಲ್ಲಿ ಇದು ಒಂದು ದೊಡ್ಡ ಹೆಜ್ಜೆಯಾಗಿದೆ ಎಂದು ಅವರು ಹೇಳಿದ್ದಾರೆ.

Published by:Divya D
First published: