ಬೆಂಗಳೂರಿನ ಸೈಕ್ಲಿಂಗ್ ಪ್ರಿಯರಿಗೆ ಗುಡ್ ನ್ಯೂಸ್; ಏರ್​ಪೋರ್ಟ್​ನಲ್ಲೂ ಸೈಕಲ್ ಸವಾರಿಗೆ ಅವಕಾಶ!

Bangalore International Airport: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸೈಕಲ್ ಸವಾರರಿಗೆ ಅವಕಾಶ ಮಾಡಿಕೊಡಲು ಬಿಐಎಎಲ್ ನಿರ್ಧರಿಸಿದ್ದಕ್ಕೆ ಸೈಕ್ಲಿಂಗ್ ಪ್ರಿಯರು ಖುಷಿಯಾಗಿದ್ದಾರೆ. ಪ್ರತಿ ಭಾನುವಾರ ಬೆಳಗ್ಗೆ 6ರಿಂದ ರಾತ್ರಿ 9.30ರವರೆಗೆ ಸೈಕಲ್​​ ಸವಾರಿಗೆ ಅವಕಾಶ ನೀಡಲಾಗಿದೆ.

news18-kannada
Updated:June 28, 2020, 7:57 AM IST
ಬೆಂಗಳೂರಿನ ಸೈಕ್ಲಿಂಗ್ ಪ್ರಿಯರಿಗೆ ಗುಡ್ ನ್ಯೂಸ್; ಏರ್​ಪೋರ್ಟ್​ನಲ್ಲೂ ಸೈಕಲ್ ಸವಾರಿಗೆ ಅವಕಾಶ!
ಸಾಂದರ್ಭಿಕ ಚಿತ್ರ
  • Share this:
ದೇವನಹಳ್ಳಿ (ಜೂ. 28): ದೇವನಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಬಿಐಎಎಲ್) ಕಣ್ಣಿಗೆ ಕಾಣುವುದು ಆಕಾಶದಲ್ಲಿ ಲೋಹದ ಹಕ್ಕಿಗಳು, ಐಷಾರಾಮಿ ಕಾರುಗಳು, ಬಸ್​​​ಗಳು ಮಾತ್ರ. ಅಂತಹ ಸ್ಥಳದಲ್ಲಿ ಸೈಕಲ್ ನೋಡುವುದು ಅಸಾಧ್ಯದ ಮಾತು. ಏರ್ಪೋರ್ಟ್ ನಲ್ಲಿ ಸೈಕಲ್‌ ಗಳಿಗೆ ಬ್ರೇಕ್ ಹಾಕಲಾಗಿತ್ತು. ಈ ಹಿಂದೆ ಸೈಕಲ್, ಆಟೋ ಸೇರಿದಂತೆ ಕೆಲ‌ ವಾಹನಗಳಿಗೆ ನಿರ್ಬಂಧ ಹೇರಲಾಗಿತ್ತು. ಸೈಕ್ಲಿಂಗ್ ಪ್ರಿಯರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಲ್ಲಿ ಸೈಕ್ಲಿಂಗ್ ಗಾಗಿ ಮನವಿ ಮಾಡುತ್ತಿದ್ದರು. ಆದರೆ, ಇದಕ್ಕೆ‌ ಸಮ್ಮತಿ ಸಿಕ್ಕಿರಲಿಲ್ಲ. ಇದೀಗ‌  ಕೆಲವು ನಿಬಂಧನೆಗಳನ್ನು ಒಳಗೊಂಡಂತೆ ಸೈಕ್ಲಿಂಗ್ ಗೆ ಅವಕಾಶ ಕಲ್ಪಿಸಲಾಗಿದೆ.

ಇದರಿಂ‌ದ ಏರ್ಪೋರ್ಟ್ ನ ಸೌಂದರ್ಯ, ಪ್ರಕೃತಿ, ಇಲ್ಲಿನ ತಿಂಡಿ,‌ ತಿನಿಸುಗಳನ್ನ ಸವಿಯೋದ್ರ ಜೊತೆಗೆ ವ್ಯಾಪಾರಿಗಳು, ಮಳಿಗೆಗಳಿಗೂ ಅನುಕೂಲಕರ ವಾತಾವರಣ ನಿರ್ಮಿಸಲು ಅವಕಾಶ ಮಾಡಿಕೊಡುತ್ತಿದೆ. 'ಬೈಸಿಕಲ್ ಮೇಯರ್' ಎಂದೇ ಖ್ಯಾತಿ ಪಡೆದಿರುವ ಸತ್ಯ ಶಂಕರ್ ಯೋಚನೆಯಂತೆ ವಿಮಾನ ನಿಲ್ದಾಣದಲ್ಲಿ ಸೈಕಲ್ ಸವಾರರಿಗೆ ಅವಕಾಶ ಮಾಡಿಕೊಡಲು ಬಿಐಎಎಲ್ ನಿರ್ಧರಿಸಿದ್ದಕ್ಕೆ ಸೈಕ್ಲಿಂಗ್ ಪ್ರಿಯರು ಸಖತ್ ಖುಷಿ ವ್ಯಕ್ತಪಡಿಸಿದ್ದಾರೆ. ಪ್ರತಿ ಭಾನುವಾರ ಬೆಳಗ್ಗೆ 6 ಗಂಟೆಯಿಂದ ರಾತ್ರಿ 9.30ರವರೆಗೆ ಬೈಸಿಕಲ್​​ ಸವಾರಿಗೆ ಅವಕಾಶ ನೀಡಲಾಗಿದೆ.

ಇದನ್ನೂ ಓದಿ: 10ನೇ ತರಗತಿ ಪರೀಕ್ಷೆ ಮುಗಿದ ನಂತರ ರಾಜ್ಯದಲ್ಲಿ ಶನಿವಾರ ಮತ್ತು ಭಾನುವಾರ ಲಾಕ್​ಡೌನ್​ಗೆ ಚಿಂತನೆ

ಪರಿಸರ ಸ್ನೇಹಿಯಾದ ಸೈಕಲ್​​​ ಬಳಕೆ ಮತ್ತು ಫಿಟ್​​ನೆಸ್​​​ಗೆ ಪ್ರೋತ್ಸಾಹಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಬೆಂಗಳೂರಿನ ಸೈಕಲ್ ಸವಾರರು ವಾರಾಂತ್ಯದಲ್ಲಿ ನಂದಿಗಿರಿ ಧಾಮಕ್ಕೆ ಸವಾರಿ ಹೋಗುತ್ತಾರೆ. ಇದೀಗ, ಅವರಿಗೆ ಏರ್ಳ​ಪೋರ್ಟ್​ ರಸ್ತೆಯಲ್ಲೂ ಸೈಕಲ್ ಸವಾರಿಗೆ ಅವಕಾಶ ಕಲ್ಪಿಸಲಾಗಿದೆ. ಏರ್ಪೋರ್ಟ್ ನಲ್ಲಿ ಸುಸಜ್ಜಿತ ಆರು ಪಥದ ರಸ್ತೆ ನಿರ್ಮಾಣ ಮಾಡಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಬೆಳೆಸಿರುವ ಹೂ ತೋಟ, ವಿವಿಧ ತರಹೇವಾರಿ ಶೋ ಗಿಡಗಳ ಸೌಂದರ್ಯ ಸವಿಯಬಹುದು. ಇದರಿಂದ ಮನಸ್ಸಿಗೂ ನೆಮ್ಮದಿ, ಸುಸಜ್ಜಿತ ರಸ್ತೆ ಸೈಕ್ಲಿಂಗ್ ರೈಡರ್ಸ್ ಗಳಿಗೆ ಹೇಳಿ ಮಾಡಿಸಿದಂತಿದೆ. ಭಾನುವಾರ ಬೆಳಗ್ಗೆ ವಿಮಾನ ನಿಲ್ದಾಣಕ್ಕೆ ಸೈಕಲ್ ಸವಾರಿ ಕೈಗೊಂಡು ಬೆಳಗಿನ ಕಾಫಿಯನ್ನು ಆನಂದಿಸಬಹುದು. ಬೆಳಗಿನ ತಿಂಡಿ, ರೆಸ್ಟೋರೆಂಟ್‍ಗಳಲ್ಲಿ ಭೋಜನ ಸೇವಿಸಬಹುದಾಗಿದೆ.
First published:June 28, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading