• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Cubbon Park: ಕಬ್ಬನ್ ಪಾರ್ಕ್‌ಗೆ ಕಾಲಿಡುವ ಮುನ್ನ ಎಚ್ಚರ! ಇನ್ಮುಂದೆ ಈ ತಪ್ಪು ಮಾಡೋಕೆ ಹೋಗಲೇಬೇಡಿ!

Cubbon Park: ಕಬ್ಬನ್ ಪಾರ್ಕ್‌ಗೆ ಕಾಲಿಡುವ ಮುನ್ನ ಎಚ್ಚರ! ಇನ್ಮುಂದೆ ಈ ತಪ್ಪು ಮಾಡೋಕೆ ಹೋಗಲೇಬೇಡಿ!

Cubbon Park, Bengaluru

Cubbon Park, Bengaluru

ತೋಟಗಾರಿಕಾ ಇಲಾಖೆ ಕಬ್ಬನ್ ಪಾರ್ಕ್​ಗೆ ಹೋಗುವವರಿಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಬೆಂಗಳೂರಿಗರ ಅತ್ಯಂತ ಪ್ರಿಯವಾದ ಸ್ಥಳವಾದ ಕಬ್ಬನ್ ಪಾರ್ಕ್‌ಗೆ ಭೇಟಿ ನೀಡುವವರು ಇನ್ಮುಂದೆ ಈ ನಿಯಮಗಳನ್ನು ಪಾಲಿಸಬೇಕಾಗುತ್ತದೆ.

  • News18 Kannada
  • 4-MIN READ
  • Last Updated :
  • Bangalore, India
  • Share this:

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿರೋ (Bengaluru) ಲವರ್ಸ್‌ಗಳಿಗೆ ಟೈಮ್ ಪಾಸ್‌ ಮಾಡೋಣ ಅಂತಾ ಅಂದ್ಕೊಂಡ್ರೆ ಥಟ್ಟಂತ ನೆನಪು ಬರೋ ಜಾಗ ಇದ್ರೆ ಅದು ಕಬ್ಬನ್ ಪಾರ್ಕ್ (Cubbon Park). ಬೆಳಗ್ಗೆಯಿಂದ ಸಂಜೆತನಕ ಯಾವುದೇ ಸಮಯದಲ್ಲಿ ಕಬ್ಬನ್ ಪಾರ್ಕ್‌ಗೆ ಹೋದರೂ ಮರಗಳ ಅಡಿಯಲ್ಲೋ, ಪೊದೆಗಳೆಡೆಯಲ್ಲೋ ಅಥವಾ ಇನ್ನೆಲ್ಲೋ ಮೂಲೆಯಲ್ಲಿ ಪ್ರಣಯ ಪಕ್ಷಿಗಳು ಕಣ್ಣಿಗೆ ಕಾಣುತ್ತವೆ. ಅಷ್ಟೇ ಅಲ್ಲ ಅಲ್ಲಿನ ಮರಗಿಡಗಳನ್ನು ಹಾಳು ಮಾಡೋದು, ತಿಂಡಿ ತಿಂದು ಪ್ಲಾಸ್ಟಿಕ್ ಎಸೆಯೋದು ಎಲ್ಲಾ ಇತರರೂ ಮಾಡ್ತಿರ್ತಾರೆ.


ದಿನನಿತ್ಯ ಸಾವಿರಾರು ಮಂದಿ ವಾಯು ವಿಹಾರಕ್ಕೆ ಬರುವ ಈ ಜಾಗದಲ್ಲಿ ಪ್ರೇಮಿಗಳು ಸಾರ್ವಜನಿಕರಿಗೆ ಮುಜುಗರ ಆಗುವಂತೆ ವರ್ತಿಸಬಾರದು ಎಂದು ಈಗಾಗಲೇ ಅನೇಕ ಬಾರಿ ಸೂಚನೆ ನೀಡಿದ್ದರೂ ಇನ್ನೂ ಕೂಡ ತಮ್ಮದೇ ಲೋಕದಲ್ಲಿ ಮೈಮರೆಯುವವರಿಗೇನೂ ಕಮ್ಮಿ ಇಲ್ಲ. ಇಂತಹದ್ದೆಲ್ಲವನ್ನು ಗಂಭೀರವಾಗಿ ಪರಿಗಣಿಸಿರುವ ಇಲಾಖೆ ಇದೀಗ ಹೊಸ ನಿಯಮವನ್ನು ತರಲು ಮುಂದಾಗಿದೆ.


ಇದನ್ನೂ ಓದಿ: Crime News: ಬೆಂಗಳೂರು ಪೊಲೀಸರ ರೋಚಕ ಕಾರ್ಯಾಚರಣೆ, ಖತರ್ನಾಕ್ ಚಡ್ಡಿ ಗ್ಯಾಂಗ್ ಲಾಕ್​! ಕೋಟಿ ಕೋಟಿ ಒಡವೆ ಮಾಲೀಕರಿಗೆ ವಾಪಸ್​​


ಕಬ್ಬನ್ ಪಾರ್ಕ್‌ಗೆ ಹೋಗೋರಿಗೆ ಹೊಸ ನಿಯಮ


ತೋಟಗಾರಿಕಾ ಇಲಾಖೆ ಕಬ್ಬನ್ ಪಾರ್ಕ್​ಗೆ ಹೋಗುವವರಿಗೆ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು, ಬೆಂಗಳೂರಿಗರ ಅತ್ಯಂತ ಪ್ರಿಯವಾದ ಸ್ಥಳವಾದ ಕಬ್ಬನ್ ಪಾರ್ಕ್‌ಗೆ ಭೇಟಿ ನೀಡುವವರು ಇನ್ಮುಂದೆ ಈ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಇನ್ಮುಂದೆ ಕಬ್ಬನ್‌ ಪಾರ್ಕ್‌ನಲ್ಲಿ ದಂಪತಿಗಳು/ ಪ್ರೇಮಿಗಳು ಮಿತಿಮೀರಿ ಪರಸ್ಪರ ಹತ್ತಿರವಾಗುವಂತಿಲ್ಲ, ಆಹಾರವನ್ನು ತರಬಾರದು. ಫೋಟೋಗಳು ಮತ್ತು ವೀಡಿಯೊಗಳನ್ನು ನಿಷೇಧಿಸಲಾಗಿದೆ. ಜೊತೆಗೆ ಕ್ರೀಡೆ, ಆಟ ಅಥವಾ ಮರ ಹತ್ತುವುದನ್ನು ಕೂಡ ನಿಷೇಧಿಸಲಾಗಿದೆ. ನಿಯಮ ಮೀರಿ ವರ್ತಿಸಿದರೆ ಧ್ವನಿವರ್ಧಕ ಮೈಕ್ ಮೂಲಕ ಅಥವಾ ಸಿಳ್ಳೆಗಳ ಮೂಲಕ ಅಧಿಕಾರಿಗಳು ಎಚ್ಚರಿಕೆ ನೀಡುತ್ತಿದ್ದಾರೆ.


ಈ ಬಗ್ಗೆ ಮಾತನಾಡಿರುವ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕಟಾರಿಯಾ, ಪ್ರೇಮಿಗಳು / ದಂಪತಿಗಳು ಸಾರ್ವಜನಿಕವಾಗಿ ಅಸಭ್ಯತೆಯಿಂದ ವರ್ತಿಸುತ್ತಿರುವ ಬಗ್ಗೆ ನಾವು ಅನೇಕ ಕುಟುಂಬಗಳಿಂದ ದೂರುಗಳನ್ನು ಸ್ವೀಕರಿಸುತ್ತಿದ್ದೇವೆ. ಇದೊಂದೇ ಸಮಸ್ಯೆಯಲ್ಲ. ಪ್ರೇಮಿಗಳು ಮರದ ಪೊದೆಗಳ ಹಿಂದೆ ಅಡಗಿಕೊಳ್ಳುವುದರಿಂದ ಇದು ಸುರಕ್ಷತೆಯ ದೃಷ್ಟಿಯಿಂದಲೂ ಒಳ್ಳೆಯದಲ್ಲ. ಅಲ್ಲಿ ಹಾವುಗಳು ಮತ್ತು ಕೀಟಗಳು ಅವರಿಗೆ ಹಾನಿ ಉಂಟುಮಾಡಬಹುದು. ಸ್ನೇಹಪರ ದಂಪತಿಗಳ ಮೇಲೆ ಧ್ವನಿವರ್ಧಕಗಳನು ಉಪಯೋಗಿಸುವ ಉದ್ದೇಶ ನಮಗಿಲ್ಲ; ಇದು ನಿಯಮಗಳನ್ನು ಉಲ್ಲಂಘಿಸಿ ಉದ್ಯಾನವನ್ನು ಹಾಳು ಮಾಡುವವರಿಗೆ ಮಾತ್ರ ಎಂದು ಹೇಳಿದರು


ಇದನ್ನೂ ಓದಿ: RCB vs MI Match: ಬೆಂಗಳೂರಲ್ಲಿ ಆರ್‌ಸಿಬಿ-ಮುಂಬೈ ಫೈಟ್; ಈ ರೋಡಲ್ಲಿ ಹೋಗೋ ಹಾಗಿಲ್ಲ, ಇಲ್ಲಿ ವೆಹಿಕಲ್ ಪಾರ್ಕ್ ಮಾಡೋ ಹಾಗಿಲ್ಲ!


ಸಿಬ್ಬಂದಿಗೆ ಮೌಖಿಕ ಸೂಚನೆ


ಕಳೆದ ಒಂದು ತಿಂಗಳಿನಿಂದ 300 ಎಕರೆ ಉದ್ಯಾನದಲ್ಲಿ ಭದ್ರತಾ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾರೆ. ನಿಯಮಗಳನ್ನು ಉಲ್ಲಂಘಿಸುವ ಗುಂಪುಗಳಿಗೆ ಧ್ವನಿವರ್ಧಕಗಳ ಮೂಲಕ ಅಥವಾ ಸಿಳ್ಳೆಗಳನ್ನು ಊದುವ ಮೂಲಕ ಸೂಚನೆಗಳನ್ನು ನೀಡುತ್ತಿದ್ದಾರೆ. ವಯಸ್ಕರ ಅಸಭ್ಯತೆಯ ಚಟುವಟಿಕೆಗಳಿಂದ ಮಕ್ಕಳಿಗೆ ಕಬ್ಬನ್ ಪಾರ್ಕ್‌ ವಾತಾವರಣ ಸೂಕ್ತವಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಕಬ್ಬನ್ ಪಾರ್ಕ್‌ಗೆ ಭೇಟಿ ನೀಡುವವರು ಉದ್ಯಾನವನದ ವಾತಾವರಣವನ್ನು ಹಾಳು ಮಾಡದಂತೆ ಭದ್ರತಾ ಸಿಬ್ಬಂದಿಗೆ ಮೌಖಿಕ ಸೂಚನೆಗಳನ್ನು ನೀಡಲಾಗಿದೆ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

First published: