Suicide: ಬೆಂಗಳೂರಿನಲ್ಲಿ ಮಹಿಳಾ ಡಾಕ್ಟರ್, ಮಗಳು ನಿಗೂಢ ಸಾವು

ಬದುಕಿ ಬಾಳಬೇಕಿದ್ದ ಎರಡು ಜೀವಗಳು ಬೆಂಗಳೂರಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದೆ. ಡಾಕ್ಟರ್ ಆಗಿದ್ದ ಶೈಮಾ ಮತ್ತು ಅವರ 10 ವರ್ಷದ ಮಗಳು ಆರಾಧನರ ಸಾವು ಅನುಮಾನ ಮೂಡಿಸಿದೆ. ಉನ್ನತ ವೃತ್ತಿಯಲ್ಲಿದ್ದ ಶೈಮಾ ಎಂಬುವವರ ಸಾವಿನ ಸುತ್ತ ಅನುಮಾನದ ಹುತ್ತ ಮೂಡಿದೆ.

ಮಹಿಳಾ ಡಾಕ್ಟರ್​ ನಿಗೂಢ ಸಾವು

ಮಹಿಳಾ ಡಾಕ್ಟರ್​ ನಿಗೂಢ ಸಾವು

  • Share this:
ಬೆಂಗಳೂರಲ್ಲಿ ಮಹಿಳಾ ಡಾಕ್ಟರ್​ ಮತ್ತು ಮಗಳು ನಿಗೂಢವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಕೊಡಗು ಮೂಲದ ತಾಯಿ-ಮಗಳು (Mother Daughter) ಬೆಂಗಳೂರಿನಲ್ಲಿ (Bengaluru) ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಡಾಕ್ಟರ್ (Doctor) ಶೈಮಾ (39) ಮತ್ತು ಆರಾಧನಾ (10) ಅಂತಾ ಗುರುತಿಸಲಾಗಿದೆ. ಶೈಮಾ ವೃತ್ತಿಯಲ್ಲಿ ಡೆಂಟಲ್ ಡಾಕ್ಟರ್​(Dentist) ಆಗಿದ್ದರು. ಮಗಳು ಆರಾಧನಗೆ ಕೇವಲ 10 ವರ್ಷ ವಯಸ್ಸಾಗಿತ್ತು. ಬೆಂಗಳೂರಿನ ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಎರಡು ದಿನದ ಹಿಂದೆ ನಡೆದ ಘಟನೆ ತಡವಾಗಿ ಇಂದು ಬೆಳಕಿಗೆ ಬಂದಿದೆ. ಘಟನೆ ವೇಳೆ ಮನೆಯಲ್ಲಿ ಯಾರೂ ಇಲ್ಲ ಎನ್ನಲಾಗಿದೆ. ಹಾಗಾಗಿ ಆತ್ಮಹತ್ಯೆಯೋ (Suicide), ಕೊಲೆಯೋ (Murder) ಅನ್ನೋ ಅನುಮಾನ ಮೂಡಿದೆ.

ಬದುಕಿ ಬಾಳಬೇಕಿದ್ದ ಎರಡು ಜೀವಗಳು ಬೆಂಗಳೂರಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದೆ. ಡಾಕ್ಟರ್​ ಆಗಿದ್ದ ಶೈಮಾ ಮತ್ತು ಅವರ 10 ವರ್ಷದ ಮಗಳು ಆರಾಧನರ ಸಾವು ಅನುಮಾನ ಮೂಡಿಸಿದೆ. ಉನ್ನತ ವೃತ್ತಿಯಲ್ಲಿದ್ದ ಶೈಮಾ ಎಂಬುವವರ ಸಾವಿನ ಸುತ್ತ ಅನುಮಾನದ ಹುತ್ತ ಮೂಡಿದೆ.

ಸ್ವಂತ ಕ್ಲಿನಿಕ್ ಹೊಂದಿದ್ದ ಶೈಮಾ!

39 ವರ್ಷದ ಶೈಮಾ ಡೆಂಟಿಸ್ಟ್​ ಆಗಿ ಕೆಲಸ ಮಾಡ್ತಿದ್ರು. ಶೈಮಾರವರು ಸ್ವಂತ ಕ್ಲಿನಿಕ್ ಕೂಡ ನಡೆಸ್ತಿದ್ರು. ಹಾಗಾಗಿ ಆರ್ಥಿಕ ಸಮಸ್ಯೆ ಏನೂ ಇರಲಿಲ್ಲ. ಈ ಅನುಮಾನದ ಸಾವಿನ ವೇಳೆ ಮನೆಯಲ್ಲಿ ಯಾರು ಇರಲಿಲ್ಲ ಎನ್ನಲಾಗಿದೆ.

Bengaluru doctor Mother Daughter doubtful death Complaint lodged
ಮಹಿಳಾ ಡಾಕ್ಟರ್​ ನಿಗೂಢ ಸಾವು


ಇದನ್ನೂ ಓದಿ: ಅನೈತಿಕ ಸಂಬಂಧಕ್ಕೆ ಅಡ್ಡಿ ಬಂದ ತಮ್ಮನಿಗೆ ಮುಹೂರ್ತ, ಸುಪಾರಿ ಕೊಟ್ಟು ಕೊಲ್ಲಿಸಿದ ಅಕ್ಕಂದಿರು!

ಪ್ರೀತಿಸಿ ಮದುವೆಯಾಗಿದ್ದ ಶೈಮಾ!

ಡಾಕ್ಟರ್ ಶೈಮಾರದ್ದು ಪ್ರೇಮ ವಿವಾಹ. ಕಳೆದ ೧೦ ವರ್ಷದ ಹಿಂದೆ ಕೋಲಾರ ಮೂಲದ ಡಾಕ್ಟರ್​​ ನಾರಾಯಣ್ ಎಂಬುವವರನ್ನು ಶೈಮಾ ಪ್ರೀತಿಸಿ ಮದುವೆಯಾಗಿದ್ದರು. ಡೆಂಟಲ್ ಡಾಕ್ಟರ್ ಪ್ರಾಕ್ಟೀಸ್ ವೇಳೆ ಇಬ್ಬರ ನಡುವೆ ಪ್ರೀತಿ ಮೂಡಿತ್ತು.

ಶೈಮಾ ಅಮ್ಮ ಸಾವನ್ನಪ್ಪಿದ್ದರು!

ನಾರಾಯಣ್ ಮತ್ತು ಶೈಮಾರ ಪ್ರೇಮ ವಿಚಾರ ಕುಟುಂಬಕ್ಕೆ ತಿಳಿದ ಸಂದರ್ಭದಲ್ಲೇ ಶೈಮಾರ ತಾಯಿ ಮೃತಪಟ್ಟಿದ್ದರು. ನಂತರ ಕುಟುಂಬವನ್ನು ಒಪ್ಪಿಸಿ ಶೈಮಾ-ನಾರಾಯಣ್ ವಿವಾಹವಾಗಿದ್ದರು. ಆದರೆ ಈಗ ಶೈಮಾ ನಿಗೂಢವಾಗಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಸರಿಯಾದ ಸಮಯಕ್ಕೆ ತಲುಪದ ಮದುವೆ ಸೂಟ್; DTDCಗೆ ಬಿತ್ತು ದಂಡ

ಘಟನೆ ವೇಳೆ ಯಾರೂ ಇರಲಿಲ್ಲ!

ಶೈಮಾ ಮತ್ತು ಆರಾಧನ ಅನುಮಾನದ ಸಾವಿನ ವೇಳೆ ಮನೆಯಲ್ಲಿ ಯಾರು ಇರಲಿಲ್ಲ. ಪತಿ ನಾರಾಯಣ್ ಕ್ಲಿನಿಕ್​​ಗೆ ತೆರಳಿದ್ದರು. ಆದರೆ ಪತ್ನಿ ಸಾವನ್ನಪ್ಪಿ 2 ದಿನವಾಗಿದ್ದು ಈ ವಿಚಾರ ಗಂಡನಿಗೆ ಗೊತ್ತಿರಲಿಲ್ವಾ ಅನ್ನೋ ಸಂಶಯ ಮೂಡಿದೆ. ಹಾಗಾಗಿ ಪತಿ ನಾರಾಯಣ್​ ಮೇಲೆ ಅನುಮಾನ ಹೆಚ್ಚಾಗಿದೆ.

ಡಾಕ್ಟರ್​ ಸಹೋದರನಿಂದ ದೂರು

ಮೃತ ಶೈಮಾ ಸಹೋದರ ಆಸ್ಟ್ರೇಲಿಯಾದಲ್ಲಿದ್ದು, ಇಂದು ಸಹೋದರ ಬೆಂಗಳೂರಿಗೆ ಬಂದು ಪೊಲೀಸರಿಗೆ ದೂರು ನೀಡಿದ್ದಾರೆ. ಸಹೋದರ ಕೊಟ್ಟ ದೂರು ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಶೈಮಾ ಸಂಬಂಧಿಕರು ಕಿಮ್ಸ್ ಆಸ್ಪತ್ರೆ ಬಳಿ ಆಗಮಿಸಿದ್ದಾರೆ.

ಕೊಡಗು ಮೂಲದ ಡಾಕ್ಟರ್!

ಶೈಮಾ ಮೂಲತಃ ಕೊಡಗಿನವರಾಗಿದ್ದಾರೆ. ವಿರಾಜಪೇಟೆ ಮೂಲದ ಮೃತ ಶೈಮಾ ಕೋಲಾರದ ನಾರಾಯಣ್​ನ್ನು ಮದುವೆಯಾದ ಬಳಿಕ ಬೆಂಗಳೂರಿನಲ್ಲಿ ನೆಲೆಸಿದ್ದರು. ಬೆಂಗಳೂರಲ್ಲಿ ಕ್ಲಿನಿಕ್ ಕೂಡ ನಡೆಸ್ತಿದ್ದಾರೆ.

ನೇಣು ಬಿಗಿದು ಸಾವನ್ನಪ್ಪಿರುವ ಶಂಕೆ!

ಮಗಳು ಮತ್ತು ತಾಯಿಯ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಗಳನ್ನು ನೇಣು ಹಾಕಿ, ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿದೆ. ಹಾಗಾಗಿ ಶೈಮಾ ಕುಟುಂಬಸ್ಥರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ಸದ್ಯ ಶೈಮಾ ಮತ್ತು ಆರಾಧನರ ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ಶಿಫ್ಟ್​​ ಮಾಡಲಾಗಿದೆ. ನಿಗೂಢ ಸಾವಿನ  ಬಗ್ಗೆ ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Published by:Thara Kemmara
First published: