ಮದುವೆ ಮನೆಯಲ್ಲಿ ಸೂತಕದ ಛಾಯೆ; ಬೆಂಗಳೂರಿನಲ್ಲಿ ಶಾಲಾ ಬಸ್ ಡಿಕ್ಕಿ ಹೊಡೆದು ವ್ಯಕ್ತಿ ಸಾವು

ಮಗನ ಮದುವೆಗೆ ಸಂಬಂಧಿಕರನ್ನು ಆಮಂತ್ರಿಸಲು ಹೋಗುತ್ತಿದ್ದ ಬೆಂಗಳೂರಿನ ನಂದಿನಿ ಲೇಔಟ್​ನ ಬಸವರಾಜಯ್ಯ ಅವರಿಗೆ ಶಾಲಾ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Sushma Chakre | news18-kannada
Updated:October 31, 2019, 9:52 AM IST
ಮದುವೆ ಮನೆಯಲ್ಲಿ ಸೂತಕದ ಛಾಯೆ; ಬೆಂಗಳೂರಿನಲ್ಲಿ ಶಾಲಾ ಬಸ್ ಡಿಕ್ಕಿ ಹೊಡೆದು ವ್ಯಕ್ತಿ ಸಾವು
ಬಸವರಾಜಯ್ಯ ಮೃತಪಟ್ಟ ಸ್ಥಳ, ಮಗನ ಮದುವೆಯ ಆಹ್ವಾನ ಪತ್ರಿಕೆ
  • Share this:
ಬೆಂಗಳೂರು (ಅ. 31): ಅತಿಯಾದ ವೇಗ ಅಮಾಯಕರ ಪ್ರಾಣವನ್ನೇ ಬಲಿ ಪಡೆದುಬಿಡುತ್ತದೆ. ಇನ್ನು ಕೆಲವು ಬಾರಿ ನಮ್ಮ ವೇಗಕ್ಕೆ ನಾವೇ ಬಲಿಯಾಗಬೇಕಾಗುತ್ತದೆ. ಅದರಲ್ಲೂ ಬೆಂಗಳೂರಿನಂತಹ ಮಹಾನಗರಗಳಲ್ಲಿ ಟ್ರಾಫಿಕ್ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಇಲ್ಲಿನ ವಾಹನ ದಟ್ಟಣೆಯಲ್ಲಿ ಹೋಗುವಾಗ ಸ್ವಲ್ಪ ಯಾಮಾರಿದರೂ ಜೀವ ಕಳೆದುಕೊಳ್ಳುವುದು ಖಚಿತ.

ಮಗನ ಮದುವೆಗೆ ಸಂಬಂಧಿಕರನ್ನು ಆಮಂತ್ರಿಸಲು ಹೋಗುತ್ತಿದ್ದ ನಂದಿನಿ ಲೇಔಟ್​ನ ಬಸವರಾಜಯ್ಯ ಅವರಿಗೆ ಶಾಲಾ ಬಸ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇದರಿಂದಾಗಿ ಮದುವೆಯ ಸಂಭ್ರಮ ತುಂಬಿದ್ದ ಮನೆಯಲ್ಲೀಗ ಶೋಕದ ವಾತಾವರಣ ನಿರ್ಮಾಣವಾಗಿದೆ. ನ. 10ರಂದು ಮಗನ ಮದುವೆ ನಡೆಯುವುದರಲ್ಲಿತ್ತು. ಈ ಸಂಭ್ರಮದಲ್ಲಿ ನೆಂಟರು, ಗೆಳೆಯರನ್ನು ಮದುವೆಗೆ ಆಹ್ವಾನಿಸಲು ಹೋಗಿದ್ದ ಬಸವರಾಜಯ್ಯ ಹೆಣವಾಗಿ ಮನೆ ಸೇರಿದ್ದಾರೆ.

ಬಸವರಾಜಯ್ಯ ಅವರ ಮೃತದೇಹದ ಪಕ್ಕ ಬಿದ್ದಿದ್ದ ಮಗನ ಮದುವೆಯ ಆಹ್ವಾನ ಪತ್ರಿಕೆ


ಇನ್ನುಮುಂದೆ ಬೆಂಗಳೂರಿನಲ್ಲಿ ಕಳ್ಳರದ್ದು ಮಾತ್ರವಲ್ಲ ಪೊಲೀಸರ ಫೋಟೋಗಳೂ ರಾರಾಜಿಸಲಿವೆ!

ಬೆಂಗಳೂರಿನ ಯಶವಂತಪುರ ಸರ್ಕಲ್ ಬಳಿ ಬಸವರಾಜಯ್ಯ ರಸ್ತೆ ದಾಟುತ್ತಿದ್ದಾಗ ಈ ಘಟನೆ ನಡೆದಿದೆ. ರಸ್ತೆ ದಾಟುತ್ತಿದ್ದ ಬಸವರಾಜಯ್ಯ ಅವರಿಗೆ ವೇಗವಾಗಿ ಬರುತ್ತಿದ್ದ ಶಾಲಾ ಬಸ್ ಡಿಕ್ಕಿ ಹೊಡೆದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ. ಯಶವಂತಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ವರದಿ: ಮುನಿರಾಜು)

First published: October 31, 2019, 9:52 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading