ಆನೇಕಲ್: ಬೆಂಗಳೂರು ನಗರದ ಹೊರ ವಲಯದಲ್ಲೊಂದು ಭೀಕರ ಕೊಲೆ (Murder In Bengaluru) ನಡೆದಿದೆ. ಆನೇಕಲ್ ತಾಲೂಕಿನ ನೆರಳೂರು ಬಳಿ ಮಹಿಳೆಯೊಬ್ಬಳು ಅಜ್ಜಿಯನ್ನು ಕೊಲೆ ಮಾಡಿ ಕಬೋರ್ಡ್ನಲ್ಲಿ ಮೃತದೇಹ (Bengaluru Crime News) ಸುತ್ತಿಟ್ಟು ಪರಾರಿಯಾಗಿದ್ದಾಳೆ ಎಂಬ ಆರೋಪ ಕೇಳಿಬಂದಿದೆ. ಮೂರನೇ ಮಹಡಿಯಲ್ಲಿ ಅಜ್ಜಿ ಹಾಗೂ ಆಕೆಯ ಕುಟುಂಬ ವಾಸವಿತ್ತು. ಅದೇ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಮಹಿಳೆಯೊಬ್ಬಳು ಬಾಡಿಗೆಗೆ ವಾಸವಿದ್ದಳು. ಕಳೆದ ಮೂರು ದಿನಗಳ ಹಿಂದೆ ಅಜ್ಜಿಯನ್ನು ಮಹಿಳೆ ತನ್ನ ಮನೆಗೆ ಕರೆತಂದಿದ್ದಳು. ಆದರೆ ಅಜ್ಜಿ ಮಹಿಳೆಯ ಮನೆಗೆ ಹೋದ ನಂತರ ಪತ್ತೆಯೇ ಇರಲಿಲ್ಲ. ಎಷ್ಟೇ ಹುಡುಕಾಡಿದರೂ ಎಲ್ಲೂ ಅಜ್ಜಿ ಪತ್ತೆಯಾಗಿರಲಿಲ್ಲ. ಒಂದು ದಿನದ ನಂತರ ಮಹಿಳೆ ತನ್ನ ಮನೆಯಿಂದ ಪರಾರಿಯಾಗಿದ್ದಳು.
ಅಜ್ಜಿ ಹಾಗೂ ಮಹಿಳೆ ಇಬ್ಬರೂ ಕೂಡ ನಾಪತ್ತೆಯಾಗಿದ್ದು ಅಜ್ಜಿಯ ಮನೆಯವರಲ್ಲೂ ಆತಂಕ ಮೂಡಿಸಿತ್ತು. ಹೀಗಾಗಿ ಮಹಿಳೆ ವಾಸವಿದ್ದ ಮನೆಯ ಬೀಗ ತೆಗೆಸಿ ಅಜ್ಜಿ ಕುಟುಂಬದವರು ಪರಿಶೀಲನೆ ನಡೆಸಿದ್ದರು.
ಕೊಲೆ ಮಾಡಿದಳೇ ಮಹಿಳೆ? ಕೇಳಿಬಂತು ಆರೋಪ
ಮಹಿಳೆ ವಾಸವಿದ್ದ ಮನೆಯ ಬೀಗ ತೆಗೆಸಿದಾಗ ಕಬೋರ್ಡ್ನಲ್ಲಿ ಅಜ್ಜಿಯ ಮೃತದೇಹ ಪತ್ತೆಯಾಗಿದೆ. ಸದ್ಯ ಮಹಿಳೆಯ ಮೇಲೆ ಅಜ್ಜಿಯ ಕೊಲೆ ಮಾಡಿದ ಆರೋಪ ಕೇಳಿಬಂದಿದ್ದು ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಕೊಲೆ ಮತ್ತು ಚಿನ್ನಾಭಣ ಕಳವು ಪ್ರಕರಣ ದಾಖಲಾಗಿದೆ.
ಬೆಂಗಳೂರಿನಲ್ಲಿ ಅಪರಿಚಿತ ವ್ಯಕ್ತಿಯ ಬರ್ಬರ ಕೊಲೆ
ಕಲ್ಲು ಎತ್ತಿ ಹಾಕಿ ಸುಮಾರು 30 ವರ್ಷದ ವ್ಯಕ್ತಿಯ ಕೊಲೆ ಮಾಡಿದ ಇನ್ನೊಂದು ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಮಾಗಡಿ ರಸ್ತೆಯ ಕೆ.ಪಿ.ಅಗ್ರಹಾರದ 5 ನೇ ಕ್ರಾಸ್ನಲ್ಲಿ ಈ ಘಟನೆ ನಡೆದಿದ್ದು ಖಾಸಗಿ ಮೆಡಿಕಲ್ ಅಂಗಡಿ ಮುಂದೆಯೇ ಆರೋಪಿಗಳು ಕೊಲೆ ಮಾಡಿದ್ದಾರೆ.
ಇದನ್ನೂ ಓದಿ: HD Kumaraswamy ಪ್ರಧಾನಮಂತ್ರಿ ಆಗೋ ಸಾಧ್ಯತೆ, ಡಿಸೆಂಬರ್ 18ರ ನಂತರ ಬಿಗ್ ಸರ್ಪ್ರೈಸ್: CM Ibrahim
ಕೊಲೆಯಲ್ಲಿ ಮೂವರು ಪುರುಷರು ಹಾಗೂ ಮೂವರು ಹೆಂಗಸರು ಭಾಗಿಯಾದ ಸುಳಿವು
ಮೇಲ್ನೋಟಕ್ಕೆ ಹಣಕಾಸಿನ ವಿಚಾರಕ್ಕೆ ಕೊಲೆ ನಡೆದ ಶಂಕೆ ವ್ಯಕ್ತವಾಗಿದೆ. ಕಳೆದ ರಾತ್ರಿ 1.30 ರ ಸುಮಾರಿಗೆ ಘಟನೆ ನಡೆದಿದೆ ಎಂದು ಅಂದಾಜಿಸಲಾಗಿದೆ. ಕೊಲೆಯಲ್ಲಿ ಮೂವರು ಪುರುಷರು ಹಾಗೂ ಮೂವರು ಹೆಂಗಸರು ಭಾಗಿಯಾದ ಸುಳಿವು ಪೊಲೀಸರಿಗೆ ಪತ್ತೆಯಾಗಿದ್ದು ಕೊಲೆ ಮಾಡಿದ ಆರೋಪಿಗಳಿಗಾಗಿ ಪೊಲೀಸರ ಹುಡುಕಾಟ ಮುಂದುವರೆದಿದೆ.
ಇದನ್ನೂ ಓದಿ: Shocking Murder: ಶ್ರದ್ಧಾ ಕೊಲೆಯಿಂದ ಸ್ಪೂರ್ತಿ ಪಡೆದು ತನ್ನ ಪ್ರೇಯಸಿಯನ್ನೇ ಕೊಂದ ವ್ಯಕ್ತಿ
ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು
ಸದ್ಯ ಕೊಲೆಯಾದ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಸ್ಥಳಕ್ಕೆ ಕೆ.ಪಿ.ಅಗ್ರಹಾರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ಕೆ.ಪಿ.ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲು ಮಾಡಲಾಗಿದೆ.
ಹೈಟೆನ್ಶನ್ ವಿದ್ಯುತ್ ತಂತಿ ತಗುಲಿ ಗಾಯಗೊಂಡಿದ್ದ ಬಾಲಕ ಸಾವು! ಕೊನೆಗೂ ಫಲಿಸಲೇ ಇಲ್ಲ ಪ್ರಾರ್ಥನೆ
ಕಳೆದ ಮೂರು ದಿನಗಳ ಹಿಂದಷ್ಟೇ ಹೈಟೆನ್ಶನ್ ತಂತಿ ಸ್ಪರ್ಶ ಮಾಡಿದ ಹಿನ್ನೆಲೆ ಇಬ್ಬರು ಬಾಲಕರು ಗಂಭೀರವಾಗಿ ಗಾಯಗೊಂಡಿದ್ದರು. ಈಗ ಹೈಟೆನ್ಷನ್ ತಂತಿ ಸ್ಪರ್ಶ ಮಾಡಿದ್ದ ಇಬ್ಬರು ಬಾಲಕರ ಪೈಕಿ ಒಬ್ಬ ಬಾಲಕ ಚಿಕಿತ್ಸೆ ಫಲಕಾರಿಯಾಗದೇ ಇಂದು (ಭಾನುವಾರ) ಸಾವನ್ನಪ್ಪಿದ್ದಾನೆಎಂದು ತಿಳಿದು ಬಂದಿದೆ. ಹೈಟೆನ್ಷನ್ ವೈರ್ ಸ್ಪರ್ಶ ಮಾಡಿದ್ದ ಹಿನ್ನೆಲೆ ಬೆಂಗಳೂರು ನಗರದ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಬಾಲಕರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಇಬ್ಬರು ಬಾಲಕರು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದರು. ಈಗ ಇಬ್ಬರು ಬಾಲಕರಲ್ಲಿ ಒಬ್ಬ ಮೃತಪಟ್ಟಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ