• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Bengaluru: ಕಾರ್, ಬೈಕ್ ಮುಟ್ಟಲ್ಲ, ಸೈಕಲ್ ಕಂಡ್ರೆ ಬಿಡಲ್ಲ; ಖತರ್ನಾಕ ಕಳ್ಳ ಅಂದರ್

Bengaluru: ಕಾರ್, ಬೈಕ್ ಮುಟ್ಟಲ್ಲ, ಸೈಕಲ್ ಕಂಡ್ರೆ ಬಿಡಲ್ಲ; ಖತರ್ನಾಕ ಕಳ್ಳ ಅಂದರ್

ಬಂಧಿತ ಸೈಕಲ್ ಕಳ್ಳ

ಬಂಧಿತ ಸೈಕಲ್ ಕಳ್ಳ

ಸುಮಾರು 30 ರಿಂದ 40 ಸಾವಿರ ಬೆಲೆಯ ಸೈಕಲ್ ಗಳನ್ನು ಎರಡರಿಂದ ಮೂರು ಸಾವಿರ ರೂ.ಗಳಿಗೆ ಮಾರಾಟ ಮಾಡಿ ಮದ್ಯ ಸೇವನೆ ಮಾಡುತ್ತಿದ್ದನು. ಸೈಕಲ್ ಕಳ್ಳತನ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದರು

  • Share this:

ಒಬ್ಬ ಕಳ್ಳ ಕಳ್ಳತನ (Theft) ಮಾಡೋಕೆ ಹಲವಾರು ರೀಸನ್ ಇರುತ್ತೆ. ಬಹುತೇಕ ಕಳ್ಳರು (Thieves) ಲೈಫ್ ಸೆಟಲ್ ಆಗಬೇಕು ಅಂತಾ ಕದೀತಾರೆ. ಚಿನ್ನಾಭರಣ (Gold ), ಹಣ (Money) ಕೈಗೆ ಸಿಕ್ಕಿದ್ದು ದೋಚುತ್ತಾರೆ. ಆದ್ರೆ ಈ ಕಳ್ಳ ಬರೀ ಸೈಕಲ್ ಗಳನ್ನು ಕಳ್ಳತನ (Cycle Theft) ಮಾಡುತ್ತಿದ್ದ. ಹೈ-ಫೈ ಸೈಕಲ್ ಗಳನ್ನ ಟಾರ್ಗೆಟ್ ಮಾಡುತ್ತಿದ್ದ ಈ ಕಳ್ಳ, ಯಾಕೆ ಕಳ್ಳತನ ಮಾಡುತ್ತಿದ್ದ ಎಂಬ ಕಾರಣ ಸಹ ವಿಚಿತ್ರವಾಗಿದೆ. ನಗರದ ಸುದ್ದುಗುಂಟೆಪಾಳ್ಯ ಠಾಣೆ (Sudduguntepalya Police) ಪೊಲೀಸರು ಸೈಕಲ್ ಕದಿಯುತ್ತಿದ್ದ ಖತರ್ನಾಕ್ ಕಳ್ಳನೊಬ್ಬನನ್ನ ಬಂಧಿಸಿದ್ದಾರೆ. ಬಂಧಿತ ಆರೋಪಿ ಹೆಸರು ಬಾಲರಾಜ್. ಸದ್ಯ ಆರೋಪಿಯಿಂದ ಸುದ್ದಗುಂಟೇಪಾಳ್ಯ ಪೊಲೀಸರು 6 ಲಕ್ಷ ಮೌಲ್ಯದ 54 ಸೈಕಲ್ ಗಳನ್ನು ಜಪ್ತಿ ಮಾಡಿದ್ದಾರೆ.


ಬಾಲಾಜಿ ಅಲಿಯಾಸ್ ಬಾಲರಾಜು ಕುಡಿತದ ಚಟಕ್ಕೆ ಒಳಗಾಗಿದ್ದ ಆರೋಪಿ ಎಣ್ಣೆಗೆ ದುಡ್ಡಿಲ್ಲ ಅಂತಾ ಸೈಕಲ್ ಗಳನ್ನು ಕಳ್ಳತನ ಮಾಡುತ್ತಿದ್ದನು. ಸೈಕಲ್ ಗಳನ್ನು ಕಳ್ಳತನ ಮಾಡಿದ್ರೆ ಕೇಸ್ ಆಗಲ್ಲ ಅಂತ ಬಾಲರಾಜು ತಿಳಿದುಕೊಂಡಿದ್ದನು. ಹೀಗಾಗಿ ನಗರದ ಬಹುತೇಕ ಕಡೆ ದುಬಾರಿ ಬೆಲೆಯ ಸೈಕಲ್ ಗಳನ್ನು ಕಳ್ಳತನ ಮಾಡುತ್ತಿದ್ದನು.


ಮದ್ಯಕ್ಕಾಗಿ ಸೈಕಲ್ ಮಾರಾಟ


ಸುಮಾರು 30 ರಿಂದ 40 ಸಾವಿರ ಬೆಲೆಯ ಸೈಕಲ್ ಗಳನ್ನು ಎರಡರಿಂದ ಮೂರು ಸಾವಿರ ರೂ.ಗಳಿಗೆ ಮಾರಾಟ ಮಾಡಿ ಮದ್ಯ ಸೇವನೆ ಮಾಡುತ್ತಿದ್ದನು. ಸೈಕಲ್ ಕಳ್ಳತನ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದರು. ಆರೋಪಿ ಸೈಕಲ್ ಕಳ್ಳತನ ಮಾಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದದಲ್ಲಿ ಸೆರೆಯಾಗಿತ್ತು. ಈ ದೃಶ್ಯಗಳನ್ನಾಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿ, ಆತನಿಂದ ಸೈಕಲ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


ಇದನ್ನೂ ಓದಿ: Chakravarti Sulibele: ಮಕ್ಕಳು ಜಾಣರು, ಶಾಸಕರು-ಸಂಸದರಿಗಾಗಿ ಪಠ್ಯ ಪುಸ್ತಕ ಪರಿಷ್ಕರಣೆ! ಸೂಲಿಬೆಲೆ ಟಾಂಗ್


ಪೊಲೀಸರಿಗೆ ತಲೆನೋವಾಗಿತ್ತು ಸರಣಿ ಸೈಕಲ್ ಕಳ್ಳತನ..!


ಇನ್ನು ಕಳೆದ ನಾಲ್ಕು ತಿಂಗಳಿಂದ ಆಗ್ನೇಯ ವಿಭಾಗದಲ್ಲಿ ಸರಣಿ ಸೈಕಲ್ ಕಳ್ಳತನ ಆಗ್ತಾ ಇತ್ತು. ದಿನೇ ದಿನೇ ಪೊಲೀಸರಿಗೆ ಕೇಸ್ ಗಳು ಹೆಚ್ಚಾಗ್ತಾ ಇತ್ತು. ಇತ್ತ ತಲೆಕೆಡಿಸಿಕೊಂಡಿದ್ದ ಪೊಲೀಸರು  ಯಾರಪ್ಪ ಮಾಡ್ತಾ ಇರೋದು ಅಂತ ನಿದ್ದಬಿಟ್ಟಿದ್ರು. ಆದ್ರೂ ಆರೋಪಿಯನ್ನು ಹಿಡಿಯಲೇಬೇಕು ಅಂತ ಆಗ್ನೇಯ ವಿಭಾಗಡ ಡಿಸಿಪಿ ಶ್ರೀನಾಥ್ ಜೋಶಿ ವಿಶೇಷ ತಂಡವನ್ನು ರಚನೆ ಮಾಡಿದ್ದರು.


ಮೈಲೋ ಲೇ ಔಟ್ ಎಸಿಬಿ ಕರಿಬಸವನಗೌಡ ನೇತೃತ್ವದಲ್ಲಿ ತಂಡ ರಚನೆ ಮಾಡಿ‌ ಕಳ್ಳತನ ಆದ ಸ್ಥಳಗಳ ಸಿಸಿ ಕ್ಯಾಮೆರಾಗಳ ನ್ನು ಪರಿಶೀಲನೆ ಮಾಡಿದ್ದರು. ಎಲ್ಲಾ ಕಡೆ ಆರೋಪಿಯ ಚಲನವಲನ ಪತ್ತೆಯಾಗಿತ್ತು. ಹೀಗೆ ಆರೋಪಿ ಬೆನ್ನು ಬಿದ್ದ ಪೊಲೀಸರು ಕೆಲ ಸೆಕೆಂಡ್ ಹ್ಯಾಂಡಲ್ ಸೈಕಲ್ ಮಾರೋ ಅಂಗಡಿಗಳನ್ನು ಪರಿಶೀಲನೆ ಮಾಡಿದ್ರು. ‌


55 ಸೈಕಲ್ ವಶಕ್ಕೆ ಪಡೆದ ಪೊಲೀಸರು


ಕೊನೆಗೆ ಸುಳಿವು ಪಡೆದು ಕಳ್ಳನನ್ನು ಬಂಧಿಸಿದ್ದಾರೆ. ಕಳ್ಳನಿಂದ 55 ಸೈಕಲ್ ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರಿಸಲಾಗಿದೆ.ಇನ್ನು ಈ ಆರೋಪಿ ಸುದ್ದಗುಂಟೇಪಾಳ್ಯ, ಮಡಿವಾಳ ಸೇರಿದಂತೆ ಹಲವು ಠಾಣೆಗಳಲ್ಲಿ ಪ್ರಕರಣ ದಾಖಲಾಗಿವೆ. ಈ ಹಿಂದೆ ಕೂಡ ಆರೋಪಿ ದಕ್ಷಿಣ ವಿಭಾಗ, ಪಶ್ಚಿಮ ವಿಭಾಗದಲ್ಲೂ ಕೈ ಚಳಕ ತೋರಿಸಿದ್ದ ಅನ್ನೋದು ತನಿಖೆ ವೇಳೆ ಗೊತ್ತಾಗಿದೆ. ಸದ್ಯ ಆರೋಪಿಯನ್ನ ಬಂಧಿಸಿರೋ ಪೊಲೀಸರು ಹೆಚ್ಚಿನ ತನಿಖೆಯನ್ನ ಮುಂದುವರೆಸಿದ್ದಾರೆ.


ಇದನ್ನೂ ಓದಿ:  Rock Garden: ಬಣ್ಣವೂ ಇಲ್ಲ, ನಿರ್ವಹಣೆಯೂ ಇಲ್ಲ! ಸೊರಗುತ್ತಿದೆ ಕಾರವಾರದ ರಾಕ್ ಗಾರ್ಡನ್


ವಾಟರ್ ಟ್ಯಾಂಕ್ ಹರಿದು ಬಾಲಕಿ ಸಾವು


ವಾಟರ್ ಟ್ಯಾಂಕರ್ (Water Tanker) ಹರಿದು ಮೂರು ವರ್ಷದ ಬಾಲಕಿ ಸಾವನ್ನಪ್ಪಿರೋ (Girl Death) ಘಟನೆ ಸರ್ಜಾಪುರ ರೋಡ್ ಸೆರಿನಿಟಿ ಲೇಔಟ್ ನಲ್ಲಿ ನಡೆದಿದೆ. ಅಪಘಾತದಲ್ಲಿ ಮೂರು ವರ್ಷದ ಪ್ರತಿಷ್ಠಾ (Prathista) ಸಾವನ್ನಪ್ಪಿದ್ದಾಳೆ. ಶ್ವೇತ ರೆಸಿಡೆನ್ಸಿ ಅಪಾರ್ಟ್​ಮೆಂಟ್ (Apartment)​ ಮುಂದೆ ಅಪಘಾತ (Accident) ಸಂಭವಿಸಿದೆ. ಅಪಾರ್ಟ್​ಮೆಂಟ್​ಗೆ ನೀರನ್ನು ಲೋಡ್​ ಮಾಡಲು ಟ್ಯಾಂಕರ್​ ತರಲಾಗಿತ್ತು. ನೀರು ಲೋಡ್​ ಮಾಡಿ ಮುಗಿದ ಬಳಿಕ ಟ್ಯಾಂಕರ್​ನನ್ನು ರಿವರ್ಸ್​ ತೆಗೆದುಕೊಳ್ಳುವ ವೇಳೆ ಅವಘಡ ನಡೆದಿದೆ

Published by:Mahmadrafik K
First published: