HOME » NEWS » State » BENGALURU CRIME WOMAN ARRESTED FOR MURDERING OLD AGED LADY IN BANGALORE SCT

Bengaluru Crime: ಚಿನ್ನಾಭರಣಕ್ಕಾಗಿ ಬೆಂಗಳೂರಿನ ವೃದ್ಧೆಯ ಉಸಿರುಗಟ್ಟಿಸಿ ಕೊಲೆ; ಮಹಿಳೆ ಬಂಧನ

Bangalore Murder: ಕೊಲೆಯಾದ ದಿಲ್ವಾನ್ ಬಾನುಗೆ ಆರೋಪಿ ಶಬಾನಾ ಸಂಬಂಧಿಯಾಗಿದ್ದಳು. ಮಾತನಾಡುವ ನೆಪದಲ್ಲಿ ಆಕೆಯ ಮನೆಗೆ ಹೋಗಿದ್ದ ಶಬಾನಾ ವೃದ್ಧೆ ದಿಲ್ವಾನ್ ಬಾನು ಅವರ ಕುತ್ತಿಗೆ ಮೇಲೆ ಕಾಲಿಟ್ಟು ಉಸಿರುಗಟ್ಟಿಸಿ ಕೊಲೆ ಮಾಡಿದ್ದಳು.

news18-kannada
Updated:March 9, 2021, 8:54 AM IST
Bengaluru Crime: ಚಿನ್ನಾಭರಣಕ್ಕಾಗಿ ಬೆಂಗಳೂರಿನ ವೃದ್ಧೆಯ ಉಸಿರುಗಟ್ಟಿಸಿ ಕೊಲೆ; ಮಹಿಳೆ ಬಂಧನ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು (ಮಾ. 9): ಚಿನ್ನಾಭರಣಕ್ಕಾಗಿ ವೃದ್ಧೆಯ ಕತ್ತು ಹಿಸುಕಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಆರೋಪಿಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರಿನ ಅಶೋಕ್ ನಗರ ಪೊಲೀಸರು ಶಬಾನಾ ಎಂಬಾಕೆಯನ್ನು ಬಂಧಿಸಿದ್ದಾರೆ. ಆನೇಪಾಳ್ಯದ ನಿವಾಸಿ 62 ವರ್ಷದ ದಿಲ್ವಾನ್ ಬಾನು ಎಂಬಾಕೆಯ ಕೊಲೆ ಮಾಡಲಾಗಿತ್ತು. ಮಾರ್ಚ್ 4ರಂದು ಮಧ್ಯಾಹ್ನ ಈ ಕೊಲೆ ನಡೆದಿತ್ತು. ಆರೋಪಿ ಶಬಾನಾ ಚೀಟಿ ವ್ಯವಹಾರ ನಡೆಸುತ್ತಿದ್ದರು. ಚೀಟಿ ವ್ಯವಹಾರದಲ್ಲಿ ನಷ್ಟ ಉಂಟಾಗಿ ಜನರಿಗೆ ಹಣ ನೀಡಲು‌ ಚಿನ್ನಾಭರಣ ಕಳ್ಳತನಕ್ಕೆ ಇಳಿದಿದ್ದಳು.

ಇದೇ ರೀತಿ, ಸಂಬಂಧಿಯಾಗಿದ್ದ ದಿಲ್ವಾನ್ ಬಾನು ಅವರ ಮನೆಗೂ ಕಳ್ಳತನ ಮಾಡಲು ಹೋಗಿದ್ದ ಆಕೆ ಕಳ್ಳತನದ ವೇಳೆ ಮನೆಯಲ್ಲಿದ್ದ ವೃದ್ಧೆಯನ್ನು ಕೊಲೆ ಮಾಡಿದ್ದಳು. ಕೊಲೆಯಾದ ದಿಲ್ವಾನ್ ಬಾನುಗೆ ಆರೋಪಿ ಶಬಾನಾ ಸಂಬಂಧಿಯಾಗಿದ್ದಳು. ಮಾತನಾಡುವ ನೆಪದಲ್ಲಿ ಆಕೆಯ ಮನೆಗೆ ಹೋಗಿದ್ದ ಶಬಾನಾ ವೃದ್ಧೆ ದಿಲ್ವಾನ್ ಬಾನು ಅವರ ಕುತ್ತಿಗೆ ಮೇಲೆ ಕಾಲಿಟ್ಟು ಉಸಿರುಗಟ್ಟಿಸಿ ಕೊಲೆ ಮಾಡಿದ್ದಳು.

ಕೊಲೆ ಮಾಡಿದ ನಂತರ ದಿಲ್ವಾನ್ ಬಾನು ಅವರ ಮನೆಯಲ್ಲಿದ್ದ ಚಿನ್ನಾಭರಣ, ಹಣ ತೆಗೆದುಕೊಂಡು ಶಬಾನಾ ಪರಾರಿಯಾಗಿದ್ದಳು. ಕೊಲೆಯಾದ ಮಹಿಳೆ ಆನೇಪಾಳ್ಯದಲ್ಲಿ ನಾಲ್ಕು ಅಂತ್ತಸಿನ ಕಟ್ಟಡದ ಮಾಲೀಕಳಾಗಿದ್ದಳು. ವೃದ್ಧೆಯ ಮಗ ಸ್ವಂತ ವ್ಯಾಪಾರ ಮಾಡುತ್ತಿದ್ದ. ಮಗ ಮತ್ತು ಸೊಸೆ ಜೊತೆ ವಾಸವಾಗಿದ್ದ ದಿಲ್ವಾನ್ ಬಾನು ಮನೆಗೆ ಆಕೆಯ ಮಗ ಮತ್ತು ಸೊಸೆ ಹೊರಗಡೆ ಹೋಗಿದ್ದಾಗ ಬಂದ ಶಬಾನಾ ಕೊಲೆ ಮಾಡಿದ್ದಳು.

ಕೊಲೆ ಮಾಡಿದ ಬಳಿಕ ಅನುಮಾನಸ್ಪಾದವಾಗಿ ಆ ಮನೆಯ ಸುತ್ತ ಓಡಾಡಿದ್ದ ಆರೋಪಿ ಶಬಾನಾಳ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಸಿಸಿಟಿವಿ ಪರಿಶೀಲನೆ ನಡೆಸಿದ ಪೊಲೀಸರು ಮಹಿಳೆಯನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ಕೊಲೆ ಮಾಡಿದ ಬಗ್ಗೆ ಬಾಯ್ಬಿಟ್ಟ ಶಬಾನಾ‌ ವಿರುದ್ಧ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯ ವಿಚಾರಣೆಯನ್ನು ಪೊಲೀಸರು ಮುಂದುವರೆಸಿದ್ದಾರೆ.
Published by: Sushma Chakre
First published: March 9, 2021, 8:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories