ಬೆಂಗಳೂರಲ್ಲಿ ಮತ್ತೆ ಝಳಪಿಸಿದ ಲಾಂಗು, ಮಚ್ಚು; ಪುಡಿರೌಡಿಗಳನ್ನು ಗುರಾಯಿಸಿದ್ದಕ್ಕೆ ಆಸ್ಪತ್ರೆ ಸೇರಿದ ಆಟೋ ಡ್ರೈವರ್

Bangalore Crime News: ಬ್ಯಾಟರಾಯನಪುರದ ರಾಘವನಗರದ ಬಳಿ ಆಟೋ ಚಾಲಕ ಸತೀಶ್ ಎಂಬ ವ್ಯಕ್ತಿ ಬಾರ್​ನಲ್ಲಿದ್ದ ಪುಡಿರೌಡಿಗಳನ್ನು ಗುರಾಯಿಸಿದ ಎಂಬ ಕಾರಣಕ್ಕೆ ಆತನ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಲಾಗಿದೆ.

news18-kannada
Updated:November 15, 2019, 11:21 AM IST
ಬೆಂಗಳೂರಲ್ಲಿ ಮತ್ತೆ ಝಳಪಿಸಿದ ಲಾಂಗು, ಮಚ್ಚು; ಪುಡಿರೌಡಿಗಳನ್ನು ಗುರಾಯಿಸಿದ್ದಕ್ಕೆ ಆಸ್ಪತ್ರೆ ಸೇರಿದ ಆಟೋ ಡ್ರೈವರ್
ಪ್ರಾತಿನಿಧಿಕ ಚಿತ್ರ.
  • Share this:
ಬೆಂಗಳೂರು (ನ. 15): ಕುಡಿದ ಅಮಲಿನಲ್ಲಿ ತಾವೇನು ಮಾಡುತ್ತಿದ್ದಾರೆ ಎಂಬ ಅರಿವೂ ಇಲ್ಲದೆ ಕೆಲವೊಮ್ಮೆ ಅನಾಹುತಗಳೇ ನಡೆದುಹೋಗುತ್ತವೆ. ಅದರಲ್ಲೂ ಬೆಂಗಳೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆಯುವ ಅಪರಾಧಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಹಾಗಾಗಿಯೇ ಬೆಂಗಳೂರಿನ ರಸ್ತೆಗಳಲ್ಲಿ ಒಬ್ಬಂಟಿಯಾಗಿ ಓಡಾಡಲು ಆತಂಕ ಪಡಬೇಕಾದ ಪರಿಸ್ಥಿತಿ ಎದುರಾಗಿದೆ. 

ಬೆಂಗಳೂರಿನಲ್ಲಿ ಪುಡಿ ರೌಡಿಗಳ ಹಾವಳಿ ಹೆಚ್ಚಾಗಿದೆ. ನಗರದಾದ್ಯಂತ ಸಿಸಿಟಿವಿ, ಪೊಲೀಸ್ ಬೀಟ್, ಸೆಕ್ಯುರಿಟಿ ಇದ್ದರೂ ದಿನಕ್ಕೆ ಒಂದಾದರೂ ಹೆಣ ಬೀಳುವುದು ನಿಂತಿಲ್ಲ. ಆಸ್ತಿ, ಅಕ್ರಮ ಸಂಬಂಧ, ಹಣ, ವೈರತ್ವ, ಪ್ರೇಮವೈಫಲ್ಯ ಮುಂತಾದ ವಿಷಯಗಳಿಗೆ ಮಾತ್ರವಲ್ಲದೆ ಸಣ್ಣಪುಟ್ಟ ಕಾರಣಗಳಿಗೂ ಪ್ರಾಣ ತೆಗೆಯುವಷ್ಟರ ಮಟ್ಟಿಗೆ ಬೆಂಗಳೂರು ಬದಲಾಗಿದೆ.

ನಗರದಲ್ಲಿ ಹೆಚ್ಚುತ್ತಿರುವ ಪುಡಿರೌಡಿಗಳ ಆರ್ಭಟಕ್ಕೆ ಅಮಾಯಕ ಆಸ್ಪತ್ರೆ ಸೇರಿದ್ದಾನೆ. ಕ್ಷುಲ್ಲಕ ಕಾರಣಕ್ಕೆ ಲಾಂಗು, ಮಚ್ಚುಗಳಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಬಾರ್​ನಲ್ಲಿ ಗುರಾಯಿಸಿದ್ದಕ್ಕೆ ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಹೋಗಿ ಮಚ್ಚು ಬೀಸಿದ್ದಾರೆ. ಬ್ಯಾಟರಾಯನಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಈ ಘಟನೆ ನಡೆದಿದೆ.

Viral Video: ಮರಿಯಾನೆಯನ್ನು ಕಾಪಾಡಿದ ಜನರು; ಥ್ಯಾಂಕ್ಸ್​ ಹೇಳಿದ ತಾಯಾನೆ, ವಿಡಿಯೋ ವೈರಲ್!

ಬ್ಯಾಟರಾಯನಪುರದ ರಾಘವನಗರದ ಬಳಿ ಆಟೋ ಚಾಲಕ ಸತೀಶ್ ಎಂಬ ವ್ಯಕ್ತಿ ಬಾರ್​ನಲ್ಲಿದ್ದ ಪುಡಿರೌಡಿಗಳನ್ನು ಗುರಾಯಿಸಿದ ಎಂಬ ಕಾರಣಕ್ಕೆ ಆತನ ಮೇಲೆ ಮಾರಾಣಾಂತಿಕ ಹಲ್ಲೆ ನಡೆಸಲಾಗಿದೆ. ನ. 8ರ ರಾತ್ರಿ 10.45ರ ಸುಮಾರಿಗೆ ಬಾರ್​ಗೆ ಬಂದ ಆಟೋ ಚಾಲಕ ಸತೀಶ್​ ಅಲ್ಲಿದ್ದ ದುಷ್ಕರ್ಮಿಗಳನ್ನು ದಿಟ್ಟಿಸಿ ನೋಡಿದ್ದಾನೆ. ಅದಾಗಲೇ ಕುಡಿದು ತೂರಾಡುತ್ತಿದ್ದ ಆ ರೌಡಿಗಳು ತಮ್ಮನ್ನು ಗುರಾಯಿಸಿದ ಸತೀಶ್​ ಜೊತೆಗೆ ಜಗಳವಾಡಿದ್ದಾರೆ. ಆ  ಜಗಳ ತಾರಕಕ್ಕೇರಿದ್ದು, ಏರಿಯಾ ತುಂಬ ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಾದ ಜೋಗಯ್ಯ, ಪಿನಿತ್, ವಿಕ್ಕಿ ಸೇರಿ ನಾಲ್ವರನ್ನು ಬಂಧಿಸಿದ್ದಾರೆ.

(ವರದಿ: ಗಂಗಾಧರ್)

First published:November 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ