Bengaluru: ಮಹಿಳೆಯ ಕಣ್ಣು, ಮೂಗಿನಲ್ಲಿದ್ದವಂತೆ 145 ಹುಳಗಳು!

ರೋಗಿಯೊಬ್ಬರ ಮೂಗಿನಿಂದ 110 ಹುಳಗಳು ಹಾಗೂ ಎಡಗಣ್ಣಿನಿಂದ 35 ಹುಳಗಳನ್ನು ಹೊರೆತೆಗೆಯುವಲ್ಲಿ ವೈದ್ಯರಾದ ಮಂಜುನಾಥ್ ಎಮ್‌ಕೆ ಹಾಗೂ ಅವರ ತಂಡ ಯಶಸ್ವಿಯಾಗಿದೆ. ಮಹಿಳೆಯನ್ನು ಆಸ್ಪ್ರತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ, ಆದರೆ ಮಹಿಳೆಯು ತಮ್ಮ ಎಡಗಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. 

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಬೆಂಗಳೂರಿನ (Bengaluru) ಎಸ್‌ಎಸ್ ಸ್ಪರ್ಶ ಆಸ್ಪತ್ರೆಯ ವೈದ್ಯರು 65 ರ ಹರೆಯದ ಮಹಿಳೆಯ ಮೂಗಿನಿಂದ ಹಾಗೂ ಎಡಗಣ್ಣಿನಿಂದ ಹುಳಗಳನ್ನು (Worms) ಹೊರತೆಗೆದಿದ್ದು ಮಹಿಳೆಯು ಈ ಮೊದಲು ಕಪ್ಪು ಶಿಲೀಂಧ್ರ (Black fungus) ಸೋಂಕಿನಿಂದ ಬಳಲುತ್ತಿದ್ದರು ಹಾಗೂ ಸತ್ತ ಅಂಗಾಂಶವನ್ನು ತೆಗೆದುಹಾಕಲು ಶಸ್ತ್ರಕ್ರಿಯೆಗೆ ಒಳಗಾಗಿದ್ದರು ಎನ್ನಲಾಗಿದೆ. ಮೂಗಿನಿಂದ (Nose) 110 ಹುಳಗಳು ಹಾಗೂ ಎಡಗಣ್ಣಿನಿಂದ (left eye) 35 ಹುಳಗಳನ್ನು ಹೊರೆತೆಗೆಯುವಲ್ಲಿ ವೈದ್ಯರಾದ ಮಂಜುನಾಥ್ ಎಮ್‌ಕೆ ಹಾಗೂ ಅವರ ತಂಡ ಯಶಸ್ವಿಯಾಗಿದೆ. ಮಹಿಳೆಯನ್ನು (Women) ಆಸ್ಪ್ರತ್ರೆಯಿಂದ ಡಿಸ್ಚಾರ್ಜ್ ಮಾಡಿದ್ದು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ, ಆದರೆ ಮಹಿಳೆಯು ತಮ್ಮ ಎಡಗಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. 

ಕೋವಿಡ್-19 ನಿಂದ ಬಳಲುತ್ತಿದ್ದ ರೋಗಿ
ಮೂಲತಃ ತಮಿಳುನಾಡಿನವರಾದ ಮಹಿಳೆ ಆರು ತಿಂಗಳ ಹಿಂದೆ ಕೋವಿಡ್-19 ಸೋಂಕಿನಿಂದ ಬಳಲುತ್ತಿದ್ದರು ಹಾಗೂ ಕಪ್ಪು ಶಿಲೀಂಧ್ರ ಸೋಂಕಿಗೆ ಒಳಗಾಗಿದ್ದರು. ಮೂಗಿನಿಂದ ಸತ್ತ ಅಂಗಾಂಶವನ್ನು ಹೊರತೆಗೆಯಲು ಮಹಿಳೆಯು ಶಸ್ತ್ರಕ್ರಿಯೆಗೆ ಒಳಗಾಗಿದ್ದರು. ಆದರೆ ಶಸ್ತ್ರಕ್ರಿಯೆಯಿಂದ ಮೂಗಿನ ಒಳಭಾಗದಲ್ಲಿ ವಿಶಾಲವಾದ ಕುಳಿ ನಿರ್ಮಾಣಗೊಂಡಿತ್ತು. ಕಪ್ಪು ಶಿಲೀಂಧ್ರದ ಚಿಕಿತ್ಸೆಯು ಮೃತ ಅಂಗಾಂಶವನ್ನು ಹೊರತೆಗೆಯುವ ಚಿಕಿತ್ಸೆಯನ್ನು ಒಳಗೊಂಡಿತ್ತು.

ಇದು ಮೂಗಿನ ಕುಳಿಯನ್ನು ಮತ್ತಷ್ಟು ಆಳವಾಗಿಸಿದ್ದು ಸ್ರವಿಸುವಿಕೆಯನ್ನು ನಿಶ್ಚಲಗೊಳಿಸುತ್ತದೆ ಮತ್ತು ಸೋಂಕಿಗೆ ಮುಖ್ಯಕಾರಣವಾಗುತ್ತದೆ ಎಂದು ವೈದ್ಯರಾದ ಮಂಜುನಾಥ್ ತಿಳಿಸಿದ್ದಾರೆ. ವೈದ್ಯರು ಸ್ಪರ್ಶೆ ಆಸ್ಪತ್ರೆಯಲ್ಲಿ ಇಎನ್‌ಟಿ ಸರ್ಜನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಮೂಗಿನಿಂದ ಒಸರುತ್ತಿರುವ ರಕ್ತಸ್ರಾವ ಹಾಗೂ ಹುಳಗಳು
ಮಹಿಳೆಯು ಕಳೆದ ತಿಂಗಳು ಆಸ್ಪತ್ರೆಗೆ ಆಗಮಿಸಿದ್ದು ಆ ಸಮಯದಲ್ಲಿ ಮೂಗಿನಿಂದ ರಕ್ತಸ್ರಾವವಾಗುತ್ತಿತ್ತು ಹಾಗೂ ಹುಳಗಳು ಮೂಗಿನಿಂದ ಹೊರಬರುತ್ತಿದ್ದವು. ತಮ್ಮ ಎಡಗಣ್ಣಿನ ದೃಷ್ಟಿದೋಷದ ಬಗ್ಗೆ ಕೂಡ ಮಹಿಳೆ ವೈದ್ಯರಿಗೆ ತಿಳಿಸಿದ್ದು ಆಗಸ್ಟ್ 29-30 ರಂದು ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ:Accident: 'ಸಿಡಿಲೇ ಬರಲಿ ಏನೇ ಬರಲಿ ನಾನು ಜಗ್ಗೋಲ್ಲ' ಅಂತಾನೇ ಈ ಭೂಪ! 

ಹುಳಗಳು ಕಣ್ಣುಗುಡ್ಡೆಯನ್ನು ನಾಶಪಡಿಸಿರುವುದು ಹಾಗೂ 10-12 ವರ್ಷಗಳಿಂದ ಮೂಗಿನಲ್ಲಿರುವುದನ್ನು ತಾವು ಕಂಡುಕೊಂಡಿರುವುದು ಇದೇ ಮೊದಲ ಬಾರಿಗೆ ಎಂದು ವೈದ್ಯರಾದ ಮಂಜುನಾಥ್ ತಿಳಿಸಿದ್ದಾರೆ. ಕಣ್ಣಿನಿಂದ ಮೂಗನ್ನು ಬೇರ್ಪಡಿಸುವ ಮೂಳೆಯನ್ನು ನಾಶಪಡಿಸಿ ಮಹಿಳೆಯ ಕಣ್ಣನ್ನು ಹುಳಗಳು ಪ್ರವೇಶಿಸಿವೆ ಎಂದು ವೈದ್ಯರು ತಿಳಿಸಿದ್ದಾರೆ.

ಮ್ಯೂಕಾರ್ಮೈಕೋಸಿಸ್ ಶಿಲೀಂಧ್ರ
ಇಂತಹುದ್ದೇ ಘಟನೆ ಹೈದ್ರಾಬಾದ್‌ನ ಗುಂಟೂರು ಜಿಲ್ಲೆಯಿಂದ ಕೂಡ ವರದಿಯಾಗಿದ್ದು ಕೋವಿಡ್-19 ಗೆ ಒಳಗಾಗಿದ್ದ 65 ರಹರೆಯದ ಮಹಿಳೆಯೊಬ್ಬರು ಮ್ಯೂಕಾರ್ಮೈಕೋಸಿಸ್ ಹೆಸರಿನ ಶಿಲೀಂಧ್ರ ಸೋಂಕಿಗೆ ಒಳಗಾಗಿ ಬಲಗಣ್ಣಿನ ದೃಷ್ಟಿಯನ್ನೇ ಕಳೆದುಕೊಂಡಿದ್ದರು.

ದೇಹದ ಒಳಭಾಗದಲ್ಲಿ ಹುಳಗಳು ಕಂಡುಬರಲು ಕಾರಣವೇನು ಎಂಬುದನ್ನು ವೈದ್ಯರು ತಿಳಿಸಿದ್ದು ಸಾಮಾನ್ಯವಾಗಿ ಸೊಳ್ಳೆ ಅಥವಾ ಇತರ ಕೀಟಗಳು ನಮ್ಮ ತ್ವಚೆಯ ಮೇಲೆ ಕುಳಿತಾಗ ಅಥವಾ ಅವು ಕಡಿದಾಗ ನಾವು ಸಂವೇದನೆಯನ್ನು ಪಡೆಯುತ್ತೇವೆ ಹಾಗೂ ಅದನ್ನು ನಿವಾರಿಸಲು ಪ್ರಯತ್ನಿಸುತ್ತೇವೆ.

ಇದನ್ನೂ ಓದಿ: Viral News: ಮದ್ವೆಯಾಗಿ 8 ವರ್ಷದ ಮೇಲೆ ಗೊತ್ತಾಯ್ತು, ಆಕೆ ಮದ್ವೆಯಾಗಿದ್ದು ಗಂಡಸನ್ನಲ್ಲ ಹೆಂಗಸನ್ನ ಅಂತ!

ಆದರೆ ಮ್ಯೂಕಾರ್ಮೈಕೋಸಿಸ್‌ ಕಾರಣ ರೋಗಿಯು ಸಂವೇದನೆಯನ್ನು ಕಳೆದುಕೊಂಡಿದ್ದರು. ನೊಣಗಳು ಅವರ ಮೂಗನ್ನು ಪ್ರವೇಶಿಸಿ ಅಲ್ಲಿ ಮೊಟ್ಟೆ ಇಟ್ಟಿವೆ. ಮೊಟ್ಟೆಯು ಒಡೆದು ಹುಳಗಳಾಗಿವೆ. ಇವುಗಳನ್ನೇ ಮ್ಯಾಗ್ಗೊಟ್ಸ್ ಎಂದು ಕರೆಯಲಾಗಿದ್ದು ಇವುಗಳು ಮೆದುಳಿಗೆ ಪ್ರವೇಶಿಸಿ ಮೆದುಳು ಜ್ವರಕ್ಕೆ ಕಾರಣವಾಗುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ. ಇದೊಂದು ಅಪರೂಪದ ಅಂತೆಯೇ ಅಪಾಯಕಾರಿ ಸೋಂಕು ಎಂದು ವೈದ್ಯರು ಹೇಳಿದ್ದಾರೆ

ಬೂಸ್ಟುಗಳ ಸಮೂಹವೇ ಸೋಂಕಿಗೆ ಕಾರಣ
ಮ್ಯೂಕಾರ್ಮೈಕೋಸಿಸ್‌ ಸೋಂಕಿಗೆ ಕಾರಣ ಮ್ಯೂಕೋರ್ಮೈಸೆಟ್ಸ್ ಎಂಬ ಬೂಸ್ಟುಗಳ ಸಮೂಹವಾಗಿದೆ. ಮೂಳೆ ಅಥವಾ ಇತರ ಅಂಗಾಂಶದೊಳಗಿನ ಕುಳಿ, ಶ್ವಾಸಕೋಶ, ತ್ವಚೆ ಹಾಗೂ ಮೆದುಳಿನ ಮೇಲೆ ಪರಿಣಾಮ ಬೀರುತ್ತವೆ. ಈ ಬೂಸ್ಟುಗಳು ಉಸಿರಾಟ, ಮಣ್ಣು, ಕೊಳೆದ ಉತ್ಪನ್ನಗಳು ಅಥವಾ ಬ್ರೆಡ್, ಕಾಂಪೋಸ್ಟ್ ರಾಶಿಗಳ ಮೂಲಕ ಮಾನವನ ಸಂಪರ್ಕಕ್ಕೆ ಬರುತ್ತವೆ.
Published by:Ashwini Prabhu
First published: