ಸಿಲಿಕಾನ್​ ಸಿಟಿಯಲ್ಲಿ ಹೆಚ್ಚಿದ ಸೈಬರ್​ ಕ್ರೈಂ; ವಂಚಕರ ಬೇಟೆಗೆ ಪೊಲೀಸರಿಂದ ಮಾಸ್ಟರ್ ಪ್ಲಾನ್​

ಸೈಬರ್ ವಂಚಕರಲ್ಲಿ ಆಫ್ರಿಕನ್, ನೈಜಿರಿಯಾ ಸೇರಿದಂತೆ ವಿವಿಧ ದೇಶಗಳ ಯುವಕರೇ ವಂಚಕರು ಎನ್ನಲಾಗಿದೆ. 2019 ರ ಜನವರಿಯಿಂದ ಇಲ್ಲಿಯವರೆಗೆ ಬರೋಬ್ಬರಿ 7500 ಎಫ್ ಐಆರ್ ದಾಖಲಾಗಿವೆ.

Latha CG | news18
Updated:August 25, 2019, 3:12 PM IST
ಸಿಲಿಕಾನ್​ ಸಿಟಿಯಲ್ಲಿ ಹೆಚ್ಚಿದ ಸೈಬರ್​ ಕ್ರೈಂ; ವಂಚಕರ ಬೇಟೆಗೆ ಪೊಲೀಸರಿಂದ ಮಾಸ್ಟರ್ ಪ್ಲಾನ್​
ಪ್ರಾತಿನಿಧಿಕ ಚಿತ್ರ
Latha CG | news18
Updated: August 25, 2019, 3:12 PM IST
ಬೆಂಗಳೂರು(ಆ.25): ಸಿಲಿಕಾನ್​ ಸಿಟಿಯಲ್ಲಿ ಸೈಬರ್​ ಕ್ರೈಂ ಪ್ರಕರಣ ಹೆಚ್ಚಾದ ಹಿನ್ನೆಲೆ, ವಂಚಕರನ್ನು ಬಲೆಗೆ ಬೀಳಿಸಲು ಪೊಲೀಸರು ಹೊಸ ಯೋಜನೆಗೆ ಕೈ ಹಾಕಿದ್ದಾರೆ. ಇಡೀ ಬೆಂಗಳೂರಿಗೆ ಒಂದೇ ಒಂದು ಸೈಬರ್ ಕ್ರೈಂ ಪೊಲೀಸ್ ಠಾಣೆಯಿದ್ದು, ಇದರಿಂದ ತೀವ್ರ ತೊಂದರೆಯಾಗುತ್ತಿದೆ. ಹೀಗಾಗಿ ಬೆಂಗಳೂರಿನ ಎಲ್ಲಾ ಡಿಸಿಪಿ ವ್ಯಾಪ್ತಿಯಲ್ಲಿ ಒಂದೊಂದು ಸೈಬರ್​ ಕ್ರೈಂ ಠಾಣೆ ಸ್ಥಾಪನೆಯಾಗಲಿವೆ.

ಕೆಲವೇ ದಿನಗಳಲ್ಲಿ 8 ಸೈಬರ್ ಕ್ರೈಂ ಪೊಲೀಸ್ ಠಾಣೆಗಳು ಆರಂಭವಾಗಲಿವೆ.  ಪ್ರತಿನಿತ್ಯ 40 ರಿಂದ 50 ಸೈಬರ್ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗುತ್ತಿವೆ. ಸಿಬ್ಬಂದಿ ಕೊರತೆ ಕೂಡ ಸೈಬರ್ ಕ್ರೈಂನಲ್ಲಿ ಇದೆ. ಇಡೀ ಬೆಂಗಳೂರಿಗೆ ಇರುವುದು ಒಂದೇ ಸೈಬರ್ ಕ್ರೈಂ ಪೊಲೀಸ್ ಠಾಣೆ. ಹೀಗಾಗಿ ಸಿಬ್ಬಂದಿ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತಿದೆ. ಸಿಬ್ಬಂದಿ ಮೇಲೆ ಹೆಚ್ಚಾಗುತ್ತಿರುವ ಹೊರೆ ತಪ್ಪಿಸಲು ಎಲ್ಲಾ ಡಿಸಿಪಿ ವ್ಯಾಪ್ತಿಯಲ್ಲಿ 8 ಸೈಬರ್ ಕ್ರೈಂ ಠಾಣೆ ಓಪನ್ ಆಗಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಮಾರಸ್ವಾಮಿ ನನ್ನನ್ನು ಶತ್ರುವಿನಂತೆ ನೋಡಿದ್ದೆ ಸಮಸ್ಯೆ ಆಗಿದ್ದು; ಸಿದ್ದರಾಮಯ್ಯ ವಾಗ್ದಾಳಿ

ಈ ಹಿಂದೆ ಆಡಳಿತ ವಿಭಾಗದ ಡಿಸಿಪಿಯಾಗಿದ್ದ ಅನುಚೇತ್ ಡಿಜಿಗೆ ಪತ್ರ ಬರೆದಿದ್ದರು. ಆ ಪತ್ರವನ್ನು ಡಿಜಿಪಿ ನೀಲಮಣಿ ಎನ್ ರಾಜು ಸರ್ಕಾರಕ್ಕೆ ಮನವರಿಕೆ ಮಾಡಿದ್ದರು. ಈ ಹಿನ್ನಲೆ ಸರ್ಕಾರದಿಂದ ಆದೇಶವಾಗಿದ್ದು, 4 ಸೈಬರ್ ಕ್ರೈಂ ಠಾಣೆ ಸ್ಥಾಪನೆಗೆ 4 ಕೋಟಿ ಹಣ ಕೂಡ ಬಿಡುಗಡೆಯಾಗಲಿದೆ. ಬೆಂಗಳೂರಿನಲ್ಲಿ ಸೈಬರ್ ಕ್ರೈಂ ವಂಚಕರು ಕೂಡ ಜಾಸ್ತಿಯಾಗಿದ್ದಾರೆ ಎನ್ನಲಾಗಿದೆ.

ಪ್ರತಿನಿತ್ಯ ಆನ್ ಲೈನ್ ವಂಚನೆ, ಎಟಿಎಂ ಓಟಿಪಿ ಪಡೆದು ವಂಚನೆ, ಅಕೌಂಟ್ ನಿಂದ ಹಣ ಕದಿಯುತ್ತಿದ್ದಾರೆ. ಹಾಗೇ ಮೆಡಿಕಲ್ ಸೀಟ್ ಕೊಡಿಸುತ್ತೇವೆ ಎಂದು ವಂಚಿಸುವುದು, ಸಾಫ್ಟವೇರ್ ಕದಿಯುವುದು, ವಿವಿಧ ಸೈಬರ್ ಕ್ರೈಂಗಳು ದಾಖಲಾಗಿವೆ.

ಸೈಬರ್ ವಂಚಕರಲ್ಲಿ ಆಫ್ರಿಕನ್, ನೈಜಿರಿಯಾ ಸೇರಿದಂತೆ ವಿವಿಧ ದೇಶಗಳ ಯುವಕರೇ ವಂಚಕರು ಎನ್ನಲಾಗಿದೆ. 2019 ರ ಜನವರಿಯಿಂದ ಇಲ್ಲಿಯವರೆಗೆ ಬರೋಬ್ಬರಿ 7500 ಎಫ್ ಐಆರ್ ದಾಖಲಾಗಿವೆ.

First published:August 25, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...