ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Elections) ಮೇಲುಕೋಟೆ (Melukote) ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ದರ್ಶನ್ ಪುಟ್ಟಣಯ್ಯ (Darshan Puttannaiah) ಅವರು ಇಂದು ಪದಗ್ರಹಣ ಸ್ವೀಕಾರ ಮಾಡಿದರು. ಸತ್ಯ ನಿಷ್ಠೆ ಹೆಸರಲ್ಲಿ ದರ್ಶನ್ ಪುಟ್ಟಣ್ಣಯ್ಯ ಅವರು ಶಾಸಕರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆ (Assembly) ಪ್ರವೇಶ ಮಾಡಿದ ದರ್ಶನ್ ಪುಟ್ಟಣ್ಣಯ್ಯ ಅವರು ನ್ಯೂಸ್18 ಕನ್ನಡದೊಂದಿಗೆ ಮಾತನಾಡಿದರು.
ರೈತರ ವಿಚಾರದಲ್ಲಿ ರಾಜೀ ಇಲ್ಲ
ನನ್ನ ತಂದೆ ಇದೆ ವಿಧಾನಸಭೆಯಲ್ಲಿ ನಿಂತು ರೈತರ ಪರ ಧ್ವನಿ ಎತ್ತುತಿದ್ದರು. ಈಗ ಅವರ ಜಾಗದಲ್ಲಿ ನಾನು ಇದ್ದೇನೆ. ನಾನು ಕೂಡ ತಂದೆಯ ಮಾರ್ಗದಲ್ಲೇ ರೈತರ ಪರ ಹೋರಾಟ ಮಾಡುತ್ತೇನೆ. ರೈತರ ಬೆಳೆಗೆ ಹೆಚ್ಚಿನ ಬೆಲೆ ಸಿಗಬೇಕು, ಅದಕ್ಕೆ ನಾನು ಹೋರಾಟ ಮಾಡುತ್ತೇನೆ. ನಾನು ಕಾಂಗ್ರೆಸ್ ಗೆ ಬೆಂಬಲ ನೀಡಿರಬಹುದು ಆದರೆ ರೈತರ ವಿಚಾರದಲ್ಲಿ ರಾಜೀ ಇಲ್ಲ ಎಂದು ಶಾಸಕ ದರ್ಶನ್ ಪುಟ್ಟಣಯ್ಯ ಸ್ಪಷ್ಟಪಡಿಸಿದ್ದಾರೆ.
ಚುನಾವಣೆ ಮುಗಿದಿದೆ ದೌರ್ಜನ್ಯ ಬೇಡ
ಇನ್ನು, ಮೇಲುಕೋಟೆ ಕ್ಷೇತ್ರದಲ್ಲಿ ರಾಜಕೀಯ ದ್ವೇಷ ಹೆಚ್ಚಾಗಿದ್ದು, ಮೊನ್ನೆ ಸಿಮೆಂಟ್ ಮೂಟೆಗಳಿಗೆ ಬೆಂಕಿ ಇಟ್ಟಿದ್ದ ಕಿಡಿಗೇಡಿಗಲು ನಿನ್ನೆ ಅಡಿಕೆ ತೋಟ ನಾಶ ಮಾಡಿದ್ದಾರೆ. ಮೊನ್ನೆ ಮಾಣಿಕ್ಯನಹಳ್ಳಿಯಲ್ಲಿ ಸಿಮೆಂಟ್ ಮೂಟೆಗೆ ಬೆಂಕಿ ಇಟ್ಟಿದ್ದರು. ನಿನ್ನೆ ಜವನಹಳ್ಳಿಯಲ್ಲಿ ರೈತ ಸಂಘದ ಕಾರ್ಯಕರ್ತರಾಗಿರುವ ರಾಮಣ್ಣನಿಗೆ ಸೇರಿದ ಅಡಿಕೆ ತೋಟ ನಾಶ ಮಾಡಿದ್ದಾರೆ. ಘಟನೆ ಸ್ಥಳಕ್ಕೆ ನೂತನ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೇಟಿ ನೀಡಿ, ರೈತ ರಾಮಣ್ಣನಿಗೆ ಸಂತ್ವಾನ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ