ಬೆಂಗಳೂರು: ಸದಾಶಿವನಗರದಲ್ಲಿರುವ (Sadashivanagar) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ನಿವಾಸಕ್ಕೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಭೇಟಿ ನೀಡಿದ ಡಿ.ಕೆ ಶಿವಕುಮಾರ್ ಮಾಡಿ ಮಾತುಕತೆ ನಡೆಸಿದ್ದು, ಹೊಸ ವರ್ಷದ ಶುಭಾಶಯಗಳನ್ನು (New Year Wishes) ಕೋರಿದ್ದಾರೆ. ಗೃಹ ಸಚಿವ ಅಮಿತ್ ಶಾ (Anit Shah) ಅವರ ಎರಡು ದಿನಗಳ ಕಾಲ ರಾಜ್ಯ ಭೇಟಿ ಮುಕ್ತಾಯವಾಗುತ್ತಿದಂತೆ ಶಿವಕುಮಾರ್, ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಭಾರೀ ಕುತೂಹಲ ಮೂಡಿಸಿದೆ.
ಮಲ್ಲಿಕಾರ್ಜುನ ಖರ್ಗೆ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಮಲ್ಲಿಕಾರ್ಜುನ್ ಖರ್ಗೆ ಅವರು ನಮ್ಮ ಪಕ್ಷದ ಅಧ್ಯಕ್ಷರಾಗಿದ್ದಾರೆ. ನಾನು ಹೊಸ ವರ್ಷದ ಶುಭಾಶಯ ಕೋರಲು ಬಂದಿದ್ದೇನೆ. ನಾವು ಎಲ್ಲರೂ ಒಟ್ಟಿಗೆ ದುಡಿದು ನಾವು ಕಾಂಗ್ರೆಸ್ ಅಧಿಕಾರಕ್ಕೆ ತರುತ್ತೇವೆ. ಜನ ಬದಲಾವಣೆ ಬಯಸುತ್ತಿದ್ದಾರೆ. ಅದರಂತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ.
ಅಭ್ಯರ್ಥಿಗಳ ಲಿಸ್ಟ್ ಕಳಿಸಲು ಗಡುವು ಕೊಟ್ಟಿದ್ದೆವು. ಇನ್ನು ಮೂರು ನಾಲ್ಕು ಜಿಲ್ಲೆಗಳಲ್ಲಿ ಮೀಟಿಂಗ್ ಆಗಿಲ್ಲ. ಆದ್ದರಿಂದ ಇನ್ನು ಮೂರು ದಿನಗಳಲ್ಲಿ ಅವರು ಲಿಸ್ಟ್ ಕಳಿಸುತ್ತಾರೆ. ನಂತರ ಚುನಾವಣಾ ಸಮಿತಿ ಸಭೆ ನಡೆಯುತ್ತೆ. ಖರ್ಗೆ ಅವರು ಜೊತೆ ಮಾತನಾಡಿರುವ ವಿಚಾರಗಳನ್ನು ಮಾಧ್ಯಮಗಳ ಎದುರು ಹೇಳಲು ಆಗೋದಿಲ್ಲ. ಆದರೆ ಸಂಕ್ರಾಂತಿ ಒಳಗಡೆ ಮೊದಲ ಪಟ್ಟಿ ಬಿಡುಗಡೆ ಆಗುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಅಭಿನಯ ಮಾಡಿ ಸಿಎಂ ಬೊಮ್ಮಾಯಿ ಕುರಿತು ಡಿಕೆಶಿ ವ್ಯಂಗ್ಯ
ಒಕ್ಕಲಿಗ ಹಾಗೂ ಪಂಚಮಸಾಲಿಗೆ ಮೀಸಲಾತಿ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಸರ್ಕಾರದ ನಡೆಯ ಬಗ್ಗೆ ಅಭಿನಯ ಮಾಡಿ ವ್ಯಂಗ್ಯವಾಡಿದರು. ಮೊದಲು ಪಂಚಮಸಾಲಿ ಸ್ವಾಮೀಜಿಗಳಿಗೆ ಅಭಿನಂದನೆ ಸಲ್ಲಿಸಿದ ಡಿಕೆಶಿ, ಸಿಎಂ ಹೇಗೆ ಮಾಡಿದ್ದಾರೆ ಎಂದರೇ, ತುಪ್ಪನ ಮೊಣಕೈಗೂ ಸವರಿಲ್ಲ, ಮೂಗಿಗೂ ಸವರಿಲ್ಲ. ತಲೆ ಮೇಲೂ ತುಪ್ಪ ಸುರಿದುಬಿಟ್ರು, ಅದು ನಾಲಿಗೆಗೂ ಈಗ ಸಿಕ್ತಿಲ್ಲ. ನಾಲಿಗೆ ಹೀಗೆ ಮಾಡಿದ್ರೂ ತುಪ್ಪ ಸಿಗ್ತಿಲ್ಲ.
ಏನ್ ಟೋಪಿ ಹಾಕಿಬಿಟ್ರು ರೀ ನಮ್ಮ ಬಸಣ್ಣ. ಪಂಚಮಸಾಲಿ ಶಾಸಕರು ಸಚಿವರು ರಾಜೀನಾಮೆ ಕೊಡಬೇಕು. ಮಾನ ಮರ್ಯಾದೆ ಇದ್ದರೆ ಅಶೋಕ್ ಕೂಡ ರಾಜೀನಾಮೆ ಕೊಟ್ಟು ಹೊರಗೆ ಬರಲಿ. ಒಕ್ಕಲಿಗ ಸ್ವಾಮಿಜಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿಲ್ಲ. ಅವತ್ತು ಸಭೆಯಲ್ಲಿ ಇದೇ ಅಶೋಕ್ ಭರವಸೆ ಕೊಟ್ಟು ಹೋಗಿದ್ದರು. ಈಗ ಹೋಗಿ ಕ್ಯಾಬಿನೆಟ್ ನಲ್ಲಿ ಪಕ್ಕದಲ್ಲಿ ಕೂತಿದ್ದಾರೆ. ಅಶೋಕ್ ಕೂಡ ರಾಜೀನಾಮೆ ಕೊಟ್ಟು ಸರ್ಕಾರಕ್ಕೆ ಬಿಸಿ ಮುಟ್ಟಿಸಬೇಕು ಎಂದರು.
ರೆಗ್ಯುಲೇಷನ್ ಮಾಡಲಿ ನೋಡೋಣಾ ಅಂತ ಡಿಕೆಶಿ ಸವಾಲು
ಅಮುಲ್ ಹಾಗೂ ಕೆಎಂಎಫ್ ವಿಲೀನ ಮಾಡುವ ವಿಚಾರವಾಗಿ ಪ್ರತಿಕ್ರಿಯೆ ಕೊಟ್ಟ ಡಿಕೆಶಿ, ಸಚಿವ ಸೋಮಶೇಖರ್ ಮತ್ತು ಸಿಎಂ ಬೊಮ್ಮಾಯಿ ಅವರು ಈ ಬಗ್ಗೆ ರೆಗ್ಯುಲೇಷನ್ ಮೂವ್ ಮಾಡಲಿ ನೋಡೋಣಾ. ಇದು ನಮ್ಮ ರಾಜ್ಯದ ವಿಚಾರ. ಹಾಲು, ನೀರು, ಜನ ಇದು ನಮ್ಮ ಹಕ್ಕು. ಕನಕಪುರದಲ್ಲಿ ಅಮುಲ್ ಗಿಂತ ದೊಡ್ಡ ಉದ್ದಿಮೆ ಇದೆ. ಹಾಸನದಲ್ಲೂ ಮಿಲ್ಕ್ ಫೆಡರೇಶನ್ ಚೆನ್ನಾಗಿದೆ. ನಮ್ಮದು ಲಾಭದಾಯಕವಾಗಿ ನಡೆಯುತ್ತಿದೆ. ಸದ್ಯ ರೈತರನ್ನು ಶಕ್ತಿಶಾಲಿಯಾಗಿ ಮಾಡಬೇಕು. ಯಾವ ರಾಜ್ಯದ ಯಾವ ಮಿಲ್ಕ್ ಯೂನಿಯನ್ ಜೊತೆ ವಿಲೀನ್ ಮಾಡುವ ಅವಶ್ಯಕತೆ ಇಲ್ಲ ಎಂದರು.
2023 ಕಾಂಗ್ರೆಸ್ ಅಧಿಕಾರದ ವರ್ಷವಾಗಲಿದೆ
2023ರಲ್ಲಿ ರಾಜ್ಯಕ್ಕೆ ಬಂದ ಕಳಂಕ ತೊಲಗಿ ಬಲಿಷ್ಠ, ಉತ್ತಮ ನವ ಕರ್ನಾಟಕ ಆಗಲಿ. ಎಲ್ಲಾ ತರದ ಬದಲಾವಣೆ ಶಾಂತಿ ನೆಮ್ಮದಿ, ಸಮೃದ್ಧಿ ಸಿಗಲಿ ಅಂತ ತುಂಬು ಹೃದಯದಿಂದ ಹಾರೈಸುತ್ತೇನೆ. ರಾಜ್ಯದ ಜನ ಬದಲಾವಣೆ ತರ್ತಾರೆ ಅಂತ ನಂಬಿಕೆ ಇದೆ. ಅಮಿತ್ ಶಾ ಎರಡು ದಿನಗಳ ಕಾಲ ಬಂದಿದ್ದರು. ಅವರಿಗೆ ರಾಜ್ಯದ ಆಡಳಿತ ಬಗ್ಗೆ ಅವರಿಗೆ ಸಮಾಧಾನ ಇಲ್ಲ. ರಾಜ್ಯದ ಬಿಜೆಪಿ ನಾಯಕರ ಮುಂದಾಳತ್ವದಲ್ಲಿ ಚುನಾವಣೆಗೆ ಹೋದರೆ ನಾವು ಎದುರಿಸಲು ಸಾಧ್ಯವಿಲ್ಲ ಎಂಬ ಅರಿವಾಗಿದೆ.
ಇದನ್ನೂ ಓದಿ: Mahadayi Controversy: ಮಹದಾಯಿ ವಿಚಾರದಲ್ಲಿ ಬಿಜೆಪಿ ಮಹಾ ಮೋಸ, ಡಿಪಿಆರ್ ಪತ್ರದ ಬಗ್ಗೆ ಕೈ ನಾಯಕರ ಅನುಮಾನ!
ಅಮಿತ್ ಶಾ ಸತ್ಯವನ್ನು ನುಡಿದಿದ್ದಾರೆ
ಕಾಂಗ್ರೆಸ್ ಪಕ್ಷದ ಸಾಮೂಹಿಕ ನಾಯಕತ್ವ ಖರ್ಗೆ, ಸಿದ್ದರಾಮಯ್ಯ, ಡಿಕೆಶಿವಕುಮಾರ್, ಎಚ್ಕೆ ಪಾಟೀಲ್, ಪರಮೇಶ್ವರ ಸೇರಿ ಸಾಮೂಹಿಕ ನಾಯಕತ್ವವನ್ನು ಸೋಲಿಸಲು ಸಾಧ್ಯವಿಲ್ಲ. ಅದಕ್ಕಾಗಿ ಅವರು ಮೋದಿ ಹೆಸರಿನೊಂದಿಗೆ ಪ್ರಚಾರ ಮಾಡ್ತಿದ್ದಾರೆ.
ಬಿಜೆಪಿ ಹಿಂದುತ್ವ ಕಾರ್ಡ್ ಪ್ಲೇ ಮಾಡೋದು, ನಮಗೂ ಅವರಿಗೂ ಇರೋ ವ್ಯತ್ಯಾಸ ಇಷ್ಟೇ. 2022ರ ವೇಳೆಗೆ ಅವರು ಭಾವನೆ ಮೇಲೆ ಹೋಗ್ತಾರೆ, ನಾವು ಬದುಕಿನ ಮೇಲೆ ಹೋಗ್ತೀವಿ. ರೈತರ ಆದಾಯ ಡಬ್ಬಲ್ ಮಾಡ್ತೀವಿ ಅಂದ್ರು ಏನಾಯ್ತು. ಪ್ರತಿಯೊಂದು ಬೆಲೆ ಕೂಡ ಗಗನಕ್ಕೆ ಹೋಗ್ತಾ ಇದೆ. ದೊಡ್ಡ ಬ್ಯುಸಿನೆಸ್ ಮ್ಯಾನ್ ಗಳನ್ನು ಜೇಬಿನಲ್ಲಿ ಇಟ್ಟುಕೊಂಡಿದ್ದಾರೆ. ಸಣ್ಣ ಬ್ಯುಸಿನೆಸ್ ಮ್ಯಾನ್ಗಳು, ಹೆಣ್ಣು ಮಕ್ಕಳು ಅವರ ವಿರೋಧ ಇದ್ದಾರೆ. ಒಂದು ಜೂಮ್ ಮೀಟಿಂಗ್ ಕೂಡ ನಾನು ಹೆಣ್ಣು ಮಕ್ಕಳ ಜೊತೆ ಇಟ್ಟಿದ್ದೀನಿ. ಅವರ ಅಭಿಪ್ರಾಯ ನಾನು ಕೇಳ್ತೀನಿ ಎಂದು ತಿಳಿಸಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ